ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

Assembly Elections Exit Poll Results 2021 Live : ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆಯಲ್ಲಿ ಸೋಲು-ಗೆಲುವಿನ ಲೆಕ್ಕ

|
Google Oneindia Kannada News

ಎರಡನೆಯ ಅಲೆಯ ಕೋವಿಡ್-19 ಸಾಂಕ್ರಾಮಿಕದ ಭೀತಿಯ ನಡುವೆ ದೇಶದಲ್ಲಿ ಮತ್ತೆ ಚುನಾವಣೆಯ ಕಾವು ಆರಂಭವಾಗಿದೆ. ಮಾರ್ಚ್ 27ರಿಂದ ಮೇ 2ರವರೆಗೆ ಐದು ವಿಧಾನಸಭೆಗಳ ಚುನಾವಣೆ ಪ್ರಕ್ರಿಯೆ ನಡೆಯುತ್ತಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ರಾಜ್ಯಗಳು ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ.

ಪಶ್ಚಿಮ ಬಂಗಾಳದ 294, ತಮಿಳುನಾಡಿನ 234, ಕೇರಳದ 140, ಅಸ್ಸಾಂನ 126 ಮತ್ತು ಪುದುಚೇರಿಯ 30 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಒಟ್ಟು ಎಂಟು ಹಂತಗಳಲ್ಲಿ ಮತ್ತು ಅಸ್ಸಾಂನಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಉಳಿದ ಮೂರು ಕಡೆ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿದೆ.

ಇದಲ್ಲದೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭೆ ಕ್ಷೇತ್ರಗಳು ಮತ್ತು ಲೋಕಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಈ ಎಲ್ಲ ಚುನಾವಣೆಗಳ ಫಲಿತಾಂಶ ಮೇ 2ರಂದು ಪ್ರಕಟವಾಗಲಿದೆ.

Assembly Elections 2021 News Live Updates: West Bengal, Tamil Nadu, Kerala, Assam, Kerala, Puducherry Election Latest News and Highlights in Kannada

ಪಶ್ಚಿಮ ಬಂಗಾಳದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಆತಂಕದ ನಡುವೆ ಸೋಮವಾರ 7ನೇ ಹಂತದ ವಿಧಾನಸಭಾ ಚುನಾವಣಾ ಮತದಾನ ಪ್ರಕ್ರಿಯೆ ನಡೆಯಲಿದೆ. ಮುರ್ಷಿದಾಬಾದ್ ಮತ್ತು ಪಶ್ಚಿಮ ಬರ್ಧಮಾನ್ ಜಿಲ್ಲೆಗಳಲ 9 ವಿಧಾನಸಭಾ ಕ್ಷೇತ್ರಗಳಲ್ಲಿ 12,068 ಮತಗಟ್ಟೆಗಳನ್ನು ತೆರೆಯಲಾಗಿದೆ. ದಕ್ಷಿಣ ದಿನಾಜ್ ಪುರ್ ಮತ್ತು ಮಾಲ್ದಾದಲ್ಲಿ 6 ಮತ್ತು ಕೋಲ್ಕತ್ತಾದಲ್ಲಿ ನಾಲ್ಕು ಮತಗಟ್ಟೆಗಳನ್ನು ತೆರೆಯಲಾಗಿದೆ.

ಏಪ್ರಿಲ್ 26ರಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತವರು ಕ್ಷೇತ್ರ ಬಾಬನಿಪುರ್ ಸೇರಿದಂತೆ 34 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. 284 ಅಭ್ಯರ್ಥಿಗಳ ಭವಿಷ್ಯವನ್ನು ರಾಜ್ಯದ 86 ಲಕ್ಷ ಜನ ಮತದಾರರು ನಿರ್ಧರಿಸಲಿದ್ದಾರೆ. ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ಸಿನ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ತವರು ಕ್ಷೇತ್ರ ಬಾಬನಿಪುರ್ ಮೇಲೆ ಎಲ್ಲರ ಲಕ್ಷ್ಯ ನೆಟ್ಟಿದೆ.

Newest FirstOldest First
12:06 AM, 30 Apr
ತಮಿಳುನಾಡು

Times Now-C-Voter exit polls: 10 ವರ್ಷ ಬಳಿಕ ಡಿಎಂಕೆ ಅಧಿಕಾರಕ್ಕೆ

ಐದು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆ ಮುಕ್ತಾಯವಾಗಿದೆ. ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೆರಿ ವಿಧಾನಸಭೆ ಚುನಾವಣೆಗಳು ಏಪ್ರಿಲ್ 6ರಂದು ಮುಕ್ತಾಯಗೊಂಡರೆ, ಪಶ್ಚಿಮ ಬಂಗಾಳದಲ್ಲಿ 8ನೇ ಹಾಗೂ ಕೊನೆ ಹಂತದ ಮತದಾನ ಇಂದು(ಏಪ್ರಿಲ್ 29) ಸಂಪನ್ನವಾಗಿದೆ. ಪ್ರಮುಖ ಮಾಧ್ಯಮಗಳು ಸೇರಿದಂತೆ ಸ್ಥಳೀಯ ಖಾಸಗಿ ಸುದ್ದಿ ವಾಹಿನಿಗಳು ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಕಟಿಸುತ್ತಿವೆ. ಮೇ 2 ರಂದು ಅಂತಿಮ ಫಲಿತಾಂಶ ಪ್ರಕಟವಾಗಲಿದೆ.
12:06 AM, 30 Apr

ಟೈಮ್ಸ್ ನೌ ಸಮೀಕ್ಷೆ: ಕೇರಳ, ತಮಿಳುನಾಡು, ಅಸ್ಸಾಂ ಯಾರ ಪಾಲು?

ಪಂಚ ರಾಜ್ಯಗಳ ಚುನಾವಣೆ ಇಂದಷ್ಟೆ ಮುಗಿದಿದ್ದು ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಹಲವಾರು ಸಂಸ್ಥೆಗಳು, ಮಾಧ್ಯಮಗಳು ಪಂಚರಾಜ್ಯಗಳ ಚುನಾವಣಾ ಸಮೀಕ್ಷೆ ನೀಡಿವೆ.
12:05 AM, 30 Apr

ಟೈಮ್ಸ್ ನೌ ಸಮೀಕ್ಷೆ: ಕೇರಳ, ತಮಿಳುನಾಡು, ಅಸ್ಸಾಂ ಯಾರ ಪಾಲು?

ಪಂಚ ರಾಜ್ಯಗಳ ಚುನಾವಣೆ ಇಂದಷ್ಟೆ ಮುಗಿದಿದ್ದು ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಹಲವಾರು ಸಂಸ್ಥೆಗಳು, ಮಾಧ್ಯಮಗಳು ಪಂಚರಾಜ್ಯಗಳ ಚುನಾವಣಾ ಸಮೀಕ್ಷೆ ನೀಡಿವೆ.
11:22 PM, 29 Apr
ಕೇರಳ

Times Now-C-Voter Exit Polls: ಪಿಣರಾಯಿಗೆ ಮತ್ತೆ ಅಧಿಕಾರ

ಐದು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆ ಮುಕ್ತಾಯವಾಗಿದೆ. ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೆರಿ ವಿಧಾನಸಭೆ ಚುನಾವಣೆಗಳು ಏಪ್ರಿಲ್ 6ರಂದು ಮುಕ್ತಾಯಗೊಂಡರೆ, ಪಶ್ಚಿಮ ಬಂಗಾಳದಲ್ಲಿ 8ನೇ ಹಾಗೂ ಕೊನೆ ಹಂತದ ಮತದಾನ ಇಂದು(ಏಪ್ರಿಲ್ 29) ಸಂಪನ್ನವಾಗಿದೆ. ಪ್ರಮುಖ ಮಾಧ್ಯಮಗಳು ಸೇರಿದಂತೆ ಸ್ಥಳೀಯ ಖಾಸಗಿ ಸುದ್ದಿ ವಾಹಿನಿಗಳು ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಕಟಿಸುತ್ತಿವೆ. ಮೇ 2 ರಂದು ಅಂತಿಮ ಫಲಿತಾಂಶ ಪ್ರಕಟವಾಗಲಿದೆ.
11:08 PM, 29 Apr
ಪಶ್ಚಿಮ ಬಂಗಾಳ

ಟೈಮ್ಸ್ ನೌ ಸಮೀಕ್ಷೆ: ಪಶ್ಚಿಮ ಬಂಗಾಳದಲ್ಲಿ ಮತ್ತೆ ದೀದಿ

ಟೈಮ್ಸ್ ನೌ-ಸಿ ವೋಟರ್ ಸಮೀಕ್ಷೆಯಂತೆ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ 2021 ರಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯು ಮತ್ತೆ ಅಧಿಕಾರ ಹಿಡಿಯಲಿದೆ.
11:07 PM, 29 Apr
ಪುದುಚೇರಿ

ಪುದುಚೇರಿ ಚುನಾವಣೆ 2021; ಸಮೀಕ್ಷೆಗಳ ಸಮೀಕ್ಷೆ ಅಂಕಿ-ಸಂಖ್ಯೆಗಳು

ಪುದುಚೇರಿ ವಿಧಾನಸಭೆ ಚುನಾವಣೆ 2021ರ ಚುನಾವಣೋತ್ತರ ಫಲಿತಾಂಶ ಪ್ರಕಟವಾಗಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ 30 ವಿಧಾನಸಭಾ ಕ್ಷೇತ್ರಗಳಿದ್ದು, ಯಾವುದೇ ಪಕ್ಷ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 16. ಚುನಾವಣಾ ಫಲಿತಾಂಶ ಮೇ 2ರ ಭಾನುವಾರ ಪ್ರಕಟವಾಗಲಿದೆ.
10:52 PM, 29 Apr
ಕರ್ನಾಟಕ

ಚುನಾವಣೋತ್ತರ ಸಮೀಕ್ಷೆ; ಮಸ್ಕಿಯಲ್ಲಿ ಪ್ರಬಲ ಪೈಪೋಟಿ!

ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಕುತೂಹಲವನ್ನು ಹುಟ್ಟುಹಾಕಿದೆ. ಕಾಂಗ್ರೆಸ್ ಶಾಸಕರಾಗಿದ್ದ ಪ್ರತಾಪ್ ಗೌಡ ಪಾಟೀಲ್ ರಾಜೀನಾಮೆಯಿಂದ ಉಪ ಚುನಾವಣೆ ಎದುರಾಗಿತ್ತು. ಏಪ್ರಿಲ್ 17ರಂದು ಚುನಾವಣೆ ನಡೆದಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.
Advertisement
10:50 PM, 29 Apr
ಕರ್ನಾಟಕ

ಚುನಾವಣೋತ್ತರ ಸಮೀಕ್ಷೆ; ಬೆಳಗಾವಿಯಲ್ಲಿ ಯಾರಿಗೆ ಗೆಲುವು?

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಚುನಾವಣೋತ್ತರ ಫಲಿತಾಂಶ ಪ್ರಕಟವಾಗಿದೆ. ಏಪ್ರಿಲ್ 17ರಂದು ಮತದಾನ ನಡೆದಿದ್ದು, ಮೇ 2ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಗುರುವಾರ ಟಿವಿ 9 ವಾಹಿನಿ ನಡೆಸಿದ ಚುನಾವಣೋತ್ತರ ಸಮೀಕ್ಷೆಗಳ ವರದಿ ಪ್ರಕಟವಾಗಿದೆ. ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ಅವರು ಕೋವಿಡ್‌ಗೆ ಬಲಿಯಾದ ಕಾರಣ ಉಪ ಚುನಾವಣೆ ಎದುರಾಗಿದೆ.
10:35 PM, 29 Apr

ತಮಿಳುನಾಡು: 2016ರಲ್ಲಿ ಎಕ್ಸಿಟ್ ಪೋಲ್‌ಗೆ ಮಣ್ಣು ಮುಕ್ಕಿಸಿದ್ದ ಫಲಿತಾಂಶ

ಪಶ್ಚಿಮ ಬಂಗಾಳದ ಎಂಟನೇ ಹಂತದ ಚುನಾವಣೆ ಮುಗಿಯುವ ಮೂಲಕ, ಪಂಚ ರಾಜ್ಯಗಳ ಅಸೆಂಬ್ಲಿ ಚುನಾವಣೆಯ ಮತದಾನದ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಇದರ ಬೆನ್ನಲ್ಲೇ, ವಿವಿಧ ವಾಹಿನಿಗಳು ಮತಗಟ್ಟೆ ಸಮೀಕ್ಷೆಯ ಫಲಿತಾಂಶವನ್ನು ಬಿತ್ತರಿಸುತ್ತಿದೆ. ತಮಿಳುನಾಡಿನ ಫಲಿತಾಂಶ ಏನಾಗಬಹುದು ಎನ್ನುವುದು ಅತ್ಯಂತ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಯಾಕೆಂದರೆ, ಕರುಣಾನಿಧಿ ಮತ್ತು ಜಯಲಲಿತಾ ಇಲ್ಲದೇ ನಡೆದಿದ್ದ ಚುನಾವಣೆ ಇದಾಗಿದೆ.
10:32 PM, 29 Apr
ತಮಿಳುನಾಡು

ಇಂಡಿಯಾ ಟುಡೇ ಸಮೀಕ್ಷೆ:

ಡಿಎಂಕೆ - 175 ರಿಂದ 195 ಸ್ಥಾನ, ಎಐಡಿಎಂಕೆ - 38 ರಿಂದ 54 ಸ್ಥಾನ, ಇತರೆ - 0 ರಿಂದ 1 ಸ್ಥಾನ
10:31 PM, 29 Apr
ತಮಿಳುನಾಡು

ತಂತಿ ಟಿವಿ ಸಮೀಕ್ಷೆ:

ಡಿಎಂಕೆ - 133 ಸ್ಥಾನ, ಎಐಡಿಎಂಕೆ - 68 ಸ್ಥಾನ,
10:17 PM, 29 Apr
ಕೇರಳ

Today's Chanakya: ಪಿಣರಾಯಿ ವಿಜಯನ್ ಸೀಟು ಭದ್ರ

ಕೇರಳದಲ್ಲಿ ಆಡಳಿತಾರೂಢ ಪಿಣರಾಯಿ ವಿಜಯನ್ ಸರ್ಕಾರ ಮುಂದುವರೆಯಲಿದೆ ಎನ್ನುತ್ತಿದೆ ಟುಡೇಸ್ ಚಾಣಕ್ಯ ಮತದಾನೋತ್ತರ ಸಮೀಕ್ಷೆ. ನಿಫಾ, ಭೀಕರ ಪ್ರವಾಹ, ಕೊರೊನಾ ಪರಿಸ್ಥಿತಿಯನ್ನು ಯಶಸ್ವಿಯಾಗಿಯೇ ನಿರ್ವಹಿಸಿದರು ಎಂಬ ಜನಾಭಿಪ್ರಾಯವುಳ್ಳ ಪಿಣರಾಯಿ ವಿಜಯನ್ ಸರ್ಕಾರ ಈ ವಿಧಾನಸಭೆಯಲ್ಲಿ ಉತ್ತಮ ಬಹುಮತದಿಂದಲೇ ಮರಳಿ ಆಯ್ಕೆ ಆಗಲಿದ್ದಾರೆ ಎಂದಿದೆ ಟುಡೇಸ್ ಚಾಣಕ್ಯ ಸಮೀಕ್ಷೆ.
Advertisement
10:13 PM, 29 Apr
ಕೇರಳ

ಕೈರಾಲಿ ನ್ಯೂಸ್ - ಸಿಇಎಸ್ ಸಮೀಕ್ಷೆ:

ಎಲ್ ಡಿಎಫ್ - 84 ರಿಂದ 96 ಸ್ಥಾನ, ಯುಡಿಎಫ್ - 44 ರಿಂದ 56 ಸ್ಥಾನ, ಎನ್ ಡಿಎ - 0 ದಿಂದ 2 ಸ್ಥಾನ
10:08 PM, 29 Apr
ಕೇರಳ

ಜನ್ ಕೀ ಬಾತ್ ಸಮೀಕ್ಷೆ:

ಎಲ್ ಡಿಎಫ್ - 64 ರಿಂದ 76 ಸ್ಥಾನ, ಯುಡಿಎಫ್ - 61 ರಿಂದ 71 ಸ್ಥಾನ, ಎನ್ ಡಿಎ - 2 ದಿಂದ 4 ಸ್ಥಾನ
10:02 PM, 29 Apr
ತಮಿಳುನಾಡು

ಜನ್ ಕೀ ಬಾತ್ ಸಮೀಕ್ಷೆ:

ಡಿಎಂಕೆ - 130 ರಿಂದ 110 ಸ್ಥಾನ, ಎಐಡಿಎಂಕೆ - 102 ರಿಂದ 123 ಸ್ಥಾನ, ಇತರೆ - 1 ರಿಂದ 2 ಸ್ಥಾನ
9:39 PM, 29 Apr
ಪುದುಚೇರಿ

ಟೈಮ್ಸ್ ನೌ ಸಿ-ವೋಟರ್ ಸಮೀಕ್ಷೆ:

ಎನ್ ಡಿಎ - 19 ರಿಂದ 23 ಸ್ಥಾನ, ಯುಪಿಎ - 6 ರಿಂದ 10 ಸ್ಥಾನ, ಇತರೆ - 1 ರಿಂದ 2 ಸ್ಥಾನ
9:28 PM, 29 Apr
ಪಶ್ಚಿಮ ಬಂಗಾಳ

ಇಂಡಿಯಾ ಟುಡೇ ಸಮೀಕ್ಷೆ:

ಟಿಎಂಸಿ - 130 ರಿಂದ 156 ಸ್ಥಾನ, ಬಿಜೆಪಿ - 134 ರಿಂದ 160 ಸ್ಥಾನ, ಎಡಪಕ್ಷ ಮತ್ತು ಕಾಂಗ್ರೆಸ್ - 00 ದಿಂದ 2 ಸ್ಥಾನ ಇತರೆ - 00 ದಿಂದ 1 ಸ್ಥಾನ
9:07 PM, 29 Apr

Exit polls ಸಮಗ್ರ ಪುಟ: ಐದು ರಾಜ್ಯಗಳ ಭವಿಷ್ಯ ತಿಳಿಯಲು ಕ್ಲಿಕ್ ಮಾಡಿ

ಐದು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆ ಮುಕ್ತಾಯವಾಗಿದೆ. ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೆರಿ ವಿಧಾನಸಭೆ ಚುನಾವಣೆಗಳು ಏಪ್ರಿಲ್ 6ರಂದು ಮುಕ್ತಾಯಗೊಂಡರೆ, ಪಶ್ಚಿಮ ಬಂಗಾಳದಲ್ಲಿ 8ನೇ ಹಾಗೂ ಕೊನೆ ಹಂತದ ಮತದಾನ ಇಂದು(ಏಪ್ರಿಲ್ 29) ಸಂಪನ್ನವಾಗಿದೆ. ಪ್ರಮುಖ ಮಾಧ್ಯಮಗಳು ಸೇರಿದಂತೆ ಸ್ಥಳೀಯ ಖಾಸಗಿ ಸುದ್ದಿ ವಾಹಿನಿಗಳು ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಕಟಿಸುತ್ತಿವೆ. ಮೇ 2 ರಂದು ಅಂತಿಮ ಫಲಿತಾಂಶ ಪ್ರಕಟವಾಗಲಿದೆ.
8:52 PM, 29 Apr
ಪುದುಚೇರಿ

ಚುನಾವಣೋತ್ತರ ಸಮೀಕ್ಷೆ; ಪುದುಚೇರಿಯಲ್ಲಿ ಎನ್‌ಡಿಎಗೆ ಅಧಿಕಾರ

ಪುದುಚೇರಿ ವಿಧಾನಸಭೆ ಚುನಾವಣೆ 2021ರ ಚುನಾವಣೋತ್ತರ ಫಲಿತಾಂಶ ಪ್ರಕಟವಾಗಿದೆ. 30 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶದಲ್ಲಿ ಬಹುಮತಕ್ಕೆ 16 ಸ್ಥಾನಗಳು ಅಗತ್ಯವಿದೆ. ಗುರುವಾರ Republic-CNX ನಡೆಸಿರುವ ಚುನಾವಣೋತ್ತರ ಸಮೀಕ್ಷೆಯ ವರದಿ ಬಿಡುಗಡೆಯಾಗಿದೆ. ಪುದುಚೇರಿಯಲ್ಲಿ ಎನ್‌ಡಿಯ ಮೈತ್ರಿಕೂಟ ಅಧಿಕಾರ ಹಿಡಿಯಲಿದೆ ಎಂದು ಸಮೀಕ್ಷೆ ಹೇಳಿದೆ.
8:49 PM, 29 Apr
ಪುದುಚೇರಿ

ಇಂಡಿಯಾ ಟುಡೇ ಸಮೀಕ್ಷೆ:

ಎನ್ ಡಿಎ - 20 ರಿಂದ 24 ಸ್ಥಾನ, ಯುಪಿಎ - 6 ರಿಂದ 10 ಸ್ಥಾನ, ಇತರೆ - 00 - 1
8:43 PM, 29 Apr
ಅಸ್ಸಾಂ

ಟುಡೇಸ್ ಚಾಣಾಕ್ಯ ಸಮೀಕ್ಷೆ; ಅಸ್ಸಾಂನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ

ಗುರುವಾರ ಅಸ್ಸಾಂ ರಾಜ್ಯದ ವಿಧಾನಸಭೆ ಚುನಾವಣೆಯ ಚುನಾವಣೋತ್ತರ ಫಲಿತಾಂಶ ಪ್ರಕಟವಾಗಿದೆ. ಒಟ್ಟು 126 ವಿಧಾನಸಭಾ ಕ್ಷೇತ್ರಗಳಿಗೆ ಮಾರ್ಚ್ 27, ಏಪ್ರಿಲ್ 1 ಮತ್ತು ಏಪ್ರಿಲ್ 6 ರಂದು ಮೂರು ಹಂತದಲ್ಲಿ ಮತದಾನ ನಡೆದಿತ್ತು.
8:37 PM, 29 Apr
ಅಸ್ಸಾಂ

Today's Chanakya Exit Poll: ಅಸ್ಸಾಂನಲ್ಲಿ ಮತ್ತೆ ಬಿಜೆಪಿ

ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಪೂರ್ಣ ಬಹುಮತ ಪಡೆಯಲಿದೆ ಎನ್ನುತ್ತಿದೆ ಟುಡೇಸ್ ಚಾಣಕ್ಯ ಮಾಡಿರುವ ಮತದಾನೋತ್ತರ ಸಮೀಕ್ಷೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ 60 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಈ ಚುನಾವಣೆಯಲ್ಲಿ ಇನ್ನೂ ಹೆಚ್ಚಿನ ಸ್ಥಾನ ಗಳಿಸಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎನ್ನುತ್ತಿದೆ ಸಮೀಕ್ಷೆ.
8:34 PM, 29 Apr
ಅಸ್ಸಾಂ

ನ್ಯೂಸ್ 24 ಟುಡೇಸ್ ಚಾಣಕ್ಯ ಸಮೀಕ್ಷೆ:

ಬಿಜೆಪಿ - 65 ರಿಂದ 78 ಸ್ಥಾನ, ಕಾಂಗ್ರೆಸ್ - 47 ರಿಂದ 65 ಸ್ಥಾನ, ಇತರೆ - 00 ಸ್ಥಾನ
8:32 PM, 29 Apr
ಅಸ್ಸಾಂ

ಟಿವಿ 9 ಭರತವರ್ಷ ಸಮೀಕ್ಷೆ:

ಬಿಜೆಪಿ - 59 ರಿಂದ 69 ಸ್ಥಾನ, ಕಾಂಗ್ರೆಸ್ - 55 ರಿಂದ 65 ಸ್ಥಾನ, ಇತರೆ - 00 ಸ್ಥಾನ
8:28 PM, 29 Apr
ಕೇರಳ

ರಿಪಬ್ಲಿಕ್ ಸಿಎನ್ಎಕ್ಸ್ ಸಮೀಕ್ಷೆ:

ಎಲ್ ಡಿಎಫ್ - 72 ರಿಂದ 80 ಸ್ಥಾನ, ಯುಡಿಎಫ್ - 58 ರಿಂದ 62 ಸ್ಥಾನ, ಎನ್ ಡಿಎ - 1 ದಿಂದ 5 ಸ್ಥಾನ
8:22 PM, 29 Apr

ABP C-Voter Exit Poll: ತಮಿಳುನಾಡಿನಲ್ಲಿ ಡಿಎಂಕೆಗೆ ಜಯ

ತಮಿಳುನಾಡು ವಿಧಾನಸಭೆ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಹೊರಬಿದ್ದಿದೆ. ಎಬಿಪಿ ಸಿ-ವೋಟರ್ ಸಮೀಕ್ಷೆ ಫಲಿತಾಂಶ ಹೀಗಿದೆ. ಈ ಬಾರಿ ತಮಿಳುನಾಡಿನಲ್ಲಿ ಡಿಎಂಕೆ ಜಯಭೇರಿ ಭಾರಿಸಲಿದೆ ಎಂದು ಹೇಳಲಾಗಿದೆ.
8:19 PM, 29 Apr
ತಮಿಳುನಾಡು

ಟುಡೇ ಚಾಣಕ್ಯ ಸಮೀಕ್ಷೆ:

ಡಿಎಂಕೆ - 164 ರಿಂದ 186 ಸ್ಥಾನ, ಎಐಡಿಎಂಕೆ - 46 ರಿಂದ 68 ಸ್ಥಾನ, ಎಎಂಎಂಕೆ - 00 ಸ್ಥಾನ, ಎಎಂಎಂಕೆ - 00 ಸ್ಥಾನ, ಇತರೆ - 00 ಸ್ಥಾನ,
8:15 PM, 29 Apr
ತಮಿಳುನಾಡು

ರಿಪಬ್ಲಿಕ್ ಸಿಎನ್ಎಕ್ಸ್ ಸಮೀಕ್ಷೆ:

ಡಿಎಂಕೆ - 160 ರಿಂದ 170 ಸ್ಥಾನ, ಎಐಡಿಎಂಕೆ - 56 ರಿಂದ 68 ಸ್ಥಾನ, ಎಂಎನ್ಎಂ - 2 ಸ್ಥಾನ ಇತರೆ - 00 ಯಿಂದ 2 ಸ್ಥಾನ
8:00 PM, 29 Apr
ಪಶ್ಚಿಮ ಬಂಗಾಳ

ಸಮೀಕ್ಷೆ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ದೊಡ್ಡ ಪಕ್ಷ, ಆದರೆ ಅಧಿಕಾರವಿಲ್ಲ!

ರಿಪಲ್ಲಿಕ್-ಸಿಎನ್‌ಎಕ್ಸ್‌ ನಡೆಸಿರುವ ಪಶ್ಚಿಮ ಬಂಗಾಳ ಚುನಾವಣೆ ಸಮೀಕ್ಷೆ ಪ್ರಕಾರ ಟಿಎಂಸಿಯ ಭದ್ರ ಕೋಟೆಯನ್ನು ಬಿಜೆಪಿ ಈ ಬಾರಿ ಸಡಿಲ ಮಾಡುತ್ತಿದೆ. ಹಾಗೆಂದು ಬಿಜೆಪಿ ಅಧಿಕಾರಕ್ಕೇರುವುದು ಅನುಮಾನವೇ ಎನ್ನುತ್ತಿದೆ ಸಮೀಕ್ಷೆ.
7:57 PM, 29 Apr
ಪಶ್ಚಿಮ ಬಂಗಾಳ

ನ್ಯೂಸ್ ಎಕ್ಸ್ ಸಮೀಕ್ಷೆ:

ಟಿಎಂಸಿ - 152 ರಿಂದ 162 ಸ್ಥಾನ, ಬಿಜೆಪಿ - 115 ರಿಂದ 125 ಸ್ಥಾನ, ಎಡಪಕ್ಷ ಮತ್ತು ಕಾಂಗ್ರೆಸ್ - 16 ರಿಂದ 26 ಸ್ಥಾನ
READ MORE

English summary
West Bengal Elections 2021 Phase 8 Voting Live Updates in Kannada: All you need to know about the West Bengal Assembly Elections 2021 polling schedule, voting date and time, assembly constituencies, key candidates and all latest news highlights in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X