ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್‌ನಲ್ಲಿ ಕೆಲಸ ಕಳೆದುಕೊಂಡ ವಲಸೆ ಕಾರ್ಮಿಕ ಆತ್ಮಹತ್ಯೆ

|
Google Oneindia Kannada News

ಸೂರತ್, ಮೇ 20: ಕೊರೊನಾ ವೈರಸ್‌ ಲಾಕ್‌ಡೌನ್‌ನಿಂದ ಅನೇಕ ವಲಸೆ ಕಾರ್ಮಿಕರು ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಈ ರೀತಿ ಅಸ್ಸಾಂನ ಸುನೀಲ್ ಎಂಬ ಯುವಕ ಸಹ ಕೆಲಸ ಕಳೆದುಕೊಂಡಿದ್ದು, ಅದೇ ನೋವಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

20 ವರ್ಷದ ಸುನೀಲ್ ಮೂಲತಃ ಅಸ್ಸಾಂನವರು. ಗುಜರಾತ್‌ನ ಸೂರತ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಕೊರೊನಾ ಲಾಕ್‌ಡೌನ್‌ನಿಂದ ಕೆಲಸ ಕಳೆದುಕೊಂಡ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಬಗ್ಗೆ ಪೊಲೀಸ್ ಅಧಿಕಾರಿ ಡಿಕೆ ಪಟೇಲ್ ಮಾಹಿತಿ ನೀಡಿದ್ದಾರೆ.

 ರಾಮನಗರ; ಸೆಲ್ಫೀ ವಿಡಿಯೋ ಮಾಡಿ ಮಗಳೊಂದಿಗೆ ನೇಣಿಗೆ ಶರಣಾದ ತಂದೆ ರಾಮನಗರ; ಸೆಲ್ಫೀ ವಿಡಿಯೋ ಮಾಡಿ ಮಗಳೊಂದಿಗೆ ನೇಣಿಗೆ ಶರಣಾದ ತಂದೆ

ಸುನೀಲ್ ತಮ್ಮ ರಾಜ್ಯದ ಕಾರ್ಮಿಕರ ಜೊತೆಗೆ ಕೆಲಸ ಮಾಡುತ್ತಿದ್ದು, ಅವರ ಜೊತೆಗೆಯೇ ವಾಸ ಮಾಡುತ್ತಿದ್ದರು. ಲಾಕ್‌ಡೌನ್ ಘೋಷಣೆಯಾದ ಸಮಯದಲ್ಲಿ ಎಲ್ಲರೂ ತಮ್ಮ ತಮ್ಮ ಊರಿಗೆ ಪ್ರಯಾಣ ಬೆಳೆಸಿದರು. ಆದರೆ, ಸುನೀಲ್ ಮಾತ್ರ ಅಲ್ಲಿಯೇ ಉಳಿಸಿಕೊಂಡಿದ್ದ.

Assam Migrant Worker Commits Suicide In Surat

ಕೆಲಸ ಕಳೆದುಕೊಂಡ ವಲಸೆ ಕಾರ್ಮಿಕ ಸುನೀಲ್, ಕೆಲಸವೂ ಇಲ್ಲದೆ, ಊರಿಗೆ ಹೋಗಲೂ ಆಗದೆ, ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಕೊರೊನಾ ಲಾಕ್‌ಡೌನ್‌ನಿಂದ ಲಕ್ಷಾಂತರ ಕಾರ್ಮಿಕರ ಪರಿಸ್ಥಿತಿ ಸಂಕಷ್ಟಕ್ಕೆ ಸಿಲುಕಿದೆ. ಕಾರ್ಮಿಕರು ಊರಿಗೆ ಹೋಗುವ ದಾರಿಯಲ್ಲಿ ಸಾವನಪ್ಪಿದ ಘಟನೆಗಳು ಕೂಡ ನಡೆದಿದೆ.

English summary
20 years old Assam migrant worker commits suicide In Surat over job loss.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X