• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ: ಕೇಂದ್ರ ಆರೋಗ್ಯ ಇಲಾಖೆಯಿಂದ ಹೊರಬಿದ್ದ ಗುಡ್ ನ್ಯೂಸ್

|

ನವದೆಹಲಿ, ಜುಲೈ 2: ಕರ್ನಾಟಕದಲ್ಲಿ, ಅದರಲ್ಲೂ ಪ್ರಮುಖವಾಗಿ ಬೆಂಗಳೂರಿನಲ್ಲಿ ಕೊರೊನೊ ಸೋಂಕಿತರ ಸಂಖ್ಯೆ ನಾಗಾಲೋಟದಲ್ಲಿ ಏರುತ್ತಿದೆ. ಈ ನಡುವೆ, ಕೇಂದ್ರ ಆರೋಗ್ಯ ಸಚಿವಾಲಯ ಕೊಂಚ ಸಮಾಧಾನ ಪಡಬಹುದಾದ ಅಂಕಿಅಂಶವೊಂದನ್ನು ಬಿಡುಗಡೆ ಮಾಡಿದೆ.

   India Should let Japan , Australia and US into Andaman and Nicobar | Oneindia Kannada

   ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

   ಇಂದು (ಜು 2) 19,148 ಹೊಸ ಕೇಸ್ ದಾಖಲಾಗುವ ಮೂಲಕ, ದೇಶದ ಒಟ್ಟು ಸೋಂಕಿತರ ಸಂಖ್ಯೆ 6,04,641ಕ್ಕೆ ಏರಿದೆ. ವಿಶ್ವದ ಸೋಂಕಿತರ ಪಟ್ಟಿಯಲ್ಲಿ ಭಾರತ ಈಗ ನಾಲ್ಕನೇ ಸ್ಥಾನದಲ್ಲಿದೆ. ಅಮೆರಿಕ, ಬ್ರೆಜಿಲ್ ಮತ್ತು ರಷ್ಯಾ ಮೊದಲ ಮೂರು ಸ್ಥಾನದಲ್ಲಿದೆ.

   ಇನ್ನು ಸಾವಿನ ಸಂಖ್ಯೆಯಲ್ಲಿ ಭಾರತ ಎಂಟನೇ ಸ್ಥಾನದಲ್ಲಿದೆ. ಅಮೆರಿಕಾ, ಬ್ರೆಜಿಲ್ ಮತ್ತು ಯುಕೆ ಮೊದಲ ಮೂರು ಸ್ಥಾನದಲ್ಲಿದೆ. ಭಾರತದಲ್ಲಿ ಈ ವೈರಸ್ ನಿಂದ ಮೃತ ಪಟ್ಟವರ ಸಂಖ್ಯೆ 17,834.

   ಮುಂಬೈನಿಂದ ಶುಭಸುದ್ದಿ: ಹಾಟ್ ಸ್ಪಾಟ್ ಆಗಿದ್ದ ಧಾರಾವಿ ಕೊಳೆಗೇರಿ, ಈಗ ಇತರ ಪ್ರದೇಶಗಳಿಗೆ 'ಮಾಡೆಲ್'

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿಕೆಯನ್ನು ನೀಡಿದ್ದಾರೆ. ಇನ್ನು, ಕೇಂದ್ರ ಸರಕಾರದ ಆರೋಗ್ಯ ಸಚಿವಾಲಯ, ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವ ಪ್ರಕರಣಗಳ ಬಗ್ಗೆ ಖುಷಿಯ ಸುದ್ದಿಯೊಂದನ್ನು ನೀಡಿದೆ.

   ಕೇಂದ್ರ ಆರೋಗ್ಯ ಸಚಿವಾಲಯ

   ಕೇಂದ್ರ ಆರೋಗ್ಯ ಸಚಿವಾಲಯ

   ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಬಿಡುಗಡೆಯಾದವರ ಸಂಖ್ಯೆ 11,881. ಇದರಿಂದ, ಒಟ್ಟಾರೆಯಾಗಿ ಈ ಸಂಖ್ಯೆ 3,59,859ಕ್ಕೆ ಏರಿದೆ. ಹಾಗಾಗಿ, ಸಕ್ರಿಯ ಪ್ರಕರಣಗಳು 2,26,947ಕ್ಕೆ ಇಳಿದಿದೆ ಎನ್ನುವ ಅಂಕಿಅಂಶವನ್ನು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದೆ.

   ಎಲ್ಲರೂ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ

   ಎಲ್ಲರೂ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ

   ಭಾರತದಲ್ಲಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರ ಶೇಕಡವಾರು ಪ್ರಮಾಣ 60ಕ್ಕೆ ಏರಿದೆ. ಈಗಿರುವ ಸಕ್ರಿಯ 2,26,947 ಪ್ರಕರಣದಲ್ಲಿ ಎಲ್ಲರೂ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ. ಚೇತರಿಸಿಕೊಳ್ಳುತ್ತಿರುವ ಸಂಖ್ಯೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟಣೆಯಲ್ಲಿ ಹೇಳಲಾಗಿದೆ.

   ಕರುನಾಡಲ್ಲಿ ಕೊರೊನಾವೈರಸ್ ಸ್ಫೋಟ: 24 ಗಂಟೆಯಲ್ಲೇ 1502 ಮಂದಿಗೆ ಸೋಂಕು

   ಐಸಿಎಂಆರ್ ಪ್ರಕಾರ, ಕೋವಿಡ್ ತಪಾಸಣೆಯನ್ನು ಇದುವರೆಗೆ 9ಮಿಲಿಯನ್ ಗಿಂತಲೂ ಹೆಚ್ಚು

   ಐಸಿಎಂಆರ್ ಪ್ರಕಾರ, ಕೋವಿಡ್ ತಪಾಸಣೆಯನ್ನು ಇದುವರೆಗೆ 9ಮಿಲಿಯನ್ ಗಿಂತಲೂ ಹೆಚ್ಚು

   ಐಸಿಎಂಆರ್ ಪ್ರಕಾರ, ಕೋವಿಡ್ ತಪಾಸಣೆಯನ್ನು ಇದುವರೆಗೆ ಒಂಬತ್ತು ಮಿಲಿಯನ್ ಗಿಂತಲೂ ಹೆಚ್ಚು ಜನರಿಗೆ ಮಾಡಲಾಗಿದೆ. ಜುಲೈ ಒಂದರ ಪ್ರಕಾರ 90,56,173 ಜನರ ಸ್ಯಾಂಪಲ್ ಪರೀಕ್ಷಿಸಲಾಗಿದೆ. 1,065 ಟೆಸ್ಟಿಂಗ್ ಲ್ಯಾಬ್ ಗಳು ದೇಶದಲ್ಲಿದ್ದು, ಇದರಲ್ಲಿ 768 ಸಾರ್ವಜನಿಕ ವಲಯದ ಮತ್ತು 297 ಖಾಸಗಿ ವಲಯದ ಲ್ಯಾಬ್ ಗಳಾಗಿವೆ.

   ಗುಣಮುಖರಾಗುತ್ತಿರುವ ಸಂಖ್ಯೆಯಲ್ಲಿ ಕರ್ನಾಟಕ ಹತ್ತನೇ ಸ್ಥಾನ

   ಗುಣಮುಖರಾಗುತ್ತಿರುವ ಸಂಖ್ಯೆಯಲ್ಲಿ ಕರ್ನಾಟಕ ಹತ್ತನೇ ಸ್ಥಾನ

   ಕರ್ನಾಟಕದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 8,384. ಇಂದು (ಜುಲೈ 2) ಬಿಡುಗಡೆಯಾದವರ ಸಂಖ್ಯೆ 271. ಇದು, ಕಳೆದ ಹತ್ತು ದಿನಕ್ಕೆ ಹೋಲಿಸಿದರೆ ಅತಿಹೆಚ್ಚು. ಬಳ್ಳಾರಿಯಲ್ಲಿ ಅತಿಹೆಚ್ಚು 62 ಜನ ಗುಣಮುಖರಾಗಿದ್ದಾರೆ. ದೇಶದಲ್ಲಿ ಗುಣಮುಖರಾಗುತ್ತಿರುವ ಸಂಖ್ಯೆಯಲ್ಲಿ ಕರ್ನಾಟಕ ಹತ್ತನೇ ಸ್ಥಾನದಲ್ಲಿದೆ.

   English summary
   As Per Union Health Ministry India's Recovery Rate Improves To Nearly 60 Percent,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X