ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಂನಲ್ಲಿ ಮಳೆಗೆ 54 ಸಾವು- ಬೆಂಗಳೂರಿಗೆ ಮುಂಗಾರು- ದೆಹಲಿಯಲ್ಲಿ ಮಳೆ

|
Google Oneindia Kannada News

ನವದೆಹಲಿ/ಬೆಂಗಳೂರು, ಜೂನ್ 18: ದೇಶದಲ್ಲಿ ಹಲವೆಡೆ ವರುಣನ ಅರ್ಭಟ ಶುರುವಾಗಿದೆ. ಅದರಲ್ಲೂ ಅಸ್ಸಾಂನಲ್ಲಿ ಮಳೆಯಿಂದಾಗಿ ಹಲವಾರು ಪ್ರದೇಶಗಳು ಮುಳುಗಡೆಯಾಗಿರುವುದು ವರದಿಯಾಗಿದೆ. ಇದರೊಂದಿಗೆ ಕರ್ನಾಟಕದಲ್ಲಿ ಮಳೆ ಮುಂಗಾರು ಪ್ರವೇಶವಾಗಿದ್ದು, ಈ ತಿಂಗಳು ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಜೊತೆಗೆ ಎರಡು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ದೆಹಲಿ ಕೊಂಚ ತಣ್ಣಗಾಗಿದೆ. ಹಾಗಾದ್ರೆ ಈ ಮೂರು ರಾಜ್ಯಗಳಲ್ಲಿ ಹವಾಮಾನ ಹೇಗಿದೆ ತಿಳಿಯೋಣ.

ಅಲ್ಪಾವಧಿಯ ವಿರಾಮದ ನಂತರ ಬೆಂಗಳೂರಿನಲ್ಲಿ ಸತತ ಎರಡನೇ ದಿನಕ್ಕೆ ಮಂಗಾರು ಮಳೆ ಮುಂದುವರೆದಿದೆ. ಇದರಿಂದ ಈ ಜೂನ್ ಬೆಂಗಳೂರಿನಲ್ಲಿ ವರುಣನ ಅರ್ಭಟ ಮುಂದುವರೆಯಿಲಿದೆ. ಬೆಂಗಳೂರಿನ ಪೂರ್ವ, ಪಶ್ಚಿಮ, ಮಧ್ಯ ಮತ್ತು ಉತ್ತರ ಭಾಗದ ಹಲವು ಭಾಗಗಳಲ್ಲಿ ಶುಕ್ರವಾರ ರಾತ್ರಿ ಸಾಧಾರಣದಿಂದ ಭಾರೀ ಮಳೆಯಾಗಿದೆ. ಬಿಬಿಎಂಪಿ ನಿಯಂತ್ರಣ ಕೊಠಡಿಯ ಪ್ರಕಾರ ಯಾವುದೇ ಮಳೆ ಸಂಬಂಧಿತ ದೂರುಗಳು ಬಂದಿಲ್ಲ.

ಭಾರತೀಯ ಹವಾಮಾನ ಇಲಾಖೆ (IMD) ದತ್ತಾಂಶವು ಶುಕ್ರವಾರ ಬೆಳಗ್ಗೆ 8.30 ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ನಗರದಲ್ಲಿ 38.9 ಮಿಮೀ ಮಳೆಯಾಗಿದೆ ಎಂದು ತೋರಿಸಿದೆ. ಜೂನ್ 1 ರಿಂದ ನಗರದಲ್ಲಿ 139 ಮಿಮೀ ಮಳೆಯಾಗಿದೆ. ಇದು ವಾಡಿಕೆಗಿಂತ 74 ಮಿಮೀ ಹೆಚ್ಚು. ಶುಕ್ರವಾರ ರಾತ್ರಿಯ ಮಳೆಯು 1996ರ ಜೂನ್ ಮಳೆಯನ್ನು ಮಾತ್ರ ನೆನಪಿಸುತ್ತದೆ. 1996 ರಲ್ಲಿ 228.2 ಮಿಮೀ ಮಳೆಯಾದಾಗ ಬೆಂಗಳೂರಿನಲ್ಲಿ ಈ ಪ್ರಮಾಣದ ಮಳೆಯಾಗಿತ್ತು.

ಚಾರ್‌ಧಾಮ್‌ಗೆ ಹೊರಡುವ ಮೊದಲು ಹವಾಮಾನ ತಿಳಿಯಿರಿಚಾರ್‌ಧಾಮ್‌ಗೆ ಹೊರಡುವ ಮೊದಲು ಹವಾಮಾನ ತಿಳಿಯಿರಿ

ಇನ್ನೂ ಶಾಖದ ಅಲೆಯಿಂದ ಹೈರಾಣಾಗಿದ್ದ ದೆಹಲಿ ಮೇಲೆ ವರುಣನ ಮುನಿಸು ಕಡಿಮೆಯಾದಂತೆ ತೋರುತ್ತಿದೆ. ಹೀಗಾಗಿ ಕಳೆದೆರಡು ದಿನಗಳಿಂದ ರಾಷ್ಟ್ರ ರಾಜಧಾನಿಗೆ ಮಳೆರಾಯ ತಂಪೆರೆಯುತ್ತಿದ್ದಾನೆ. ಶುಕ್ರವಾರ ಮುಂಜಾನೆ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಧಾರಣ ತೀವ್ರತೆಯ ಮಳೆಯೊಂದಿಗೆ ಗುಡುಗು ಸಹಿತ ಮಳೆಯಾಗಿದೆ. ಇದು ಮುಂದಿನ 24 ಗಂಟೆಗಳ ಕಾಲ ಮುಂದುವರಿಯುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.

ಸಾವಿನ ಸಂಖ್ಯೆ 54 ಕ್ಕೆ ಏರಿಕೆ

ಅಸ್ಸಾಂ ಪ್ರವಾಹ: ಹಲವು ದಿನಗಳಿಂದ ಅಸ್ಸಾಂನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ಮತ್ತು ಪ್ರವಾಹ ಅನಾಹುತವನ್ನುಂಟು ಮಾಡುತ್ತಿದೆ. ಶುಕ್ರವಾರ ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ಪ್ರಕಾರ, ಪ್ರವಾಹದಿಂದಾಗಿ ಅಸ್ಸಾಂನಲ್ಲಿ ಇನ್ನೂ ಒಂಬತ್ತು ಜನರು ಸಾವನ್ನಪ್ಪಿದ್ದು, ಒಟ್ಟಾರೆ ಸಾವಿನ ಸಂಖ್ಯೆ 54ಕ್ಕೆ ತಲುಪಿದೆ. ಭಾರತೀಯ ಸೇನೆಯ ಗಜರಾಜ್ ಕಾರ್ಪ್ಸ್ ರಾಜ್ಯದಲ್ಲಿ ನಾಗರಿಕ ಆಡಳಿತದೊಂದಿಗೆ ಪ್ರವಾಹ-ಪರಿಹಾರ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಗಿದೆ.

ದೇಶದಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳ ನಡುವೆ ಪೈಪೋಟಿ!ದೇಶದಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳ ನಡುವೆ ಪೈಪೋಟಿ!

28 ಜಿಲ್ಲೆಗಳಲ್ಲಿ 18.94 ಲಕ್ಷ ಜನರ ಮೇಲೆ ಪ್ರಭಾವ

ಇತ್ತೀಚಿನ ಬೆಳವಣಿಗೆಯಲ್ಲಿ, ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ಶನಿವಾರ ಪ್ರಧಾನಿ ಮೋದಿ ಅವರನ್ನು ಸಂಪರ್ಕಿಸಿದ್ದಾರೆ ಮತ್ತು ಕೇಂದ್ರದಿಂದ ಸಹಾಯದ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ. 28 ಜಿಲ್ಲೆಗಳಲ್ಲಿ 18.94 ಲಕ್ಷ ಜನರು ಪ್ರವಾಹ ಪರಿಸ್ಥಿತಿಯಿಂದ ಸಂತ್ರಸ್ತರಾಗಿದ್ದಾರೆ. ಅಸ್ಸಾಂನ ಹೋಜೈ, ನಲ್ಬರಿ, ಬಜಾಲಿ, ಧುಬ್ರಿ, ಕಾಮ್ರೂಪ್, ಕೊಕ್ರಜಾರ್ ಮತ್ತು ಸೋನಿತ್‌ಪುರ ಜಿಲ್ಲೆಗಳಲ್ಲಿ ಸಾವುಗಳು ವರದಿಯಾಗಿವೆ.

ರಾಜ್ಯದಲ್ಲಿ ಈ ವರ್ಷ ಇದುವರೆಗೆ ಪ್ರವಾಹ ಮತ್ತು ಭೂಕುಸಿತದಿಂದ 54 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದ ಅಂಕಿಅಂಶಗಳ ಪ್ರಕಾರ, 96 ಕಂದಾಯ ವೃತ್ತಗಳ ಅಡಿಯಲ್ಲಿ 2,930 ಗ್ರಾಮಗಳು ಪ್ರಸ್ತುತ ನೀರಿನಲ್ಲಿವೆ. ಪ್ರವಾಹದ ನೀರು ಹೊಸ ಪ್ರದೇಶಗಳನ್ನು ಪ್ರವೇಶಿಸಿದ ನಂತರ ಅಸ್ಸಾಂನ ಕಮ್ರೂಪ್ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಹದಗೆಟ್ಟಿದೆ. ಈ ಪ್ರದೇಶದಲ್ಲಿ 70,000 ಕ್ಕೂ ಹೆಚ್ಚು ಜನರ ಮೇಲೆ ಪ್ರವಾಹ ಪರಿಣಾಮ ಬೀರಿದೆ. ನಿರಂತರ ಮಳೆಯಿಂದ ಬೊರೊಲಿಯಾ ನದಿ ಮತ್ತು ಜಿಲ್ಲೆಯ ಇತರ ಪ್ರಮುಖ ನದಿಗಳ ನೀರಿನ ಮಟ್ಟ ಏರುತ್ತಿದೆ.

ಎಲ್ಲೆಲ್ಲಿ ಮಳೆಯಾಗುವ ಸಾಧ್ಯತೆ

ಎಲ್ಲೆಲ್ಲಿ ಮಳೆಯಾಗುವ ಸಾಧ್ಯತೆ

ಇಂದು ಪ್ರಾದೇಶಿಕ ಹವಾಮಾನ ಮುನ್ಸೂಚನೆ ಕೇಂದ್ರ (RWFC) ನವದೆಹಲಿಯ ಪ್ರಕಾರ, "ಇಡೀ ದೆಹಲಿ ಮತ್ತು NCR (ಲೋನಿ ದೇಹತ್, ಹಿಂಡನ್ ಎಎಫ್ ಸ್ಟೇಷನ್, ಬಹದ್ದೂರ್ಗಢ್, ಘಾಜಿಯಾಬಾದ್, ಇಂದಿರಾಪುರಂ, ಛಪ್ರೌಲಾ) ದ ಅನೇಕ ಸ್ಥಳಗಳಲ್ಲಿ ಮತ್ತು ಪಕ್ಕದ ಪ್ರದೇಶಗಳಲ್ಲಿ ಸಾಧಾರಣ ತೀವ್ರತೆಯ ಮಳೆಯೊಂದಿಗೆ ಗುಡುಗು ಸಹಿತ ಮಳೆಯಾಗುತ್ತದೆ.

ಯಮುನಾನಗರ, ಕುರುಕ್ಷೇತ್ರ, ಕರ್ನಾಲ್, ಅಸ್ಸಂದ್, ಸಫಿಡಾನ್, ಜಿಂದ್, ಪಾಣಿಪತ್, ಗೊಹಾನಾ, ಗನ್ನೌರ್, ಮೆಹಮ್, ಸೋನಿಪತ್, ರೋಹ್ಟಕ್, ಖಾರ್ಖೋಡಾ, ಭಿವಾನಿ, ಚರ್ಖಿ ದಾದ್ರಿ, ಮಟ್ಟಾನ್, ಯಮುನಾನಗರ, ಕುರುಕ್ಷೇತ್ರ, ಜಿಂದ್, ಪಾಣಿಪತ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಸಹಿತ ಗುಡುಗು ಸಹಿತ ಮಳೆಯಾಗಬಹುದು.

ಝಜ್ಜರ್, ಫರುಖ್‌ನಗರ, ಕೊಸಾಲಿ, ಸೊಹಾನಾ, ರೇವಾರಿ, ಪಲ್ವಾಲ್, ಬವಾಲ್, ನುಹ್, ಔರಂಗಾಬಾದ್, ಹೊಡಾಲ್ (ಹರಿಯಾಣ) ಸಹರಾನ್‌ಪುರ್, ಗಂಗೋಹ್, ದಿಯೋಬಂದ್, ನಾಜಿಬಾಬಾದ್, ಶಾಮ್ಲಿ, ಮುಜಾಫರ್‌ನಗರ, ಕಂಧ್ಲಾ, ಬಿಜ್ನೌರ್, ಖತೌಲಿ, ಸಕೋಟಿ ತಾಂಡಾ, ಹಸ್ತಿನಾಪುರ, ಚಂದಾ ದಪುರುತ್ , ಬಾಗ್ಪತ್, ಮೀರತ್, ಖೇಕ್ರಾ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ.

ಮಳೆಗಾಲದಲ್ಲಿ ರಸ್ತೆಗಳ ಸ್ಥಿತಿಗತಿಗಳು

ಮಳೆಗಾಲದಲ್ಲಿ ರಸ್ತೆಗಳ ಸ್ಥಿತಿಗತಿಗಳು

ಒಂದು ವಾರದ ಹಿಂದೆ, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಳೆಗಾಲದಲ್ಲಿ ರಸ್ತೆಗಳು ಮತ್ತು ಫುಟ್‌ಪಾತ್‌ಗಳಲ್ಲಿ ಜಲಾವೃತವಾಗುವುದನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು, ಅವರು ಹೇಳಿಕೆಯಂತೆ ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ ಎಂದು ದೆಹಲಿಗರು ಹೇಳಿಕೊಂಡಿದ್ದಾರೆ.

ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿದ್ದ ಉನ್ನತ ಮಟ್ಟದ ಸಭೆಯಲ್ಲಿ, ಸಕ್ಸೇನಾ ಮತ್ತು ಕೇಜ್ರಿವಾಲ್ ಅವರು ಜಲಾವೃತ ಮತ್ತು ಪ್ರವಾಹಕ್ಕೆ ಒಳಗಾಗುವ ಸ್ಥಳಗಳಲ್ಲಿ ಬಿಟುಮೆನ್ ಬದಲಿಗೆ ಕಾಂಕ್ರೀಟ್ ಸಿಮೆಂಟ್ ರಸ್ತೆಗಳನ್ನು ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಎಲ್ಜಿ ಕಚೇರಿ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

Recommended Video

777 ಚಾರ್ಲಿ ಚಿತ್ರವನ್ನ ಗುಟ್ಟಾಗಿ ನೋಡಿದ್ರಾ ರಶ್ಮಿಕಾ? ಈ ವಿಡಿಯೋನ ಸಾಕ್ಷಿ!!! | *Entertainment | OneIndia

English summary
Rain has started in many parts of the country. Several areas have been reported to have been inundated due to rains in Assam. With this, rainfall in Karnataka is entering the monsoon and heavy rains are expected this month. Plus, Delhi has been chilling due to two days of rain. So let's consider the three states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X