ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Lakhimpur violence: ಸಚಿವರ ಪುತ್ರನ ಜಾಮೀನು ಅರ್ಜಿಗೆ ಇಂದು ಸುಪ್ರೀಂ ಕೋರ್ಟ್ ಆದೇಶ

ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರನ ಜಾಮೀನು ಅರ್ಜಿಗೆ ಸುಪ್ರೀಂ ಕೋರ್ಟ್ ಇಂದು ಆದೇಶ ಹೊರಡಿಸಲಿದೆ.

|
Google Oneindia Kannada News

ನವದೆಹಲಿ ಜನವರಿ 25: 2021ರ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಆರೋಪಿಯಾಗಿರುವ ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರ ಜಾಮೀನು ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಬುಧವಾರ ತನ್ನ ಆದೇಶವನ್ನು ಪ್ರಕಟಿಸಲಿದೆ. ಮಿಶ್ರಾ ಅವರ ಅರ್ಜಿಯ ಕುರಿತು ಪೀಠವು ಜನವರಿ 19 ರಂದು ತನ್ನ ಆದೇಶವನ್ನು ಕಾಯ್ದಿರಿಸಿತ್ತು. ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಜನವರಿ 25ರ ಕಾರಣ ಪಟ್ಟಿಯ ಪ್ರಕಾರ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆ ಕೆ ಮಹೇಶ್ವರಿ ಅವರ ಪೀಠ ಆದೇಶವನ್ನು ಪ್ರಕಟಿಸುತ್ತದೆ.

ಅಕ್ಟೋಬರ್ 3, 2021ರಂದು, ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಭೇಟಿಯನ್ನು ತಡೆದು ರೈತರು ಪ್ರತಿಭಟಿಸಿದಾಗ ಹಿಂಸಾಚಾರ ಭುಗಿಲೆದ್ದು ಲಖಿಂಪುರ ಖೇರಿ ಜಿಲ್ಲೆಯ ಟಿಕುನಿಯಾದಲ್ಲಿ ಎಂಟು ಜನರು ಕೊಲ್ಲಲ್ಪಟ್ಟರು. ಉತ್ತರ ಪ್ರದೇಶ ಪೊಲೀಸ್ ಎಫ್‌ಐಆರ್ ಪ್ರಕಾರ, ಆಶಿಶ್ ಮಿಶ್ರಾ ಕುಳಿತಿದ್ದ ಎಸ್‌ಯುವಿ ವಾಹನ ಹರಿದು ನಾಲ್ವರು ರೈತರು ಸಾವನ್ನಪ್ಪಿದ್ದಾರೆ. ಘಟನೆಯ ನಂತರ ಸಿಟ್ಟಿಗೆದ್ದ ರೈತರು ಎಸ್‌ಯುವಿ ಚಾಲಕ ಮತ್ತು ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಹೊಡೆದಿದ್ದಾರೆ. ಹಿಂಸಾಚಾರದಲ್ಲಿ ಒಬ್ಬ ಪತ್ರಕರ್ತನೂ ಸಾವನ್ನಪ್ಪಿದ್ದಾರೆ.

ಜಾಮೀನು ಅರ್ಜಿ ನಿರಾಕರಿಸಿದ್ದ ಕೋರ್ಟ್

ಜಾಮೀನು ಅರ್ಜಿ ನಿರಾಕರಿಸಿದ್ದ ಕೋರ್ಟ್

ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ ಕಳೆದ ವರ್ಷ ಜುಲೈ 26 ರಂದು ಆಶಿಶ್ ಮಿಶ್ರಾ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಹೈಕೋರ್ಟ್‌ನ ಆದೇಶವನ್ನು ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಜನವರಿ 19 ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ, ಅಪರಾಧ ಸಾಬೀತಾಗದ ಹೊರತು ಆರೋಪಿಯನ್ನು ಅನಿರ್ದಿಷ್ಟ ಅವಧಿಗೆ ಜೈಲಿನಲ್ಲಿರಿಸಬಾರದು ಎಂದು ಸುಪ್ರೀಂ ಕೋರ್ಟ್ ಗಮನಿಸಿತ್ತು.

ಜಾಮೀನು ಅರ್ಜಿಯನ್ನು ವಿರೋಧಿಸಿದ ಉತ್ತರ ಪ್ರದೇಶದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಗರಿಮಾ ಪ್ರಸಾದ್, ಇದೊಂದು ಘೋರ ಅಪರಾಧ ಮತ್ತು ಜಾಮೀನು ನೀಡುವುದು ಸಮಾಜಕ್ಕೆ ತಪ್ಪು ಸಂಕೇತವನ್ನು ನೀಡುತ್ತದೆ ಎಂದು ಹೇಳಿದ್ದರು. ಜಾಮೀನು ಅರ್ಜಿಯನ್ನು ವಿರೋಧಿಸಿದವರ ಪರ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ದವೆ ಅವರು, ಮಿಶ್ರಾ ಜಾಮೀನು ವಿಸ್ತರಿಸುವುದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಹೇಳಿದರು.

ಆಶಿಶ್ ಮಿಶ್ರಾ ವಿರುದ್ಧ ವಾದವೇನು?

ಆಶಿಶ್ ಮಿಶ್ರಾ ವಿರುದ್ಧ ವಾದವೇನು?

ಆಶಿಶ್ ಮಿಶ್ರಾ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ದವೆ ಅವರ ಸಲ್ಲಿಕೆಯನ್ನು ತೀವ್ರವಾಗಿ ವಿರೋಧಿಸಿದರು ಮತ್ತು ಅವರ ಕಕ್ಷಿದಾರರು ಒಂದು ವರ್ಷಕ್ಕೂ ಹೆಚ್ಚು ಕಾಲ ಕಸ್ಟಡಿಯಲ್ಲಿದ್ದಾರೆ. ವಿಚಾರಣೆ ನಡೆಯುತ್ತಿರುವ ರೀತಿಯನ್ನು ನೋಡಿದರೆ ಅದನ್ನು ಪೂರ್ಣಗೊಳಿಸಲು ಏಳರಿಂದ ಎಂಟು ವರ್ಷಗಳು ಬೇಕಾಗುತ್ತದೆ ಎಂದು ಹೇಳಿದರು. ಕಳೆದ ವರ್ಷ ಡಿಸೆಂಬರ್ 6 ರಂದು ನ್ಯಾಯಾಲಯ ಆಶಿಶ್ ಮಿಶ್ರಾ ಮತ್ತು ಇತರ 12 ಜನರ ವಿರುದ್ಧ ಲಖೀಂಪುರ ಖೇರಿಯಲ್ಲಿ ನಾಲ್ವರು ಪ್ರತಿಭಟನಾಕಾರರ ಸಾವಿನ ಪ್ರಕರಣದಲ್ಲಿ ಕೊಲೆ, ಕ್ರಿಮಿನಲ್ ಪಿತೂರಿ ಮತ್ತು ಇತರ ದಂಡದ ಕಾನೂನುಗಳ ಆರೋಪಗಳನ್ನು ರೂಪಿಸಿತ್ತು.

ಆರೋಪಿಗಳ ವಿರುದ್ಧ ದಾಖಲಾದ ಪ್ರಕರಣಗಳು

ಆರೋಪಿಗಳ ವಿರುದ್ಧ ದಾಖಲಾದ ಪ್ರಕರಣಗಳು

ಆಶಿಶ್ ಮಿಶ್ರಾ ಸೇರಿದಂತೆ ಒಟ್ಟು 13 ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 147 ಮತ್ತು 148 ರ ಅಡಿಯಲ್ಲಿ ಗಲಭೆ, 149 (ಕಾನೂನುಬಾಹಿರ ಸಭೆ), 302 (ಕೊಲೆ), 307 (ಕೊಲೆ ಯತ್ನ), 326 (ಅಪಾಯಕಾರಿ ಆಯುಧಗಳ ಬಳಕೆ), 427 (ಕಿಡಿಗೇಡಿತನ) ಮತ್ತು 120B (ಕ್ರಿಮಿನಲ್ ಪಿತೂರಿಗಾಗಿ ಶಿಕ್ಷೆ) ಮತ್ತು ಮೋಟಾರು ವಾಹನ ಕಾಯಿದೆಯ ಸೆಕ್ಷನ್ 177 ದಾಖಲಾಗಿದೆ.

ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ

ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ

ಇತರ 12 ಆರೋಪಿಗಳೆಂದರೆ ಅಂಕಿತ್ ದಾಸ್, ನಂದನ್ ಸಿಂಗ್ ಬಿಶ್ತ್, ಲತೀಫ್ ಕಾಳೆ, ಸತ್ಯಂ ಅಲಿಯಾಸ್ ಸತ್ಯ ಪ್ರಕಾಶ್ ತ್ರಿಪಾಠಿ, ಶೇಖರ್ ಭಾರತಿ, ಸುಮಿತ್ ಜೈಸ್ವಾಲ್, ಆಶಿಶ್ ಪಾಂಡೆ, ಲವಕುಶ್ ರಾಣಾ, ಶಿಶು ಪಾಲ್, ಉಲ್ಲಾಸ್ ಕುಮಾರ್ ಅಲಿಯಾಸ್ ಮೋಹಿತ್ ತ್ರಿವೇದಿ, ರಿಂಕು ರಾಣಾ ಮತ್ತು ಧರ್ಮೇಂದ್ರ ಬಂಜಾರಾ ಇವರೆಲ್ಲ ಜೈಲಿನಲ್ಲಿದ್ದಾರೆ.

English summary
Supreme Court will announce its order on Wednesday on the bail plea of Union Minister Ajay Kumar Mishra's son Ashish Mishra, an accused in the 2021 Lakhimpur Kheri violence case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X