ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಂತ್ರಿಕ ದೋಷದಿಂದ 1000 ಡೋಸ್ ಕೊವಿಶೀಲ್ಡ್ ಲಸಿಕೆ ವ್ಯರ್ಥ!

|
Google Oneindia Kannada News

ದಿಸ್ಪುರ್, ಜನವರಿ.20: ಕೊರೊನಾವೈರಸ್ ಸೋಂಕಿನಿಂದ ರಕ್ಷಿಸಿಕೊಳ್ಳಲು ನೀಡುವ ಕೊವಿಶೀಲ್ಡ್ ನ 1000 ಡೋಸ್ ಲಸಿಕೆ ವ್ಯರ್ಥವಾಗಿರುವ ಘಟನೆಯು ಅಸ್ಸಾಂನಲ್ಲಿ ನಡೆದಿದೆ. ಕ್ಯಾಚರ್ ಜಿಲ್ಲೆಯ ಸಿಲ್ಚರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಂಗ್ರಹಿಸಿದ ಕೊವಿಶೀಲ್ಡ್ ಲಸಿಕೆಯು ಹೆಪ್ಪುಗಟ್ಟಿದೆ.

100 ಬಾಟಲಿಗಳಲ್ಲಿ 1000 ಡೋಸ್ ಕೊವಿಶೀಲ್ಡ್ ಲಸಿಕೆಯನ್ನು ಸಂಗ್ರಹಿಸಿಡಲಾಗಿತ್ತು. ಸಾಮಾನ್ಯವಾಗಿ ಈ ಲಸಿಕೆಯನ್ನು 2 ರಿಂದ 8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಇರಿಸಬೇಕು. ಆದರೆ ಸಿಲ್ಚರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶೂನ್ಯಕ್ಕಿಂತ ಕಡಿಮೆ ತಾಪಮಾನದಲ್ಲಿ ಲಸಿಕೆಯನ್ನು ಸಂಗ್ರಹಿಸಿದ್ದರಿಂದ ಲಸಿಕೆಯು ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಕ್ಯಾಚರ್ ಜಿಲ್ಲಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಕೊವ್ಯಾಕ್ಸಿನ್ ಬಗ್ಗೆ ಎಚ್ಚರ: ಲಸಿಕೆಯು ಯಾರಿಗೆ ಸೂಕ್ತ, ಯಾರಿಗೆ ಸೂಕ್ತವಲ್ಲ? ಕೊವ್ಯಾಕ್ಸಿನ್ ಬಗ್ಗೆ ಎಚ್ಚರ: ಲಸಿಕೆಯು ಯಾರಿಗೆ ಸೂಕ್ತ, ಯಾರಿಗೆ ಸೂಕ್ತವಲ್ಲ?

ಜಿಲ್ಲಾ ಆರೋಗ್ಯ ಅಧಿಕಾರಿಗಳು ಹೇಳುವುದೇನು?:

ಸಾಮಾನ್ಯವಾಗಿ ಕೊವಿಶೀಲ್ಡ್ ಲಸಿಕೆಯನ್ನು ಇರಿಸುವ ಐಸ್ ಲೈನ್ಡ್ ರೆಫ್ರಿಜಿರೇಟರ್ ನಲ್ಲಿ 2 ರಿಂದ 8 ಡಿಗ್ರಿ ತಾಪಮಾನ ಇರುತ್ತಿತ್ತು. ಐಸ್ ಲೈನ್ಡ್ ರೆಫ್ರಿಜಿರೇಟರ್ ತಾಪಮಾನದಲ್ಲಿ ಇಳಿಕೆಯಾಗುತ್ತಿದ್ದಂತೆ ಎಚ್ಚರಿಕೆ ಸಂದೇಶ ರವಾನೆಯಾಗುತ್ತಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ಯಾವುದೇ ಎಚ್ಚರಿಕೆ ಸಂದೇಶ ಬರಲಿಲ್ಲ. ಅಲ್ಲದೇ, ಇಡೀ ರಾತ್ರಿ ಲಸಿಕೆಯನ್ನು ಸಂಗ್ರಹಿಸಿಡಲಾಗಿದ್ದು, ತಾಪಮಾನದಲ್ಲಿ ಹೇಗೆ ಇಳಿಕೆ ಆಯಿತು ಎಂದು ತಿಳಿಯುತ್ತಿಲ್ಲ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

Assam: 1,000 Doses Of Covishield Vaccine Found Frozen, And Damaged At Cold Storage

ಹೊಸದಾಗಿ 1000 ಡೋಸ್ ಲಸಿಕೆ ರವಾನೆ:

ಕೊವಿಶೀಲ್ಡ್ ಲಸಿಕೆಯ 1000 ಡೋಸ್ ವ್ಯರ್ಥವಾದ ಘಟನೆ ಹಿನ್ನೆಲೆ ಸಿಲ್ಚರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಹೊಸತಾಗಿ ಲಸಿಕೆಯನ್ನು ರವಾನಿಸಲಾಗುತ್ತಿದೆ. 1000 ಡೋಸ್ ಕೊವಿಶೀಲ್ಡ್ ಲಸಿಕೆ ತುಂಬಿರುವ 100 ಬಾಟಲಿಗಳನ್ನು ಕಳುಹಿಸಿ ಕೊಡುವುದಕ್ಕೆ ಅಸ್ಸಾಂ ಆರೋಗ್ಯ ಇಲಾಖೆಯು ತೀರ್ಮಾನಿಸಿದೆ. ಇನ್ನೊಂದು ಕಡೆಯಲ್ಲಿ ಕೊವಿಶೀಲ್ಡ್ ಲಸಿಕೆ ವ್ಯರ್ಥವಾಗುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.

English summary
Assam: 1,000 Doses Of Covishield Vaccine Found Frozen, And Damaged At Cold Storage
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X