ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಪ್ಪಂದ ಮಾಡ್ಕೊಳ್ಳಿ ಎಂದ ಮದ್ರಾಸ್ ಜಡ್ಜ್ ಗೆ ಸುಪ್ರೀಂ ತರಾಟೆ

By Vanitha
|
Google Oneindia Kannada News

ಚೆನ್ನೈ, ಜು. 01 : ಅತ್ಯಾಚಾರ ಎಸಗಿದ್ದಲ್ಲಿ ಅದನ್ನು ಒಪ್ಪಂದ ಮೂಲಕ ಬಗೆಹರಿಸಿಕೊಳ್ಳಿ ಎಂದು ಹೇಳಿ ಮದ್ರಾಸ್ ಸುಪ್ರೀಂ ಕೋರ್ಟ್ ನ್ಯಾಯಾದೀಶ ಪಿ ದೇವಿದಾಸ್ ವಿವಾದ ಸೃಷ್ಠಿಸಿದ್ದರು. ಇದೀಗ ಸುಪ್ರೀಂ ಕೋರ್ಟ್ ಆಜ್ಞೆ ಹೊರಡಿಸಿ, ಅತ್ಯಾಚಾರಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ದೊಡ್ಡ ತಪ್ಪು ಹಾಗೂ ಅಕ್ರಮ ಎನಿಸಿಕೊಳ್ಳಲಿದೆ ಎಂದು ಹೇಳಿದೆ.

ವಿ. ಮೋಹನ್ ಎಂಬಾತ ಅಪ್ರಾಪ್ತೆಯಾದ ಮಂಜು ಎಂಬುವಳ ಮೇಲೆ ಅತ್ಯಾಚಾರ ಎಸಗಿದ್ದ. ಆಕೆ 2009ರಲ್ಲಿ ಒಂದು ಹೆಣ್ಣು ಮಗುವಿಗೆ ಜನ್ಮನೀಡಿದ್ದಳು. ಕೊನೆಗೆ ಈ ಪ್ರಕರಣದ ವಿರುದ್ಧ ಮೋಹನ್ ಮದ್ರಾಸ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದನು. [ರೇಪ್ ಆಯ್ತಾ, ಒಪ್ಪಂದ ಮಾಡ್ಕೊಳ್ಳಿ ಅಂದ ಮದ್ರಾಸ್ ಜಡ್ಜ್!]

Asking rapist and survivor to reach settlement is spectacular error: SC on Madras HC order

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರಿ ಆರೋಪಿ ಮತ್ತು ಸಂತ್ರಸ್ಥೆ ಇಬ್ಬರನ್ನು ಹೊಂದಾಣಿಕೆ ಮಾಡಿಕೊಳ್ಳಲು ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಸಮಯದಲ್ಲಿ ತನ್ನ ಅಭಿಪ್ರಾಯ ಹಂಚಿಕೊಂಡ ಆಕೆ ಖಂಡಿತವಾಗಿಯೂ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಿಲ್ಲ. ಅತ್ಯಾಚಾರಿ ಇದೀಗ ಬೆಲ್ ಪಡೆದು ಜೈಲಿನಿಂದ ಹೊರಗುಳಿದ್ದಿದ್ದಾನೆ.

ಆತ ಕೂಲ್ ಡ್ರಿಂಕ್ ನಲ್ಲಿ ಡ್ರಗ್ಸ್ ಹಾಕಿ ಎಚ್ಚರ ತಪ್ಪಿಸಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆದರೆ ಆತ ನಾನು ಗರ್ಭಿಣಿಯಾಗಿದ್ದಾಗ ಗರ್ಭಪಾತ ಮಾಡಿಕೊಳ್ಳುವಂತೆ ಬೆದರಿಕೆ ಹಾಕಿದ್ದಾನೆ. ನಾನು ಆತನನ್ನು ಯಾಕೆ ಮದುವೆಯಾಗಲಿ? ಎಂದು 22 ವರ್ಷದ ಮಂಜು ಕೇಳಿದ್ದಾಳೆ.

English summary
The Madras high court made a controversy by suggesting a 'compromise' and an amicable mediated settlement in a case where a 15-year-old girl was raped. Now the supreme court said that it is illegal
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X