• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡೆಡ್ಲಿ ಕೊರೊನಾ ವೇಳೆ, ಮತ್ತೆರಡು ಭಯಾನಕ ವೈರಸ್ ಬಗ್ಗೆ ಎಚ್ಚರಿಸಿದ ಪ್ರಧಾನಿ ಮೋದಿ

|

ನವದೆಹಲಿ, ಮೇ 5: ದೇಶದಲ್ಲಿ ಮೂರನೇ ಹಂತದ ಲಾಕ್ ಡೌನ್ ಆರಂಭವಾಗಿದೆ. ಈ ನಡುವೆ, ಕೊರೊನಾ ವೈರಸಿನ ಆರ್ಭಟ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಪ್ರಧಾನಿ ಮೋದಿ, ದೇಶಕ್ಕೆ ಕಾಡುತ್ತಿರುವ ಇನ್ನೆರಡು ವೈರಸ್ ಗಳ ಬಗ್ಗೆ ಪ್ರಸ್ತಾವಿಸಿದ್ದಾರೆ.

   ಜನ ಕೊರೊನಾ ಬಂದರೂ ಸತ್ತರೂ ಪರ್ವಾಗಿಲ್ಲ ಸರ್ಕಾರಕ್ಕೆ ದುಡ್ಡು ಬೇಕು ಅಷ್ಟೇ! | Oneindia Kannada

   ನ್ಯಾಮ್ ಸಮ್ಮೇಳನದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಮೋದಿ, "ಇಡೀ ವಿಶ್ವವೇ ಕೋವಿಡ್ 19 ವಿರುದ್ದ ಹೋರಾಡುತ್ತಿದ್ದರೆ, ಅದಕ್ಕಿಂತ ಡೆಡ್ಲಿ ವೈರಸ್ ಗಳು ದೇಶವನ್ನು ಕಾಡುತ್ತಿದೆ"ಎಂದಿದ್ದಾರೆ.

   ಇದು ಮತ್ತಿನ್ನೇನು ಅನಾಹುತಕ್ಕೆ ಕಾರಣವಾಗುವುದೋ; ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ

   ಪ್ರಧಾನಿಯಾದ ನಂತರ, ಅಂದರೆ 2014ರಿಂದ ಇದೇ ಮೊದಲ ಬಾರಿಗೆ ನ್ಯಾಮ್ (ನಾನ್ ಅಲಯಾನ್ಡ್ ಮೂವ್ಮೆಂಟ್) ಸಮ್ಮೇಳನದಲ್ಲಿ ಮಾತನಾಡುತ್ತಿದ ಮೋದಿ, ಕೋವಿಡ್ ಜೊತೆ ಮತ್ತೆರಡು ವೈರಸ್ ಬಗ್ಗೆ ಮಾತನಾಡಿದ್ದಾರೆ.

   ಮದ್ಯದ ಹೊಳೆ ಹರಿದು ಹಸಿರು ವಲಯ ಕೆಂಪಾದೀತು ಎಚ್ಚರ!

   ಪ್ರಧಾನಿ ಜೊತೆ, ವಿದೇಶಾಂಗ ವ್ಯವಹಾರಗಳ ಖಾತೆಯ ಸಚಿವ ಜೈಶಂಕರ್ ಕೂಡಾ, ಇದರಲ್ಲಿ ಭಾಗವಹಿಸಿದ್ದರು. 2012ರಲ್ಲಿ ಟೆಹ್ರಾನ್ ನಲ್ಲಿ ನಡೆದ ನ್ಯಾಮ್ ಸಮ್ಮೇಳನದಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಭಾಗವಹಿಸಿದ್ದರು.

   ಅಜರಬೈಜಾನ್ ಗಣರಾಜ್ಯದ ರಾಷ್ಟ್ರಪತಿ

   ಅಜರಬೈಜಾನ್ ಗಣರಾಜ್ಯದ ರಾಷ್ಟ್ರಪತಿ

   2016ರಲ್ಲಿ ವೆನಿಜುವೆಲಾದಲ್ಲಿ ಮತ್ತು 2019ರಲ್ಲಿ ಅಜರಬೈಜಾನ್ ನಲ್ಲಿ ನಡೆದ ನ್ಯಾಮ್ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗವಹಿಸಿರಲಿಲ್ಲ. ಅವರ ಬದಲು, ಉಪರಾಷ್ಟ್ರಪತಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಜರಬೈಜಾನ್ ಗಣರಾಜ್ಯದ ರಾಷ್ಟ್ರಪತಿಗಳು ನ್ಯಾಮ್ ಸಮ್ಮೇಳನದ ಅಧ್ಯಕ್ಷರಾಗಿರುತ್ತಾರೆ (2022ರ ವರೆಗೆ). (ಚಿತ್ರದಲ್ಲಿ, ಅಜರಬೈಜಾನ್ ಗಣರಾಜ್ಯದ ರಾಷ್ಟ್ರಪತಿ ಇಲಾಂ ಆಲಿವೇವ್)

   ಇಡೀ ವಿಶ್ವವೇ ಕೋವಿಡ್ ಮಹಾಮಾರಿಯನ್ನು ಎದುರಿಸುತ್ತಿದೆ

   ಇಡೀ ವಿಶ್ವವೇ ಕೋವಿಡ್ ಮಹಾಮಾರಿಯನ್ನು ಎದುರಿಸುತ್ತಿದೆ

   "ಇಡೀ ವಿಶ್ವವೇ ಕೋವಿಡ್ ಮಹಾಮಾರಿಯನ್ನು ಎದುರಿಸುತ್ತಿರಬೇಕಾದರೆ, ಕೆಲವರು ಅದಕ್ಕಿಂತ ಹೆಚ್ಚಿನ ವೈರಸ್ ಗಳಾಗಿದ್ದಾರೆ. ಇದರಲ್ಲಿ ಮೊದಲನೆಯದ್ದು ಭಯೋತ್ಪಾದನಾ ಚಟುವಟಿಕೆಗಳು" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕಳೆದ ಎರಡ್ಮೂರು ದಿನಗಳಲ್ಲಿ ಜಮ್ಮು ಕಾಶ್ಮೀರದ ಹಂದ್ವಾರದಲ್ಲಿ ಉಗ್ರರ ಕೃತ್ಯ ವಿಪರೀತವಾಗಿದೆ.

   ಪೇಯ್ಡ್ ನ್ಯೂಸ್ ಮತ್ತು ಸುಳ್ಳುಸುದ್ದಿಗಳು

   ಪೇಯ್ಡ್ ನ್ಯೂಸ್ ಮತ್ತು ಸುಳ್ಳುಸುದ್ದಿಗಳು

   "ಇದಲ್ಲದೇ ಪೇಯ್ಡ್ ನ್ಯೂಸ್ ಮತ್ತು ಸುಳ್ಳುಸುದ್ದಿಗಳು ಕೂಡಾ ಕೊರೊನಾ ವೈರಸ್ ಗಿಂತ ಹೆಚ್ಚು ಕೆಟ್ಟ ಪರಿಣಾಮವನ್ನು ಸಮಾಜದಲ್ಲಿ ಬೀರುತ್ತಿದೆ. ಇದರ ಜೊತೆಗೆ, ತಿರುಚಲ್ಪಟ್ಟ ವಿಡಿಯೋಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುತ್ತದೆ. ಈ ಬಗ್ಗೆ ಎಚ್ಚರದಿಂದ ಇರಬೇಕು" ಎಂದು ಸಮ್ಮೇಳನದಲ್ಲಿ ಹೇಳಿದ್ದಾರೆ.

   ಭಯಾನಕ ವೈರಸ್ ಉಲ್ಲೇಖಿಸಿದ ಪ್ರಧಾನಿ ಮೋದಿ

   ಭಯಾನಕ ವೈರಸ್ ಉಲ್ಲೇಖಿಸಿದ ಪ್ರಧಾನಿ ಮೋದಿ

   "ಈ ವೈರಸ್ ಗಳು ದೇಶವನ್ನು ಮತ್ತು ಸಮುದಾಯವನ್ನು ಒಡೆಯುತ್ತದೆ. ಈ ಎಲ್ಲಾ ತೊಂದರೆಗಳ ನಡುವೆ ಪಾಸಿಟೀವ್ ವಿಷಯದ ಬಗ್ಗೆ ಮಾತ್ರ ನಾನು ಮಾತನಾಡಲು ಉತ್ಸುಕನಾಗಿದ್ದೇನೆ. ನಾವೆಲ್ಲಾರೂ ಒಗ್ಗಟ್ಟಾಗಿ, ಈಗಿನ ಮೆಡಿಕಲ್ ಎಮರ್ಜೆನ್ಸಿಯನ್ನು ಎದುರಿಸಲು ಏನು ಮಾಡಬೇಕೋ, ಅದರ ಬಗ್ಗೆ ಯೋಚಿಸಬೇಕಿದೆ. ಕೋವಿಡ್ ನಮಗೆಲ್ಲರಿಗೂ ಪಾಠವನ್ನು ಕಲಿಸಿದ್ದಂತೂ ಹೌದು"ಎಂದು ಪ್ರಧಾನಿಗಳು ಸಮ್ಮೇಳನದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.

   English summary
   World Fighting In Covid 19, Two Viruses Dangerous Than This: PM Modi in NAM Meet.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X