ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡಿಯಲ್ಲಿ ಆದೇಶಕ್ಕಾಗಿ ಕಾದಿರುವ ಭಾರತದ 140 ಯುದ್ಧ ವಿಮಾನಗಳು

By ವಿಕಾಸ್ ನಂಜಪ್ಪ
|
Google Oneindia Kannada News

ಶ್ರೀನಗರ, ಫೆಬ್ರವರಿ 17: ಪುಲ್ವಾಮಾದಲ್ಲಿ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಆತ್ಮಾಹುತಿ ದಾಳಿಗೆ ತಕ್ಕ ಉತ್ತರ ನೀಡಲು ಮೋದಿ ಸರ್ಕಾರ ಸಜ್ಜಾಗಿದೆ. ಪೋಖ್ರಾನ್ ನಲ್ಲಿ ವಾಯುಸೇನೆ ಶಕ್ತಿ ಪ್ರದರ್ಶನ ನಂತರ ಯುದ್ಧ ವಿಮಾನಗಳನ್ನು ಸಜ್ಜಾಗಿ ನಿಲ್ಲಿಸಲಾಗಿದೆ.

ವಾಯುನೆಲೆಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಬಂದರೆ ಸಂಪೂರ್ಣ ಪ್ರಮಾಣದಲ್ಲಿ ದಾಳಿ ನಡೆಸಲು ಸಜ್ಜಾಗಿರಲು ಆದೇಶ ಸಿಕ್ಕಿದೆ. ಈ ಬಗ್ಗೆ ಒನ್ಇಂಡಿಯಾ ಪ್ರತಿನಿಧಿ ಜತೆ ಮಾತನಾಡಿದ ದೆಹಲಿಯ ಉನ್ನತ ವಲಯದ ಅಧಿಕಾರಿಯೊಬ್ಬರು. ವಾಯು ಸೇನೆ ಶಕ್ತಿ ಪ್ರದರ್ಶನದಲ್ಲಿ ಬಳಸಲಾದ ಮಿಗ್, ಸುಖೋಯ್ ಸೇರಿದಂತೆ ಎಲ್ಲಾ ಯುದ್ಧ ವಿಮಾನಗಳು ಗಡಿ ಭಾಗದಲ್ಲಿ ನಿಯೋಜಿಸಲು ಆದೇಶಿಸಲಾಗಿದೆ.

ಪಾಕಿಸ್ತಾನ ಗಡಿ ಸಮೀಪವೇ ವಾಯು ಶಕ್ತಿ ಪ್ರದರ್ಶಿಸಿದ ಭಾರತ ಪಾಕಿಸ್ತಾನ ಗಡಿ ಸಮೀಪವೇ ವಾಯು ಶಕ್ತಿ ಪ್ರದರ್ಶಿಸಿದ ಭಾರತ

ಈ ಬಾರಿ ದಾಳಿ ನಡೆದರೆ ಸರ್ಜಿಕಲ್ ಸ್ಟ್ರೈಕ್ ರೀತಿಯಲ್ಲಿ ಸರಿಯಾದ ತಾಣಗಳನ್ನು ಗುರುತಿಸಿ ಧ್ವಂಸಗೊಳಿಸಲಾಗುತ್ತದೆ. ಆದರೆ, ಅಂತಿಮ ಆದೇಶಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು.

As India readies for Pulwama revenge, IAF lines up 140 aircraft near border

ಸರಿ ಸುಮಾರು 140 ಏರ್ ಕ್ರಾಫ್ಟ್ ಗಳು ಅಭ್ಯಾಸ ನಿರತವಾಗಿದ್ದು, ಸರಿಯಾದ ಸಮಯ, ಸಂದರ್ಭಕ್ಕಾಗಿ ಕಾತುರದಿಂದ ಕಾದಿದ್ದಾರೆ. ಪಾಕಿಸ್ತಾನದ ಗಡಿ ಭಾಗ, ಪಾಕ್ ಅಕ್ರಮಿತ ಕಾಶ್ಮೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಪುಲ್ವಾಮ ದಾಳಿ : ಬಾಂಬ್ ತಯಾರಿ ತರಬೇತಿ ಪಡೆದು ಕಾಶ್ಮೀರಕ್ಕೆ ಬಂದಿದ್ದರುಪುಲ್ವಾಮ ದಾಳಿ : ಬಾಂಬ್ ತಯಾರಿ ತರಬೇತಿ ಪಡೆದು ಕಾಶ್ಮೀರಕ್ಕೆ ಬಂದಿದ್ದರು

ಗಡಿ ಭಾಗದಿಂದ ಪಾಕಿಸ್ತಾನದ ಕಡೆಗೆ ಉಗ್ರರ ಕ್ಯಾಂಪ್ ಗಳು ಹಿಂತಿರುಗುತ್ತಿರುವ ಮಾಹಿತಿ ಸಿಕ್ಕಿದೆ. ಏರ್ ಛೀಫ್ ಮಾರ್ಷಲ್ ಬಿಎಸ್ ಧನೋ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಐಎಎಫ್ ಯಾವುದೇ ಕ್ಷಣದಲ್ಲಿ ಆದೇಶ ಪಾಲಿಸಲು ಸಿದ್ಧವಾಗಿದ್ದೇವೆ ಎಂದಿದ್ದಾರೆ. ದಿನ ಹಾಗೂ ರಾತ್ರಿ ಅಥವಾ ಯಾವುದೇ ಸಮಯ, ಯಾವುದೇ ಪ್ರತಿಕೂಲ ವಾತಾವರಣವಿದ್ದರೂ ಸರಿ, ದಾಳಿ ನಡೆಸಲು ತಮ್ಮ ತಂಡ ಸದಾ ಸನ್ನದ್ಧವಾಗಿದೆ. ಸ್ವಯಂಚಾಲಿತ ಬಾಂಬಿಂಗ್ ವ್ಯವಸ್ಥೆ ಹೊಂದಿದ್ದು ಯಾವುದೇ ರೀತಿ ಪ್ರತಿದಾಳಿಗೂ ಸಜ್ಜಾಗಿವೆ ಎಂದಿದ್ದಾರೆ.

English summary
India has said that it would give Pakistan a befitting reply for shielding and aiding the Jaish-e-Mohammad, which carried out the Pulwama attack. India has been exploring several options and said that it would look to corner Pakistan in every possible way.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X