ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೆಗೂ ತನ್ನ ಫಾರಂ ಹೌಸ್ ನಲ್ಲಿ ಪತ್ತೆಯಾದ ದಾವೂದ್ ಇಬ್ರಾಹಿಂ

|
Google Oneindia Kannada News

ವಿಶ್ವಕ್ಕೆ ತಾನೆಂತಹ ಸುಳ್ಳುಗಾರ ಎಂದು ಮತ್ತೊಮ್ಮೆ ಪಾಕಿಸ್ತಾನ ರುಜುವಾತು ಪಡಿಸಿದೆ. ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಟೆಂಡ್ ಟೆರರಿಸ್ಟ್ ಕಮ್ ಡಾನ್ ದಾವೂದ್ ಇಬ್ರಾಹಿಂ ಪಾಕ್ ನಲ್ಲಿ ಪತ್ತೆಯಾಗಿದ್ದಾನೆ.

ಬಂಧನ ಮತ್ತು ಸಾವಿನ ಭಯದಿಂದ ತನ್ನ ನೆಲೆಯನ್ನು ಬದಲಾಯಿಸುತ್ತಲೇ ಇರುವ ದಾವೂದ್, ಪಾಕಿಸ್ತಾನದ ವಾಣಿಜ್ಯ ನಗರ ಕರಾಚಿಯಲ್ಲಿದ್ದಾನೆ ಎಂದು ಹೇಳಲಾಗುತ್ತಿತ್ತು.

1998ರಲ್ಲಿ ದಾವೂದ್ ಹತ್ಯೆ ಸ್ಕೆಚ್ ಮಿಸ್ ಆಗಿದ್ದು ಹೇಗೆ? ಪೂರ್ಣ ವರದಿ1998ರಲ್ಲಿ ದಾವೂದ್ ಹತ್ಯೆ ಸ್ಕೆಚ್ ಮಿಸ್ ಆಗಿದ್ದು ಹೇಗೆ? ಪೂರ್ಣ ವರದಿ

ಈ ಹಿಂದೆ, ಕೇಂದ್ರ ತನಿಖಾ ದಳ ನೀಡಿದ ಮಾಹಿತಿಯ ಪ್ರಕಾರ, ದೆಹಲಿ ಪೊಲೀಸರು ನಡೆಸಿದ ಫೋನ್ ಟ್ರ್ಯಾಕಿಂಗ್ ನಲ್ಲಿ, ಕೊನೆಯ ಬಾರಿ ದಾವೂದ್, ತನ್ನ ಕ್ರೈಂ ಸಿಂಡಿಕೇಟ್ ಡಿ ಕಂಪೆನಿಯ ಸಹದ್ಯೋಗಿಯೊಂದಿಗೆ ನವೆಂಬರ್ 2016ರಲ್ಲಿ ಮಾತನಾಡಿದ್ದು ಪತ್ತೆಯಾಗಿತ್ತು.

ಪಾತಕಿ ದಾವೂದ್ ಮಾಜಿ ಬಂಟ ಏಜಾಜ್ ನಿಂದ ಸ್ಫೋಟಕ ಮಾಹಿತಿಪಾತಕಿ ದಾವೂದ್ ಮಾಜಿ ಬಂಟ ಏಜಾಜ್ ನಿಂದ ಸ್ಫೋಟಕ ಮಾಹಿತಿ

ಇದಾದ ನಂತರ, ದಾವೂದ್ ಬಗ್ಗೆ ಯಾವುದೇ ಸುದ್ದಿಯಿರಲಿಲ್ಲ. ಇದರ ನಡುವೆ, ದಾವೂದ್ ತೀವ್ರ ಅನಾರೋಗ್ಯ ಪೀಡಿತನಾಗಿ, ಈಗಲೋ, ಆಗಲೋ ಎನ್ನುವ ಸ್ಥಿತಿಯಲ್ಲಿದ್ದಾನೆ ಎಂದು ಹೇಳಲಾಗುತ್ತಿತ್ತು. ಈಗ, ಆತ ತನ್ನ ಫಾರಂ ಹೌಸ್ ನಲ್ಲಿ ಪತ್ತೆಯಾಗಿದ್ದಾನೆ. ಆದರೆ, ಆತ ಪತ್ತೆಯಾಗಿರುವುದು ಕರಾಚಿಯಲ್ಲಲ್ಲ.

ದಾವೂದ್ ಸಹಚರ ಏಜಾಜ್ ಲಕ್ಡಾವಾಲ

ದಾವೂದ್ ಸಹಚರ ಏಜಾಜ್ ಲಕ್ಡಾವಾಲ

ಈ ವರ್ಷದ ಆದಿಯಲ್ಲಿ ಬಂಧಿತನಾಗಿದ್ದ ದಾವೂದ್ ಸಹಚರ ಏಜಾಜ್ ಲಕ್ಡಾವಾಲ ಕೆಲವೊಂದು ಮಹತ್ವದ ಮಾಹಿತಿಯನ್ನು ವಿಚಾರಣಾ ಅಧಿಕಾರಿಗಳ ಎದುರು ಬಾಯಿ ಬಿಟ್ಟಿದ್ದ. ದಾವೂದ್ ಅಲ್ಲದೆ, ಅನೀಸ್, ಛೋಟಾ ಶಕೀಲ್ ಮುಂತಾದ ಉಗ್ರರಿಗೂ ಪಾಕಿಸ್ತಾನದ ಐಎಸ್ಐ ಭದ್ರತೆ ಒದಗಿಸಿದೆ. ಈ ಬಗ್ಗೆ ಪಾಕಿಸ್ತಾನ ಪ್ರಧಾನಿ , ಸೇನಾ ಮುಖ್ಯಸ್ಥರಿಗೂ ಇದರ ಅರಿವಿದೆ ಎಂದು ಲಕ್ಡಾವಾಲ ಹೇಳಿದ್ದ.

ಕರಾಚಿಯಲ್ಲಿ ನೆಲೆಸಿದ್ದ ಬಗ್ಗೆ ಖಚಿತ ಮಾಹಿತಿಗಳಿದ್ದವು

ಕರಾಚಿಯಲ್ಲಿ ನೆಲೆಸಿದ್ದ ಬಗ್ಗೆ ಖಚಿತ ಮಾಹಿತಿಗಳಿದ್ದವು

ಗಲ್ಫ್ ನಲ್ಲಿದ್ದ ದಾವೂದ್, ಕರಾಚಿಯಲ್ಲಿ ನೆಲೆಸಿದ್ದ ಬಗ್ಗೆ ಖಚಿತ ಮಾಹಿತಿಗಳಿದ್ದವು. ಆದರೆ, ಇದೆಲ್ಲಾ ಸುಳ್ಳು ಎಂದು ಪಾಕಿಸ್ತಾನ ಹೇಳುತ್ತಾ ಬರುತ್ತಿತ್ತು. ಈಗ, ದಾವೂದ್, ಪಾಕಿಸ್ತಾನದ ರಾಜಧಾನಿ ಇಸ್ಲಮಾಬಾದ್ ನಲ್ಲಿರುವ ತನ್ನ ತೋಟದ ಮನೆಯಲ್ಲಿ ಪತ್ತೆಯಾಗಿದ್ದಾನೆ.

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್

ಕಳೆದ ಭಾನುವಾರ (ಮೇ 10) ಇಸ್ಲಮಾಬಾದ್ ನ ಫಾರಂ ಹೌಸ್ ನಲ್ಲಿ ದಾವೂದ್ ಪತ್ತೆಯಾಗಿದ್ದಾನೆಂದು ಗುಪ್ತಚರ ಇಲಾಖೆ ವರದಿ ಮಾಡಿದೆ. ಇನ್ನೊಂದು ಗಮನಿಸಬೇಕಾದ ಅಂಶವೇನಂದರೆ, ಈತನ ಫಾರಂ ಹೌಸ್, ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಪಕ್ಕದ ಮನೆಯಲ್ಲೇ ಇದೆ.

ಲಷ್ಕರ್-ತೊಯ್ಬಾ ಸಂಘಟನೆ

ಲಷ್ಕರ್-ತೊಯ್ಬಾ ಸಂಘಟನೆ

ಇದರ ಜೊತೆಗೆ, ತನ್ನ ತಾಯ್ನಾಡಿನ ಬಗ್ಗೆ ಹೆಮ್ಮೆಯ ಮಾತನಾಡಿದ್ದ ದಾವೂದ್ ಇಬ್ರಾಹಿಂ ಈಗ ಮತ್ತೆ ಲಷ್ಕರ್-ತೊಯ್ಬಾ ಸಂಘಟನೆಯ ಜೊತೆ ಕೈಜೋಡಿಸಿ, ಭಾರತದ ವಿರುದ್ದ ದಾಳಿ ನಡೆಸಲು ಕಾರ್ಯತಂತ್ರ ರೂಪಿಸುತ್ತಿದ್ದಾನೆಂದು ವರದಿಯಾಗಿದೆ.

English summary
As Per Intelligence Source, Dawood Ibrahim Spotted In Farm House On May 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X