ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19 ಸೋಂಕಿತರು ಮತದಾನ ಮಾಡಬಹುದು ಹೇಗೆ ?

|
Google Oneindia Kannada News

ಚೆನ್ನೈ, ಏಪ್ರಿಲ್ 6: ಕೋವಿಡ್-19 ಸಾಂಕ್ರಾಮಿಕದ ಭೀತಿಯ ನಡುವೆ ದೇಶದಲ್ಲಿ ಐದು ರಾಜ್ಯಗಳ ಚುನಾವಣೆ ಪ್ರಕ್ರಿಯೆ ಸಾಂಗವಾಗಿ ನಡೆದಿದೆ. ಪಶ್ಚಿಮ ಬಂಗಾಳ ಹಾಗೂ ಉಪ ಚುನಾವಣೆಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲ ರಾಜ್ಯಗಳ ಮತದಾನ ಪ್ರಕ್ರಿಯೆ ಇಂದೇ ಮುಕ್ತಾಯವಾಗಲಿದೆ. ಈ ನಡುವೆ ಕೊವಿಡ್ 19 ಸೋಂಕಿತರು ಮತದಾನ ಹೇಗೆ ಮಾಡಬಹುದು? ಎಂಬ ಪ್ರಶ್ನೆ ಎದ್ದಿದೆ.

ಮತದಾನದ ಕೊನೆಯ ಒಂದು ಗಂಟೆಯಲ್ಲಿ ಕೋವಿಡ್ ಸೋಂಕಿತರು ಮತ ಹಾಕಲು ಅವಕಾಶವನ್ನು ಮಾಡಿಕೊಡಲಾಗುತ್ತದೆ, ಇದು ಐದು ರಾಜ್ಯಗಳಿಗೂ ಅನ್ವಯವಾಗಲಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

Assembly Elections 2021 Live: ಮತ ಚಲಾಯಿಸಲು ಸೈಕಲ್‌ನಲ್ಲಿ ಬಂದ ನಟ ವಿಜಯ್Assembly Elections 2021 Live: ಮತ ಚಲಾಯಿಸಲು ಸೈಕಲ್‌ನಲ್ಲಿ ಬಂದ ನಟ ವಿಜಯ್

1961ರ ಚುನಾವಣಾ ನಿಯಮಗಳನ್ನು ತಿದ್ದುಪಡಿ ಮಾರುವ ಸರ್ಕಾರ ಮತದಾನ ವ್ಯಾಪ್ತಿಯನ್ನು ವಿಸ್ತರಣೆ ಮಾಡಿದೆ. ಕೊರೊನಾ ವೈರಸ್ ಭೀತಿ ಹಿನ್ನೆಲೆ 65 ವರ್ಷದ ಮೇಲ್ಪಟ್ಟವರು ಅಂಚೆ ಮತಪತ್ರವನ್ನು ಬಳಸಿ ತಮ್ಮ ಮತ ಚಲಾಯಿಸಬಹುದು ಎಂದು ಸರ್ಕಾರ ಆದೇಶಿಸಿದೆ.

Assembly Elections 2021: How COVID-19 patients can vote

ಕೊರೊನಾ ಬಿಕ್ಕಟ್ಟಿನ ನಡುವೆ ರಾಜ್ಯಸಭೆ ಚುನಾವಣೆ ನಡೆದಾಗ ಸೋಂಕಿತ ಶಾಸಕರು ಪಿಪಿಇ ಕಿಟ್ ಧರಿಸಿ ಸದನಕ್ಕೆ ಬಂದ ಮತದಾನ ಮಾಡಿದ್ದನ್ನು ಸ್ಮರಿಸಬಹುದು.

ಪಶ್ಚಿಮ ಬಂಗಾಳದ 294, ತಮಿಳುನಾಡಿನ 234, ಕೇರಳದ 140, ಅಸ್ಸಾಂನ 126 ಮತ್ತು ಪುದುಚೇರಿಯ 30 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಒಟ್ಟು ಎಂಟು ಹಂತಗಳಲ್ಲಿ ಮತ್ತು ಅಸ್ಸಾಂನಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಉಳಿದ ಮೂರು ಕಡೆ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ.

ಇದಲ್ಲದೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭೆ ಕ್ಷೇತ್ರಗಳು ಮತ್ತು ಲೋಕಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಈ ಎಲ್ಲ ಚುನಾವಣೆಗಳ ಫಲಿತಾಂಶ ಮೇ 2ರಂದು ಪ್ರಕಟವಾಗಲಿದೆ.

ಮತದಾನ ಪ್ರಕ್ರಿಯೆ ಹೇಗೆ?:
ಮತದಾನದ ದಿನ ಸಂಜೆ 6 ಗಂಟೆಯಿಂದ 7 ಗಂಟೆ ಅವಧಿಯಲ್ಲಿ ಐಸೊಲೇಷನ್‌ನಲ್ಲಿರುವವ ಸೋಂಕಿತರು ಮತದಾನ ಮಾಡಬಹುದು. ಮತಗಟ್ಟೆಗಳಲ್ಲಿ ಪಿಪಿಇ ಕಿಟ್, ಸ್ಯಾನಿಟೈಸರ್, ರೋಗ ನಿರೋಧಕ ಸಿಂಪಡಣೆ ವ್ಯವಸ್ಥೆ ಮಾಡಲಾಗಿದೆ. ಸೋಂಕಿತ ಮತದಾರ ಹಾಗೂ ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಪಿಪಿಇ ಕಿಟ್ ಧರಿಸಿರಬೇಕು.

ಬಳಸಲಾದ ಮಾಸ್ಕ್, ಕಿಟ್, ಫೇಸ್ ಶೀಲ್ಡ್ ಇತ್ಯಾದಿ ಬಯೋ ತ್ಯಾಜ್ಯಗಳ ನಿರ್ವಹಣೆ ಬಗ್ಗೆ ಕೂಡಾ ಜಿಲ್ಲಾ ಚುನಾವಣಾಧಿಕಾರಿಗಳು ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ತರಬೇತಿ ನೀಡಿದ್ದಾರೆ.

ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ದೇಹದ ಉಷ್ಣಾಂಶ ಪರೀಕ್ಷೆ ಕಡ್ಡಾಯವಾಗಿದ್ದು, ಮತದಾರರಿಗೆ ಜ್ವರ ಇದ್ದರೂ ಸಂಜೆ ಕೊವಿಡ್ 19 ಸೋಂಕಿತರು ಮತ ಹಾಕುವ ಸಂದರ್ಭದಲ್ಲೇ ಮತದಾನ ಮಾಡಬೇಕು ಎಂದು ನಿಯಮ ರೂಪಿಸಲಾಗಿದೆ.

Recommended Video

#Covid19Update: 24 ಗಂಟೆಗಳಲ್ಲಿ ದೇಶದಲ್ಲಿ 96,982 ಜನರಿಗೆ ಕೊರೊನಾ ಸೋಂಕು ದೃಢ | Oneindia Kannada

ತಮಿಳುನಾಡಿನಲ್ಲಿ 6.28 ಕೋಟಿ ಮತದಾರರಿದ್ದು, 88,000 ಮತಗಟ್ಟೆಗಳಲ್ಲಿ ಏಪ್ರಿಲ್ 6ರಂದು ಮತದಾನ ನಡೆದಿದೆ. ಮೇ 2ರಂದು ಫಲಿತಾಂಶ ಹೊರಬರಲಿದೆ.

English summary
The Election Commission of India (ECI) has made specific arrangements to enable COVID-19 patients to reach the polling booth and cast their votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X