ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

Assembly Elections 2022 LIVE Updates: ಜ.14ರಿಂದ ಮಾ.10ರವರೆಗೆ ಪಂಚರಾಜ್ಯ ಚುನಾವಣೆ

|
Google Oneindia Kannada News

ನವದೆಹಲಿ, ಜನವರಿ 8: ಕೇಂದ್ರ ಚುನಾವಣಾ ಆಯೋಗವು ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಾಖಂಡದ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಶನಿವಾರ ಮಧ್ಯಾಹ್ನ 3.30ಕ್ಕೆ ಪ್ರಕಟಿಸಲಿದೆ ಎಂದು ಉನ್ನತ ಚುನಾವಣಾ ಸಂಸ್ಥೆಯ ಹೇಳಿಕೆ ತಿಳಿಸಿದೆ.

ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿಯೇ ಕೇಂದ್ರ ಚುನಾವಣಾ ಆಯೋಗ 5 ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಲು ಸಿದ್ಧತೆ ಮಾಡಿಕೊಂಡಿದೆ.

ಚುನಾವಣಾ ಆಯೋಗದ ಅಧಿಕಾರಿಗಳು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಜೊತೆ ಗುರುವಾರ ಮಹತ್ವದ ಸಭೆ ನಡೆಸಿದ್ದು, ರಾಜ್ಯಗಳಲ್ಲಿನ ಕೋವಿಡ್ ಪರಿಸ್ಥಿತಿ ಕುರಿತು ಮಾಹಿತಿಯನ್ನು ಪಡೆದರು.

Assembly Elections 2022 Live Updates: EC to announce Uttar Pradesh, Punjab, Goa, Uttarakhand, Manipur Election Schedule at 3.30 pm

403 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಹಲವು ಹಂತಗಳಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ.

ಉತ್ತರ ಪ್ರದೇಶ (403), ಗೋವಾ (40), ಪಂಜಾಬ್ (117), ಉತ್ತರಾಖಂಡ (70), ಮಣಿಪುರ (60) ರಾಜ್ಯಗಳ ವಿಧಾನಸಭೆ ಚುನಾವಣೆ ಫೆಬ್ರವರಿ ಅಂತ್ಯ ಅಥವಾ ಮಾರ್ಚ್‌ ತಿಂಗಳಿನಲ್ಲಿ ನಡೆಯಬೇಕಿದೆ.

ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಆರೋಗ್ಯ ಸಚಿವಾಲಯದ ಜೊತೆ ಚರ್ಚಿಸಿರುವ ಚುನಾವಣಾ ಆಯೋಗ ವೇಳಾಪಟ್ಟಿ ಘೋಷಣೆ ಮಾಡಲಿದೆ. ಗುರುವಾರ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಮತ್ತು ತಜ್ಞರ ಜೊತೆ ಚುನಾವಣಾ ಆಯೋಗದ ಅಧಿಕಾರಿಗಳು ಸಭೆ ನಡೆಸಿದ್ದರು. ಚುನಾವಣೆ ನಡೆಯುವ 5 ರಾಜ್ಯಗಳಲ್ಲಿ ಲಸಿಕೆ ನೀಡುವ ಕುರಿತು ಹೆಚ್ಚು ಗಮನ ಹರಿಸಬೇಕು ಎಂದು ಆಯೋಗ ಹೇಳಿದೆ.

Newest FirstOldest First
6:54 PM, 8 Jan

ಪಂಚರಾಜ್ಯ ಚುನಾವಣೆ: 80 ವರ್ಷ ಮೇಲ್ಪಟ್ಟವರಿಗೆ ಅಂಚೆ ಮತದಾನಕ್ಕೆ ಅವಕಾಶ

ಕೇಂದ್ರ ಚುನಾವಣಾ ಆಯೋಗವು ಪಂಚರಾಜ್ಯ ವಿಧಾನಸಭಾ ಚುನಾವಣಾ ದಿನಾಂಕವನ್ನು ಘೋಷಿಸಿದೆ. ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ 10ರಂದು ಫಲಿತಾಂಶ ಹೊರಬೀಳಲಿದೆ.
6:53 PM, 8 Jan

ಪಂಚರಾಜ್ಯ ಚುನಾವಣೆಗೆ ವೆಚ್ಚ ನಿಗದಿ ಮಾಡಿದ ಕೇಂದ್ರ ಚುನಾವಣಾ ಆಯೋಗ

ಪಂಜರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಅಭ್ಯರ್ಥಿಗಳ ವೆಚ್ಚದ ಮಿತಿಯನ್ನು ನಿಗದಿಗೊಳಿಸಿದೆ.
6:51 PM, 8 Jan
ಉತ್ತರಾಖಂಡ

Breaking: ಉತ್ತರಾಖಂಡ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ

ಗೋವಾ, ಪಂಜಾಬ್, ಮಣಿಪುರ, ಉತ್ತರಾಖಂಡ ಮತ್ತು ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಶನಿವಾರ ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ.
6:50 PM, 8 Jan
ಮಣಿಪುರ

Breaking: ಮಣಿಪುರ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ

ಮಣಿಪುರ ರಾಜ್ಯದ ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. ಮಣಿಪುರದಲ್ಲಿ ಎರಡು ಹಂತದ ಮತದಾನ ನಡೆಸಲು ಚುನಾವಣಾ ಆಯೋಗ ತೀರ್ಮಾನಿಸಿದೆ.
6:49 PM, 8 Jan
ಗೋವಾ

Breaking News: ಗೋವಾದ 40 ಕ್ಷೇತ್ರಗಳಿಗೆ ಒಂದು ಹಂತದಲ್ಲಿ ಚುನಾವಣೆ

ಭಾರತದ ಪುಟ್ಟ ರಾಜ್ಯ ಎನಿಸಿರುವ ಗೋವಾದಲ್ಲಿ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟಿಸಲಾಗಿದೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುಶೀಲ್ ಚಂದ್ರ, ಪಂಚರಾಜ್ಯಗಳ ಚುನಾವಣೆ, ನಾಮಪತ್ರ ಸಲ್ಲಿಕೆ, ನಾಮಪತ್ರ ಮರುಪರಿಶೀಲನೆ, ನಾಮಪತ್ರ ವಾಪಸ್, ಮತದಾನ ಹಾಗೂ ಫಲಿತಾಂಶದ ದಿನಾಂಕವನ್ನು ಪ್ರಕಟಿಸಿದ್ದಾರೆ.
6:02 PM, 8 Jan

5 ರಾಜ್ಯಗಳ ವಿಧಾನಸಭಾ ಚುನಾವಣೆ: ಮತದಾರರ ತಾಪಮಾನವು ಕೇಂದ್ರ ಆರೋಗ್ಯ ಸಚಿವಾಲಯದ ನಿಗದಿತ ಮಾನದಂಡಗಳಿಗಿಂತ ಹೆಚ್ಚಿದ್ದರೆ, ಮತದಾರರಿಗೆ ಟೋಕನ್ ನೀಡಲಾಗುತ್ತದೆ ಮತ್ತು ಮತದಾನದ ಕೊನೆಯ ಗಂಟೆಯಲ್ಲಿ ಮತದಾನಕ್ಕೆ ಬರುವಂತೆ ಕೇಳಲಾಗುತ್ತದೆ: ಚುನಾವಣಾ ಆಯೋಗ
6:00 PM, 8 Jan

ಉತ್ತರಪ್ರದೇಶದ ಜನರು ಬಿಜೆಪಿ ಸರ್ಕಾರಕ್ಕೆ ವಿದಾಯ ಹೇಳಲು ಸಜ್ಜಾಗಿದ್ದಾರೆ. ಈ ದಿನಾಂಕಗಳು ರಾಜ್ಯದಲ್ಲಿ ದೊಡ್ಡ ಬದಲಾವಣೆಯನ್ನು ಸೂಚಿಸುತ್ತವೆ. ಸಮಾಜವಾದಿ ಪಕ್ಷವು ನಿಯಮಗಳನ್ನು ಅನುಸರಿಸುತ್ತದೆ, ಆದರೆ ಆಡಳಿತ ಪಕ್ಷವು ಈ ಮಾರ್ಗಸೂಚಿಗಳನ್ನು ಅನುಸರಿಸುತ್ತದೆ ಎಂಬುದನ್ನು ಚುನಾವಣಾ ಆಯೋಗ ಖಚಿತಪಡಿಸಿಕೊಳ್ಳಬೇಕು: ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್
Advertisement
5:58 PM, 8 Jan

ಉತ್ತರಾಖಂಡದ ಚುನಾವಣಾ ದಿನಾಂಕ ಘೋಷಣೆಯನ್ನು ನಾವು ಸ್ವಾಗತಿಸುತ್ತೇವೆ. ಕಾಂಗ್ರೆಸ್ ಯಾವಾಗಲೂ ನೀತಿ ಸಂಹಿತೆ ಮತ್ತು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಪಾಲಿಸುತ್ತದೆ: ಕಾಂಗ್ರೆಸ್ ನಾಯಕ ಹರೀಶ್ ರಾವತ್
5:57 PM, 8 Jan

ಮಾರ್ಚ್ 10ರಂದು ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದಾಗ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಮತ್ತೆ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
5:06 PM, 8 Jan

Breaking News: ಉತ್ತರ ಪ್ರದೇಶದಲ್ಲಿ 7 ಹಂತಗಳಲ್ಲಿ ಮತದಾನ

ಭಾರತದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಶನಿವಾರ ದಿನಾಂಕವನ್ನು ಪ್ರಕಟಿಸಿದೆ.
4:58 PM, 8 Jan

ಚುನಾವಣಾ ಅಕ್ರಮ ತಡೆಯಲು ಶುರುವಾದ cVIGIL ಆ್ಯಪ್ ಕುರಿತು ಮಾಹಿತಿ

ಚುನಾವಣಾ ಸಂದರ್ಭದಲ್ಲಿ ಮತಗಳನ್ನು ಸೆಳೆಯಲು ಮತದಾರರಿಗೆ ಹಣ, ಹೆಂಡ ಹಾಗೂ ಇತರೆ ಆಸೆ, ಆಮಿಷ ತೋರಿಸುವುದು ಸಹಜ. ಇಂತಹ ಚುನಾವಣಾ ಅಕ್ರಮಗಳ ತಡೆಗೆ ಕೇಂದ್ರ ಚುನಾವಣಾ ಆಯೋಗವು ಸಿ-ವಿಜಿಲ್‌(cVIGIL) ಆ್ಯಪ್ ಬಿಡುಗಡೆ ಮಾಡಿದೆ.
4:56 PM, 8 Jan
ಪಂಜಾಬ್

Breaking: ಪಂಜಾಬ್ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ

ಪಂಜಾಬ್ ವಿಧಾನಸಭಾ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಶನಿವಾರ ಘೋಷಿಸಿದೆ.
Advertisement
4:41 PM, 8 Jan

ಪಂಜಾಬ್‌ನ 117 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 14ರಂದು ಚುನಾವಣೆ ನಡೆಯಲಿದೆ.
4:27 PM, 8 Jan

ಗೋವಾದ ಒಟ್ಟು 40 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 14ರಂದು ಚುನಾವಣೆ ನಡೆಯಲಿದೆ.
4:13 PM, 8 Jan

ಮಾರ್ಚ್ 10ರಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶ: ಸಿಇಸಿ ಸುಶೀಲ್ ಚಂದ್ರ
4:12 PM, 8 Jan

ಉತ್ತರಪ್ರದೇಶದಲ್ಲಿ ಏಳು ಹಂತದ ಚುನಾವಣೆ ಮತ್ತು ಮಣಿಪುರದಲ್ಲಿ ಎರಡು ಹಂತದ ಚುನಾವಣೆ: ಸಿಇಸಿ ಸುಶೀಲ್ ಚಂದ್ರ
4:11 PM, 8 Jan

ಪಂಜಾಬ್, ಉತ್ತರಾಖಂಡ ಮತ್ತು ಗೋವಾದಲ್ಲಿ ಒಂದೇ ಹಂತದ ಚುನಾವಣೆ: ಕೇಂದ್ರ ಚುನಾವಣಾ ಆಯೋಗ
4:10 PM, 8 Jan

ಫೆಬ್ರವರಿ 10ರಂದು ಮೊದಲ ಹಂತದ ಮತದಾನ
4:09 PM, 8 Jan

ಉತ್ತರಪ್ರದೇಶದಲ್ಲಿ ಜನವರಿ 14ರಿಂದ ಚುನಾವಣಾ ಅಧಿಸೂಚನೆ: ಸಿಇಸಿ ಸುಶೀಲ್ ಚಂದ್ರ
4:08 PM, 8 Jan

ಪಂಚರಾಜ್ಯಗಳಲ್ಲಿ ಏಳು ಹಂತದ ಚುನಾವಣೆ: ಕೇಂದ್ರ ಚುನಾವಣಾ ಆಯೋಗ
4:07 PM, 8 Jan

ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ನಂತರ ವಿಜಯೋತ್ಸವ, ಸಂಭ್ರಮಾಚರಣೆಗೆ ನಿರ್ಬಂಧ: ಕೇಂದ್ರ ಚುನಾವಣಾ ಆಯೋಗ
4:06 PM, 8 Jan

ನಾಮಪತ್ರ ಸಲ್ಲಿಕೆ ವೇಳೆ ರೋಡ್‌ಶೋ, ಮೆರವಣಿಗೆ ಮಾಡುವಂತಿಲ್ಲ: ಕೇಂದ್ರ ಚುನಾವಣಾ ಆಯೋಗ
4:05 PM, 8 Jan

ಜನವರಿ 15ರ ಬಳಿಕ ರೋಡ್‌ಶೋ, ಪಾದಯಾತ್ರೆಗೆ ಅವಕಾಶ ಕುರಿತು ತೀರ್ಮಾನ: ಕೇಂದ್ರ ಚುನಾವಣಾ ಆಯೋಗ
4:04 PM, 8 Jan

ಜನವರಿ 15ರವರೆಗೆ ರೋಡ್‌ಶೋ, ಪಾದಯಾತ್ರೆಗೆ ಅವಕಾಶವಿಲ್ಲ: ಕೇಂದ್ರ ಚುನಾವಣಾ ಆಯೋಗ
4:03 PM, 8 Jan

ಪಂಚರಾಜ್ಯಗಳ ಚುನಾವಣೆಯಲ್ಲಿ ಚುನಾವಣಾ ಮೆರವಣಿಗೆಗೆ ಅವಕಾಶವಿಲ್ಲ: ಸಿಇಸಿ ಸುಶೀಲ್ ಚಂದ್ರ
4:03 PM, 8 Jan

ಗೋವಾ, ಮಣಿಪುರ, ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ್ ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಸಲಾಗುವುದು. ಚುನಾವಣೆ ಸಂಬಂಧ ಕೇಂದ್ರ, ರಾಜ್ಯ ಸರ್ಕಾರಗಳ ಜತೆ ಚರ್ಚೆ ನಡೆಸಲಾಗಿದೆ ಎಂದು ಸಿಇಸಿ ಸುಶೀಲ್ ಚಂದ್ರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
4:01 PM, 8 Jan

ಅಗತ್ಯ ಬಿದ್ದರೆ ಚುನಾವಣಾ ಸಿಬ್ಬಂದಿಗಳಿಗೆ ಬೂಸ್ಟರ್ ಡೋಸ್ ನೀಡಲಾಗುವುದು; ಸಿಇಸಿ ಸುಶೀಲ್ ಚಂದ್ರ
3:59 PM, 8 Jan

ಉತ್ತರಪ್ರದೇಶದಲ್ಲಿ ಶೇ.29ರಷ್ಟು ಹೊಸ ಮತದಾರರು ಸೇರ್ಪಡೆ
3:57 PM, 8 Jan

ಪಂಚರಾಜ್ಯಗಳ ಚುನಾವಣೆಯಲ್ಲಿ ಎಲ್ಲಾ ಚುನಾವಣಾ ಅಧಿಕಾರಿಗಳಿಗೆ ಎರಡು ಬಾರಿ ಲಸಿಕೆ ಹಾಕಲಾಗುತ್ತದೆ ಮತ್ತು ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಲಾಗುತ್ತದೆ: ಸಿಇಸಿ ಸುಶೀಲ್ ಚಂದ್ರ
3:56 PM, 8 Jan

ಪಂಜಾಬ್, ಉತ್ತರಾಖಂಡ ಮತ್ತು ಉತ್ತರಪ್ರದೇಶ ಅಭ್ಯರ್ಥಿಗಳ ವೆಚ್ಚದ ಮಿತಿ 40 ಲಕ್ಷ ರೂ. ಇರುತ್ತದೆ. ಗೋವಾ ಮತ್ತು ಮಣಿಪುರ ಅಭ್ಯರ್ಥಿಗಳ ವೆಚ್ಚದ ಮಿತಿ 28 ಲಕ್ಷ ರೂ. ಇರುತ್ತದೆ: ಸಿಇಸಿ ಸುಶೀಲ್ ಚಂದ್ರ
READ MORE

English summary
Assembly Elections 2022 LIVE Updates, Latest News of Uttar Pradesh, Uttarakhand, Manipur, Goa and Punjab Election Latest Updates: Election Commission of India to announce the schedule for Assembly elections of 5 states on January 8 at 3.30pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X