ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ಸಾಂ: ಕಡಿಮೆ ವಯಸ್ಸಿನ ಹುಡುಗಿಯರನ್ನು ಮದುವೆಯಾಗುವ ಪುರುಷರ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ಕೇಸ್

|
Google Oneindia Kannada News

ಅಸ್ಸಾಂ ಸರ್ಕಾರ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರನ್ನು ಮದುವೆಯಾಗುವ ಪುರುಷರ ವಿರುದ್ಧ ಪೋಕ್ಸೊ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ರಾಜ್ಯದಲ್ಲಿ ಬಾಲ್ಯ ವಿವಾಹದ ವಿರುದ್ಧ ಬೃಹತ್ ಶಿಸ್ತುಕ್ರಮವನ್ನು ಪ್ರಾರಂಭಿಸಿದೆ. 14 ರಿಂದ 18 ವರ್ಷದೊಳಗಿನ ಬಾಲಕಿಯರನ್ನು ಮದುವೆಯಾಗುವ ಪುರುಷರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದು.

ರಾಜ್ಯ ಸಚಿವ ಸಂಪುಟ ಬಾಲ್ಯ ವಿವಾಹದ ವಿರುದ್ಧ ರಾಜ್ಯಾದ್ಯಂತ ಬೃಹತ್ ಅಭಿಯಾನವನ್ನು ಪ್ರಾರಂಭಿಸಲು ನಿರ್ಧರಿಸಿದೆ ಎಂದು ಘೋಷಿಸಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರನ್ನು ಮದುವೆಯಾಗುವ ಪುರುಷರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೆ ತಮ್ಮ ಗ್ರಾಮಗಳಲ್ಲಿ ನಡೆಯುವ ಬಾಲ್ಯ ವಿವಾಹ ಘಟನೆಗಳ ವಿರುದ್ಧ ಎಫ್‌ಐಆರ್ ದಾಖಲಿಸುವ ಜವಾಬ್ದಾರಿಯನ್ನು ಎಲ್ಲ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ವಹಿಸಲಾಗುವುದು ಎಂದು ಹೇಳಿದರು.

ಅಸ್ಸಾಂನಲ್ಲಿ ಚಿಕ್ಕ ವಯಸ್ಸಿನಲ್ಲಿ ಹುಡುಗಿಯರಿಗೆ ಮದುವೆ

ಅಸ್ಸಾಂನಲ್ಲಿ ಚಿಕ್ಕ ವಯಸ್ಸಿನಲ್ಲಿ ಹುಡುಗಿಯರಿಗೆ ಮದುವೆ

"ನಮ್ಮ ಆಡಳಿತದಲ್ಲಿ ಇದು ಮೊದಲ ಆದ್ಯತೆಯಾಗಿರುತ್ತದೆ. ಆದ್ದರಿಂದ ಐದು ವರ್ಷಗಳಲ್ಲಿ ನಮ್ಮ ರಾಜ್ಯ ಬಾಲ್ಯವಿವಾಹದಿಂದ ಮುಕ್ತವಾಗಲಿದೆ. ಇದು ತಟಸ್ಥ ಮತ್ತು ಜಾತ್ಯತೀತ ಕ್ರಮವಾಗಿರುತ್ತದೆ. ಇದು ಯಾವುದೇ ಸಮುದಾಯವನ್ನು ಗುರಿಯಾಗಿಸುವ ನಿರ್ಧಾರವಲ್ಲ. ರಾಜ್ಯದಾದ್ಯಂತ ಒಂದು ಕ್ರಮವಾಗಿದೆ'' ಎಂದು ಶರ್ಮಾ ಹೇಳಿದರು.

"ಅಸ್ಸಾಂನಲ್ಲಿ ಚಿಕ್ಕ ವಯಸ್ಸಿನಲ್ಲಿ ಗರ್ಭಿಣಿಯಾಗುತ್ತಿರುವ ಹುಡುಗಿಯರ ಸಂಖ್ಯೆ 11.7% ಆಗಿದೆ. ಇದರರ್ಥ ಅಸ್ಸಾಂನಲ್ಲಿ ಬಾಲ್ಯವಿವಾಹ ಹೆಚ್ಚಾಗಿ ನಡೆಯುತ್ತಿದೆ. ಧುಬ್ರಿಯಲ್ಲಿ 22.4% ಹುಡುಗಿಯರು ಮದುವೆಯಾಗುವುದಲ್ಲದೆ ಚಿಕ್ಕ ವಯಸ್ಸಿನಲ್ಲಿಯೇ ತಾಯಂದಿರಾಗಬೇಕಾಗಿದೆ'' NFHS-5 ದತ್ತಾಂಶವನ್ನು ಉಲ್ಲೇಖಿಸಿ ಶರ್ಮಾ ಹೇಳಿದರು.

ಕಾನೂನುಬದ್ಧ ವಯಸ್ಸಿನ ಮೊದಲು ನಡೆದ ಮದುವೆಗಳು

ಕಾನೂನುಬದ್ಧ ವಯಸ್ಸಿನ ಮೊದಲು ನಡೆದ ಮದುವೆಗಳು

2022ರಲ್ಲಿ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಚಿಕ್ಕ ವಯಸ್ಸಿನಲ್ಲಿ ಮದುವೆಯಾದ ಹುಡುಗಿಯರು ಗರ್ಭಿಣಿಯಾಗಿ ಮಕ್ಕಳಿಗೆ ಜನನ ನೀಡುವಾಗ 1 ಲಕ್ಷ ಮಕ್ಕಳಿಗೆ ಜನ್ಮ ನೀಡಿದರೆ 195 ಜನ ಸಾವನ್ನಪ್ಪಿದ್ದಾರೆ. ಇದು 2018 ಮತ್ತು 2020ರ ನಡುವೆ ಸಂಭವಿಸಿದೆ.

ಇತರ ಕೆಲವು ಜಿಲ್ಲೆಗಳಲ್ಲಿ 15 ಮತ್ತು 19 ರ ನಡುವಿನ ಯುವ ತಾಯಂದಿರು ದಕ್ಷಿಣ ಸಲ್ಮಾರಾದಲ್ಲಿ 22%, ಡರ್ರಾಂಗ್‌ನಲ್ಲಿ 16.1%, ಕಾಮ್ರೂಪ್‌ನಲ್ಲಿ 15.7%, ಹೊಜೈನಲ್ಲಿ 15.6%, ಬೊಂಗೈಗಾಂವ್‌ನಲ್ಲಿ 15.4%, ನಾಗಾವ್‌ನಲ್ಲಿ 15%, ಮತ್ತು ಬಾರ್ಪೇಟಾದಲ್ಲಿ 14.2% ರಷ್ಟು ಇದ್ದಾರೆ.

ಧುಬ್ರಿಯಲ್ಲಿ 50% ವಿವಾಹಗಳು ಕಾನೂನುಬದ್ಧ ವಯಸ್ಸಿನ ಮೊದಲು ನಡೆಯುತ್ತಿವೆ. ದಕ್ಷಿಣ ಸಲ್ಮಾರಾದಲ್ಲಿ 44.7%, ಅಸ್ಸಾಂನಲ್ಲಿ ಬಾಲ್ಯ ವಿವಾಹಗಳ ಶೇಕಡವಾರು 31%ರಷ್ಟಿದೆ. ನಾವು ಗಣನೀಯವಾಗಿ ಪ್ರಗತಿಪರ ಜಿಲ್ಲೆಗಳೆಂದು ಪರಿಗಣಿಸುವ ಜೋರ್ಹತ್ ಮತ್ತು ಶಿವಸಾಗರದಲ್ಲಿಯೂ ಸಹ 24.9% ಹುಡುಗಿಯರು ನಿಷೇಧಿತ ವಯಸ್ಸಿನಲ್ಲಿ ಮದುವೆಯಾಗುತ್ತಿದ್ದಾರೆ ಎಂದು ಶರ್ಮಾ ಹೇಳಿದರು.

ಅಪ್ರಾಪ್ತ ವಯಸ್ಕರೊಂದಿಗೆ ಲೈಂಗಿಕ ದೌರ್ಜನ್ಯ

ಅಪ್ರಾಪ್ತ ವಯಸ್ಕರೊಂದಿಗೆ ಲೈಂಗಿಕ ದೌರ್ಜನ್ಯ

ಹೀಗಾಗಿ ಪುರುಷರು 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರನ್ನು ಮದುವೆಯಾದರೆ ಅವರ ವಿರುದ್ಧ ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಮತ್ತು 14 ರಿಂದ 18 ವರ್ಷದೊಳಗಿನ ಬಾಲಕಿಯರ ಬಾಲ್ಯ ವಿವಾಹ ನಿಷೇಧ ಕಾಯ್ದೆ, 2006 ರ ಅಡಿಯಲ್ಲಿ ವಿಚಾರಣೆಯನ್ನು ಪ್ರಾರಂಭಿಸಲಾಗುವುದು ಎಂದು ಸಂಪುಟ ನಿರ್ಧರಿಸಿದೆ ಎಂದು ಶರ್ಮಾ ಹೇಳಿದರು.

POCSO ಅಡಿಯಲ್ಲಿ, ಅಪ್ರಾಪ್ತ ವಯಸ್ಕರೊಂದಿಗೆ ಲೈಂಗಿಕ ದೌರ್ಜನ್ಯ ಎಸಗಿದಲ್ಲಿ 10 ವರ್ಷಗಳಿಗಿಂತ ಕಡಿಮೆಯಿಲ್ಲದ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ. ಇದು ಜೀವಾವಧಿಯವರೆಗೆ ಜೈಲು ಶಿಕ್ಷೆಗೆ ವಿಸ್ತರಿಸಬಹುದು. ಹೆಚ್ಚುವರಿಯಾಗಿ ಬಾಲ್ಯವಿವಾಹ ನಿಷೇಧ ಕಾಯಿದೆಯ ನಿಬಂಧನೆಗಳನ್ನು ಅನುಷ್ಠಾನಗೊಳಿಸಿ, ರಾಜ್ಯಾದ್ಯಂತ ಎಲ್ಲಾ 2,197 ಗ್ರಾಮ ಪಂಚಾಯತ್ ಕಾರ್ಯದರ್ಶಿಗಳನ್ನು ಬಾಲ್ಯ ವಿವಾಹ ತಡೆ ಅಧಿಕಾರಿಗಳನ್ನಾಗಿ ಮಾಡಲಾಗುವುದು. ಇವರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಾಲ್ಯ ವಿವಾಹಗಳು ನಡೆದಲ್ಲಿ ಎಫ್ಐಆರ್ ದಾಖಲಿಸಲು ಕರ್ತವ್ಯ ಬದ್ಧರಾಗಿರುತ್ತಾರೆ ಎಂದರು.

ಪೋಕ್ಸೊ ಕಾಯ್ದೆ ಅಡಿ ಕೇಸ್

ಪೋಕ್ಸೊ ಕಾಯ್ದೆ ಅಡಿ ಕೇಸ್

"ನಾವು 15 ದಿನಗಳಲ್ಲಿ ಬೃಹತ್ ಕ್ರಮದ ಜವಾಬ್ದಾರಿಯನ್ನು ಪೊಲೀಸರಿಗೆ ನೀಡಿದ್ದೇವೆ. ನಾನು ಬಾಲ್ಯ ವಿವಾಹದ ವಿರುದ್ಧ ಕ್ರಮ ಪ್ರಾರಂಭವಾಗುತ್ತದೆ. ಇಲ್ಲಿಯವರೆಗೆ 1 ಲಕ್ಷ ಬಾಲ್ಯವಿವಾಹಗಳು ನಡೆದಿದ್ದರೆ, 1 ಲಕ್ಷ [ಜನರನ್ನು] ಜೈಲಿಗೆ ಹಾಕಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿದೆ, ಆದ್ದರಿಂದ ನಾವು ನಿರ್ಧರಿಸಲು ಪೊಲೀಸರಿಗೆ ಬಿಟ್ಟಿದ್ದೇವೆ'' ಎಂದು ಶರ್ಮಾ ಹೇಳಿದರು.

ಬಾಲ್ಯವಿವಾಹದ ವಿರುದ್ಧ ವರ್ಷಗಳಿಂದ ಆಂದೋಲನ ನಡೆಸುತ್ತಿರುವ ಆಲ್-ಅಸ್ಸಾಂ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಒಕ್ಕೂಟ (ಎಎಎಂಎಸ್‌ಯು), ರಾಜ್ಯ ಸರ್ಕಾರದ ಪ್ರಯತ್ನಗಳಿಗೆ ಬೆಂಬಲ ನೀಡುವುದಾಗಿ ಹೇಳಿದೆ. ಬಾಲ್ಯ ವಿವಾಹದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ನಾವು ಅಭಿಪ್ರಾಯ ಪಡುತ್ತೇವೆ. ನಾವು ದೀರ್ಘಕಾಲದವರೆಗೆ ಅದರ ವಿರುದ್ಧ ಕೆಲಸ ಮಾಡುತ್ತಿದ್ದೇವೆ. ಅಂತಹ ಪ್ರಯತ್ನಗಳಲ್ಲಿ ನಾವು ರಾಜ್ಯ ಸರ್ಕಾರವನ್ನು ಬೆಂಬಲಿಸುತ್ತೇವೆ'' ಎಂದು ಎಎಎಂಎಸ್‌ಯು ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್ ಹುಸೇನ್ ಹೇಳಿದ್ದಾರೆ.

ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಮತ್ತು ಅಶ್ಲೀಲತೆಯ ಅಪರಾಧಗಳಿಂದ ಮಕ್ಕಳ ರಕ್ಷಣೆಗಾಗಿ ದೃಢವಾದ ಕಾನೂನು ಚೌಕಟ್ಟನ್ನು ಒದಗಿಸಲು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆ 2012 ಅನ್ನು ಜಾರಿಗೆ ತರಲಾಯಿತು. ಆದರೆ ನ್ಯಾಯಾಂಗ ಪ್ರತಿಯೊಂದು ಹಂತದಲ್ಲೂ ಮಗುವಿನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುತ್ತದೆ.

English summary
Assam government has launched a massive crackdown on child marriage in the state by enforcing the POCSO Act against men marrying girls below 14 years of age.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X