ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೆಗೂ ನ್ಯಾಯ ಸಿಕ್ಕಿತು: ಸಂತ್ರಸ್ಥೆಯ ತಂದೆ ನಿಟ್ಟುಸಿರು

|
Google Oneindia Kannada News

ಜೋಧ್ ಪುರ, ಏಪ್ರಿಲ್ 25: ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪುನನ್ನು ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಪರಿಗಣಿಸುತ್ತಿದ್ದಂತೆಯೇ, ಸಂತ್ರಸ್ಥೆಯ ತಂದೆ ನಿಟ್ಟುಸಿರುಬಿಟ್ಟಿದ್ದಾರೆ.

"ನಮಗೆ ಕೊನೆಗೂ ನ್ಯಾಯ ಸಿಕ್ಕಿದೆ. ನಮಗೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ಅಷ್ಟೇ ಅಲ್ಲ, ಅವರಿಂದಾಗಿ ಅತ್ಯಾಚಾರಕ್ಕೊಳಗಾದ, ಅಪಹರಣಕ್ಕೊಳಗಾದ, ಸಾವಿಗೀಡಾದ ಎಲ್ಲರಿಗೂ ನ್ಯಾಯ ಸಿಕ್ಕುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಸಾರಾಮ್ ಬಾಪುಗೆ ಜೀವಾವಧಿ ಶಿಕ್ಷೆ: ಐತಿಹಾಸಿಕ ತೀರ್ಪುಅಸಾರಾಮ್ ಬಾಪುಗೆ ಜೀವಾವಧಿ ಶಿಕ್ಷೆ: ಐತಿಹಾಸಿಕ ತೀರ್ಪು

2013 ರ ಆಗಸ್ಟ್ ನಲ್ಲಿ ಅಸಾರಾಮ್ ಬಾಪು ತನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಉತ್ತರ ಪ್ರದೇಶದ ಷಹಝಾನ್ ಪುರದ ಹದಿನಾರು ವರ್ಷದ ಅಪ್ರಾಪ್ತ ಯುವತಿ ದೂರು ನೀಡಿದ್ದರು. ತಮ್ಮ ಆಶ್ರಮದಲ್ಲೇ ನನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಆಕೆ ಹೇಳಿದ್ದರು. ಆಕೆಯ ಹೇಳಿಕೆಯನ್ವಯ ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದ್ದರು.

Asaram Bapu case: Finally got justice, says Shahjahanpur victims father

ಇದೇ ರೀತಿಯ ಮತ್ತೊಂದು ದೂರು ಗುಜರಾತಿನಿಂದ ಅಸಾರಾಮ್ ವಿರುದ್ಧ ದಾಖಲಾಗಿತ್ತು. ಈ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು(ಏ.25) ಬೆಳಿಗ್ಗೆ ತೀರ್ಪು ನೀಡಿದ್ದ ಜೋಧಪುರ ಎಸ್ ಸಿ ಎಸ್ ಟಿ ನ್ಯಾಯಾಲಯ ಅಸಾರಾಮ್ ಮತ್ತು ಐವರು ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿತ್ತು. ನಂತರ ಇಂದು ಮಧ್ಯಾಹ್ನ ಅಸಾರಾಮ್ ಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಉಳಿದ ಇಬ್ಬರು ಆರೋಪಿಗಳಿಗೆ 20 ವರ್ಷ ಜೈಲುಶಿಕ್ಷೆ ವಿಧಿಸಿದೆ.

ಸ್ವಯಂ ಘೋಷಿತ ದೇವ ಮಾನವ ಅಸಾರಾಮ್ ಬಾಪು ರೇಪ್ ಕೇಸ್ : ಟೈಮ್ ಲೈನ್ಸ್ವಯಂ ಘೋಷಿತ ದೇವ ಮಾನವ ಅಸಾರಾಮ್ ಬಾಪು ರೇಪ್ ಕೇಸ್ : ಟೈಮ್ ಲೈನ್

English summary
Soon after self-styled godman Asaram Bapu was found guilty in a 2013 rape case on Wednesday morning, the victim's father expressed relief to finally get justice for the same. Court pronounced life imprisonment to him
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X