ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾರರ ಪಟ್ಟಿಯಿಂದ ವಾಜಪೇಯಿ ಹೆಸರು ಹೊರಕ್ಕೆ

By Mahesh
|
Google Oneindia Kannada News

ಲಕ್ನೋ, ಸೆ. 28: ಮಾಜಿ ಪ್ರಧಾನಿ, ಬಿಜೆಪಿ ಹಿರಿಯ ಮುಖಂಡ ಅಟಲ್‌‌ ಬಿಹಾರಿ ವಾಜಪೇಯಿ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ.

ಹಲವು ವರ್ಷಗಳಿಂದ ಅವರು ಲಕ್ನೋದಲ್ಲಿ ವಾಸವಾಗಿಲ್ಲವಾದ್ದರಿಂದ ಅವರ ಹೆಸರನ್ನು ಲಕ್ನೋ ಮುನಿಸಿಪಲ್ ಕಾರ್ಪೋರೇಷನ್‌ನ (ಎಲ್ಎಂಸಿ) ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ.

Atal Bihari Vajpayee's name removed from voters' list in Lucknow

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಕಳೆದ ಕೆಲ ವರ್ಷಗಳಿಂದ ಅನಾರೋಗ್ಯಕ್ಕೆ ಈಡಾಗಿದ್ದು, ಅವರು ನವದೆಹಲಿಯಲ್ಲಿ ವಾಸವಾಗಿದ್ದಾರೆ.


ಸದ್ಯ ಲಕ್ನೋದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗಿದ್ದು, ಹೊಸ ಮತದಾರರ ಪಟ್ಟಿ ಬಿಡುಗಡೆಗೊಂಡಿದೆ. ಹೊಸ ಪಟ್ಟಿಯಿಂದ ವಾಜಪೇಯಿ ಹೆಸರನ್ನು ತೆಗೆದುಹಾಕಲಾಗಿದೆ.

2004ರ ಲೋಕಸಭಾ ಚುನಾವಣೆ ನಂತರ ವಾಜಪೇಯಿ ಅವರು ಇಲ್ಲಿ ಮತ ಚಲಾವಣೆ ಮಾಡಿಲ್ಲ.

English summary
Former Prime Minister and senior Bharatiya Janata Party (BJP) leader Atal Bihari Vajpayee has been one of the most known faces of LucknowAtal Bihari Vajpayee's name removed from voters' list in Lucknow. Now, he will no longer be eligible to vote for the civic polls in the city
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X