• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹರ್ಯಾಣದಲ್ಲಿ ಕಮಲ ಅರಳಿಸಿದ ಸ್ಟಾರ್ ನಾಯಕರು

By Mahesh
|

ಚಂಡೀಗಢ, ಅ.20: ಹರ್ಯಾಣದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿ ಇದೇ ಮೊದಲ ಬಾರಿಗೆ ಅಧಿಕಾರ ಚುಕ್ಕಾಣಿ ಹಿಡಿಯುತ್ತಿದೆ. ಸುಮಾರು 1೦ ವರ್ಷಗಳ ಕಾಂಗ್ರೆಸ್ ಅಧಿಪತ್ಯಕ್ಕೆ ಮೋದಿ-ಶಾ ಜೋಡಿ ಅಂತ್ಯ ಹಾಡಿದೆ. ಅದರೆ, ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಮೂರನೇ ಸ್ಥಾನಕ್ಕೆ ತಳ್ಳುವಲ್ಲಿ ಸ್ಥಳೀಯ ನಾಯಕರ ಪರಿಶ್ರಮವೇ ಕಾರಣ ಎಂದರೆ ತಪ್ಪಾಗಲಾರದು.

1967ರಿಂದ ಇದೇ ಮೊದಲ ಬಾರಿಗೆ ಹರ್ಯಾಣದಲ್ಲಿ ಅ.15ರಂದು ಶೇಕಡಾವಾರು ಮತದಾನದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿತ್ತು. 1967ರಲ್ಲಿ 72.65% ಮತದಾನವಾಗಿತ್ತು. ಈ ದಾಖಲೆಯನ್ನು 2014ರಲ್ಲಿ 76.54% ಮತದಾನ ಮುರಿದಿದೆ. 116 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 1351 ಅಭ್ಯರ್ಥಿಗಳು ಕಣದಲ್ಲಿದ್ದರು. [ಹರ್ಯಾಣ ಆಳ್ವಿಕೆ ಮಾಡಿದ ಪಕ್ಷಗಳು]

2014ರ ಲೋಕಸಭಾ ಚುನಾವಣೆ ನಂತರ ದೇಶದ ರಾಜಕೀಯ ಚಿತ್ರಣವೇ ಬದಲಾಗಿದೆ. ಸಾಮಾನ್ಯ ಕಾರ್ಯಕರ್ತನಾಗಿ ಪ್ರಚಾರಕ್ಕೆ ಇಳಿದ ನರೇಂದ್ರ ಮೋದಿ ಅವರು ಪ್ರಧಾನಿ ಅಭ್ಯರ್ಥಿಯಾಗಿ ಎಬ್ಬಿಸಿದ ಅಲೆ ಈಗ ಭಾರತದ ಪುರಾತನ ಪಕ್ಷ ಕಾಂಗ್ರೆಸ್ ನೆಲಕಚ್ಚುವಂತೆ ಮಾಡಿದೆ. ಹರ್ಯಾಣದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. 90 ಸ್ಥಾನಗಳಲ್ಲಿ ಬಿಜೆಪಿ 47 ಸ್ಥಾನಗಳಿಸಿದರೆ, ಐಎನ್ ಎಲ್ ಡಿ 20, ಕಾಂಗ್ರೆಸ್ 15, ಎಚ್ ಜೆಸಿ 2 ಸ್ಥಾನ, ಇತರೆ 6 ಸ್ಥಾನ ಪಡೆದುಕೊಂಡಿದ್ದಾರೆ.

ಬಿಜೆಪಿ ಗೆಲುವಿನ ರುವಾರಿಗಳಲ್ಲಿ ಸಂಗ ಪರಿವಾರದ ಶಿವಪ್ರಕಾಶ್ ಹಾಗೂ ರಾಮ್ ಲಾಲ್ ಕೂಡಾ ಇದ್ದಾರೆ ಎಂಬುದನ್ನು ಮರೆಯುವಂತಿಲ್ಲ. ಈಗ ಸಿಎಂ ಸ್ಥಾನಕ್ಕೆ ಕ್ಯಾಪ್ಟನ್ ಅಭಿಮನ್ಯು, ರಾಮ್ ಬಿಲಾಸ್ ಶರ್ಮ, ಮನೋಹರ್ ಲಾಲ್ ಖತ್ತಾರ್, ಅನಿಲ್ ವಿಜ್, ಓಂ ಧಾಂಕರ್ ಮುಂತಾದವರ ಹೆಸರು ಕೇಳಿ ಬಂದಿದೆ. ಈ ಬಗ್ಗೆ ಮಂಗಳವಾರ ವೆಂಕಯ್ಯ ನಾಯ್ಡು ಅವರು ಸಿಎಂ ಆಯ್ಕೆ ಬಗ್ಗೆ ನಿರ್ಣಯ ತೆಗೆದುಕೊಳ್ಳಲಿದ್ದಾರೆ. [ಬಿಜೆಪಿಯ ಮುಂದಿನ ಟಾರ್ಗೆಟ್ ಯಾವುದು?]

ಸದ್ಯಕ್ಕೆ ಹರ್ಯಾಣದಲ್ಲಿ ಕಮಲ ಅರಳುವಂತೆ ಮಾಡಿದ ಸ್ಟಾರ್ ನಾಯಕರ ಬಗ್ಗೆ ತಿಳಿದುಕೊಳ್ಳಿ...

ಕೈಲಾಶ್ ವಿಜಯ್ ವರ್ಗಿಯಾ

ಕೈಲಾಶ್ ವಿಜಯ್ ವರ್ಗಿಯಾ

ಮಧ್ಯಪ್ರದೇಶದ ನಗರಾಭಿವೃದ್ಧಿ ಸಚಿವ ವಿಜಯ್ ವರ್ಗಿಯಾ ಆರು ಹರ್ಯಾಣದ ಚುನಾವಣೆ ಉಸ್ತುವಾರಿ ವಹಿಸಿಕೊಂಡಿದ್ದರು. ಅಮಿತ್ ಶಾ ಅವರ ತಂತ್ರಗಳನ್ನು ಕಾರ್ಯರೂಪಕ್ಕೆ ತಂದಿದ್ದೇ ವಿಜಯ್ ಎಂಬುದನ್ನು ಮರೆಯುವಂತಿಲ್ಲ.

ಚುನಾವಣೆ ಪ್ರಚಾರದ ವೇಳೆ ಉದ್ದುದ್ದಾ ಭಾಷಣಗಳಿಗೆ ತಿಲಾಂಜಲಿ ನೀಡಿ ಭಜನೆ ಮಾಡುತ್ತಾ ಕಾರ್ಯಕರ್ತರನ್ನು ಹುರಿದುಂಬಿಸುತ್ತಾ ಜನರನ್ನು ಆಕರ್ಷಿಸಿದ್ದು ವಿಜಯ್ ಅವರ ಸ್ಟೈಲ್. ಕಾರ್ಯಕರ್ತರಲ್ಲಿ ಹೊಸ ಜೋಶ್ ತುಂಬಿ ಬಿಜೆಪಿ ಪರ ಅಲೆ ಸೃಷ್ಟಿಸುವಲ್ಲಿ ವಿಜಯ್ ಯಶಸ್ವಿಯಾದರು.

ಡಾ. ಅನಿಲ್ ವಿಜ್

ಡಾ. ಅನಿಲ್ ವಿಜ್

ಹರ್ಯಾಣ ಮುಖ್ಯಮಂತ್ರಿ ಸ್ಥಾನದ ರೇಸಿನಲ್ಲಿರುವ ಡಾ. ಅನಿಲ್ ವಿಜ್ ಅವರು ವಿಜಯ್ ಅವರ ಜೊತೆ ಜಂಟಿಯಾಗಿ ಹರ್ಯಾಣ ಚುನಾವಣೆ ಉಸ್ತುವಾರಿಕೆ ವಹಿಸಿಕೊಂಡಿದ್ದರು. ಚುನಾವಣಾ ಪ್ರಚಾರ ಎಲ್ಲಿ ನಡೆಸಬೇಕು? ಎಲ್ಲಿ ಯಾವ ರೀತಿ ಭಾಷಣ ಮಾಡಬೇಕು? ಜನರನ್ನು ಬಿಜೆಪಿಯತ್ತ ಸೆಳೆಯುವುದು ಹೇಗೆ? ಎಂಬ ಕಾರ್ಯತಂತ್ರಗಳನ್ನು ರೂಪಿಸಿದ್ದೇ ಅನಿಲ್ ವಿಜ್, ಮೋದಿ ಪ್ರಚಾರ ಕ್ಲಿಕ್ ಆಗಿದ್ದು ಹಾಗೂ ಸೂಕ್ತ ಅಭ್ಯರ್ಥಿ ಆಯ್ಕೆಯಲ್ಲಿ ಸಫಲರಾಗಿದ್ದು ಅನಿಲ್ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ.

ರಾಮ್ ಲಾಲ್

ರಾಮ್ ಲಾಲ್

ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ರಾಮ್ ಲಾಲ್ ಅವರು ಆರ್ಎಸ್ಎಸ್ ನ ಶಿವ ಪ್ರಕಾಶ್ ಜೊತೆಗೂಡಿ ಸಂಘಟನೆ ಹಾಗೂ ಕಾರ್ಯಕರ್ತರಲ್ಲಿ ಶಿಸ್ತು ಮೂಡಿಸುವಲ್ಲಿ ಯಶಸ್ವಿಯಾದರು. ಮೋದಿ ಅವರು ಹರ್ಯಾಣದ ಹತ್ತು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ಕಾರ್ಯ ಕೈಗೊಳ್ಳಲು ಬೇಕಾದ ಅಗತ್ಯ ವ್ಯವಸ್ಥೆಯನ್ನು ರಾಮ್ ಲಾಲ್ ನೋಡಿಕೊಂಡರು.

ಶಿವಪ್ರಕಾಶ್

ಶಿವಪ್ರಕಾಶ್

ಸಂಘ ಪರಿವಾರದಿಂದ ಕಳೆದ ಜುಲೈನಲ್ಲಿ ಬಿಜೆಪಿಗೆ ಸೇರ್ಪಡೆಯಾದ ಉತ್ತರಪ್ರದೇಶ ಮೂಲದ ಕ್ಷೇತ್ರ ಪ್ರಚಾರಕ ಶಿವ ಪ್ರಕಾಶ್ ಅವರು ಹರ್ಯಾಣದಲ್ಲಿ ಬಿಜೆಪಿ ಗೆಲುವಿಗೆ ನೆರವಾದರು. ಹೂಡಾ ಸರ್ಕಾರದ ಹುಳುಕನ್ನು ಜನರತ್ತ ಮುಟ್ಟಿಸಲು ಬೇಕಾದ ಸಂಘಟಕರನ್ನು ಗುರುತಿಸಿ ಕರೆ ತಂದ ಶಿವಪ್ರಕಾಶ್ ಅವರು ಜಾತ್ ಸಮುದಾಯ ಬಿಜೆಪಿ ಪರ ನಿಲ್ಲುವಂತೆ ಮಾಡಿಬಿಟ್ಟರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The credit for the victory goes to a few bigwigs of the party who have been camping in Rohtak district, the constituency of Haryana CM Bhupinder Singh Hooda, for the last few days to ensure BJP's win. These leaders spearheaded party's campaign in the State.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more