ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸಾರಾಮ್ ದೋಷಿ: ಜೋಧಪುರ ಕಾರಾಗೃಹ ಬಳಿ ಬಿಗಿ ಭದ್ರತೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 25: ಐದು ವರ್ಷದ ನಂತರ ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಜೋಧಪುರ ಎಸ್ ಸಿ ಎಸ್ ಟಿ ನ್ಯಾಯಾಲಯ ಇಂದು(ಏ.25) ತೀರ್ಪು ನೀಡಿದೆ.

ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ ಜೋಧಪುರ ಎಸ್ ಸಿ ಎಸ್ ಟಿ ನ್ಯಾಯಾಲಯ ಅವರನ್ನು ದೋಷಿ ಎಂದು ಘೋಷಿಸಿದೆ.

ಅಸಾರಾಂ ಸಹಿತ ಎಲ್ಲಾ ಐವದು ಆರೋಪಿಗಳೂ ತಪ್ಪಿತಸ್ಥರು ಎಂದು ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.ನ್ಯಾಯಾಧೀಶ ಮಧುಸೂದನ್ ಶರ್ಮಾ ಎಂಬುವವರು ತೀರ್ಪು ಪ್ರಕಟಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಇನ್ನೂ ಘೋಷಿಸಿಲ್ಲ.

ಅಸಾರಾಮ್ ಬಾಪು ದೋಷಿ: ಜೋಧಪುರ ನ್ಯಾಯಾಲಯದಿಂದ ಮಹತ್ವದ ತೀರ್ಪುಅಸಾರಾಮ್ ಬಾಪು ದೋಷಿ: ಜೋಧಪುರ ನ್ಯಾಯಾಲಯದಿಂದ ಮಹತ್ವದ ತೀರ್ಪು

ಅಸಾರಾಮ್ ಬಾಪು ಅವರು ಜೋಧಪುರದ ಮನೈ ಎಂಬಲ್ಲಿರುವ ತಮ್ಮ ಆಶ್ರಮದಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಯುವತಿಯೊಬ್ಬರು ಆ.13, 2013 ರಲ್ಲಿ ದೂರು ನೀಡಿದ್ದರು. ಇದೇ ಸಮಯದಲ್ಲಿ ಗುಜರಾತಿನ ಸೂರತ್ ಮೂಲದ ಇಬ್ಬರು ಸಹೋದರಿಯರು ತಮ್ಮ ಮೇಲೂ ಅತ್ಯಾಚಾರವಾಗಿದೆ ಎಂದು ದೂರು ದಾಖಲಿಸಿದ್ದರು.

ಈ ಸಂಬಂಧ ಕಳೆದ ಐದು ವರ್ಷಗಳಿಂದ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ತೀರ್ಪು ನೀಡಿದೆ. ಪ್ರಕರಣದಲ್ಲಿ ಜಾಮೀನು ನೀಡುವಂತೆ ಅಸಾರಾಂ ಬಾಪು ಸಲ್ಲಿಸಿದ್ದ ಸಾಕಷ್ಟು ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು. ಅಂದಿನಿಂದ ಅಸಾರಾಮ್ ಜೋಧಪುರ ಜೈಲಿನಲ್ಲಿದ್ದರು.

ಅಸಾರಾಮ್ ಬಾಪು ರೇಪ್ ಕೇಸ್ : ಟೈಮ್ ಲೈನ್ಅಸಾರಾಮ್ ಬಾಪು ರೇಪ್ ಕೇಸ್ : ಟೈಮ್ ಲೈನ್

ಚಹಾದಂಗಡಿಯಲ್ಲಿ ಎಂಜಲಿನ ಗ್ಲಾಸು ತೊಳೆಯುತ್ತಿದ್ದ ಅಸಾರಾಮ್ ಈಗ ಸರಿ ಸುಮಾರು ಸಾವಿರಾರು ಕೋಟಿ ರು ಒಡೆಯ, 16 ವರ್ಷ ವಯಸ್ಸಿನ ಯುವತಿ ಮೇಲೆ ಜೋಧಪುರದ ಆಶ್ರಮದಲ್ಲಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜೈಲುವಾಸಿಯಾಗಿದ್ದರು. ಇದೇ ಸಮಯದಲ್ಲಿ ಗುಜರಾತಿನ ಸೂರತ್ ಮೂಲದ ಇಬ್ಬರು ಸಹೋದರಿಯರು ತಮ್ಮ ಮೇಲೂ ಅತ್ಯಾಚಾರವಾಗಿದೆ ಎಂದು ದೂರು ದಾಖಲಿಸಿದ್ದರು.

 ರಾಜಸ್ಥಾನದ ಜೋಧಪುರ ಎಸ್ ಸಿ ಎಸ್ ಟಿ ನ್ಯಾಯಾಲಯ

ರಾಜಸ್ಥಾನದ ಜೋಧಪುರ ಎಸ್ ಸಿ ಎಸ್ ಟಿ ನ್ಯಾಯಾಲಯ

ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ ಜೋಧಪುರ ಎಸ್ ಸಿ ಎಸ್ ಟಿ ನ್ಯಾಯಾಲಯ ಅವರನ್ನು ದೋಷಿ ಎಂದು ಘೋಷಿಸಿದೆ. ನ್ಯಾಯಾಲಯದ ತೀರ್ಪು ಪ್ರಕಟಗೊಳ್ಳುವ ಮುನ್ನ ಅಹಿತಕರ ಘಟನೆಗಳು ನಡೆಯದ ಹಾಗೆ ಎಚ್ಚರಿಕೆವಹಿಸಲು ನ್ಯಾಯಾಲಯದ ಹೊರಗಡೆ ಪೊಲೀಸ್ ಬಿದಿ ಭದ್ರತೆ ಒದಗಿಸಿರುವುದು.

ಜೋಧಪುರದ ಕೇಂದ್ರೀಯ ಕಾರಾಗೃಹ

ಜೋಧಪುರದ ಕೇಂದ್ರೀಯ ಕಾರಾಗೃಹ

ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಇಂದು ಹೊರಬಿದ್ದಿದೆ. ಅದಕ್ಕೂ ಮುನ್ನ ಜೋಧಪುರ ಕೇಂದ್ರೀಯ ಕಾರಾಗೃಹದಿಂದ ಅಸಾರಾಮ್ ಬಾಪು ಅವರನ್ನು ನ್ಯಾಯಾಲಯಕ್ಕೆ ಕರೆದೊಯ್ಯುವ ವೇಳೆ ಕಾರಾಗೃಹಕ್ಕೆ ಭದ್ರತೆ ಕಲ್ಪಿಸಲಾಗಿತ್ತು.

ಡ್ವೈನ್ ಬ್ರಾವೋ ಅವರಿಂದ ಸಂಗೀತ ಸಂಜೆ

ಡ್ವೈನ್ ಬ್ರಾವೋ ಅವರಿಂದ ಸಂಗೀತ ಸಂಜೆ

ಐಪಿಎಲ್ ಪಂದ್ಯ ಈಗಾಗಲೇ ಪ್ರಾರಂಭವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಬ್ರಾವೋ ಅವರ ಆಟವನ್ನು ಕ್ರಿಕೆಟ್ ಪ್ರಿಯರು ನೋಡಿರ್ತೀರ, ಆದರೆ ಅವರ ಹಾಡನ್ನು ಎಷ್ಟು ಮಂದಿ ತಾನೆ ಕೇಳಿದ್ದಾರೆ ಅಲ್ಲವೆ, ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದಲ್ಲಿ ಬ್ರಾವೋ ಹಾಡಿನ ಮೂಲಕ ಪ್ರೇಕ್ಷರನ್ನು ರಂಚಿಸಿದರು.

ನಿತಿನ್ ಗಡ್ಕರಿಯಿಂದ ದೀನಾನಾತ್ ಪ್ರಶಸ್ತಿ ಪಡೆದ ಆಶಾ ಬೋಸ್ಲೆ

ನಿತಿನ್ ಗಡ್ಕರಿಯಿಂದ ದೀನಾನಾತ್ ಪ್ರಶಸ್ತಿ ಪಡೆದ ಆಶಾ ಬೋಸ್ಲೆ

ಮುಂಬೈನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ನಿತೀನ್ ಗಡ್ಕರಿಯವರು ಗಾಯಕಿ ಆಶಾ ಬೋಸ್ಲೆಯವರಿಗೆ ಮಾಸ್ಟರ್ ದೀನಾನಾದ್ ಮಂಗೇಶ್ಕರ್ ಜೀವಮಾನ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಅಸಾರಾಮ್ ದೋಷಿ ತೀರ್ಪು ಹಿನ್ನಲೆ ಜೋಧಪುರ ಕಾರಾಗೃಹದ ರಸ್ತೆಯಲ್ಲಿ ಭದ್ರತೆ

ಅಸಾರಾಮ್ ದೋಷಿ ತೀರ್ಪು ಹಿನ್ನಲೆ ಜೋಧಪುರ ಕಾರಾಗೃಹದ ರಸ್ತೆಯಲ್ಲಿ ಭದ್ರತೆ

ಐದು ವರ್ಷದ ನಂತರ ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಜೋಧಪುರ ಎಸ್ ಸಿ ಎಸ್ ಟಿ ನ್ಯಾಯಾಲಯ ಇಂದು(ಏ.25) ತೀರ್ಪು ನೀಡಿದೆ. ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ ಜೋಧಪುರ ಎಸ್ ಸಿ ಎಸ್ ಟಿ ನ್ಯಾಯಾಲಯ ಅವರನ್ನು ದೋಷಿ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಕಾರಾಗೃಹ ರಸ್ತೆ ಬಳಿ ಬಿಗಿ ಭದ್ರತೆ ಒದಗಿಸಲಾಗಿದೆ.

English summary
Jodhpur in Rajasthan special investigation team court had pronounced its order in five years old rape case against self proclaimed human god Asaram Bapuji as guilty on wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X