• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಹುಲ್ ಗಾಂಧಿಗೆ ಕಿಸ್ ಕೊಟ್ಟಿದ್ದ ಮಹಿಳೆಯ ಭೀಕರ ಹತ್ಯೆ

By Srinath
|

ಜೊರ್ಹಾತ್ (ಗುವಾಹಟಿ), ಮಾರ್ಚ್ 1- ಇನ್ನೂ ಲೋಕಸಭಾ ಚುನಾವಣೆಗೆ ಅಧಿಸೂಚನೆಯೇ ಪ್ರಕಟವಾಗಿಲ್ಲ. ಅದಾಗಲೆ ರಾಜಕೀಯ ಪಕ್ಷಗಳು ನ ಭೂತೋ ಎಂಬಂತೆ ತೀವ್ರ ಪ್ರಚಾರದಲ್ಲಿ ತೊಡಗಿವೆ. ಹೀಗಿರುವಾಗಲೇ ಚುನಾವಣಾ ಪ್ರವಾರವು ತನ್ನ ಮೊದಲ ಬಲಿಯನ್ನು ತೆಗೆದುಕೊಂಡಿದೆ.

ಬುಧವಾರ ಗೌಹಾಟಿಯ ಜೊರ್ಹಾತ್ (जोरहाट) ನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರಚಾರ ವೇಳೆ ಕೆಲ ಮಹಿಳೆಯರು ರಾಹುಲ್ ಗಾಂಧಿ ಕೆನ್ನೆಯ ಮೇಲೆ ಮುತ್ತಿನ ಮಳೆ ಸುರಿಸಿದ್ದರು. ಆದರೆ ಆ ಪೈಕಿ ಒಬ್ಬ ಮಹಿಳೆಯನ್ನು ಇಂದು ಬೆಳಗ್ಗೆ ಆಕೆಯ ಪತಿರಾಯ ಬೆಂಕಿ ಹಚ್ಚಿ ಸಾಯಿಸಿದ್ದಾನೆ. ತದನಂತರ ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಮಹಿಳೆಯು ಪರಪುರುಷನಿಗೆ ಅದೂ ಸಾರ್ವಜನಿಕವಾಗಿ ಚುಂಬಿಸಿದ್ದೇ ಈ ಕುಕೃತ್ಯಕ್ಕೆ ಕಾರಣವಾ? ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲವಾದರೂ ಸಾಂದರ್ಭಿಕ ಸಾಕ್ಷ್ಯ ನೋಡಿದರೆ ಕಿಸ್ ಕೊಟ್ಟಿದ್ದೇ ಮಹಿಳೆಯನ್ನು ಸಾವಿನ ಮನೆಗೆ ದೂಡಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಲೋಕಸಭಾ ಚುನಾವಣೆ ಪ್ರಚಾರದ ಅಬ್ಬರದಲ್ಲಿ ತೊಡಗಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಇದು ಇರುಸುಮುರುಸು ತರುವಂತಹ ಸಂಗತಿಯಾಗಿದೆ.

ಮಹಿಳೆಯರು ರಾಹುಲ್ ಗಾಂಧಿಯನ್ನು ಮುತ್ತಿಕ್ಕುವ ದೃಶ್ಯಗಳು ಟಿವಿಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿತ್ತು. ಆದರೆ ರಾಹುಲ್ ಗಾಂಧಿ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಅದೊಂದು ಅತ್ಯುತ್ಸಾಹದ ವರ್ತನೆಯಷ್ಟೇ ಎಂದಿದ್ದರು. ಆದರೆ ಮಹಿಳೆಯ ಪತಿರಾಯ ಇದನ್ನು ಗಂಭೀರವಾಗಿ ಪರಿಗಣಿಸಿ ಇದೀಗ ಅನಾಹುತ ಮಾಡಿದ್ದಾನೆ.

ಮಹಿಳಾ ಸಶಕ್ತೀಕರಣ ಸಮಾವೇಶದಲ್ಲಿ... ಅಂದು ಸುಮಾರು 600 ಮಹಿಳೆಯರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಅವರ ಪೈಕಿ ಕೆಲವರು ಬಿಗಿ ಭದ್ರತೆಯನ್ನು ಬೇಧಿಸಿ, ರಾಹುಲ್ ಬಳಿ ಸಾಗಿಬಂದು ರಾಹುಲ್ ಗಾಂಧಿಯನ್ನು ಒಂದೇ ಸಮನೆ ಮುದ್ದುಮಾಡಿದ್ದರು. ಮೃತ ಮಹಿಳೆಯ ಹೆಸರು ಬೊಂತಿ (Bonti) ಎಂದು ತಿಳಿದುಬಂದಿದೆ. ಈಕೆ ಸ್ಥಳೀಯ ವಾರ್ಡೊಂದರ ಕಾಂಗ್ರೆಸ್ ಸದಸ್ಯೆಯಾಗಿದ್ದರು.

'ಮಹಿಳೆಯರನ್ನು ರಾಜಕೀಯದ ಮುಖ್ಯವಾಹಿನಿಗೆ ತರಬೇಕು. ಅವರನ್ನು ಸಬಲೀಕರಣಗೊಳಿಸಬೇಕು. ಅವರಿಗೆ ಎಲ್ಲ ಕ್ಷೇತ್ರಗಳಲ್ಲೂ ಅರ್ಹ ಸ್ಥಾನಗಳನ್ನು ನೀಡಬೇಕು. ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಮೊದಲು ನಮ್ಮ ಸಮಾಜದಲ್ಲಿ ಪರಿವರ್ತನೆ ಕಾಣಬೇಕು. ಹೆಣ್ಣನ್ನು ಉನ್ನತ ಸ್ಥಾನದಲ್ಲಿ ನೋಡಬೇಕು' ಎಂದು ಬುಧವಾರ ಈ ಮಹಿಳೆಯರನ್ನುದ್ದೇಶಿಸಿ ರಾಹುಲ್ ಹೇಳಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lok Sabha polls 2014- Congress Vice-President Rahul Gandhi had been to Jorhat (Assam) on Feb 26. Rahul Gandhi was planted a kiss by a woman (Bonti) during the rally. But today motning that woman was burnt to death by her husband. Later on he also tried to commit suicide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more