ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ ಮಂಡನೆಯಲ್ಲಿ ಇತಿಹಾಸ ನಿರ್ಮಿಸಿದ ಅಸ್ಸಾಂ

By Sachhidananda Acharya
|
Google Oneindia Kannada News

ಗುವಾಹಟಿ, ಮಾರ್ಚ್ 12: ಅಸ್ಸಾಂ ಸರಕಾರ ಇ-ಬಜೆಟ್ ಮಂಡನೆ ಮಾಡುವ ವಿಶಿಷ್ಟ ದಾಖಲೆ ನಿರ್ಮಿಸಿದೆ.

ಶಾಸಕರಿಗೆ ಟ್ಯಾಬ್ಲೆಟ್ ಗಳನ್ನು ನೀಡಿ ದೇಶದಲ್ಲಿ ಇದೇ ಮೊದಲ ಬಾರಿಗೆ ವಿಶಿಷ್ಟ ಡಿಜಿಟಲ್ ಬಜೆಟ್ ನ್ನು ಇಂದು ಅಸ್ಸಾಂನಲ್ಲಿ ಮಂಡಿಸಲಾಯಿತು. ಹಣಕಾಸು ಸಚಿವ ಹಿಮಂತ ಬಿಸ್ವಾ ಶರ್ಮಾ ಬಜೆಟ್ ಮಂಡಿಸಿದರು. ಈ ಬಜೆಟ್ ನ್ನು ಸಾರ್ವಜನಿಕರ ಪಾಲ್ಗೊಳ್ಳುವಿಕೆ ಮೂಲಕ ರಚಿಸಲಾಗಿರುವುದು ಇನ್ನೊಂದು ವಿಶೇಷ.

ಪ್ರತಿ ಶಾಸಕರಿಗೂ ಬಜೆಟ್ ಪ್ರತಿ ಇರುವ ಟ್ಯಾಬ್ಲೆಟ್ ನೀಡಲಾಯಿತು. ಇಲ್ಲಿಯವರೆಗೆ ಉಳಿದ ರಾಜ್ಯಗಳಲ್ಲಿ ಬಜೆಟ್ ಪ್ರತಿಗಳನ್ನು ನೀಡಲಾಗುತ್ತಿತ್ತು. ಆದರೆ ಇಲ್ಲಿ ಟ್ಯಾಬ್ಲೆಟ್ ಗಳನ್ನು ನೀಡುವ ಮೂಲಕ ಡಿಜಿಟಲ್ ಬಜೆಟ್ ಮಂಡನೆ ಮಾಡಲಾಯಿತು.

Assam Govt Live Streams Its First e-Budget

ಇನ್ನು ಬಜೆಟ್ ವರದಿಗಾರಿಕೆಗೆ ಬಂದ ಮಾಧ್ಯಮ ಪ್ರತಿನಿಧಿಗಳಿಗೆ ಬಜೆಟ್ ಪ್ರತಿ ಇರುವ 8ಜಿಬಿಗಳ ಪೆನ್ ಡ್ರೈವ್ ನೀಡಲಾಯಿತು. ಇದಲ್ಲದೆ ಪೂರ್ಣ ಪ್ರಮಾಣದ ಬಜೆಟ್ ನ್ನು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಅಪ್ಲೋಡ್ ಕೂಡ ಮಾಡಲಾಗಿತ್ತು.

ಇದಲ್ಲದೆ ಬಜೆಟ್ ಮಂಡನೆಯನ್ನು ಫೇಸ್ಬುಕ್ ಮತ್ತು ಟ್ಟಿಟ್ಟರ್ ನಲ್ಲಿ ಲೈವ್ ಪ್ರಸಾರವನ್ನೂ ಮಾಡಲಾಗಿತ್ತು. ಒಂದೊಮ್ಮೆ ಪ್ರಯಾಣದಲ್ಲಿದ್ದವರು ನೇರ ಪ್ರಸಾರವನ್ನು ತಪ್ಪಿಸಿಕೊಂಡಿದ್ದರೆ ಅವರಿಗಾಗಿ ಬಜೆಟ್ ಮಂಡನೆಯನ್ನು ಗೂಗಲ್ ಆ್ಯಪ್ ನಲ್ಲಿ ಅಪ್ಲೋಡ್ ಕೂಡ ಮಾಡಲಾಗಿದೆ.

ಈ ಹಿಂದೆ ಆಂಧ್ರ ಪ್ರದೇಶ ಕೂಡ ಇ-ಬಜೆಟ್ ಮಂಡಿಸಿತ್ತು. ಆದರೆ ಇದು ಶಾಸಕರಿಗೆ ಮಾತ್ರ ಸೀಮಿತವಾಗಿತ್ತು. ಉಳಿದವರಿಗೆ ಈ ಸೌಲಭ್ಯ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಪೂರ್ಣ ಪ್ರಮಾಣದ ಇ-ಬಜೆಟ್ ನ್ನು ಅಸ್ಸಾಂನಲ್ಲಿ ಮಂಡಿಸಲಾಯಿತು.

English summary
In a first for Assam, the state presented a unique digital budget on Monday with tablets available in the Assembly for legislators.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X