• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡೈಲಿ ಹಂಟ್‌ನಲ್ಲಿ 5 ರಾಜ್ಯಗಳ ಚುನಾವಣಾ ಫಲಿತಾಂಶ ಸಮಗ್ರ ವರದಿ

|

ಐದು ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ ಮೇ 2ರಂದು ಪ್ರಕಟವಾಗಲಿದೆ. ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ರಾಜ್ಯಗಳಲ್ಲಿ ಒಟ್ಟಿಗೆ ಮತದಾನ ನಡೆದಿತ್ತು.

ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ಎದುರಾಳಿಯಾದ ಬಿಜೆಪಿ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಹೊಸ ಹಾದಿ ನಿರ್ಮಿಸುವ ಭರವಸೆ ಹೊಂದಿದೆ.

ತಮಿಳುನಾಡು ರಾಜ್ಯದಲ್ಲಿ ಎಐಎಡಿಎಂಕೆ ಪಕ್ಷವು ಜಯಲಲಿತಾ ನಿಧನದ ಬಳಿಕ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟವನ್ನು ಮೊದಲ ಬಾರಿಗೆ ಎದುರಿಸುತ್ತಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಒಂದಾಗಿದ್ದ ಡಿಎಂಕೆ-ಕಾಂಗ್ರೆಸ್ ರಾಜ್ಯದಲ್ಲಿಯೂ ಅಧಿಕಾರದ ನಿರೀಕ್ಷೆಯಲ್ಲಿದ್ದಾರೆ.

ಪುದುಚೇರಿಯಲ್ಲಿ ಬಿಜೆಪಿ ಅಧಿಕಾರ ಪಡೆಯುವ ನಿರೀಕ್ಷೆಯಲ್ಲಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಂಡ ಬಳಿಕ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿತ್ತು. ಪುದುಚೇರಿ ಕಾಂಗ್ರೆಸ್ ಪ್ರಭಾವವಿರುವ ಕ್ಷೇತ್ರ. ಆದರೆ, ಈ ಬಾರಿ ಎಲ್ಲಾ ಲೆಕ್ಕಾಚಾರ ಬೇರೆಯಾಗಿದ್ದು, ಬಿಜೆಪಿ ಎಐಎನ್‌ಆರ್‌ಸಿ ಮುನ್ನಡೆಸುವ ಮೈತ್ರಿಕೂಟದ ಜೊತೆ ಸೇರಿದೆ.

ಕೇರಳದಲ್ಲಿ ಆಡಳಿತಾರೂಢ ಎಡಪಕ್ಷ ಮತ್ತು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷದ ನಡುವೆ ಪ್ರಬಲ ಸ್ಪರ್ಧೆ ಇದೆ. ಕಳೆದ ಎರಡು ಚುನಾವಣೆಗಳಿಂದ ಎರಡೂ ಪಕ್ಷಗಳೇ ಅಧಿಕಾರವನ್ನು ಹಂಚಿಕೊಳ್ಳುತ್ತಿವೆ. ಬಿಜೆಪಿ ನೇತೃತ್ವದ ಎನ್‌ಡಿಎ ಅಸ್ಸಾಂನಲ್ಲಿ ಅಧಿಕಾರವನ್ನು ಮರಳಿ ಪಡೆಯುವ ಉತ್ಸಾಹದಲ್ಲಿದೆ.

ಡೈಲಿ ಹಂಟ್ ಐದು ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶವನ್ನು ಲೈವ್‌ನಲ್ಲಿ ನೀಡಲಿದೆ. ಚುನಾವಣೆ ಕೇವಲ ಲೆಕ್ಕಾಚಾರಕ್ಕೆ ಮಾತ್ರ ಸೀಮಿತವಲ್ಲ. ಅಂಕಿ ಸಂಖ್ಯೆಗಳು, ವಿಶ್ಲೇಷಣೆಗಳನ್ನು ಪ್ರತಿಯೊಬ್ಬರಿಗಾಗಿ ನಾವು ನೀಡಲಿದ್ದೇವೆ. ಫಲಿತಾಂಶದ ಸ್ಪಷ್ಟ ಚಿತ್ರಣ ಲಭ್ಯವಾಗುತ್ತಿದ್ದಂತೆ ಫಲಿತಾಂಶದ ವಿಶ್ಲೇಷಣೆಯನ್ನು ರಾಜಕೀಯ ತಜ್ಞರ ಮೂಲಕ ನೀಡಲಾಗುತ್ತದೆ.

ಡೈಲಿ ಹಂಟ್ ಫಲಿತಾಂಶದ ನೇರ, ನಿಖರ ಮತ್ತು ವೇಗದ ಅಪ್ಡೇಟ್ ಮಾಹಿತಿಗಳನ್ನು ನೀಡಲಿದೆ. ಅಂಕಿ ಸಂಖ್ಯೆ, ಪ್ರಬಲ ಪೈಪೋಟಿ, ಹಿಂದಿನ ಚುನಾವಣೆ ಫಲಿತಾಂಶದ ಮಾಹಿತಿಯೂ ಸಿಗಲಿದೆ.

ಚುನಾವಣೆ ಫಲಿತಾಂಶದ ಚಿತ್ರಣ, ರಾಜ್ಯವಾರು ಲೆಕ್ಕಾಚಾರ, ಕ್ಷೇತ್ರವಾರು ವಿವರ, ಸಾಮಾಜಿಕ ಜಾಲತಾಣದ ಟ್ರೆಂಡ್, ಲೈವ್ ವಿಡಿಯೋಗಳು, ಹೆಚ್ಚು ಓದುತ್ತಿರುವ ಲೇಖನ ಸೇರಿದಂತೆ ಹಲವು ಮಾಹಿತಿಗಳನ್ನು ನೀಡಲಿದ್ದೇವೆ. ಸ್ಪಷ್ಟ, ನಿಖರ ಫಲಿತಾಂಶಕ್ಕಾಗಿ ಕಾಯುತ್ತಿರಿ.

English summary
Assembly elections results 2021 for Assam, Kerala, Tamil Nadu, West Bengal and Puducherry will be announced on May 2. Tune into Dailyhunt for comprehensive coverage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X