ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

Elections Exit Poll Results 2022 Live: ಐದು ರಾಜ್ಯಗಳ ಚುನಾವಣೋತ್ತರ ಸಮೀಕ್ಷೆ

|
Google Oneindia Kannada News

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಅಂತಿಮ ಹಂತ ತಲುಪಿದೆ. ಫೆಬ್ರವರಿ 10 ರಂದು ಪ್ರಾರಂಭವಾಗಿ ಮಾರ್ಚ್ 7ರಂದು 7ನೇ ಹಾಗೂ ಕೊನೆ ಹಂತದ ಮತದಾನ ಪ್ರಕ್ರಿಯೆಗೆ ಸಜ್ಜಾಗಿದೆ.

ಬಿಜೆಪಿ, ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಿಎಸ್‌ಪಿಯ ಹಿರಿಯ ನಾಯಕರು ಮತದಾರರನ್ನು ಸೆಳೆಯಲು ಕೊನೆಯ ಹಂತದ ಪ್ರಯತ್ನ ಈಗಾಗಲೇ ಮುಗಿದಿದೆ. ಆಡಳಿತಾರೂಢ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲು ಹವಣಿಸುತ್ತಿದ್ದರೆ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳು ಯೋಗಿ ಆದಿತ್ಯನಾಥ್ ಸರ್ಕಾರವನ್ನು ಉರುಳಿಸಲು ಹವಣಿಸುತ್ತಿವೆ.

ಏಳನೇ ಹಂತದ ಚುನಾವಣೆಯಲ್ಲಿ 54 ಸ್ಥಾನಗಳಿಗಾಗಿ ಯುಪಿಯ 9 ಜಿಲ್ಲೆಗಳಾದ ಅಜಂಗಢ, ಮೌ, ಗಾಜಿಪುರ, ಜಾನ್‌ಪುರ್, ವಾರಣಾಸಿ, ಮಿರ್ಜಾಪುರ, ಗಾಜಿಪುರ, ಚಂದೌಲಿ ಮತ್ತು ಸೋನ್‌ಭದ್ರದಲ್ಲಿ ಮತದಾನ ನಡೆಯುತ್ತಿದೆ. ಏಳನೇ ಹಂತದ ಒಟ್ಟು 607 ಅಭ್ಯರ್ಥಿಗಳ ಪೈಕಿ 170 (ಶೇ28) ಜನರು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ. ಜೊತೆಗೆ 131 (ಶೇ22) ಅಭ್ಯರ್ಥಿಗಳು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ ಎಂದು ವರದಿ ಹೇಳಿದೆ.

Uttar Pradesh Election 2022 Phase 7 Voting Live Updates, News and Highlights

ಕೊರೊನಾ ಮಾರ್ಗಸೂಚಿಗಳೊಂದಿಗೆ ಆರನೇ ಹಂತದ ಚುನಾವಣೆ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಮತಗಳ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ.

Newest FirstOldest First
10:38 PM, 7 Mar
ಪಂಜಾಬ್

ಎಕ್ಸಿಟ್ ಪೋಲ್ ಫಲಿತಾಂಶಗಳು ಪಂಜಾಬ್‌ನ ಜನರು ಬದಲಾವಣೆ ಪರ ಮತ ಹಾಕಿದ್ದಾರೆ ಎಂದು ಹೇಳುತ್ತವೆ. ಜನರು ಸಾಂಪ್ರದಾಯಿಕ ರಾಜಕೀಯ ಪಕ್ಷಗಳನ್ನು ತಿರಸ್ಕರಿಸಿದರು. ಎಎಪಿ ಈಗ ರಾಷ್ಟ್ರೀಯ ಮತ್ತು ವೇಗವಾಗಿ ಬೆಳೆಯುತ್ತಿರುವ ರಾಜಕೀಯ ಪಕ್ಷವಾಗಿದೆ ಎಂದು ಎಎಪಿ ನಾಯಕ ರಾಘವ್ ಚಡ್ಡಾ ಹೇಳಿದ್ದಾರೆ.
10:10 PM, 7 Mar
ಉತ್ತರ ಪ್ರದೇಶ

ಯುಪಿಯಲ್ಲಿ ಎನ್‌ಡಿಎ ಸರ್ಕಾರವು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ನಾವು ಹೇಳಿರುವುದರಿಂದ ನನಗೆ ಆಶ್ಚರ್ಯವಿಲ್ಲ ಮತ್ತು ನಿರ್ಗಮನ ಸಮೀಕ್ಷೆಗಳು ಸಹ ಅದೇ ದಿಕ್ಕಿನಲ್ಲಿವೆ. ನಮ್ಮ ಸಮಾಜ ಕಲ್ಯಾಣ ಯೋಜನೆಗಳಿಂದ ಜನರು ಪ್ರಯೋಜನ ಪಡೆದಿದ್ದಾರೆ ಎಂದು ಕೇಂದ್ರ ಸಚಿವ ಮತ್ತು ಅಪ್ನಾ ದಳ (ಸೋನೆಲಾಲ್) ಮುಖ್ಯಸ್ಥೆ ಅನುಪ್ರಿಯಾ ಪಟೇಲ್ ಹೇಳಿದ್ದಾರೆ.
10:08 PM, 7 Mar
ಗೋವಾ

ಅಭ್ಯರ್ಥಿಗಳು ಬಯಸಿದರೆ ಎಲ್ಲಾ ಅಭ್ಯರ್ಥಿಗಳು ಒಟ್ಟಿಗೆ ಹೋಟೆಲ್‌ನಲ್ಲಿ ಕುಳಿತುಕೊಳ್ಳಬಹುದು. ಗೋವಾದ ಜನರು ಒಗ್ಗಟ್ಟಾಗಿ ಇರಿ, ಬಿಜೆಪಿಗೆ ಏನಾದರೂ ಮಾಡಲು ಅವಕಾಶ ನೀಡಬೇಡಿ ಎಂದು ಹೇಳುತ್ತಿದ್ದಾರೆ. ಜನಾದೇಶವನ್ನು ಬಿಜೆಪಿ ದುರ್ಬಳಕೆ ಮಾಡದಂತೆ ನಾವು ಮುನ್ನೆಚ್ಚರಿಕೆ ವಹಿಸಿದ್ದೇವೆ ಎಂದು ಗೋವಾ ಕಾಂಗ್ರೆಸ್ ಮುಖ್ಯಸ್ಥ ಗಿರೀಶ್ ಚೋಡಂಕರ್ ಹೇಳಿದ್ದಾರೆ.
10:06 PM, 7 Mar
ಉತ್ತರ ಪ್ರದೇಶ

ಎಲ್ಲಾ ಎಕ್ಸಿಟ್ ಪೋಲ್‌ಗಳು ಬಿಜೆಪಿಗೆ ಮುನ್ನಡೆ ತೋರಿಸುತ್ತಿವೆ. ಈ ಚುನಾವಣೆಯು ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಅವರ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳನ್ನು ಆಧರಿಸಿದೆ. ಜನರು ಅದನ್ನು ಅರಿತು ಬಿಜೆಪಿಗೆ ಮತ ಹಾಕಿದ್ದಾರೆ. ಬಹುಮತದೊಂದಿಗೆ ಸರ್ಕಾರ ರಚಿಸಲಿದ್ದೇವೆ ಎಂದು ನಿಶಾದ್ ಪಕ್ಷದ ಸಂಸ್ಥಾಪಕ ಸಂಜಯ್ ನಿಶಾದ್ ಹೇಳಿದ್ದಾರೆ.
9:07 PM, 7 Mar

ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ ಮಾತನಾಡಿ, ಉತ್ತರಪ್ರದೇಶದಲ್ಲಿ ನಾವು ಹಿಂದೆ ಹೆಜ್ಜೆ ಇಡುವುದಿಲ್ಲ. ಈ ಸಂಖ್ಯೆಗಳು ಕಥೆಯನ್ನು ಹೇಳುತ್ತವೆ, ಆದರೆ ಇದು ಸಂಪೂರ್ಣ ಚಿತ್ರವಲ್ಲ. ಇವು ಕೇವಲ ಎಕ್ಸಿಟ್ ಪೋಲ್ ಸಂಖ್ಯೆಗಳು. ಅಂತಿಮ ಚಿತ್ರಣ ಮಾ.10ರಂದು ಹೊರಬೀಳಲಿದೆ ಎಂದು ಹೇಳಿದರು.
9:06 PM, 7 Mar

ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿನ ಭವಿಷ್ಯ ನುಡಿದಿರುವ ಎಕ್ಸಿಟ್ ಪೋಲ್‌ಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಸಂಜು ವರ್ಮಾ, ರಾಜ್ಯದಲ್ಲಿ ಪಕ್ಷವು ತನ್ನ ಗೆಲುವಿನ ವಿಶ್ವಾಸದಲ್ಲಿದೆ. ಬಿಜೆಪಿ ಗಾಳಿಯಲ್ಲಿ ಕೋಟೆ ಕಟ್ಟುವ ಪಕ್ಷವಲ್ಲ, ಅದಕ್ಕಾಗಿ ನಾವು ಶ್ರಮಿಸುತ್ತಿರುವುದರಿಂದ ನಮಗೆ ಗೆಲುವಿನ ವಿಶ್ವಾಸವಿದೆ ಎಂದರು.
9:00 PM, 7 Mar
ಪಂಜಾಬ್

ಮಾರ್ಚ್ 10 ರವರೆಗೆ ನಿರೀಕ್ಷಿಸಿ, ಮುಚ್ಚಿದ ಇವಿಎಂಗಳು ಏನಾಗಲಿದೆ ಎಂಬುದನ್ನು ಹೇಳುತ್ತವೆ: ಪಂಜಾಬ್ ಸಿಎಂ ಚರಂಜಿತ್ ಸಿಂಗ್ ಚನ್ನಿ ಪಂಜಾಬ್‌ನಲ್ಲಿ ಎಎಪಿ ಸರ್ಕಾರ ರಚಿಸುವ ಆರಂಭಿಕ ಎಕ್ಸಿಟ್ ಪೋಲ್‌ಗಳ ಬಗ್ಗೆ ಕೇಳಿದಾಗ ಉತ್ತರಿಸಿದರು.
Advertisement
8:53 PM, 7 Mar
ಉತ್ತರ ಪ್ರದೇಶ

UP ETG Research Exit Poll 2022: ಬಿಜೆಪಿಗೆ ಮತದಾರರ ಮಣೆ

ಉತ್ತರ ಪ್ರದೇಶದಲ್ಲಿ ಕದನ ಕೌತುಕ ಕೆರಳಿಸಿರುವ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಮತದಾರರು ಮಣೆ ಹಾಕಲಿದ್ದಾರೆ ಎಂದು ಇಟಿಜಿ ರಿಸರ್ಚ್ ಮತದಾನೋತ್ತರ ಸಮೀಕ್ಷೆ ಫಲಿತಾಂಶ ತಿಳಿಸಿದೆ.
8:41 PM, 7 Mar
ಪಂಜಾಬ್

Punjab India Today Exit Poll 2022: ಎಎಪಿಗೆ ಭರ್ಜರಿ ಜಯ

ಎಎಪಿ ಪಕ್ಷವು 76-90 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್‌ 19-31 ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ. 7-11 ಸ್ಥಾನಗಳಲ್ಲಿ ಶಿರೋಮಣಿ ಅಕಾಲಿದಳವು ಜಯ ಗಳಿಸಲಿದೆ. ಇನ್ನುಳಿದಂತೆ ಬಿಜೆಪಿಯು 1-4 ರಷ್ಟು ಸ್ಥಾನದಲ್ಲಿ ಮಾತ್ರ ವಿಜಯ ಸಾಧಿಸಲಿದೆ.
8:37 PM, 7 Mar
ಉತ್ತರ ಪ್ರದೇಶ

Uttar Pradesh Times Now-VETO Exit Poll 2022: ಬಿಜೆಪಿ ಮತ್ತೆ ಜಯ

ಉತ್ತರ ಪ್ರದೇಶದಲ್ಲಿ 2022ರ ವಿಧಾನಸಭೆ ಚುನಾವಣೆಯ ಫಲಿತಾಂಶ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಟೈಮ್ಸ್ ನೌ-ವಿಟೋ ವರದಿಯ ಪ್ರಕಾರ ಈ ಬಾರಿ ಎಸ್‌ಪಿ ಬಿಜೆಪಿಯೊಂದಿಗೆ ಅಧಿಕ ಸ್ಥಾನಗಳ ಅಂತರದಲ್ಲಿ ಸೋಲಲಿದೆ.
8:33 PM, 7 Mar
ಉತ್ತರ ಪ್ರದೇಶ

ಇಂಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್‌ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವೆ ಮತ್ತು ಅಪ್ನಾ ದಳ (ಸೋನಿಲಾಲ್) ನಾಯಕಿ ಅನುಪ್ರಿಯಾ ಪಟೇಲ್, ಉತ್ತರಪ್ರದೇಶದಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳಿಗೆ ಮುನ್ನಡೆ ಸಾಧಿಸುವ ಎಕ್ಸಿಟ್ ಪೋಲ್‌ನಿಂದ ಆಶ್ಚರ್ಯವಾಗಿಲ್ಲ ಎಂದು ಹೇಳಿದ್ದಾರೆ. ನಾನು ಗೆಲುವಿನ ವಿಶ್ವಾಸ ಹೊಂದಿದ್ದೇನೆ ಎಂದು ಅವರು ತಿಳಿಸಿದರು.
8:23 PM, 7 Mar
ಉತ್ತರ ಪ್ರದೇಶ

ಇಂಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾ ಉತ್ತರಪ್ರದೇಶದಲ್ಲಿ ಬಿಜೆಪಿಗೆ 288-326 ಸ್ಥಾನಗಳ ಭವಿಷ್ಯ ನುಡಿದಿದೆ. ಸಮಾಜವಾದಿ ಪಕ್ಷಕ್ಕೆ 71-101, ಬಹುಜನ ಸಮಾಜ ಪಕ್ಷಕ್ಕೆ 3-9, ಕಾಂಗ್ರೆಸ್‌ಗೆ 1-3 ಮತ್ತು ಇತರರು 2-3 ಸ್ಥಾನಗಳನ್ನು ನಿರೀಕ್ಷಿಸಲಾಗಿದೆ.
Advertisement
8:18 PM, 7 Mar
ಗೋವಾ

ಗೋವಾ ಸಿಎಂ ಪ್ರಮೋದ್ ಸಾವಂತ್ ಇಂಡಿಯಾ ಟುಡೇಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಗೋವಾದಲ್ಲಿ ಬಿಜೆಪಿ ಸರ್ಕಾರ ರಚಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಇಂಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್‌ಗೆ ಪ್ರತಿಕ್ರಿಯಿಸಿದ ಸಾವಂತ್, ನನ್ನ ಪಕ್ಷವು ನನಗೆ ಮುಖ್ಯಮಂತ್ರಿ ಸ್ಥಾನಕ್ಕೆ ಆದ್ಯತೆ ನೀಡುತ್ತದೆ ಎಂದು ಹೇಳಿದರು.
8:14 PM, 7 Mar
ಮಣಿಪುರ

Manipur Zee News-DesignBoxed Exit Poll 2022: ಬಿಜೆಪಿ ಜಯಭೇರಿ

ಐದು ರಾಜ್ಯಗಳ ಪೈಕಿ ಮಣಿಪುರದ 60 ವಿಧಾನಸಭೆ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆಸಲಾಯಿತು. ಮೊದಲ ಹಂತದಲ್ಲಿ ಶೇ 78.03ರಷ್ಟು ಶೇಕಡಾವಾರು ಮತದಾನ ಹಾಗೂ ಎರಡನೇ ಹಂತದಲ್ಲಿ 78.03ರಷ್ಟು ಶೇಕಡಾವಾರು ಮತದಾನ ದಾಖಲಾಗಿದೆ. ಮಾರ್ಚ್ 7ರಂದು ಸಂಜೆ ವೇಳೆ ಅನೇಕ ಮಾಧ್ಯಮಗಳು ಚುನಾವಣೋತ್ತರ ಸಮೀಕ್ಷೆ ವರದಿ ಪ್ರಕಟಿಸುತ್ತಿವೆ. ಇಲ್ಲಿ ಜೀ ನ್ಯೂಸ್ ಡಿಸೈನ್ ಬಾಕ್ಸ್ಡ್ (DesignBoxed )ಸಂಸ್ಥೆ ನೀಡಿರುವ ವರದಿ ವಿವರವಿದೆ. ಸಮೀಕ್ಷೆ ಫಲಿತಾಂಶದಂತೆ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದ್ದು, ಮತ್ತೆ ಜಯಭೇರಿ ಬಾರಿಸಲಿದೆ.
8:09 PM, 7 Mar
ಗೋವಾ

Goa Times Now Veto Exit Poll 2022: ಯಾರಿಗೂ ಬಹುಮತವಿಲ್ಲ

ಗೋವಾ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರುವುದಿಲ್ಲ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿವೆ. ರಾಜ್ಯದ 40 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 14ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು.
8:07 PM, 7 Mar
ಮಣಿಪುರ

ಆಕ್ಸಿಸ್ ಮೈ ಇಂಡಿಯಾ ಕೂಡ ಮಣಿಪುರದಲ್ಲಿ 35 ಪ್ರತಿಶತ ಮತದಾರರು ಬಿಜೆಪಿಯ ಬಿರೇನ್ ಸಿಂಗ್ ಅವರನ್ನು ತಮ್ಮ ಮುಂದಿನ ಮುಖ್ಯಮಂತ್ರಿಯಾಗಲು ಬಯಸಿದ್ದಾರೆ. ಆದರೆ ಶೇಕಡಾ 21ರಷ್ಟು ಜನರು ಮಾಜಿ ಸಿಎಂ ಒಕ್ರಾಮ್ ಇಬೋಬಿ ಸಿಂಗ್ ಅವರಿಗೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ.
8:05 PM, 7 Mar
ಮಣಿಪುರ

ಇಂಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಮಣಿಪುರದಲ್ಲಿ ಬಿಜೆಪಿಗೆ 33-43, ಕಾಂಗ್ರೆಸ್‌ಗೆ 4-8, ಎನ್‌ಪಿಪಿಗೆ 4-8 ಮತ್ತು ಎನ್‌ಪಿಎಫ್‌ಗೆ 4-8 ಸೀಟುಗಳನ್ನು ಭವಿಷ್ಯ ನುಡಿದಿದೆ. ಅದೇ ರೀತಿ, ಮಣಿಪುರದಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಬಿಜೆಪಿ ಶೇಕಡಾ 41ರಷ್ಟು, ಕಾಂಗ್ರೆಸ್ ಶೇಕಡಾ 18, ಎನ್‌ಪಿಪಿ ಶೇಕಡಾ 16 ಮತ್ತು ಎನ್‌ಪಿಎಫ್ ಶೇಕಡಾ 8 ರಷ್ಟು ಮತಗಳನ್ನು ಗಳಿಸುವ ಸಾಧ್ಯತೆಯಿದೆ.
8:02 PM, 7 Mar
ಉತ್ತರ ಪ್ರದೇಶ

UP Jan Ki Baat-India News Exit Poll 2022: ಬಿಜೆಪಿಗೆ ಬಹುಮತ

ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಸಂಪೂರ್ಣ ಬಹುಮತ ಸಿಗಲಿದೆ ಎಂದು ಜನ್ ಕೀ ಬಾತ್ - ಇಂಡಿಯಾ ನ್ಯೂಸ್ ಮತದಾನೋತ್ತರ ಸಮೀಕ್ಷೆ ಫಲಿತಾಂಶ ತಿಳಿಸಿದೆ.
8:00 PM, 7 Mar
ಗೋವಾ

ಇಂಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಪ್ರಕಾರ, ಗೋವಾದಲ್ಲಿ ಆಡಳಿತಾರೂಢ ಬಿಜೆಪಿಗೆ 14-18 ಸ್ಥಾನಗಳು, ಕಾಂಗ್ರೆಸ್‌ಗೆ 15-20 ಸ್ಥಾನಗಳು, ತೃಣಮೂಲ ಕಾಂಗ್ರೆಸ್‌ಗೆ 2-5 ಸ್ಥಾನಗಳು ಮತ್ತು ಇತರರಿಗೆ 0-4 ಸ್ಥಾನಗಳು ಲಭಿಸಲಿವೆ. ಮ್ಯಾಜಿಕ್ ನಂಬರ್ 21.
7:58 PM, 7 Mar
ಉತ್ತರ ಪ್ರದೇಶ

ಉತ್ತರಪ್ರದೇಶ ಚುನಾವಣೋತ್ತರ ಸಮೀಕ್ಷೆ: ಪಶ್ಚಿಮ ಉತ್ತರಪ್ರದೇಶ ಹಂತ 1ರಲ್ಲಿ ಬಿಜೆಪಿ 31 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಎಸ್‌ಪಿ 23 ಸ್ಥಾನಗಳೆಂದು ಟೈಮ್ಸ್ ನೌ-ವೀಟೊ ಎಕ್ಸಿಟ್ ಪೋಲ್ ಭವಿಷ್ಯ ನುಡಿದಿದೆ.
7:56 PM, 7 Mar
ಪಂಜಾಬ್

ಟೈಮ್ಸ್ ನೌ ಸಮೀಕ್ಷೆ: ಪಂಜಾಬ್‌ನಲ್ಲಿ ಎಎಪಿಗೆ 70, ಕಾಂಗ್ರೆಸ್‌ಗೆ 22, ಅಕಾಲಿದಳಕ್ಕೆ 19 ಮತ್ತು ಬಿಜೆಪಿಗೆ 5 ಸ್ಥಾನಗಳನ್ನು ಟೈಮ್ಸ್ ನೌ ವೀಟೋ ಎಕ್ಸಿಟ್ ಪೋಲ್ ಭವಿಷ್ಯ ನುಡಿದಿದೆ.
7:55 PM, 7 Mar
ಗೋವಾ

ಗೋವಾ ವಿಧಾನಸಭೆ ಚುನಾವಣೆಗೆ ಇಂಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಕಾಂಗ್ರೆಸ್- ಗೋವಾ ಫಾರ್ವರ್ಡ್ ಪಕ್ಷದ ಮೈತ್ರಿಗೆ 15-20 ಸ್ಥಾನಗಳನ್ನು ಭವಿಷ್ಯ ನುಡಿದಿದೆ. ಎಕ್ಸಿಟ್ ಪೋಲ್ ಪ್ರಕಾರ 40 ಸ್ಥಾನಗಳ ವಿಧಾನಸಭೆಯಲ್ಲಿ ಬಿಜೆಪಿ 14-18 ಸ್ಥಾನಗಳನ್ನು ಗೆಲ್ಲಲಿದೆ.
7:51 PM, 7 Mar
ಉತ್ತರಾಖಂಡ

ಉತ್ತರಾಖಂಡದಲ್ಲಿ ಬಿಜೆಪಿಗೆ ಬಹುಮತ ಎಂದು ಇಂಡಿಯಾ ಟುಡೇ ಸಮೀಕ್ಷೆ ಮಾಡಿದೆ. ಬಿಜೆಪಿ 36-46, ಕಾಂಗ್ರೆಸ್ 20-30, ಬಿಎಸ್‌ಪಿ 2- 4, ಇತರೆ 2-5 ಸ್ಥಾನ ಗಳಿಸಲಿದೆ ಎಂದು ಹೇಳಿದೆ. ಮ್ಯಾಜಿಕ್ ನಂಬರ್- 36.
7:48 PM, 7 Mar
ಉತ್ತರ ಪ್ರದೇಶ

ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಜನ್ ಕಿ ಬಾತ್- ಇಂಡಿಯಾ ನ್ಯೂಸ್ ಸಮೀಕ್ಷೆ ಹೇಳಿದೆ. ಬಿಜೆಪಿ 222-260 ಸ್ಥಾನ ಪಡೆಯುವ ನಿರೀಕ್ಷೆ ಇದೆ ಎಂದು ತಿಳಿಸಿದೆ. ಎಸ್‌ಪಿ 165-135, ಬಿಎಸ್‌ಪಿ 09-04, ಕಾಂಗ್ರೆಸ್ 03-01 ಸ್ಥಾನ, ಎಸ್ಎಡಿ 19-12, ಹಾಗೂ ಇತರೆ 04-03 ಸ್ಥಾನ ಪಡೆಯುವ ನಿರೀಕ್ಷೆ ತಿಳಿಸಿದೆ.
7:45 PM, 7 Mar
ಮಣಿಪುರ

ಮಣಿಪುರ ಚುನಾವಣೋತ್ತರ ಸಮೀಕ್ಷೆ: ಬಿಜೆಪಿ ಪಕ್ಷವು 32-38 ಸ್ಥಾನಗಳು, ಕಾಂಗ್ರೆಸ್ 12-17 ಸ್ಥಾನ, ಎನ್‌ಪಿಪಿ 00-00 ಸ್ಥಾನ, ಎನ್‌ಪಿಎಫ್ 03-05, ಇತರೆ 04-05 ಸ್ಥಾನಗಳು ಲಭಿಸಲಿವೆ ಎಂದು ಜೀ ನ್ಯೂಸ್ ಡಿಸೈನ್ ಸಮೀಕ್ಷೆ ತಿಳಿಸಿದೆ.
7:43 PM, 7 Mar
ಗೋವಾ

ಗೋವಾದಲ್ಲಿ ಅತಂತ್ರ ವಿಧಾನಸಭೆಯಾಗಲಿದೆ ಎಂದು ಟೈಮ್ಸ್ ನೌ ವಿಟೋ ಸಮೀಕ್ಷೆ ಮಾಡಿದೆ. ಬಿಜೆಪಿ 14, ಕಾಂಗ್ರೆಸ್ 16, ಆಪ್ 4 ಮತ್ತು ಇತರೆ 6 ಸ್ಥಾನ ಗಳಿಸಲಿದೆ ಎಂದು ಹೇಳಿದೆ. ಮ್ಯಾಜಿಕ್ ನಂಬರ್ 21.
7:40 PM, 7 Mar
ಉತ್ತರಾಖಂಡ

Uttarakhand K News Exit Poll 2022: 'ಕೈ' ಹಿಡಿಯುವ ಮತದಾನ

ಉತ್ತರಾಖಂಡದ 70 ವಿಧಾನಸಭೆ ಚುನಾವಣೆಯಲ್ಲಿ ಪ್ರಜೆಗಳು ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿವೆ. ಯಾರಿಗೆ ಮುಂದಿನ ಅಧಿಕಾರ ಎಂಬುದಕ್ಕೆ ಸಂಬಂಧಿಸಿದಂತೆ ಚುನಾವಣೋತ್ತರ ಸಮೀಕ್ಷೆಗಳು ಉತ್ತರ ನೀಡಿವೆ. ಕಳೆದ ಫೆಬ್ರವರಿ 14ರಂದು ಒಂದೇ ಹಂತದಲ್ಲಿ ನಡೆದ ಮತದಾನದ ಭವಿಷ್ಯ ಮಾರ್ಚ್ 10ರಂದು ಹೊರ ಬೀಳಲಿದೆ.
7:38 PM, 7 Mar
ಪಂಜಾಬ್

Punjab K News India Exit Poll 2022: ಎಎಪಿಗೆ ಗದ್ದು‌ಗೆ

ಪಂಜಾಬ್‌ ವಿಧಾನಸಭೆ ಚುನಾವಣೆಯು ಫೆಬ್ರವರಿ 20ರಂದು ನಡೆದಿದ್ದು, ಚುನಾವಣೆಯ ಫಲಿತಾಂಶವು ಮಾರ್ಚ್ 10ರಂದು ಹೊರಬೀಳಲಿದೆ. ಇದಕ್ಕೂ ಮುನ್ನ ಕೆ ನ್ಯೂಸ್‌ ಇಂಡಿಯಾ ಹಾಗೂ ಪೀಪಲ್‌ ಪಲ್ಸ್‌ನ ಚುನಾವಣೋತ್ತರ ಸಮೀಕ್ಷೆಯು ಹೊರಬಿದ್ದಿದೆ. ಈ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಎಎಪಿ ಪಂಜಾಬ್‌ನಲ್ಲಿ ಗದ್ದುಗೆಯನ್ನು ಪಡೆಯುವ ಸಾಧ್ಯತೆ ಇದೆ.
7:26 PM, 7 Mar
ಪಂಜಾಬ್

ಪಂಜಾಬ್‌ನಲ್ಲಿ ಆಪ್ ಅಧಿಕಾರಕ್ಕೆ ಬರಲಿದೆ ಎಂದು ಆಜ್‌ತಕ್ ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಹೇಳಿದೆ. ಆಪ್ 76-90 ಸ್ಥಾನ ಪಡೆಯುವ ನಿರೀಕ್ಷೆ ಇದೆ ಎಂದು ತಿಳಿಸಿದೆ. ಕಾಂಗ್ರೆಸ್ 19-31 ಸ್ಥಾನ, ಎಸ್ಎಡಿ 7-11, ಬಿಜೆಪಿ 1-4 ಸ್ಥಾನ ಪಡೆಯುವ ನಿರೀಕ್ಷೆ ತಿಳಿಸಿದೆ.
7:24 PM, 7 Mar
ಪಂಜಾಬ್

ಪಂಜಾಬ್‌ನಲ್ಲಿ ಆಪ್ ಅಧಿಕಾರಕ್ಕೆ ಬರಲಿದೆ ಎಂದು ಟುಡೇಸ್ ಚಾಣಕ್ಯ ಸಮೀಕ್ಷೆ ಹೇಳಿದೆ. ಆಪ್ 100 ಸ್ಥಾನ ಪಡೆಯುವ ನಿರೀಕ್ಷೆ ಇದೆ ಎಂದು ತಿಳಿಸಿದೆ. ಕಾಂಗ್ರೆಸ್ 10 ಸ್ಥಾನ, ಎಸ್ಎಡಿ 6, ಬಿಜೆಪಿ 1 ಹಾಗೂ ಇತರೆ 0-1 ಸ್ಥಾನ ಪಡೆಯುವ ನಿರೀಕ್ಷೆ ತಿಳಿಸಿದೆ.
READ MORE

English summary
Assembly Elections Exit Poll Results 2022 Live Updates in Kannada - Check Uttar Pradesh, Goa, Manipur, Uttarakhand and Punjab Assembly Elections 2022 Exit Poll Results Lates, News, Updates and highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X