ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾತ್ಮ ಗಾಂಧಿ ಹತ್ಯೆ ತಡೆಯಬಹುದಿತ್ತೆಂದು ಕಾರಣ ಬಿಚ್ಚಿಟ್ಟ ಕಲ್ಯಾಣಮ್

|
Google Oneindia Kannada News

ಮಹಾತ್ಮ ಗಾಂಧಿಗೆ ಕಾರ್ಯದರ್ಶಿ ಆಗಿ ಕಾರ್ಯ ನಿರ್ವಹಿಸಿದ್ದ ಕಲ್ಯಾಣಮ್ ಅವರು ಗಾಂಧಿ ಹತ್ಯೆಗೆ ಕಾರಣವಾದ ಅಂಶವನ್ನು ತೆರೆದಿಟ್ಟಿದ್ದಾರೆ. "ಒಂದು ವೇಳೆ ನನಗೆ ಭದ್ರತೆ ಒದಗಿಸಿದರೆ ದೆಹಲಿ ಬಿಟ್ಟು ಹೋಗುತ್ತೇನೆ" ಎಂದು ಅಧಿಕಾರಿಗಳಿಗೆ ಗಾಂಧಿ ಹೇಳಿದ್ದಾಗಿ ಕಲ್ಯಾಣಮ್ ಮಂಗಳವಾರದಂದು ತಿಳಿಸಿದ್ದಾರೆ.

ಹತ್ಯೆಗೂ ವಾರಗಳ ಮುಂಚೆಯೇ ಜೀವಕ್ಕೆ ಬೆದರಿಕೆ ಇರುವುದಾಗಿ ಸರಕಾರದಿಂದ ಎಚ್ಚರಿಕೆ ನೀಡಲಾಗಿತ್ತು. ಆದರೂ ತಮಗೆ ಭದ್ರತೆಯ ಅಗತ್ಯ ಇಲ್ಲ ಎಂದು ಅಧಿಕಾರಿಗಳ ಬಳಿ ರಾಷ್ಟ್ರಪಿತ ಕಟ್ಟುನಿಟ್ಟಾಗಿ ಹೇಳಿಬಿಟ್ಟಿದ್ದರು ಎಂದು ಕಲ್ಯಾಣಮ್ ಹೇಳಿದ್ದಾರೆ.

ಗಾಂಧಿಹತ್ಯೆಯ ಕರಾಳ ದಿನ: ನೆನಪಿರಲಿ ಆ ದುರಂತದ 5 ಸಂಗತಿಗಾಂಧಿಹತ್ಯೆಯ ಕರಾಳ ದಿನ: ನೆನಪಿರಲಿ ಆ ದುರಂತದ 5 ಸಂಗತಿ

ಪಿಟಿಐ ಸುದ್ದಿ ಸಂಸ್ಥೆ ಜತೆಗೆ ಮಾತನಾಡಿದ ಕಲ್ಯಾಣಮ್, ಒಂದು ವೇಳೆ ಭದ್ರತೆಗೆ ಗಾಂಧೀಜಿ ಒಪ್ಪಿಕೊಂಡಿದ್ದರೆ ಅವರ ಸುತ್ತ ಮಾನವ ಕೋಟೆ ಇರುತ್ತಿತ್ತು ಮತ್ತು ಗಾಂಧಿ ಹತ್ಯೆ ಆಗುತ್ತಿರಲಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Assassination could’ve been prevented, said Mahatma Gandhi’s secretary Kalyanam

1943ರಲ್ಲಿ ಮಹಾತ್ಮ ಗಾಂಧಿ ಕಾರ್ಯದರ್ಶಿಯಾಗಿ ಸೇರಿಕೊಂಡಿದ್ದ ಕಲ್ಯಾಣಮ್ ಅವರು ಜನವರಿ 30, 1948ರಂದು ಗಾಂಧಿ ಹತ್ಯೆ ಅಗುವ ತನಕ ಜತೆಗೆ ಇದ್ದರು. 1948ರ ಜನವರಿ 30ರಂದು ಗಾಂಧಿ ಹತ್ಯೆಯಾದ ದಿನದಂದು ಪ್ರತಿ ವರ್ಷ ಹುತಾತ್ಮ ದಿನ ಆಚರಿಸಿಕೊಂಡು ಬರಲಾಗುತ್ತಿದೆ.

English summary
Kalyanam, who was secretary to the Mahatma Gandhi said that Mahatma Gandhi had told authorities that he would leave Delhi if protection was given to him. The father of the nation told the authorities that he does not want security even though there were warnings to him from the government several weeks ahead of his assassination that he faced threat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X