ಎನ್ ಡಿ ಟಿವಿ ಬ್ರೇಕಿಂಗ್ : ಸಮೀಕ್ಷೆಗಳ ಸಮೀಕ್ಷೆಯಲ್ಲಿ ಬಿಜೆಪಿ ಮುಂದೆ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 09: ಚುನಾವಣೋತ್ತರ ಸಮೀಕ್ಷೆ ಫಲಿತಾಂಶಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ಎಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಭವಿಷ್ಯದ ಲೆಕ್ಕಾಚಾರ ಶುರುವಾಗಿದೆ ಅಸಲಿ ಫಲಿತಾಂಶಕ್ಕಾಗಿ ಮಾರ್ಚ್ 11ರ ತನಕ ಕಾಯಬೇಕಿದೆ. ಸದ್ಯಕ್ಕೆ ಸಮೀಕ್ಷೆಗಳ ಸಮೀಕ್ಷೆ ಫಲಿತಾಂಶ ಇಲ್ಲಿದೆ ನೋಡಿ

ಎಕ್ಸಿಟ್ ಪೋಲ್ ನಲ್ಲಿ ಏನೇ ಬಂದರೂ ಅದು ಒಂದು ಟ್ರೆಂಡ್ ಅಷ್ಟೇ. ಪೂರ್ಣ ಫಲಿತಾಂಶಕ್ಕಾಗಿ ಕಾಯಿರಿ ಎಂದು ಎಲ್ಲರೂ ಹೇಳಿದರೂ ಅನೇಕ ರಾಜ್ಯಗಳಲ್ಲಿ ಈಗಾಗಲೇ ಚುನಾವಣೋತ್ತರ ಮೈತ್ರಿಯ ಮಾತಕತೆ ನಡೆದಿರುವ ಸುದ್ದಿ ಬಂದಿದೆ.[ಉತ್ತರಪ್ರದೇಶದಲ್ಲಿ ಯಾವ ಎಕ್ಸಿಟ್ ಪೋಲ್ ಆಟ ನಡೆಯಲ್ಲ ಏಕೆ?]

ಉತ್ತರಪ್ರದೇಶದ 403 ಅಸೆಂಬ್ಲಿ ಸ್ಥಾನಕ್ಕಾಗಿ ಏಳು ಹಂತದಲ್ಲಿ ಮತದಾನ ಆರಂಭಗೊಳ್ಳುವುದಕ್ಕೂ ಮುನ್ನ ಬಂದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬಿಜೆಪಿಗೆ ಮುನ್ನಡೆ, ಸಮಾಜವಾದಿ ಪಕ್ಷಕ್ಕೆ ಎರಡನೆ ಸ್ಥಾನ, ಬಹುಜನ ಸಮಾಜ ವಾದಿ ಪಕ್ಷಕ್ಕೆ ಮೂರನೇ ಸ್ಥಾನ ಎಂದು ಹೇಳಲಾಯಿತು. [ಚುನಾವಣಾ ಎಕ್ಸಿಟ್ ಪೋಲ್ ಎಷ್ಟು ನಿಜ? ಎಷ್ಟು ಸುಳ್ಳು?]

ಈಗ ಎಕ್ಸಿಟ್ ಪೋಲ್ ಗಳ ಸರಾಸರಿ ಮೊತ್ತ ತೆಗೆದು ಗುಣಿಸಿ, ಭಾಗಕಾರ ಹಾಕಿ ಎನ್ ಡಿಟಿವಿ ನೀಡಿರುವ ಸಮೀಕ್ಷೆಗಳ ಸಮೀಕ್ಷೆ ಫಲಿತಾಂಶದಂತೆ ಬಿಜೆಪಿಗೆ ಈಗ ಉತ್ತರಪ್ರದೇಶದಲ್ಲಿ ಅಧಿಕಾರ ಸ್ಥಾಪಿಸುವ ಕನಸು ಕಾಣಬಹುದಾಗಿದೆ. ಮಿಕ್ಕಂತೆ ಯಾವೆಲ್ಲ ರಾಜ್ಯಗಳ ಫಲಿತಾಂಶ ಯಾವ ಪಕ್ಷಕ್ಕೆ ವರವಾಗಿವೆ, ಯಾವ ಪಕ್ಷಕ್ಕೆ ಶಾಪವಾಗಲಿದೆ? ಮುಂದೆ ಓದಿ...

ಉತ್ತರಾಖಂಡ್ ಸಮೀಕ್ಷೆ

ಉತ್ತರಾಖಂಡ್ ಸಮೀಕ್ಷೆ

ಈಗಿನ ಅಸೆಂಬ್ಲಿ ಬಲಾಬಲ: ಕಾಂಗ್ರೆಸ್ (32), ಬಿಜೆಪಿ (31), ಬಿಎಸ್ ಪಿ(3), ಯುಕೆಡಿ (1), ಇತರೆ (3)

ಸಮೀಕ್ಷೆಗಳ ಸಮೀಕ್ಷೆ ಫಲಿತಾಂಶ: 70 (36 ಬಹುಮತಕ್ಕೆ ಬೇಕು)
ಬಿಜೆಪಿ 43; ಕಾಂಗ್ರೆಸ್ 23; ಇತರೆ 4

ಉತ್ತರಪ್ರದೇಶ ಸಮೀಕ್ಷೆ

ಉತ್ತರಪ್ರದೇಶ ಸಮೀಕ್ಷೆ

ಸಮೀಕ್ಷೆಗಳ ಸಮೀಕ್ಷೆ ಫಲಿತಾಂಶ ಸರಾಸರಿ: 403 (202 ಬಹುಮತಕ್ಕೆ)
ಬಿಜೆಪಿ ಪ್ಲಸ್ 211; ಎಸ್ ಪಿ ಪ್ಲಸ್ 122; ಬಿಎಸ್ ಪಿ 61; ಇತರೆ 9.

ಈಗಿನ ಅಸೆಂಬ್ಲಿ ಬಲಾಬಲ: ಎಸ್ಪಿ (224), ಬಿಎಸ್ಪಿ (80), ಬಿಜೆಪಿ (47), ಐಎನ್ ಸಿ(28), ಆರ್ ಎಲ್ ಡಿ (9)

ಪಂಜಾಬ್ ಸಮೀಕ್ಷೆ

ಪಂಜಾಬ್ ಸಮೀಕ್ಷೆ

ಪಂಜಾಬ್ : ಸಮೀಕ್ಷೆಗಳ ಸಮೀಕ್ಷೆ ಫಲಿತಾಂಶ
117ಸ್ಥಾನ (59 ಬಹುಮತಕ್ಕೆ ಬೇಕಾದ ಸಂಖ್ಯೆ)
ಅಕಾಲಿ ದಳ + 10; ಕಾಂಗ್ರೆಸ್ 54; ಎಎಪಿ + 52; ಇತರೆ 1

ಈಗಿನ ಅಸೆಂಬ್ಲಿ ಬಲಾಬಲ: ಅಕಾಲಿ ದಳ(56), ಬಿಜೆಪಿ (12), ಕಾಂಗ್ರೆಸ್ (46), ಇತರೆ (3)

ಮಣಿಪುರ ಸಮೀಕ್ಷೆ

ಮಣಿಪುರ ಸಮೀಕ್ಷೆ

ಮಣಿಪುರ : ಸಮೀಕ್ಷೆಗಳ ಸಮೀಕ್ಷೆ ಫಲಿತಾಂಶ : ಯಾವುದೇ ಪಕ್ಷಕ್ಕೆ ಬಹುಮತವಿಲ್ಲ
60 ಸ್ಥಾನಗಳು (ಬಹುಮತಕ್ಕೆ 31ಸ್ಥಾನ ಗೆಲ್ಲಬೇಕು)
ಬಿಜೆಪಿ 24; ಕಾಂಗ್ರೆಸ್ 26; ಇತರೆ 10

ಈಗಿನ ಅಸೆಂಬ್ಲಿ ಬಲಾಬಲ: ಕಾಂಗ್ರೆಸ್ (42), ಟಿಎಂಸಿ (7), ಮಣಿಪುರ ಸ್ಟೇಟ್ ಕಾಂಗ್ರೆಸ್ (5)

ಗೋವಾ ಸಮೀಕ್ಷೆ

ಗೋವಾ ಸಮೀಕ್ಷೆ

ಗೋವಾ : ಸಮೀಕ್ಷೆಗಳ ಸಮೀಕ್ಷೆ ಫಲಿತಾಂಶ
40 ಸ್ಥಾನಗಳು (21 ಬಹುಮತಕ್ಕೆ ಬೇಕಾದ ಸಂಖ್ಯೆ)
ಬಿಜೆಪಿ 18; ಕಾಂಗ್ರೆಸ್ 12; ಎಎಪಿ 3; ಇತರೆ 7

ಈಗಿನ ಅಸೆಂಬ್ಲಿ ಬಲಾಬಲ: ಬಿಜೆಪಿ (21), ಐಎನ್ ಸಿ(9), ಎಂಎಜಿ(3). ಇತರೆ (5)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Assembly election results of five states will be declared on March 11. The Election Commission allowed the publication of exit polls after 5:30 PM on March 9. Here is the poll of exit polls conducted by NDTV.
Please Wait while comments are loading...