ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೈಲಿಹಂಟ್‌ನಲ್ಲಿ 5 ರಾಜ್ಯಗಳ ಚುನಾವಣೆ ಫಲಿತಾಂಶ ಫುಲ್ ಕವರೇಜ್

|
Google Oneindia Kannada News

ಐದು ರಾಜ್ಯಗಳಲ್ಲಿ 2022 ರ ವಿಧಾನಸಭಾ ಚುನಾವಣೆ ನಡೆಸಲಾಗಿದ್ದು, ಮಾರ್ಚ್ 10ರಂದು ಎಲ್ಲಾ ಐದು ರಾಜ್ಯಗಳ ಫಲಿತಾಂಶ ಪ್ರಕಟಿಸಲಾಗುತ್ತದೆ. ಫೆಬ್ರವರಿ 10 ರಂದು ಪ್ರಾರಂಭವಾಗಿ ಮಾರ್ಚ್ 7ರಂದು 7ನೇ ಹಾಗೂ ಕೊನೆ ಹಂತದ ಮತದಾನ ಅಂತಿಮಗೊಂಡಿದೆ. ಉತ್ತರಾಖಂಡ, ಉತ್ತರ ಪ್ರದೇಶ, ಪಂಜಾಬ್, ಮಣಿಪುರ ಮತ್ತು ಗೋವಾ ಈ ಐದು ರಾಜ್ಯಗಳಲ್ಲಿ ಕೋವಿಡ್ 19 ಮಾರ್ಗಸೂಚಿಯಂತೆ ಚುನಾವಣೆ ಪ್ರಕ್ರಿಯೆ ನಡೆಸಲಾಗಿದೆ.

ದೇವರ ನಾಡು ಎನಿಸಿಕೊಂಡಿರುವ ಉತ್ತರಾಖಂಡ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಧಿಕಾರದಲ್ಲಿದೆ. ಕಾಂಗ್ರೆಸ್ ಭಾರಿ ಸ್ಪರ್ಧೆ ನೀಡಿ, ಅಧಿಕಾರ ಪಡೆಯಲು ಹವಣಿಸಿದೆ. ಗುಡ್ಡಗಾಡು ರಾಜ್ಯವು ಯಾವಾಗಲೂ ಎರಡು ಪಕ್ಷಗಳ ನಡುವೆ ನಿಕಟ ಸ್ಪರ್ಧೆಗೆ ಸಾಕ್ಷಿಯಾಗಿದೆ, ಒಟ್ಟು ಮತಗಳಲ್ಲಿ ಸುಮಾರು ಮೂರನೇ ಒಂದು ಭಾಗವನ್ನು ಒಂದು ಪಕ್ಷ ಗಳಿಸಿದರೆ, ಮೂರನೇ ಒಂದು ಭಾಗವನ್ನು ಇತರರ ಪಾಲಾಗುತ್ತದೆ ಬಂದಿದೆ.

ಉತ್ತರಪ್ರದೇಶದಲ್ಲಿ ಎಂದಿನಂತೆ ನಿಕಟ ಸ್ಪರ್ಧೆಯನ್ನು ನಿರೀಕ್ಷಿಸಲಾಗಿದೆ, ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಸಮಾಜವಾದಿ ಪಕ್ಷವು ಬಿರುಸಿನ ಪ್ರಚಾರ ನಡೆಸಿದ್ದು, ಭಾರಿ ಕುತೂಹಲ ಕೆರಳಿಸಿದೆ. ಕಾಂಗ್ರೆಸ್ ತನ್ನ ಪ್ರಭುತ್ವವನ್ನು ಮತ್ತೆ ಸಾಬೀತಲು ಯತ್ನಿಸುತ್ತಿದೆ. ಬಹುಜನ ಸಮಾಜವಾದಿ ಪಕ್ಷ ಅಲ್ಲದೆ ಹಲವು ಸಣ್ಣಪುಟ್ಟ ಪಕ್ಷಗಳು ರಾಷ್ಟ್ರೀಯ ಪಕ್ಷಗಳ ನೆರಳಲ್ಲಿ ಅಧಿಕಾರ ಹಿಡಿಯಲು ಯತ್ನಿಸುತ್ತಿವೆ.

Assembly Election Results 2022: Tune into Dailyhunt to get the fastest coverage

ಪಂಜಾಬ್‌ನಲ್ಲಿ ಎಲ್ಲಾ ಕಣ್ಣುಗಳು ಆಮ್ ಆದ್ಮಿ ಪಕ್ಷದ ಮೇಲೆ ನಿಂತಿವೆ, ಈ ಬಾರಿ ಎಎಪಿ ಕಿಂಗ್ ಮೇಕರ್ ಆಗುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ. ಗಡಿ ರಾಜ್ಯವಾದ ಪಂಜಾಬ್‌ನಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವೇ? ಕಾದು ನೋಡಬೇಕಿದೆ. ಕಾಂಗ್ರೆಸ್ ಪಕ್ಷದ ಆಂತರಿಕ ತಿಕ್ಕಾಟದಿಂದ ಲಾಭ ಪಡೆಯಲು ಬಿಜೆಪಿ ಯತ್ನಿಸುತ್ತಿದೆ.

ಮಣಿಪುರದಲ್ಲಿ, ಆಡಳಿತ ಮತ್ತು ವಿರೋಧ ಪಕ್ಷಗಳಿಂದ JD(U) ಗೆ ಪಕ್ಷಾಂತರಗಳು ತುಲನಾತ್ಮಕವಾಗಿ ಕಡಿಮೆ ಪರಿಚಿತ ಪಕ್ಷವಾದರೂ ಸ್ಪರ್ಧೆ ನೀಡಲು ಮುಂದಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಮುಳುವಾಗುವ ಸಾಧ್ಯತೆಯಿದೆ.

ಗೋವಾದಲ್ಲಿ ತೃಣಮೂಲ ಕಾಂಗ್ರೆಸ್‌ನ ಪ್ರವೇಶ ಮತ್ತು ಆಪ್‌ನ ಅಬ್ಬರದ ಪ್ರಚಾರದಿಂದ ಸ್ಪರ್ಧೆ ಕುತೂಹಲ ಮೂಡಿಸಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ನೋಡುತ್ತದೆ, ಆದರೆ ಕಾಂಗ್ರೆಸ್ ಎಲ್ಲರ ಲೆಕ್ಕಾಚಾರ ತಲೆಕೆಳಗು ಮಾಡುವ ಪಣತೊಟ್ಟಿದೆ. ಎಂಟಕ್ಕೂ ಅಧಿಕ ರಾಷ್ಟ್ರೀಯ ಪಕ್ಷಗಳು ಹಲವಾರು ಸಣ್ಣಪುಟ್ಟ ಪಕ್ಷಗಳು ಕದನ ಕುತೂಹಲವನ್ನು ಉಳಿಸಿವೆ. ಅತಂತ್ರ ವಿಧಾನಸಭೆ ಬಂದರೆ ಮೈತ್ರಿ ಪ್ರಮುಖ ಪಾತ್ರವಹಿಸಲಿದೆ.

ಡೈಲಿ ಹಂಟ್‌ನಲ್ಲಿ ನಿರೀಕ್ಷಿಸಿ
ಡೈಲಿ ಹಂಟ್ ಐದು ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶವನ್ನು ಲೈವ್‌ನಲ್ಲಿ ನೀಡಲಿದೆ. ಚುನಾವಣೆ ಕೇವಲ ಲೆಕ್ಕಾಚಾರಕ್ಕೆ ಮಾತ್ರ ಸೀಮಿತವಲ್ಲ. ಅಂಕಿ ಸಂಖ್ಯೆಗಳು, ವಿಶ್ಲೇಷಣೆಗಳನ್ನು ಪ್ರತಿಯೊಬ್ಬರಿಗಾಗಿ ನಾವು ನೀಡಲಿದ್ದೇವೆ. ಫಲಿತಾಂಶದ ಸ್ಪಷ್ಟ ಚಿತ್ರಣ ಲಭ್ಯವಾಗುತ್ತಿದ್ದಂತೆ ಫಲಿತಾಂಶದ ವಿಶ್ಲೇಷಣೆಯನ್ನು ರಾಜಕೀಯ ತಜ್ಞರ ಮೂಲಕ ನೀಡಲಾಗುತ್ತದೆ. ಡೈಲಿ ಹಂಟ್ ಫಲಿತಾಂಶದ ನೇರ, ನಿಖರ ಮತ್ತು ವೇಗದ ಅಪ್ಡೇಟ್ ಮಾಹಿತಿಗಳನ್ನು ನೀಡಲಿದೆ. ಅಂಕಿ ಸಂಖ್ಯೆ, ಪ್ರಬಲ ಪೈಪೋಟಿ, ಹಿಂದಿನ ಚುನಾವಣೆ ಫಲಿತಾಂಶದ ಮಾಹಿತಿಯೂ ಸಿಗಲಿದೆ.

Recommended Video

Shane Warne ಮಾಡಿದ ಸಾಧನೆಗೆ ಭಾರತದ ಆಟಗಾರರ ಸಲಾಂ | Oneindia Kannada

ಚುನಾವಣೆ ಫಲಿತಾಂಶದ ಚಿತ್ರಣ, ರಾಜ್ಯವಾರು ಲೆಕ್ಕಾಚಾರ, ಕ್ಷೇತ್ರವಾರು ವಿವರ, ಸಾಮಾಜಿಕ ಜಾಲತಾಣದ ಟ್ರೆಂಡ್, ಲೈವ್ ವಿಡಿಯೋಗಳು, ಹೆಚ್ಚು ಓದುತ್ತಿರುವ ಲೇಖನ, ಸಾಮಾಜಿಕ ಮಾಧ್ಯಮದ ಪ್ರತಿಕ್ರಿಯೆಗಳು, ಟ್ವಿಟ್ಟರ್, ಕೂನಲ್ಲಿನ ಟ್ರೆಂಡ್‌ಗಳು, ಲೈವ್ ವಿಡಿಯೊಗಳು, ವೈರಲ್ ಮೀಮ್‌ಗಳು, ಟ್ರೆಂಡಿಂಗ್ ಕಥೆಗಳು, ವಿಡಿಯೊಗಳು ಇವುಗಳನ್ನು ನೀವು ನಮ್ಮಿಂದ ನಿರೀಕ್ಷಿಸಬಹುದು. ಆದ್ದರಿಂದ, ವಿಧಾನಸಭಾ ಚುನಾವಣೆಯ ಅತ್ಯಂತ ಆಳವಾದ ಮತ್ತು ರೋಚಕ ಕವರೇಜ್‌ಗಾಗಿ ಟ್ಯೂನ್ ಮಾಡಿ. ಸೇರಿದಂತೆ ಹಲವು ಮಾಹಿತಿಗಳನ್ನು ನೀಡಲಿದ್ದೇವೆ. ಸ್ಪಷ್ಟ, ನಿಖರ ಫಲಿತಾಂಶಕ್ಕಾಗಿ ಕಾಯುತ್ತಿರಿ.

English summary
Results for the assembly election 2022 in five states will be announced on May 10. The five states that went to polls are Uttarakhand, Uttar Pradesh, Punjab, Manipur and Goa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X