ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಟಲ್ ಪಿಂಚಣಿ ಯೋಜನೆಗೆ 52 ಲಕ್ಷ ಹೊಸ ಚಂದಾದಾರರು ಸೇರ್ಪಡೆ

|
Google Oneindia Kannada News

ನವದೆಹಲಿ, ಜನವರಿ 04: ಅಸಂಘಟಿತ ವಲಯದ ಕಾರ್ಮಿಕರನ್ನು ತಮ್ಮ ನಿವೃತ್ತಿ ಜೀವನಕ್ಕಾಗಿ ಸ್ವಯಂಪ್ರೇರಣೆಯಿಂದ ಉಳಿತಾಯ ಮಾಡಲು ಪ್ರೋತ್ಸಾಹಿಸುವ ಯೋಜನೆಯಾಗಿರುವ ಅಟಲ್ ಪಿಂಚಣಿ ಯೋಜನೆ(APY) ಗೆ 2020-21ರ ಅವಧಿಯಲ್ಲಿ 52 ಲಕ್ಷಕ್ಕೂ ಹೆಚ್ಚು ಹೊಸ ಚಂದಾದಾರರು ಸೇರ್ಪಡೆಗೊಂಡಿದ್ದಾರೆ.

ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯಡಿ ಒಟ್ಟು ದಾಖಲಾತಿಯನ್ನು ಡಿಸೆಂಬರ್ ಅಂತ್ಯದ ವೇಳೆಗೆ 2.75 ಕೋಟಿಗೆ ತೆಗೆದುಕೊಂಡಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಜೀವಂತ ಪ್ರಮಾಣ ಪತ್ರ ಸಲ್ಲಿಕೆ ಅವಧಿ ವಿಸ್ತರಣೆಜೀವಂತ ಪ್ರಮಾಣ ಪತ್ರ ಸಲ್ಲಿಕೆ ಅವಧಿ ವಿಸ್ತರಣೆ

ಎಪಿವೈ ಎಂಬುದು ಸರ್ಕಾರದ ಖಾತರಿಯ ಪಿಂಚಣಿ ಯೋಜನೆಯಾಗಿದ್ದು, ಇದು 60 ವರ್ಷ ದಾಟಿದ ಮೇಲೆ ಚಂದಾದಾರರಿಗೆ ಮೂರು ಪಟ್ಟು ಪ್ರಯೋಜನಗಳನ್ನು ನೀಡುತ್ತದೆ. ಇದು ಚಂದಾದಾರರಿಗೆ ಕನಿಷ್ಠ ಖಾತರಿ ಪಿಂಚಣಿ ನೀಡುತ್ತದೆ.

 Atal Pension Yojana: 52 Lakh New Subscribers Join APY In FY21

ಇದರ ಜೊತೆಗೆ ಒಂದು ವೇಳೆ ಚಂದಾದಾರರು ನಿಧನರಾದರೆ ಅವರ ಸಂಗಾತಿಗೆ ಅದೇ ಖಾತರಿಯ ಪಿಂಚಣಿ ಮತ್ತು ಸಂಗ್ರಹಿಸಿದ ಪಿಂಚಣಿ ಸಂಪತ್ತನ್ನು ನಾಮಿನಿಗೆ ಹಿಂದಿರುಗಿಸುತ್ತದೆ. ಸಾಂಕ್ರಾಮಿಕ ರೋಗದಿಂದಾಗಿ ಅಭೂತಪೂರ್ವ ಸವಾಲುಗಳು ಎದುರಾಗಿದ್ದರೂ, 2020-21ರ ಆರ್ಥಿಕ ವರ್ಷದಲ್ಲಿ ಇದುವರೆಗೆ 52 ಲಕ್ಷಕ್ಕೂ ಹೆಚ್ಚು ಹೊಸ ಚಂದಾದಾರರನ್ನು ಸೇರಿಸಿದ್ದು ಗಮನಾರ್ಹವಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಂದರಲ್ಲೇ 15 ಲಕ್ಷಕ್ಕೂ ಹೆಚ್ಚು ಹೊಸ ಎಪಿವೈ ಚಂದಾದಾರರನ್ನು ದಾಖಲಿಸಿದೆ.

English summary
Over 52 lakh new subscribers have joined Atal Pension Yojana (APY) during 2020-21 so far..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X