ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಚ್ಚರಿಯಾದರೂ ಸತ್ಯ, ಏಷ್ಯಾದ ಆನೆ ಕೂಡಾ ವಿನಾಶದ ಅಂಚಿನಲ್ಲಿದೆ!

|
Google Oneindia Kannada News

Recommended Video

ಶೋಕಿ ಮಾಡೋಕೆ ನಿಮ್ಮಪ್ಪನ ಮನೆ ಜಾಗಕ್ಕೆ ಹೋಗಿ | Bellary | R Ashok | Sharath | Rahul | Ravikanth | Sachin

ಬೆಂಗಳೂರು, ಫೆಬ್ರವರಿ 13: ವಿಶ್ವದೆಲ್ಲೆಡೆ ವಿನಾಶದ ಅಂಚಿನಲ್ಲಿರುವ ಪ್ರಾಣಿ, ಪಕ್ಷಿಗಳ ಪಟ್ಟಿಯನ್ನು ವಿಶ್ವಸಂಸ್ಥೆ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತದಲ್ಲಿ ಕಂಡು ಬರುವ ಗ್ರೇಟ್ ಇಂಡಿಯನ್ ಬಸ್ಟರ್ಡ್, ಏಷ್ಯನ್ ಆನೆ, ಬೆಂಗಾಲ್ ಫ್ಲೋರಿಯನ್ ಕೂಡಾ ಸೇರಿದೆ.

ವಿನಾಶದ ಅಂಚಿನಲ್ಲಿರುವ 10 ವಲಸೆ ಪ್ರಾಣಿ/ಪಕ್ಷಿಗಳ ಪಟ್ಟಿಯ ಬಗ್ಗೆ ಗಾಂಧಿನಗರದಲ್ಲಿ ಫೆಬ್ರವರಿ 15 ರಿಂದ 22 ರ ತನಕ ನಡೆಯಲಿರುವ ವಲಸೆ ವನ್ಯಜೀವಿಗಳ (COP 13) ಸಂರಕ್ಷಣೆ ಕುರಿತ ಯುಎನ್ ಸಮಾವೇಶದಲ್ಲಿ ಚರ್ಚಿಸಲಾಗುತ್ತದೆ. ಈ ಸಮಾವೇಶವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ವಿಶ್ವದೆಲ್ಲೆಡೆಯಿಂದ ಬಂದಿರುವ 126 ಪರಿಸರವಾದಿಗಳು, ವನ್ಯಜೀವಿ ಸಂರಕ್ಷಕರು ಈ ವಲಸಿಗ ಪ್ರಾಣಿ/ಪಕ್ಷಿ ಪ್ರಬೇಧಗಳನ್ನು ಉಳಿಸುವ ಬಗ್ಗೆ ಚರ್ಚೆ ಮಾಡಲಿದ್ದಾರೆ.

ಭಾರಿ ಗಾತ್ರದ ಪಕ್ಷಿಗಳ ಪ್ರಬೇಧದಲ್ಲಿ ಗ್ರೇಟ್ ಇಂಡಿಯನ್ ಬಸ್ಟರ್ಡ್ ಕೂಡಾ ಒಂದಾಗಿದ್ದು, ಒಣಹವೆ ಪ್ರದೇಶದಲ್ಲಿ ಸಂರಕ್ಷಿಸಲ್ಪಟ್ಟಿದೆ. 2018ರ ಗಣತಿಯಂತೆ 150ಕ್ಕಿಂತ ಅಧಿಕ ಸಂಖ್ಯೆಯಲ್ಲಿ ಕಾಣಿಸಿಕೊಂಡಿಲ್ಲ.

Asian Elephants, Bengal Floricans from India among 10 to be on UN endangered list

ಏಷ್ಯಾದ ಆನೆಗಳು ಭಾರತ ಉಪಖಂಡದ ತುಂಬಾ ಕಾಣ ಸಿಗುತ್ತವೆ. ಆದರೆ, 1986ರಿಂದ ಇಲ್ಲಿ ತನಕ ಆನೆಗಳ ಸಂತತಿ ಕ್ಷೀಣಿಸುತ್ತಿದೆ. ಕಳೆದ ಮೂರು ಪೀಳಿಗೆಗಳಲ್ಲಿ ಆನೆ ಸಂಖ್ಯೆ ಗಣನೀಯವಾಗಿ ತಗ್ಗಿದೆ.

ಭಾರತ ಉಪಖಂಡ, ಕಾಂಬೋಡಿಯಾ ಹಾಗೂ ವಿಯೆಟ್ನಾಂನಲ್ಲಿ ಕಾಣಸಿಗುವ ಬೆಂಗಾಲ್ ಫ್ಲೋರಿಕನ್ ಕೂಡಾ ವಿನಾಶದ ಅಂಚಿನಲ್ಲಿರುವ ಪಕ್ಷಿ ಸಂಕುಲವಾಗಿದ್ದು, 1,000 ಸಂಖ್ಯೆಯಲ್ಲಿವೆ ಎಂದು 2017ರಲ್ಲಿ ಎಣಿಕೆ ಮಾಡಲಾಗಿತ್ತು. 2019ರ ರಿಯೋ ಶೃಂಗಸಭೆಯಲ್ಲಿ ಭಾರತದಲ್ಲಿ ಒಟ್ಟು 132 ಪ್ರಾಣಿ ಪ್ರಬೇಧಗಳು ವಿನಾಶದ ಅಂಚಿನಲ್ಲಿವೆ. ಪೂರ್ಣ ಪಟ್ಟಿ ಇಲ್ಲಿ ನೋಡಿ

English summary
Great Indian Bustard, Asian Elephant and Bengal Florican from India will be among 10 endangered species of migratory animals/birds from across the world which will be included in a special UN list for protection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X