ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಹರು ಬಗೆಗೆ ವಾಜಪೇಯಿ ಮಾಡಿದ್ದ ಭಾಷಣವನ್ನು ಬಿಜೆಪಿಗರು ಕೇಳಲೇಬೇಕು

By Manjunatha
|
Google Oneindia Kannada News

ನವದೆಹಲಿ, ಜುಲೈ 24: ಕಾಂಗ್ರೆಸ್‌ ಅನ್ನು ಅದರ ಇತಿಹಾಸ ಹಿಡಿದು ಟೀಕಿಸುವುದರಲ್ಲಿ ನರೇಂದ್ರ ಮೋದಿ ಸಿದ್ಧ ಹಸ್ತರು. ಭಾರತದ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿರುವ ನೆಹರೂ ಕೂಡ ಅವರ ಮಾತಿನ ದಾಳಿಗೆ ಸಿಕ್ಕು ನಲುಗಿದ್ದಾರೆ.

ನೆಹರೂ ಅವರನ್ನು, ರಾಜೀವ್ ಗಾಂಧಿ, ಇಂದಿರಾ ಗಾಂಧಿ ಅವರುಗಳನ್ನು ಟೀಕಿಸದೇ ಮೋದಿ ಅವರ ಕಾಂಗ್ರೆಸ್ ವಿರುದ್ಧ ಭಾಷಣ ಮುಗಿಯುವುದೇ ಇಲ್ಲ ಎನ್ನುವ ಮಟ್ಟಿಗೆ ಸಾಮಾನ್ಯವಾಗಿ ಬಿಟ್ಟಿದೆ. ಬಿಜೆಪಿಯ ಕೆಲವರಂತೂ ನೆಹರೂ ಅವರನ್ನು ಹೆಣ್ಣುಬಾಕನೆಂದೂ ಕರೆದದಿದ್ದದೆ.

ಆದರೆ ಬಿಜೆಪಿಯವರೆಲ್ಲಾ ದೇವತಾಸಮಾನರೆಂದು ಆರಾಧಿಸುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನೆಹರು ಬಗ್ಗೆ ಸಂಸತ್‌ನಲ್ಲಿ ಮಾಡಿದ್ದ ಭಾಷಣದ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು. ಈಗಿನ ಬಿಜೆಪಿಯವರು ಆ ತುಣಕನ್ನೊಮ್ಮೆ ನೋಡಲೇ ಬೇಕು. ಕಾಂಗ್ರೆಸ್‌ ನವರೂ ಸಹ ನೋಡಬೇಕು.

Atal Bihari Vajapeyee once talked about Jawaharlal Nehru in parliament

ಸಂಸತ್‌ನ ಸೌಥ್ ಬ್ಲಾಕ್‌ನಲ್ಲಿ ನೆಹರು ಅವರ ಭಾವಚಿತ್ರವೊಂದನ್ನು ಹಾಕಲಾಗಿತ್ತಂತೆ. ವಾಜಪೇಯಿ ಅವರು ಹೊಸದಾಗಿ ಸಂಸದರಾದಾಗ ಅವರು ಆ ಚಿತ್ರವನ್ನು ಆಗಾಗ ನೋಡುತ್ತಿದ್ದರಂತೆ. ಅದರೆ ವಾಜಪೇಯಿ ಅವರು ವಿದೇಶ ಮಂತ್ರಿ ಆದಾಗ ಆ ಚಿತ್ರವನ್ನು ಅಲ್ಲಿಂದ ತೆಗೆದು ಹಾಕಲಾಗಿತ್ತಂತೆ ಆದರೆ ವಾಜಪೇಯಿ ಅವರು ಅದನ್ನು ಮತ್ತೆ ಅಲ್ಲಿಯೇ ಹಾಕಿಸಿದರಂತೆ, ಇದು ವಾಜಪೇಯಿ ಅವರಿಗೆ ನೆಹರು ಅವರ ಮೇಲಿದ್ದ ಗೌರವ.

ಭಾರತದ ಮೊದಲ ಪ್ರಧಾನಿ ಮೋದಿಯಂತೆ! ಇದೇನು 'ಗೂಗಲ'ಮ್ಮನ ಅವಾಂತರ!ಭಾರತದ ಮೊದಲ ಪ್ರಧಾನಿ ಮೋದಿಯಂತೆ! ಇದೇನು 'ಗೂಗಲ'ಮ್ಮನ ಅವಾಂತರ!

ಅಧಿವೇಶನದ ಚರ್ಚೆಯ ಸಮಯದಲ್ಲಿ ವಾಜಪೇಯಿ ಅವರು ಒಮ್ಮೆ ನೆಹರು ಅವರನ್ನು ಒಮ್ಮೆ 'ನಿಮ್ಮದು ಎರಡು ರೀತಿಯ ವ್ಯಕ್ತಿತ್ವ ನಿಮ್ಮಲ್ಲಿ ಚರ್ಚಿಲ್ ಇದ್ದಾನೆ, ಚೆಂಬರ್ಲೆನ್‌ ಕೂಡ ಇದ್ದಾನೆ' ಎಂದು ಟೀಕಿಸಿದ್ದರಂತೆ. ಆದರೆ ನೆಹರು ಬೇಸರ ಮಾಡಿಕೊಳ್ಳಲಿಲ್ಲವಂತೆ ಸಂಜೆ ವಾಜಪೇಯಿ ಯಾವುದೋ ಕಾರ್ಯಕ್ರಮದಲ್ಲಿ ಸಿಕ್ಕಾಗ 'ಇಂದು ಚೆನ್ನಾಗಿ ಭಾಷಣ ಮಾಡಿದೆ' ಎಂದು ಬೆನ್ನು ತಟ್ಟಿದರಂತೆ.

ಕಾಶ್ಮೀರದ ಸ್ಥಿತಿಗೆ ಕಾಂಗ್ರೆಸ್ ಕಾರಣ ಎಂದ ಸಚಿವ ರಿಜಿಜುಗೆ ಅವಾಜುಕಾಶ್ಮೀರದ ಸ್ಥಿತಿಗೆ ಕಾಂಗ್ರೆಸ್ ಕಾರಣ ಎಂದ ಸಚಿವ ರಿಜಿಜುಗೆ ಅವಾಜು

ಅಟಲ್ ಬಿಹಾರಿ ವಾಜಪೇಯಿ ಅವರ ಮಾತಿನಲ್ಲಿ ಪ್ರಜಾಪ್ರಭುತ್ವ ಹೇಗಿತ್ತು ಎಂಬುದರ ಸ್ಪಷ್ಟ ಉದಾಹರಣೆ ಇದೆ. ನೆಹರು ಅವರ ವ್ಯಕ್ತಿತ್ವದ ಚಿತ್ರಣವೂ ಇದೆ. ಬಿಜೆಪಿಗರೂ ಕೂಡ ನೆಹರು ಅವರ ಮೇಲೆ ಇರಿಸಿದ್ದ ಗೌರವವನ್ನು ಕಾಣಬಹುದು. ಆದರೆ ಇಂದು ಇದೆಲ್ಲಾ ತಲೆಕೆಳಗಾಗಿದೆ.

ವಾಜಪೇಯಿಗೆ ಮೂತ್ರನಾಳ ಸೋಂಕು, ಆರೋಗ್ಯ ಸ್ಥಿರ: ಏಮ್ಸ್ ಆಸ್ಪತ್ರೆವಾಜಪೇಯಿಗೆ ಮೂತ್ರನಾಳ ಸೋಂಕು, ಆರೋಗ್ಯ ಸ್ಥಿರ: ಏಮ್ಸ್ ಆಸ್ಪತ್ರೆ

ನೆಹರು ಪ್ರಧಾನಿ ಆಗಿದ್ದಾಗ ವಾಜಪೇಯಿ ಅವರು ಮೊದಲ ಬಾರಿಗೆ ಸಂಸದರಾಗಿದ್ದರು. ವಾಜಪೇಯಿ ಅವರ ಮೇಲೆ ನೆಹರು ಅವರಿಗೆ ವಿಶೇಷ ಮಮತೆ ಇತ್ತು. ವಾಜಪೇಯಿ ಅವರ ವಿರುದ್ಧ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ನೆಹರು ಒಪ್ಪಿರಲಿಲ್ಲವಂತೆ ಹೀಗೊಂದು ಕತೆಯೂ ಅವರಿಬ್ಬರ ಸ್ನೇಹದ ಬಗ್ಗೆ ಚಾಲ್ತಿಯಲ್ಲಿದೆ.

ಸ್ವರ್ಗವಾಸಿಗಳಾದರೂ ಸಹ ಈಗಲೂ ನೆಹರು, ಇಂದಿರಾ, ರಾಜೀವ್ ಅವರುಗಳು ಹೀನಾ ಮಾನ ಟೀಕೆಗೆ ಒಳಗಾಗುತ್ತಿದ್ದಾರೆ. ಭಾರತವನ್ನು ಹಾಳು ಮಾಡಿದವರು ಎನಿಸಿಕೊಳ್ಳುತ್ತಿದ್ದಾರೆ. ಈಗ ಅವರನ್ನು ಹೀನಾ ಮಾನ ಟೀಕಿಸುತ್ತಿರುವವರ ಗುರುಗಳೇ ನೆಹರು ಅವರು ಬದುಕಿದ್ದಾಗ ಅವರನ್ನು ಅಪಾರವಾಗಿ ಗೌರವಿಸುತ್ತಿದ್ದರು ಎಂಬುದು ವಿಪರ್ಯಾಸ.

English summary
BJP's most respectful leader Atal Bihari Vajapeyee once talked about Jawaharlal Nehru in parliament about his goodness. But nowadays including Modi BJP lambasting on Nehru, Indira Gandhi and Rajeev Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X