ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಷ್ಯಾ ಖಂಡದಲ್ಲೇ ಭ್ರಷ್ಟಾಚಾರದಲ್ಲಿ ಭಾರತ ನಂಬರ್ ಒನ್: ಸಮೀಕ್ಷೆ

|
Google Oneindia Kannada News

ಸಮೀಕ್ಷೆಯೊಂದರ ಫಲಿತಾಂಶದ ಬಗ್ಗೆ ಬಂದಿರುವ ವರದಿಯಿದು. ಏಷ್ಯಾದಲ್ಲಿ ಭ್ರಷ್ಟಾಚಾರ ವಿಪರೀತವಾಗಿರುವ ದೇಶಗಳು ಎಂದು ಐದು ರಾಷ್ಟ್ರಗಳನ್ನು ಪಟ್ಟಿ ಮಾಡಿದ್ದಾರೆ. ಈ ಸಮೀಕ್ಷೆ ಮಾಡಿರುವುದು ಟ್ರಾನ್ಸ್ ಫರೆನ್ಸಿ ಇಂಟರ್ ನ್ಯಾಷನಲ್. ಹದಿನಾರು ದೇಶಗಳ ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಂದಿಯನ್ನು ಮಾತನಾಡಿಸಿದ ನಂತರ ಈ ವರದಿ ಪ್ರಕಟವಾಗಿದೆ.

ಲೋಕ್ ಪಾಲ್ ವಿಳಂಬ, ಹೋರಾಟದ ಎಚ್ಚರಿಕೆ ನೀಡಿದ ಅಣ್ಣ ಹಜಾರೆಲೋಕ್ ಪಾಲ್ ವಿಳಂಬ, ಹೋರಾಟದ ಎಚ್ಚರಿಕೆ ನೀಡಿದ ಅಣ್ಣ ಹಜಾರೆ

ಇದಕ್ಕಾಗಿ ಹದಿನೆಂಟು ತಿಂಗಳ ಸಮಯವನ್ನು ಮೀಸಲಿಟ್ಟಿದ್ದಾರೆ. ಆ ವರದಿ ಬಹಿರಂಗ ಮಾಡಿದ ಅಂಶ ಏನೆಂದರೆ, ಸಾರ್ವಜನಿಕ ಸೇವೆಗಳ ಬಳಕೆ ಸಂದರ್ಭದಲ್ಲಿ ಪ್ರತಿ ನಾಲ್ಕು ಮಂದಿ ಪೈಕಿ ಒಬ್ಬರು ಲಂಚ ಕೊಟ್ಟಿದ್ದಾರೆ. ಪ್ರತಿ ನಿತ್ಯದ ಜೀವನದಲ್ಲಿ ಲಂಚ ಇಲ್ಲದೆ ಏನೂ ಆಗುವುದಿಲ್ಲ ಅನ್ನೋ ಮಟ್ಟಿಗೆ ಬೇರು ಮಟ್ಟದವರೆಗೆ ಭ್ರಷ್ಟಾಚಾರ ಬೆಳೆದಿದೆ ಅನ್ನೋದನ್ನೇ ಸಂಖ್ಯೆಗಳು ಬಯಲು ಮಾಡಿವೆ.

ಯಾವುದು ಭ್ರಷ್ಟಾಚಾರದಲ್ಲಿ ವಿಪರೀತ ಎಂಬಷ್ಟರ ಮಟ್ಟಿಗೆ ಜನರ ಮನಸ್ಸಿನಲ್ಲಿ ಉಳಿದುಹೋಗಿರುವುದು ಅನ್ನೋದನ್ನು ತಿಳಿಯಬೇಕಾ? ಪಟ್ಟಿ ಇಲ್ಲೇ ಇದೆ. ಮ್ಯಾನ್ಮಾರ್ ಐದನೇ ಸ್ಥಾನದಲ್ಲಿದೆ ಎಂಬ ಮಾಹಿತಿಯೊಂದಿಗೆ ವರದಿ ಆರಂಭವಾಗುತ್ತದೆ. ಹಾಗಿದ್ದರೆ ಉಳಿದ ದೇಶಗಳು ಯಾವುವು ಅಂತಲೂ ತಿಳಿದುಕೊಂಡು ಬಿಡಿ.

ಮ್ಯಾನ್ಮಾರ್ ನಲ್ಲಿ ಶೇ ಭ್ರಷ್ಟಾಚಾರ 40 ಪ್ರಮಾಣ

ಮ್ಯಾನ್ಮಾರ್ ನಲ್ಲಿ ಶೇ ಭ್ರಷ್ಟಾಚಾರ 40 ಪ್ರಮಾಣ

2013ರಲ್ಲಿ ಭ್ರಷ್ಟಾಚಾರ ವಿರೋಧಿ ಕಾನೂನು ಜಾರಿಗೆ ತಂದಿದ್ದರೂ ಈ ದೇಶದ ಎಲ್ಲ ಅಥವಾ ಬಹುತೇಕ ಪೊಲೀಸರು ಭ್ರಷ್ಟಾಚಾರಿಗಳು ಅಂತಾರೆ ಸಮೀಕ್ಷೆಯಲ್ಲಿ ಪಾಲ್ಗೊಂಡ ಅರ್ಧದಷ್ಟು ಜನ. ನಲವತ್ತರಷ್ಟು ಮಂದಿ ನಂಬಿಕೆ ಪ್ರಕಾರ ನ್ಯಾಯಾಂಗವೇ ಭ್ರಷ್ಟವಾಗಿದೆ.

ಪ್ರತಿ ಹತ್ತರಲ್ಲಿ ನಾಲ್ಕಕ್ಕಿಂತ ಕಡಿಮೆ ಜನ, ಕಳೆದ ವರ್ಷಕ್ಕೆ ಹೋಲಿಸಿದರೆ ಈಗ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಉತ್ತರಿಸಿದ್ದಾರೆ.

ಪಾಕಿಸ್ತಾನದ ಸ್ಥಿತಿ ಹೀಗಿದೆ...

ಪಾಕಿಸ್ತಾನದ ಸ್ಥಿತಿ ಹೀಗಿದೆ...

ಪಾಕಿಸ್ತಾನದಲ್ಲಿ ಸಮೀಕ್ಷೆಯಲ್ಲಿ ಪಾಲ್ಗೊಂಡ ಪೈಕಿ ಮುಕ್ಕಾಲು ಭಾಗ ಜನ ಎಲ್ಲ ಅಥವಾ ಬಹುತೇಕ ಪೊಲೀಸ್ ವ್ಯವಸ್ಥೆಯೇ ಭ್ರಷ್ಟವಾಗಿದೆ ಎಂದು ಹೇಳಿದ್ದಾರೆ. ಪೊಲೀಸ್ ಹಾಗೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಲಂಚ ಇಲ್ಲದೆ ಏನೂ ನಡೆಯಲ್ಲ ಎಂದು ಹತ್ತರಲ್ಲಿ ಏಳು ಮಂದಿ ಪ್ರತಿಕ್ರಿಯಿಸಿದ್ದಾರೆ.

ಈ ಪರಿಸ್ಥಿತಿ ಬದಲಾಗಬಹುದು ಎಂಬ ಆಶಾಭಾವ ಕೂಡ ಇಲ್ಲ. ಹತ್ತರಲ್ಲಿ ಮೂರು ಮಂದಿ ಮಾತ್ರ ಸಾಮಾನ್ಯ ಜನರು ಮನಸ್ಸು ಮಾಡಿದರೆ ಬದಲಾವಣೆ ತರಬಹುದು ಎನ್ನುತ್ತಾರೆ.

ಥಾಯ್ಲೆಂಡ್ ನಲ್ಲಿ ಎಲ್ಲ ಹಂತದಲ್ಲೂ ಲಂಚ

ಥಾಯ್ಲೆಂಡ್ ನಲ್ಲಿ ಎಲ್ಲ ಹಂತದಲ್ಲೂ ಲಂಚ

ಥಾಯ್ಲೆಂಡ್ ಭ್ರಷ್ಟಾಚಾರ ಅನ್ನೋದು ಎಲ್ಲ ಹಂತದಲ್ಲೂ ಹಾಸು ಹೊಕ್ಕಾಗಿದೆಯಂತೆ. ಸರಕಾರಿ ಅಧಿಕಾರಿಗಳು ಭ್ರಷ್ಟರಾಗಿದ್ದಾರೆ. ಈಗ ಅಧಿಕಾರದಲ್ಲಿರುವವರು ಎರಡು ವರ್ಷದ ಹಿಂದೆ ಭ್ರಷ್ಟಾಚಾರ ವಿರೋಧಿ ಕಾನೂನು ತಂದಿದ್ದಾರೆ. ಆದರೆ ಇಲ್ಲಿನ ಜನರಿಗೆ ಒಂದು ಆಶಾ ಭಾವನೆ ಇದೆ.

ಕಳೆದ ಒಂದು ವರ್ಷದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಅಂದುಕೊಳ್ಳುವವರು ಶೇ ಹದಿನಾಲ್ಕರಷ್ಟು ಮಂದಿ ಮಾತ್ರ. ಇನ್ನು ಶೇ ಎಪ್ಪತ್ತೆರಡರಷ್ಟು ಮಂದಿ ಭ್ರಷ್ಟಾಚಾರದ ವಿಚಾರವನ್ನು ಸರಕಾರ ನ್ಯಾಯಯುತವಾಗಿ ನಿರ್ವಹಿಸುತ್ತಿದೆ ಅಂತಲೇ ಸಮೀಕ್ಷೆಯಲ್ಲಿ ಹೇಳಿದ್ದಾರೆ.

ವಿಯೆಟ್ನಾಂನಲ್ಲಿ ಭ್ರಷ್ಟಾಚಾರ ಪ್ರಮಾಣ ಶೇ ಅರವತ್ತೈದರಷ್ಟು

ವಿಯೆಟ್ನಾಂನಲ್ಲಿ ಭ್ರಷ್ಟಾಚಾರ ಪ್ರಮಾಣ ಶೇ ಅರವತ್ತೈದರಷ್ಟು

ವಿಯೆಟ್ನಾಂನಲ್ಲಿ ಭ್ರಷ್ಟಾಚಾರ ಪ್ರಮಾಣ ವಿಪರೀತಕ್ಕೆ ಹೋಗಿಬಿಟ್ಟಿದೆ. ಸಮೀಕ್ಷೆ ಮಾಡಿದ ಹದಿನಾರು ದೇಶಗಳ ಪೈಕಿ ವಿಯೆಟ್ನಾಂ (ಮತ್ತು ಮಲೇಷಿಯಾ) ಜನ ತಮ್ಮ ದೇಶದ ಸ್ಥಿತಿಯ ಬಗ್ಗೆ ಬಹಳ ನಕಾರಾತ್ಮಕ ಭಾವನೆ ಹೊಂದಿದ್ದಾರೆ.

ಭ್ರಷ್ಟಾಚಾರದಿಂದ ದೇಶವನ್ನು ಮುಕ್ತಗೊಳಿಸುವುದಕ್ಕೆ ಅಲ್ಲಿನ ಸರಕಾರಗಳು ಅಂಥ ಒಳ್ಳೆ ಕೆಲಸ ಮಾಡುತ್ತಿಲ್ಲ ಎಂಬುದು ಅವರ ಅಭಿಪ್ರಾಯ.

ಮೊದಲ ಸ್ಥಾನದಲ್ಲಿದೆ ಭಾರತ

ಮೊದಲ ಸ್ಥಾನದಲ್ಲಿದೆ ಭಾರತ

ಶಿಕ್ಷಣ, ಆಸ್ಪತ್ರೆ, ಗುರುತು ಚೀಟಿಗಳು, ಪೊಲೀಸ್ ಮತ್ತು ಇತರ ಸೇವೆಗಳ ಪೈಕಿ ಐದು ಕಡೆ ಲಂಚ ಕೊಡದೆ ಏನೂ ನಡೆಯಲ್ಲ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ ಅರ್ಧಕ್ಕಿಂತ ಹೆಚ್ಚು ಮಂದಿ ಹೇಳಿದ್ದಾರೆ. ಇನ್ನು ಭ್ರಷ್ಟಾಚಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಕ್ರಮಗಳ ಬಗ್ಗೆ ಶೇ ಐವತ್ಮೂರಷ್ಟು ಮಂದಿ ಭರವಸೆ ಹೊಂದಿದ್ದಾರೆ.

ಸಾಮಾನ್ಯ ಜನರು ನಿರ್ಧಾರ ಮಾಡಿದರೆ ಈ ಪರಿಸ್ಥಿತಿಯಲ್ಲಿ ಬದಲಾವಣೆಯನ್ನು ತರಬಹುದು ಎಂದು ಶೇ ಅರವತ್ಮೂರರಷ್ಟು ಮಂದಿ ಭಾವಿಸಿದ್ದಾರೆ.

English summary
An 18-month long survey by Transparency International reveals there is much work to be done. After talking to more than 20,000 people in 16 countries, regions and territories in Asia Pacific, the report found more than one in four people have paid a bribe when using a public service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X