ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಚರಾಜ್ಯ ಚುನಾವಣೆ: ಮಮತಾರಿಂದ ಸ್ಟಾಲಿನ್‌ವರೆಗೆ ಟಾಪ್ 10 ಅಭ್ಯರ್ಥಿಗಳು

|
Google Oneindia Kannada News

ನವದೆಹಲಿ, ಮೇ 02: ಕೊರೊನಾ ಸೋಂಕಿನ ಆತಂಕದ ನಡುವೆಯೂ ನಡೆದ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ.

ಪಶ್ಚಿಮ ಬಂಗಾಳ, ಕೇರಳ ಹಾಗೂ ತಮಿಳುನಾಡು ಚುನಾವಣಾ ಫಲಿತಾಂಶದ ಮೇಲೆ ತೀವ್ರ ಕುತೂಹಲವಿದೆ. ಎನ್‌ಡಿಎ ವಿರುದ್ಧ ಹರಿಹಾಯಲು ಕಾಯುತ್ತಿರುವ ಪ್ರತಿಪಕ್ಷಗಳ ಪಾಲಿಗಂತೂ ಈ ಫಲಿತಾಂಶ ನಿರ್ಣಾಯಕವಾಗಿದೆ.

Assembly Election Results 2021 Live Updates: 5 ರಾಜ್ಯಗಳ ಚುನಾವಣೆ ಫಲಿತಾಂಶAssembly Election Results 2021 Live Updates: 5 ರಾಜ್ಯಗಳ ಚುನಾವಣೆ ಫಲಿತಾಂಶ

ಮೋದಿ-ಶಾ ನೇತೃತ್ವದ ಎನ್‌ಡಿಎ, ರಾಹುಲ್‌-ಪ್ರಿಯಾಂಕಾ ನೇತೃತ್ವದ ಕಾಂಗ್ರೆಸ್‌, ಮಮತಾ ಬ್ಯಾನರ್ಜಿಯ ಏಕಾಂಗಿ ಹೋರಾಟ, ಎಂಕೆ ಸ್ಟಾಲಿನ್‌ರ ಚೊಚ್ಚಲ ಸ್ಪರ್ಧೆಯ ಫಲಿತಾಂಶ, ಪಿಣರಾಯಿ ವಿಜಯನ್‌ ನೇತೃತ್ವದ ಎಡರಂಗದ ಮುಂದಿನ ಭವಿಷ್ಯಕ್ಕೆ ಈ ಫಲಿತಾಂಶ ದಿಕ್ಸೂಚಿ ಎಂದು ಹೇಳಬಹುದು.

Assembly Election Results 2021: Know The Top 10 Candidates

ಆರೋಪ ಪ್ರತ್ಯಾರೋಪಗಳು ಖಚಿತ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಆಡಳಿತಕ್ಕೆ ಮೋದಿ ಪೆಟ್ಟು ಕೊಡಲಿದ್ದಾರೆಯೇ ಅಥವಾ ಅವರೇ ಪೆಟ್ಟು ತಿನ್ನುತಾರೆಯೇ ಎಂಬುದು ಕುತೂಹಲಕಾರಿ ವಿಷಯವಾಗಿದೆ.

Karnataka By Elections Results 2021 Live Updates: ಉಪ ಚುನಾವಣೆ ಫಲಿತಾಂಶತಮಿಳು ನಾಡು ಚುನಾವಣಾ ರಾಜಕೀಯ ಇತಿಹಾಸದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊಸ ಅಧ್ಯಾಯಕ್ಕೆ ನಾಂದಿ ಹಾಡಬಹುದು. ಇಂದು ಚುನಾವಣಾ ಫಲಿತಾಂಶ ಹೊರಬೀಳುತ್ತಿದೆ.

ಇದು ರಾಜ್ಯದ ಮುಂದಿನ 5 ವರ್ಷಗಳ ಆಡಳಿತಕ್ಕೆ ದಿಕ್ಸೂಚಿಯಾಗುವುದು ಮಾತ್ರವಲ್ಲದೆ ದಶಕಗಳವರೆಗೆ ತಮಿಳು ನಾಡಿನ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಹೇಳಬಹುದು.

ಇಬ್ಬರು ಅರಾಜಕೀಯ ನಾಯಕರಾದ ಎರಡು ಬಲಾಢ್ಯ ಸ್ಥಳೀಯ ಪಕ್ಷಗಳನ್ನು ಕಟ್ಟಿ ಬೆಳೆಸಿದ ಎಂ ಕರುಣಾನಿಧಿ ಮತ್ತು ಜೆ ಜಯಲಲಿತಾ ಇಬ್ಬರೂ ಇಲ್ಲ. ಜನತೆ ಈ ಬಾರಿ ಇಬ್ಬರು ಖ್ಯಾತ ನಾಯಕರಾದ ಎಂ ಕೆ ಸ್ಟಾಲಿನ್ ಮತ್ತು ಎಡಪ್ಪಡಿ ಕೆ ಪಳನಿಸ್ವಾಮಿ ಅವರ ಮಧ್ಯೆ ಆಯ್ಕೆ ಮಾಡಬೇಕು. ಇವರಿಗೆ ಸ್ವಲ್ಪ ಮಟ್ಟಿಗೆ ಸ್ಪರ್ಧೆಯೊಡ್ಡಲು ನಟ ಕಮಲ್ ಹಾಸನ್, ಟಿಟಿವಿ ದಿನಕರನ್ ಮತ್ತು ಸೀಮನ್ ಬಂದಿದ್ದರು.

ಎಂ ಕೆ ಸ್ಟಾಲಿನ್ ಮತ್ತು ಕೆ. ಪಳನಿಸ್ವಾನಿ ಇಬ್ಬರಿಗೂ ತಮ್ಮ ರಾಜಕೀಯ ಭವಿಷ್ಯವನ್ನು ಸ್ಪಷ್ಟವಾಗಿ ನಿರ್ಧರಿಸುವ ಸಮಯ. ಕಳೆದ 10 ವರ್ಷಗಳಿಂದ ಸ್ಟಾಲಿನ್ ಪಕ್ಷ ಅಧಿಕಾರದಲ್ಲಿ ಇರಲಿಲ್ಲ.

ಅವರಿಗೆ ಈಗ ಉಳಿವಿನ ಪ್ರಶ್ನೆ. ಇನ್ನು ಪಳನಿಸ್ವಾಮಿಯವರಿಗೆ ತಮ್ಮ ಪಕ್ಷವನ್ನು ರಾಜ್ಯದಲ್ಲಿ ಪ್ರಭಾವದಲ್ಲಿ ಉಳಿಸಲು ಅಧಿಕಾರ ಮರಳಿ ಪಡೆಯುವುದು ಮುಖ್ಯವಾಗಿರುತ್ತದೆ.

ಇನ್ನು ಚುನಾವಣೆಯ ಪ್ರಮುಖ 10 ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.
-ಮಮತಾ ಬ್ಯಾನರ್ಜಿ: ತೃಣಮೂಲ ಕಾಂಗ್ರೆಸ್ 2011 ರಂದು ಅಧಿಕಾರಕ್ಕೆ ಬಂದಿತ್ತು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ ನಂದಿಗ್ರಾಮದಿಂದ ಸ್ಪರ್ಧಿಸಿದ್ದಾರೆ.
-ಸುವೇಂದು ಅಧಿಕಾರಿ: ಪಶ್ಚಿಮ ಬಂಗಾಳದಲ್ಲಿ 294 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಸುವೇಂದು ಅಧಿಕಾರಿ ಬಿಜೆಪಿ ಅಭ್ಯರ್ಥಿಯಾಗಿದ್ದು, ನಂದಿಗ್ರಾಮದಿಂದ ಮಮತಾ ವಿರುದ್ಧ ಸ್ಪರ್ಧಿಸಿದ್ದಾರೆ.
-ಎಂಕೆ ಸ್ಟಾಲಿನ್: ಕೊಲತ್ತೂರಿಂದ ಸ್ಪರ್ಧಿಸಿದ್ದಾರೆ, ಎಂಕೆ ಸ್ಟಾಲಿನ್ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ಪುತ್ರನಾಗಿದ್ದು, 2009-11ರವರೆಗೂ ತಮಿಳುನಾಡು ಉಪ ಮುಖ್ಯಮಂತ್ರಿಯಾಗಿದ್ದರು.
-ಪಳನಿಸ್ವಾಮಿ: ಎಡಪ್ಪಾಡಿ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು, ಜಯಲಲಿತಾ ಸಾವಿನ ಬಳಿಕ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು.
-ಎನ್ ರಂಗಸ್ವಾಮಿ:ಎನ್ ರಂಗಸ್ವಾಮಿ ಥಟ್ಟನ್‌ಚವಾಡಿಯಿಂದ ಸ್ಪರ್ಧಿಸಿದ್ದಾರೆ.
-ಪಿ ಸೆಲ್ವ: ಪಿ ಸೆಲ್ವ ಕಾಂಗ್ರೆಸ್‌ನ ಪ್ರಮುಖ ಅಭ್ಯರ್ಥಿಗಳಲ್ಲಿ ಒಬ್ಬರು. ಪುದುಚೆರಿಯ ಕರ್ಡಿಗ್ರಾಮ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
-ಪಿಣರಾಯಿ ವಿಜಯನ್: ಪಿಣರಾಯಿ ವಿಜಯನ್ ಇದೀಗ ಪ್ರಸ್ತುತ ಕೇರಳ ಮುಖ್ಯಮಂತ್ರಿಯಾಗಿದ್ದಾರೆ. ಚುನಾವಣೋತ್ತರ ಸಮೀಕ್ಷೆ ಪ್ರಕಾರ ಕೇರಳದಲ್ಲಿ ಪಿಣರಾಯಿ ವಿಜಯನ್ ಮತ್ತೆ ಅಧಿಕಾರಕ್ಕೆ ಬರಲಿದ್ದಾರೆ.
-ಕುಮ್ಮನಂ ರಾಜಶೇಖರನ್: ರಾಜಶೇಖರನ್ ಕೇರಳದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ, ಈ ಮೊದಲು ಮಿಜೋರಾಂ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. 2018-18ರವರೆಗೆ ಪಕ್ಷದ ಅಧ್ಯಕ್ಷರಾಗಿದ್ದರು.ನೆಮೊಮ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
-ಸರ್ಬಾನಂದ ಸೋನೋವಾಲ್: ಅಸ್ಸಾಂ, ಪ್ರಸ್ತುತ ಅಸ್ಸಾಂ ಮುಖ್ಯಮಂತ್ರಿಯಾಗಿದ್ದಾರೆ.
-ರಿಪುನ್ ಬೋರಾ: ಅಸ್ಸಾಂನ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ, ಗೋಹ್‌ಪುರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.

English summary
The counting of votes for the high-stakes assembly polls in four states- Assam, Kerala, Tamil Nadu, West Bengal, and the union territory of Puducherry will begin on Sunday Now the top ten candidates here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X