ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ, ಸಂಪೂರ್ಣ ವಿವರ

|
Google Oneindia Kannada News

ನವದೆಹಲಿ, ಫೆಬ್ರವರಿ 26: ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳು ಹಾಗೂ ಬೆಲೆ ಏರಿಕೆಯ ಬಿಸಿ ನಡುವೆ ಮತ್ತೆ ಚುನಾವಣಾ ಕಾವು ಶುರುವಾಗಿದೆ. 2021ರ ಮೊದಲ ಚುನಾವಣೆಗೆ ಸಿದ್ಧತೆ ನಡೆದಿದೆ. ಇನ್ನು ಕೆಲವು ತಿಂಗಳಲ್ಲಿ ವಿಧಾನಸಭೆ ಅವಧಿ ಪೂರ್ಣಗೊಳ್ಳಲಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೆರಿಗಳ ವಿಧಾನಸಭೆಗೆ ಕೇಂದ್ರ ಚುನಾವಣಾ ಆಯೋಗ ಚುನಾವಣಾ ದಿನಾಂಕ ಪ್ರಕಟಿಸಿದೆ.

ನಾಲ್ಕು ರಾಜ್ಯಗಳು ಹಾಗೂ ಪುದುಚೆರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗಳಿಗೆ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರು ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದರು. ಕೊರೊನಾ ವೈರಸ್ ಸೋಂಕಿನ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಚುನಾವಣೆ ನಡೆಸಲಾಗುವುದು. ಇದರ ಜತೆಗೆ ಐದು ರಾಜ್ಯಗಳಲ್ಲಿನ ಹಬ್ಬ ಆಚರಣೆಗಳು ಮತ್ತು ಪರೀಕ್ಷೆಗಳನ್ನು ಸಹ ಗಮನದಲ್ಲಿರಿಸಲಾಗಿದೆ ಎಂದು ಅವರು ಹೇಳಿದರು.

ಹೊಸ ವರ್ಷದ ಪರಿಕಲ್ಪನೆ ಭರವಸೆಯ ಸಂಕೇತವಾಗಿದೆ. ಕೋವಿಡ್ ಯೋಧರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಕೋವಿಡ್ ರೂಪದಲ್ಲಿ ಹಿಂದೆಂದೂ ಕಾಣದ ಬಿಕ್ಕಟ್ಟು ಎದುರಾಗಿದೆ. 2020ರಲ್ಲಿ ಚುನಾವಣೆ ನಡೆಸುವ ಪರೀಕ್ಷೆಯನ್ನು ಎದುರಿಸಿಸಿದ್ದೇವೆ. ಬಿಹಾರ ಚುನಾವಣೆ ದೊಡ್ಡ ಸವಾಲಿನ ಪರೀಕ್ಷೆಯಾಗಿತ್ತು. 7.3 ಕೋಟಿ ಮತದಾರರು ಬಿಹಾರದಲ್ಲಿ ಮತ ಚಲಾಯಿಸಿದ್ದರು ಎಂದು ಸುನಿಲ್ ಅರೋರಾ ಹೇಳಿದರು.

ಮಾರ್ಚ್ 2 ರಿಂದ ಅಸ್ಸಾಂನಲ್ಲಿ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ. ಪುದುಚೆರಿ, ಕೇರಳ ಮತ್ತು ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಅಸ್ಸಾಂನಲ್ಲಿ ಮೂರು ಹಾಗೂ ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಈ ಎಲ್ಲ ಚುನಾವಣೆಗಳ ಫಲಿತಾಂಶ ಮೇ 2ರಂದು ಪ್ರಕಟವಾಗಲಿದೆ.

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳ ಚುನಾವಣೆ: ಎಂಟು ಹಂತಗಳಲ್ಲಿ ಚುನಾವಣೆ. ಕಳೆದ ಬಾರಿ ಏಳು ಹಂತಗಳಲ್ಲಿ ನಡೆದಿತ್ತು.

ಮೊದಲ ಹಂತ- 30 ಕ್ಷೇತ್ರಗಳು. 2 ಮಾರ್ಚ್ ಅಧಿಸೂಚನೆ, 9ನೇ ಮಾರ್ಚ್ ನಾಮಪತ್ರ 10ನೇ ಮಾರ್ಚ್ ಪರಿಶೀಲನೆ. 12ನೇ ಮಾರ್ಚ್ ನಾಮಪತ್ರ ಹಿಂಪಡೆಯಲು ಕೊನೆಯ ದಿನ, ಮಾರ್ಚ್ 27 ಚುನಾವಣೆ.

ಎರಡನೆಯ ಹಂತ- 30 ಕ್ಷೇತ್ರ. 5ನೇ ಮಾರ್ಚ್ ಅಧಿಸೂಚನೆ. 12 ಮಾರ್ಚ್ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. 15 ಮಾರ್ಚ್ ನಾಮಪತ್ರ ಪರಿಶೀಲನೆ ಮತ್ತು 17ನೇ ಮಾರ್ಚ್ ನಾಮಪತ್ರ ವಾಪಸ್‌ಗೆ ಕೊನೆಯ ದಿನ. 1 ಏಪ್ರಿಲ್ ಚುನಾವಣೆ ನಡೆಯಲಿದೆ.

ಮೂರನೇ ಹಂತ- ಚುನಾವಣೆ ಏಪ್ರಿಲ್ 6ರಂದು ನಡೆಯಲಿದೆ.

ನಾಲ್ಕನೆಯ ಹಂತ 44 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. 16 ಮಾರ್ಚ್ ಅಧಿಸೂಚನೆ ಪ್ರಕಟ, 23 ಮಾರ್ಚ್ ನಾಮಪತ್ರ ಸಲ್ಲಿಸಲು ಕೊನೆಯ ದಿನ, 24 ಮಾರ್ಚ್ ನಾಮಪತ್ರ ಪರಿಶೀಲನೆ. 27 ಮಾರ್ಚ್ ನಾಮಪತ್ರ ವಾಪಸ್‌ಗೆ ಕೊನೆಯ ದಿನ, 10ನೇ ಏಪ್ರಿಲ್ ಮತದಾನ.

ಐದನೇ ಹಂತ- 45 ಕ್ಷೇತ್ರಗಳು. ಮಾರ್ಚ್ 23 ಅಧಿಸೂಚನೆ, 30 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, 31 ನಾಮಪತ್ರ ಪರಿಶೀಲನೆ, 3 ನಾಮಪತ್ರ ವಾಪಸ್‌ಗೆ ಕೊನೆಯ ದಿನ. 17 ಏಪ್ರಿಲ್ ಚುನಾವಣೆ.

ಆರನೇ ಹಂತ- 43 ಕ್ಷೇತ್ರಗಳು. ಮಾರ್ಚ್ 26 ಅಧಿಸೂಚನೆ, ಏಪ್ರಿಲ್ 3 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, 5 ಏಪ್ರಿಲ್ ನಾಮಪತ್ರ ಪರಿಶೀಲನೆ, 7 ಏಪ್ರಿಲ್ ನಾಮಪತ್ರ ವಾಪಸ್‌ಗೆ ಕೊನೆಯ ದಿನ. 22 ಏಪ್ರಿಲ್ ಚುನಾವಣೆ.

ಏಳನೇ ಹಂತ -36 ಕ್ಷೇತ್ರಗಳು. ಅಧಿಸೂಚನೆ 31 ಮಾರ್ಚ್, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ 7 ಏಪ್ರಿಲ್, ಮತಪತ್ರ ಪರಿಶೀಲನೆ 8 ಏಪ್ರಿಲ್, 12 ಏಪ್ರಿಲ್ ನಾಮಪತ್ರ ವಾಪಸ್, 27 ಏಪ್ರಿಲ್ ಚುನಾವಣೆ.

ಎಂಟನೇ ಹಂತ- 35 ಕ್ಷೇತ್ರಗಳು. 31 ಮಾರ್ಚ್ ಅಧಿಸೂಚನೆ, 7 ಏಪ್ರಿಲ್ ಮತಪತ್ರ ಸಲ್ಲಿಕೆಗೆ ಕೊನೆಯ ದಿನ, 8 ಏಪ್ರಿಲ್ ನಾಮಪತ್ರ ಪರಿಶೀಲನೆ. 12 ಏಪ್ರಿಲ್ ನಾಮಪತ್ರ ವಾಪಸ್‌ಗೆ ಕೊನೆಯ ದಿನ, 29 ಏಪ್ರಿಲ್ ಚುನಾವಣೆ.

ತಮಿಳುನಾಡು ಚುನಾವಣೆ

ತಮಿಳುನಾಡು ಚುನಾವಣೆ

ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. 12ನೇ ಮಾರ್ಚ್ ಅಧಿಸೂಚನೆ ಪ್ರಕಟ. 19ನೇ ಮಾರ್ಚ್ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. 20 ಮಾರ್ಚ್ ನಾಮಪತ್ರ ಪರಿಶೀಲನೆ. ನಾಮಪತ್ರ ಹಿಂಪಡೆಯಲು ಮಾರ್ಚ್ 22 ಕೊನೆ ದಿನ. ಚುನಾವಣೆ 6ನೇ ಏಪ್ರಿಲ್. ಕನ್ಯಾಕುಮಾರಿ ಲೋಕಸಭೆ ಕ್ಷೇತ್ರದ ಚುನಾವಣೆ ಕೂಡ ಏ. 6ರಂದು ನಡೆಯಲಿದೆ.

ಕೇರಳ ಚುನಾವಣೆ

ಕೇರಳ ಚುನಾವಣೆ

ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. 12ನೇ ಮಾರ್ಚ್ ಅಧಿಸೂಚನೆ. 20ನೇ ಮಾರ್ಚ್ ನಾಮಪತ್ರ ಪರಿಶೀಲನೆ, 22 ಮಾರ್ಚ್ ನಾಮಪತ್ರ ಹಿಂಪಡೆಯುವುದು. ಏಪ್ರಿಲ್ 6ರಂದು ಚುನಾವಣೆ. ಮಲ್ಲಾಪುರ ಸಂಸತ್‌ಗೆ ಉಪ ಚುನಾವಣೆಯು ಕೂಡ ಏಪ್ರಿಲ್ 6ರಂದು ನಡೆಯಲಿದೆ.

ಅಸ್ಸಾಂ ಚುನಾವಣೆ

ಅಸ್ಸಾಂ ಚುನಾವಣೆ

ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದ ಅಧಿಸೂಚನೆ ಮಾರ್ಚ್ 2ರಂದು ಪ್ರಕಟವಾಗಲಿದ್ದು, ಮೊದಲ ಹಂತದಲ್ಲಿ 47 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. 9 ಮಾರ್ಚ್ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. 10 ಮಾರ್ಚ್ ನಾಮಪತ್ರ ಪರಿಶೀಲನೆ, 12ನೇ ಮಾರ್ಚ್ ನಾಮಪತ್ರ ವಾಪಸ್‌ಗೆ ಕೊನೆ ದಿನ. ಮಾರ್ಚ್ 27 ಚುನಾವಣೆ.

ಎರಡನೆಯ ಹಂತದಲ್ಲಿ 37 ಕ್ಷೇತ್ರಗಳಿಗೆ ಚುನಾವಣೆ. 5ನೇ ಮಾರ್ಚ್ ಅಧಿಸೂಚನೆ ಪ್ರಕಟ. 12 ಮಾರ್ಚ್ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. 17 ನಾಮಪತ್ರ ಹಿಂಪಡೆಯಲು ಕೊನೆಯ ದಿನ. 1 ಏಪ್ರಿಲ್ ಮತದಾನ.

ಮೂರನೇ ಹಂತ- 40 ಕ್ಷೇತ್ರಗಳಿಗೆ ಚುನಾವಣೆ. 12ನೇ ಮಾರ್ಚ್ ಅಧಿಸೂಚನೆ ಪ್ರಕಟ. 19ನೇ ಮಾರ್ಚ್ ನಾಮಪತ್ರ ಸಲ್ಲಿಕೆ. 20 ಮಾರ್ಚ್ ನಾಮಪತ್ರ ಪರಿಶೀಲನೆ, 22 ಮಾರ್ಚ್ ನಾಮಪತ್ರ ವಾಪಸ್‌ಗೆ ಕಡೇ ದಿನ. 6ನೇ ಏಪ್ರಿಲ್ ಚುನಾವಣೆ.

ಪುದುಚೇರಿ ಚುನಾವಣೆ

ಪುದುಚೇರಿ ಚುನಾವಣೆ

ಮಾರ್ಚ್ 12ರಂದು ಅಧಿಸೂಚನೆ ಪ್ರಕಟ. ಮಾರ್ಚ್ 19 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಮಾರ್ಚ್ 20 ನಾಮಪತ್ರ ಪರಿಶೀಲನೆ, 22ನೇ ಮಾರ್ಚ್ ನಾಮಪತ್ರ ಹಿಂಪಡೆಯಲು ಕೊನೆಯ ದಿನ, ಏಪ್ರಿಲ್ 6 ಚುನಾವಣೆ.

18.68 ಕೋಟಿ ಮತದಾರ

18.68 ಕೋಟಿ ಮತದಾರ

ಸಾಂಕ್ರಾಮಿಕದ ಬಿಕ್ಕಟ್ಟಿನ ಸನ್ನಿವೇಶದ ನಡುವೆ ಚುನಾವಣಾ ಆಯೋಗವು ರಾಜ್ಯಸಭೆಯ 18 ಸೀಟುಗಳ ಚುನಾವಣೆಯ ಪ್ರಯೋಗ ನಡೆಸಿತು. ಬಳಿಕ ಬಿಹಾರ ಚುನಾವಣೆಯ ದೊಡ್ಡ ಸವಾಲು ಎದುರಾಯಿತು. ಅದು ಆಯೋಗದ ಪಾಲಿಗೆ ಇಕ್ಕಟ್ಟಿನ ಸನ್ನಿವೇಶವಾಗಿತ್ತು ಎಂದು ಸುನಿಲ್ ಅರೋರಾ ನೆನಪಿಸಿಕೊಂಡರು.

ಈ ಚುನಾವಣೆಗಳಲ್ಲಿ 824 ವಿಧಾನಸಭೆ ಚುನಾವಣೆಗಳಲ್ಲಿ 18.68 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ. ಅದಕ್ಕಾಗಿ ಒಟ್ಟು 2.7 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು.

ಕಠಿಣ ನಿಯಮಗಳು ಜಾರಿ

ಕಠಿಣ ನಿಯಮಗಳು ಜಾರಿ

ಎಲ್ಲ ರಾಜ್ಯಗಳಲ್ಲಿಯೂ ಮತಗಟ್ಟೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಹಾಗೂ ಮತ ಚಲಾವಣೆಗೆ ಒಂದು ಗಂಟೆ ಹೆಚ್ಚಿನ ಸಮಯ ನೀಡಲಾಗುವುದು. 80 ವರ್ಷ ಮೇಲ್ಪಟ್ಟವರು, ಅನಾರೋಗ್ಯ ಪೀಡಿತರು ಮತ್ತು ಅಗತ್ಯ ಸೇವಾ ಉದ್ಯೋಗಿಗಳಿಗೆ ಅಂಚೆ ಮೂಲಕ ಮತ ಚಲಾಯಿಸಲು ಅವಕಾಶವಿದೆ.

ಮನೆಯಿಂದ ಮನೆಗೆ ಚುನಾವಣಾ ಪ್ರಚಾರ ನಡೆಸಲು ಐದು ಜನರ ತಂಡಕ್ಕೆ ಮಾತ್ರ ಅವಕಾಶ ನೀಡಲಾಗುವುದು. ಮತ ಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿ ಜತೆ ಇಬ್ಬರು ಮಾತ್ರವೇ ಹಾಜರಾಗಬೇಕು. ಈ ಬಾರಿ ಚುನಾವಣೆಯಲ್ಲಿ ರೋಡ್ ಶೋ ನಡೆಸಲು ಅವಕಾಶವಿದೆ. ಆದರೆ ಪ್ರತಿ ಐದು ವಾಹನಗಳಿಗೆ ಬೆಂಗಾವಲು ಒದಗಿಸಬೇಕು. ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರ ಸ್ಥಳೀಯ ಚುನಾವಣಾ ಅಧಿಕಾರಿಗೆ ನೀಡಲಾಗಿದೆ.

ವಿಧಾನಸಭೆ ಸೀಟುಗಳ ವಿವರ

ವಿಧಾನಸಭೆ ಸೀಟುಗಳ ವಿವರ

ಅಸ್ಸಾಂ ವಿಧಾನಸಭೆಯು ಮೇ 31ರವರೆಗೂ ಇರಲಿದ್ದು 126 ಸೀಟುಗಳಿಗೆ ಚುನಾವಣೆ ನಡೆಯಲಿದೆ. SC-8, ST-16; ತಮಿಳುನಾಡು ವಿಧಾನಸಭೆ ಅವಧಿ- ಮೇ 24, ಒಟ್ಟು ಸೀಟುಗಳು 234, SC-44, ST -2; ಪಶ್ಚಿಮ ಬಂಗಾಳ ವಿಧಾನಸಭೆ ಅವಧಿ ಮೇ 30, ಸೀಟುಗಳು 294, SC-68, ST-16; ಕೇರಳ ವಿಧಾನಸಭೆ-1 ಜೂನ್, ಸೀಟುಗಳು-140, SC- 14, ST-2; ಪುದುಚೆರಿ-30 SC-5, ST-ಇಲ್ಲ.

ಚುನಾವಣೆ ವೇಳೆ ಸಮರ್ಪಕ ರೀತಿಯಲ್ಲಿ ಸಿಎಪಿಎಫ್ ನಿಯೋಜನೆ ನಡೆಸಬೇಕು. ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚುವರಿ ಸಿಎಪಿಎಫ್ ನಿಯೋಜಿಸಲಾಗುವುದು. ಮತಗಟ್ಟೆಗಳಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು. ಪಶ್ಚಿಮ ಬಂಗಾಳಕ್ಕೆ ಈಗಾಗಲೇ ಭದ್ರತಾ ಪಡೆಗಳನ್ನು ರವಾನಿಸಲಾಗಿದೆ ಎಂಬ ವದಂತಿಗಳನ್ನು ನಿರಾಕರಿಸಿದ ಸುನಿಲ್ ಅರೋರಾ, ಚುನಾವಣೆ ನಡೆಯುವ ಎಲ್ಲ ರಾಜ್ಯಗಳಿಗೂ ಪಡೆಗಳನ್ನು ರವಾನಿಸಲಾಗುತ್ತಿದೆ ಎಂದರು.

ಅಧಿಕಾರಿಗಳಿಗೆ ಕೋವಿಡ್ ಲಸಿಕೆ

ಅಧಿಕಾರಿಗಳಿಗೆ ಕೋವಿಡ್ ಲಸಿಕೆ

ಎಲ್ಲ ಮತಗಟ್ಟೆ ಅಧಿಕಾರಗಳಿಗೂ ಚುನಾವಣೆಗೂ ಮುನ್ನ ಕೋವಿಡ್ ಲಸಿಕೆಗಳನ್ನು ನೀಡಲಾಗುತ್ತದೆ. ಲಸಿಕೆ ಕಾರ್ಯಕ್ರಮವು ಸಕಾರಾತ್ಮಕ ಚುನಾವಣಾ ಪರಿಸರವನ್ನು ಸೃಷ್ಟಿಸಿದೆ. ಈ ಪ್ರಕ್ರಿಯೆಯಲ್ಲ ಜನರ ವಿಶ್ವಾಸವನ್ನು ವೃದ್ಧಿಸಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರನ್ನು ಕೂಡ ಮುಂಚೂಣಿ ಕೆಲಸಗಾರರು ಎಂದು ಗುರುತಿಸಿ ಲಸಿಕೆ ನೀಡಲಾಗುವುದು.

ರಾಜ್ಯಗಳಿಗೆ ವಿಶೇಷ, ಸಾಮಾನ್ಯ, ವೆಚ್ಚ ಮತ್ತು ಪೊಲೀಸ್ ವೀಕ್ಷಕರನ್ನು ಕಳುಹಿಸಲಾಗುವುದು. ಅವರು ಚುನಾವಣೆಗಾಗಿ ಅಭ್ಯರ್ಥಿಗಳು ಮಾಡುವ ವೆಚ್ಚ, ಅಲ್ಲಿನ ವ್ಯವಸ್ಥೆ, ಭದ್ರತೆ ಮುಂತಾದವುಗಳನ್ನು ಪರಿಶೀಲಿಸಲಿದ್ದಾರೆ. ಮತಗಟ್ಟೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಚುನಾವಣಾ ದಿನಾಂಕ ಪ್ರಕಟಿಸುತ್ತಿದ್ದಂತೆಯೇ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಅಭ್ಯರ್ಥಿಗಳ ಅಪರಾಧ ಹಿನ್ನೆಲೆಯ ಮಾಹಿತಿಗಳನ್ನು ಸ್ಥಳೀಯ ಸುದ್ದಿಪತ್ರಿಕೆ, ಚಾನೆಲ್ ಮತ್ತು ತಮ್ಮ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಬೇಕು.

English summary
the Election Commission of India announce the dates for assembly elections in West Bengal, Tamil Nadu, Kerala, Assam and Puducherry today. Here is the detailed schedule.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X