ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಂ ಪ್ರವಾಹ: ಸಾವಿನ ಸಂಖ್ಯೆ 16ಕ್ಕೆ ಏರಿಕೆ

|
Google Oneindia Kannada News

ಗುವಾಹಟಿ, ಜೂನ್ 27: ಮಾನ್ಸೂನ್ ಅಸ್ಸಾಂನಲ್ಲಿ ಭಾರೀ ಪ್ರಭಾವ ಬೀರಿದ ಬಳಿಕ, ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು ಮತ್ತು ಇದರಿಂದಾಗಿ ರಾಜ್ಯವು ಪ್ರವಾಹಕ್ಕೆ ಸಿಲುಕಿದೆ. ಅಸ್ಸಾಂನ 16 ಜಿಲ್ಲೆಗಳ 704 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿವೆ. ಈಗಾಗಲೇ 16 ಜನರು ಸಾವನ್ನಪ್ಪಿದ್ದು, 2.5 ಲಕ್ಷ ಜನರು ತೊಂದರೆಗೊಳಗಾಗಿದ್ದಾರೆ.

Recommended Video

ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು. | Andhra Pradesh | Oneindia Kannada

ಬ್ರಹ್ಮಪುತ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಎಲ್ಲಾ ಜೆಲ್ಲೆಗಳ ಜೆಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಮತ್ತೆ ಲಾಕ್‌ಡೌನ್‌ ಮೊರೆ ಹೋದ ಅಸ್ಸಾಂ ಸರ್ಕಾರಮತ್ತೆ ಲಾಕ್‌ಡೌನ್‌ ಮೊರೆ ಹೋದ ಅಸ್ಸಾಂ ಸರ್ಕಾರ

ರಾಜ್ಯದಲ್ಲಿ ಧೆಮಾಜಿ ಹೆಚ್ಚು ಬಾಧಿತ ಜಿಲ್ಲೆಯಾಗಿದ್ದು, ಇದರ ನಂತರ ಟಿನ್ಸುಕಿಯಾ, ಮಜುಲಿ ಮತ್ತು ದಿಬ್ರುಗಢ್ ಕೂಡ ಪ್ರವಾಹದ ಪರಿಣಾಮ ಎದುರಿಸುತ್ತಿವೆ.

Assam Floods:Death Count Rises To 16

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ದೈನಂದಿನ ಪ್ರವಾಹ ವರದಿಯ ಪ್ರಕಾರ, ದಿಬ್ರುಗಢಲ್ಲಿನ ಪ್ರವಾಹವು ಇನ್ನೊಬ್ಬ ವ್ಯಕ್ತಿಯನ್ನು ಬಲಿ ತೆಗೆದುಕೊಂಡಿದೆ.

ಬ್ರಹ್ಮಪುತ್ರ ನದಿ ಮತ್ತು ಅದರ ಉಪನದಿಗಳು ಅನೇಕ ಸ್ಥಳಗಳಲ್ಲಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ ಮತ್ತು ಈ ಕಾರಣದಿಂದಾಗಿ ಧೆಮಾಜಿ, ಲಖಿಂಪುರ್, ಬಿಸ್ವಾನಾಥ್, ಉದಲ್ಗುರಿ, ದಾರಂಗ್, ಬಕ್ಸಾ, ಕೊಕ್ರಜಾರ್, ಬಾರ್ಪೇಟಾ, ನಾಗಾನ್, ಗೋಲಘಾಟ್, ಜೋರ್ಹತ್, ಮಜುಲಿ, ಶಿವಸಾಗರ ದಿಬ್ರುಗಢ ಮತ್ತು ಟಿನ್ಸುಕಿಯಾ ಜಿಲ್ಲೆಗಳು ಪ್ರವಾಹದಿಂದ ಪ್ರಭಾವಿತವಾಗಿವೆ ಎಂದು ತಿಳಿದುಬಂದಿದೆ.

ಆರು ಜಿಲ್ಲೆಗಳಲ್ಲಿ 142 ಪರಿಹಾರ ಶಿಬಿರಗಳು ಮತ್ತು ವಿತರಣಾ ಕೇಂದ್ರಗಳನ್ನು ಸ್ಥಾಪಿಸಿವೆ. ಅಲ್ಲಿ 18,000ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ ಎಂದು ಎಎಸ್‌ಡಿಎಂಎ ತಿಳಿಸಿದೆ.

ಮೊರಿಗಾಂವ್‌ನ ವರದಿಯ ಪ್ರಕಾರ ಪೊಬಿಟೋರಾ ವನ್ಯಜೀವಿ ಅಭಯಾರಣ್ಯದ 80 ಪರ್ಸೆಂಟ್‌ರಷ್ಟು ಪ್ರದೇಶವು ಮುಳುಗಿದೆ, ಒಂದು ಕೊಂಬಿನ ಭಾರತೀಯ ಘೇಂಡಾಮೃಗ ಸೇರಿದಂತೆ ಕಾಡು ಪ್ರಾಣಿಗಳನ್ನು ಹತ್ತಿರದ ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಲು ಒತ್ತಾಯಿಸಿದೆ.

English summary
Assam Flood Water entered 16 districts of Assam on Friday, affecting over 2.53 lakh people, while the death count due to the deluge rose to 16.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X