ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಟಲ್ ಸುರಂಗ ಮಾರ್ಗ: ಉದ್ಘಾಟನೆಗೊಂಡ 72 ಗಂಟೆಯಲ್ಲಿ 3 ಅಪಘಾತ

|
Google Oneindia Kannada News

ಮನಾಲಿ, ಅಕ್ಟೋಬರ್ 06: ವಿಶ್ವದ ಅತಿ ಉದ್ದದ ಸುರಂಗ ಮಾರ್ಗ ಉದ್ಘಾಟನೆಗೊಂಡು 72 ಗಂಟೆಯೊಳಗೆ 3 ಅಪಘಾತಗಳು ಸಂಭವಿಸಿವೆ.

ಅಪಘಾತಗಳೆಲ್ಲವೂ ನಿರ್ಲಕ್ಷ್ಯ ಮತ್ತು ಅತಿಯಾದ ವೇಗದಿಂದಾಗಿ ಸಂಭವಿಸಿದೆ.ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಹಿಮಾಚಲ ಪ್ರದೇಶದ ರೋಹ್ಟಾಂಗ್‌ನಲ್ಲಿ ನಿರ್ಮಿತವಾಗಿರುವ ಅತಿ ಉದ್ದದ ಸುರಂಗ ಮಾರ್ಗ ಮನಾಲಿ ಮತ್ತು ಲೇಹ್ ನಡುವೆ 46 ಕಿ.ಮೀ ಅಂತರವನ್ನು ತಗ್ಗಿಸಲಿದೆ.

ಸುರಂಗ ಮಾರ್ಗ ಉದ್ಘಾಟನೆಗೊಂಡು ಕೇವಲ ಮೂರು ದಿನದಲ್ಲಿ ಅಪಘಾತ ಸಂಭವಿಸಿದೆ. ಅಪಘಾತಗಳು ಗಡಿ ರಸ್ತೆಗಳ ಸಂಸ್ಥೆ ಮತ್ತು ಜಿಲ್ಲಾಡಳಿತದ ಕಳವಳಕ್ಕೆ ಕಾರಣವಾಗಿದೆ.

 ಅ.3 ರಂದು ಜಗತ್ತಿನ ಅತಿ ಉದ್ದದ ಅಟಲ್ ಸುರಂಗ ಮಾರ್ಗ ಉದ್ಘಾಟನೆ ಅ.3 ರಂದು ಜಗತ್ತಿನ ಅತಿ ಉದ್ದದ ಅಟಲ್ ಸುರಂಗ ಮಾರ್ಗ ಉದ್ಘಾಟನೆ

ನೂರಾರು ಪ್ರವಾಸಿಗರು ಮತ್ತು ಮೋಟರಿಸ್ಟ್ ಗಳು ಅತಿ ವೇಗದಲ್ಲಿ ಚಲಿಸುವುದಲ್ಲದೆ ಹೊಸ ಸುರಂಗ ಮಾರ್ಗದಲ್ಲಿ ರೇಸಿಂಗ್ ಮಾಡುತ್ತಿರುವುದು ಅಧಿಕಾರಿಗಳಿಗೆ ಹೊಸ ತಲೆ ನೋವಾಗಿದೆ.

ಕುದುರೆ ಲಾಳಾಕಾರದಲ್ಲಿ ನಿರ್ಮಿಸಲಾಗಿರುವ ಅದ್ಭುತ ಸುರಂಗವು ಹೊಸ ಪ್ರವಾಸಿ ತಾಣವಾಗಿ ಮಾರ್ಪಾಡಾಗಿದೆ. ಹೀಗಾಗಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.

ಮೂರು ಅಪಘಾತಗಳು ಒಂದೇ ದಿನ ನಡೆದಿವೆ

ಮೂರು ಅಪಘಾತಗಳು ಒಂದೇ ದಿನ ನಡೆದಿವೆ

ಮೂರು ಅಪಘಾತಗಳು ಕೂಡ ಒಂದೇ ದಿನ ಸಂಭವಿಸಿದೆ. ಅಲ್ಲದೆ, ಪ್ರವಾಸಿಗರು ಸವಾರಿಯ ನಡುವೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮೂಲಕ ಸಂಚಾರಿ ನಿಯಮವನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ಟೋಬರ್ 3 ರಂದು ಸುರಂಗ ಮಾರ್ಗ ಉದ್ಘಾಟನೆ

ಅಕ್ಟೋಬರ್ 3 ರಂದು ಸುರಂಗ ಮಾರ್ಗ ಉದ್ಘಾಟನೆ

ಅಟಲ್ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್ 3 ರಂದು ಉದ್ಘಾಟಿಸಿದರು. ಅಟಲ್ ಸುರಂಗವನ್ನು ನಿರ್ಮಿಸುವ ತೀರ್ಮಾನವನ್ನು 2000, ಜೂನ್ 3 ರಂದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತೆಗೆದುಕೊಂಡಿದ್ದರು. 2002 , ಮೇ 26 ರಂದು ಸುರಂಗ ಮಾರ್ಗಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಇದೀಗ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಿದೆ.

ವಾಹನ ನಿಲುಗಡೆಗೆ ಯಾರಿಗೂ ಅನುಮತಿ ಇಲ್ಲ

ವಾಹನ ನಿಲುಗಡೆಗೆ ಯಾರಿಗೂ ಅನುಮತಿ ಇಲ್ಲ

ಪ್ರವಾಸಿಗರು ಹೆಚ್ಚಾಗುತ್ತಿರುವುದರಿಂದ ಅಟಲ್ ಸುರಂಗ ಮಾರ್ಗದಲ್ಲಿ ವಾಹನಗಳ ನಿಲುಗಡೆಗೆ ಯಾರಿಗೂ ಅನುಮತಿ ಇಲ್ಲ. ನಿಯಮ ಮೀರಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಸಮಸ್ಯೆ ಹೆಚ್ಚಾಗುವ ಆತಂಕದಲ್ಲಿ ಬಿಆರ್‌ಒ ಅಧಿಕಾರಿಗಳಿದ್ದಾರೆ.

ಸುರಂಗದ ವಿಶೇಷತೆ ಏನು?

ಸುರಂಗದ ವಿಶೇಷತೆ ಏನು?

9.2 ಕಿ.ಮೀ ಉದ್ದವಿರುವ ಈ ಸುರಂಗದಲ್ಲಿ ಪ್ರತಿ 60 ಮೀಟರ್‌ಗಳಿಗೆ ಸಿಸಿಟಿವಿ ಕ್ಯಾಮರಾ ಮತ್ತು ಸುರಂಗದ ಒಳಗೆ ಪ್ರತಿ 500 ಮೀಟರ್‌ಗೆ ತುರ್ತು ನಿರ್ಗಮನ ಬಾಗಿಲುಗಳಿವೆ. -ಅಗ್ನಿ ಅನಾಹುತಗಳಿಂದ ಕಾಪಾಡಲು ಫೈರ್ ಹೈಡ್ರಾಂಟ್ಸ್ ಅಳವಡಿಸಲಾಗಿದೆ.
-ಸುರಂಗದ ಅಗಲ 10.5 ಮೀಟರ್, ಎರಡು ಬದಲಿಯಲ್ಲಿಯೂ 1 ಮೀಟರ್‌ನಷ್ಟು ಫೂಟ್‌ಪಾತ್ ಇದೆ.
- ಯೋಜನೆಯನ್ನು 1983ರಲ್ಲಿ ಇಂದಿರಾ ಗಾಂಧಿ ಸರ್ಕಾರ ರೂಪಿಸಿತ್ತು. ಬಳಿಕ ಜೂನ್ 2000ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸುರಂಗ ಕಾರ್ಯವನ್ನು ಘೋಷಿಸಿ, ಶಂಕು ಸ್ಥಾಪನೆ ಮಾಡಿದ್ದರು. ಸುರಂಗದ ಕೆಲಸ ಪದೇ ಪದೇ ನಿಂತು ಹೋಗಿ ನಂತರ 2010ರ ಜೂನ್‌ನಲ್ಲಿ ಪ್ರಾರಂಭವಾಯಿತು.
-ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 95ನೇ ಜನ್ಮದಿನಾಚರಣೆ ನೆನಪಿಗಾಗಿ 2019 ಡಿಸೆಂಬರ್‌ನಲ್ಲಿ ಪ್ರಧಾನಿ ಮೋದಿ ಅವರು ರೋಹ್ಟಾಂಗ್ ಮಾರ್ಗವನ್ನು ಅಟಲ್ ಸುರಂಗ ಎಂದು ಮರುನಾಮಕರಣ ಮಾಡಿದರು.
-ಈ ಸುರಂಗವು ಮನಾಲಿಯನ್ನು ಲಾಹೌಲ್ ಕಣಿವೆಯೊಂದಿಗೆ ಸಂಪರ್ಕಿಸುತ್ತದೆ. ಮತ್ತು ಮನಾಲಿ-ರೋಹ್ಟಾಂಗ್ ಪಾಸ್ ಸರ್ಚು
-ಲೇಹ್ ರಸ್ತೆಯನ್ನು ಕ್ರಮಿಸುವುದನ್ನು 46 ಕಿಲೋಮೀಟರ್ ಕಡಿಮೆ ಮಾಡುತ್ತದೆ. 8.8 ಕಿ.ಮೀ ಉದ್ದದ ಸುರಂಗವು ಸಮುದ್ರ ಮಟ್ಟದಿಂದ 3 ಸಾವಿರ ಮೀಟರ್ ಎತ್ತರದಲ್ಲಿದೆ. ಇದು 10.5 ಮೀಟರ್ ಅಗಲದ ಸಿಂಗಲ್ ಟ್ಯೂಬ್-ಲೇನ್ ಸುರಂಗವಾಗಿದ್ದು, ಒಳಗಡೆ ಅಗ್ನಿ ನಿರೋಧಕ ತುರ್ತು ಸುರಂಗವಿದೆ.

English summary
Prime Minister Narendra Modi on October 3 inaugurated the all-weather Atal tunnel, which reduces the distance between Manali and Leh by 46 km and the travel time by four to five hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X