ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಲ್ಟಾ ರೂಪಾಂತರಗಳ ವಿರುದ್ಧ ಅಸ್ಟ್ರಾಜೆನೆಕಾ, ಫೈಜರ್‌ ಲಸಿಕೆಗಳು ಪರಿಣಾಮಕಾರಿ: ಅಧ್ಯಯನ

|
Google Oneindia Kannada News

ನವದೆಹಲಿ, ಜೂ.23: ವೈಜ್ಞಾನಿಕ ಅಧ್ಯಯನದ ಪ್ರಕಾರ ಅಸ್ಟ್ರಾಜೆನೆಕಾ ಮತ್ತು ಫೈಜರ್-ಬಯೋಟೆಕ್ ತಯಾರಿಸಿದ ಕೋವಿಡ್‌-19 ಲಸಿಕೆಗಳು ಭಾರತದಲ್ಲಿ ಮೊದಲು ಗುರುತಿಸಲಾಗಿರುವ ಕೋವಿಡ್‌ನ ವೈರಸ್‌ನ ಡೆಲ್ಟಾ ಮತ್ತು ಕಪ್ಪಾ ರೂಪಾಂತರಗಳ ವಿರುದ್ಧ ಪರಿಣಾಮಕಾರಿಯಾಗಿವೆ ಎಂದು ವರದಿಯಾಗಿದೆ.

Recommended Video

Delta Covid ಮೇಲೆ ಲಸಿಕೆಯ ಪರಿಣಾಮವೇನು | Pfizer | Astrazeneca | Oneindia Kannada

ಸೆಲ್‌ ಜರ್ನಲ್‌ನಲ್ಲಿ ಪ್ರಕಟವಾದ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರ ವರದಿಯ ಪ್ರಕಾರ, ಹೆಚ್ಚು ಸಾಂಕ್ರಾಮಿಕ ಡೆಲ್ಟಾ ಮತ್ತು ಕಪ್ಪಾ ರೂಪಾಂತರಗಳನ್ನು ತಡೆಗಟ್ಟಲು ಲಸಿಕೆ ಪರಿಣಾಮಕಾರಿತ್ವದ ಬಗ್ಗೆ ಪತ್ತೆ ಹಚ್ಚಲು, ಎರಡು ಡೋಸ್‌ ಲಸಿಕೆ ಹಾಕಿದ ಜನರ ರಕ್ತದಲ್ಲಿನ ಪ್ರತಿಕಾಯಗಳ ಸಾಮರ್ಥ್ಯವನ್ನು ಪರೀಕ್ಷಿಸಿದ್ದಾರೆ.

ಭಾರತದಲ್ಲಿ ಒಟ್ಟು 40 'ಡೆಲ್ಟಾ ಪ್ಲಸ್' ರೂಪಾಂತರಿ ಪತ್ತೆ, ಯಾವ ರಾಜ್ಯದಲ್ಲಿ ಎಷ್ಟು?ಭಾರತದಲ್ಲಿ ಒಟ್ಟು 40 'ಡೆಲ್ಟಾ ಪ್ಲಸ್' ರೂಪಾಂತರಿ ಪತ್ತೆ, ಯಾವ ರಾಜ್ಯದಲ್ಲಿ ಎಷ್ಟು?

ಡೆಲ್ಟಾ ಮತ್ತು ಕಪ್ಪಾ ರೂಪಾಂತರಗಳನ್ನು ಉಲ್ಲೇಖಿಸಿ "ಪ್ರಸಕ್ತ ಪೀಳಿಗೆಯ ಲಸಿಕೆಗಳು ಬಿ .1.617 ಕೊರೊನಾ ರೂಪಾಂತರಕ್ಕೆ ರಕ್ಷಣೆ ನೀಡುತ್ತದೆ ಎಂಬ ಯಾವುದೇ ಪುರಾವೆಗಳಿಲ್ಲ," ಎಂದು ಈ ವರದಿಯು ತಿಳಿಸಿದೆ.

AstraZeneca, Pfizer Vaccines Effective Against Delta Covid Variants says Study

ಆದಾಗ್ಯೂ, ರಕ್ತದಲ್ಲಿನ ಪ್ರತಿಕಾಯಗಳನ್ನು ತಟಸ್ಥಗೊಳಿಸುವ ಸಾಂದ್ರತೆಯು ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಇದು ಕೆಲವು ಪ್ರಗತಿಯ ಸೋಂಕುಗಳಿಗೆ ಕಾರಣವಾಗಬಹುದು ಎಂದು ಹೇಳಿದೆ.

ಕಳೆದ ವಾರ, ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ (ಪಿಎಚ್‌ಇ) ನಡೆಸಿದ ವಿಶ್ಲೇಷಣೆಯ ಪ್ರಕಾರ ಫೈಜರ್‌ ಇಂಕ್ ಮತ್ತು ಅಸ್ಟ್ರಾಜೆನೆಕಾ ತಯಾರಿಸಿದ ಲಸಿಕೆಗಳು ಡೆಲ್ಟಾ ರೂಪಾಂತರ ತಗುಲಿದವರು ಆಸ್ಪತ್ರೆಗೆ ದಾಖಲಾಗುವ ಮಟ್ಟಿಗೆ ಉಂಟಾಗುವ ತೀವ್ರತೆಯನ್ನು ಶೇ.90ಕ್ಕಿಂತ ಹೆಚ್ಚು ಕಡಿಮೆ ಮಾಡುತ್ತದೇ ಎಂದು ತಿಳಿಸಿದೆ.

"ಆಕ್ಸ್‌ಫರ್ಡ್‌ನಿಂದ ಪ್ರಕಟವಾದ ಕ್ಲಿನಿಕಲ್ ಅಲ್ಲದ ಫಲಿತಾಂಶಗಳನ್ನು ನೋಡಲು ನಮಗೆ ಉತ್ಸಾಹವಿದೆ. ಈ ಡೇಟಾ ಹಾಗೂ ಸಾರ್ವಜನಿಕ ಆರೋಗ್ಯ ಇಂಗ್ಲೆಂಡ್‌ನ ಇತ್ತೀಚಿನ ಆರಂಭಿಕ ವಿಶ್ಲೇಷಣೆಯು ನಮ್ಮ ಲಸಿಕೆ ಡೆಲ್ಟಾ ರೂಪಾಂತರದ ವಿರುದ್ಧ ಗಮನಾರ್ಹ ಪರಿಣಾಮ ಬೀರುತ್ತದೆ ಎಂಬ ಸಕಾರಾತ್ಮಕ ಸೂಚನೆಯನ್ನು ನಮಗೆ ನೀಡುತ್ತದೆ," ಅಸ್ಟ್ರಾಜೆನೆಕಾ ಕಾರ್ಯನಿರ್ವಾಹಕ ಮೆನೆ ಪಂಗಲೋಸ್ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಡೆಲ್ಟಾ ರೂಪಾಂತರವು ಜಾಗತಿಕವಾಗಿ ರೋಗದ ಪ್ರಬಲ ರೂಪಾಂತರವಾಗುತ್ತಿದೆ," ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಹೇಳಿದ್ದಾರೆ.

ಆಕ್ಸ್‌ಫರ್ಡ್ ಸಂಶೋಧಕರು ಈ ಹಿಂದೆ ಕೋವಿಡ್‌ ಹೊಂದಿದ್ದ ಜನರಲ್ಲಿ ಮತ್ತೆ ಕೊರೊನಾ ಸೋಂಕು ಕಾಣಿಸಿಕೊಳ್ಳುವ ಮಾದರಿಗಳನ್ನು ವಿಶ್ಲೇಷಿಸಿದ್ದಾರೆ. ಈ ಹಿಂದೆ ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ನಲ್ಲಿ ಹೊರಹೊಮ್ಮಿದ ಬೀಟಾ ಮತ್ತು ಗಾಮಾ ಸೋಂಕು ತಗುಲಿದ್ದವರಿಗೆ ಈಗ ಡೆಲ್ಟಾ ರೂಪಾಂತರವು ಹೆಚ್ಚಾಗಿ ಬಂದಿದೆ ಎಂದು ವರದಿಯಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
COVID-19 vaccines made by AstraZeneca and the Pfizer-BioNTech alliance remain broadly effective against Delta and Kappa variants of the COVID-19 causing virus, which were first identified in India, according to a scientific study.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X