ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಹದ ಲಾಭ ಪಡೆದ ಮಿಷನರಿಗಳು: ಎಗ್ಗಿಲ್ಲದೆ ಸಾಗಿದೆ ಮತಾಂತರದ ಹಾವಳಿ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 9: ಮಹತ್ವದ ಕಾರ್ಯಾಚರಣೆಯಲ್ಲಿ ಉತ್ತರ ಪ್ರದೇಶದ ಚಾಂಡ್‌ವಾಕ್ ಪೊಲೀಸರು ಕ್ರೈಸ್ತ ಧರ್ಮದ ಮತಾಂತರದ ಪ್ರಚಾರ ನಡೆಸುತ್ತಿದ್ದ 271 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹಿಂದುತ್ವದ ಬಗ್ಗೆ ಸುಳ್ಳು ಮಾಹಿತಿ ಹರಡುತ್ತಿದ್ದ ಮತ್ತು ತಮ್ಮ ಧರ್ಮಕ್ಕೆ ಮತಾಂತರವಾಗುವಂತೆ ಜನರಿಗೆ ಆಮಿಷವೊಡ್ಡುತ್ತಿದ್ದ ಆರೋಪ ದಾಖಲಿಸಲಾಗಿದೆ.

ಇಂತಹ ಘಟನೆಗಳು ದೇಶದಲ್ಲಿ ಹೆಚ್ಚಳವಾಗುತ್ತಿರುವುದು ಕಂಡುಬಂದಿದೆ. ಮಿಷನರಿಗಳು ಪ್ರಾಕೃತಿಕ ವಿಕೋಪಕ್ಕೆ ಒಳಗಾದ ಪ್ರದೇಶಗಳಿಗೆ ತೆರಳಿ ಮತಾಂತರದ ಚಟುವಟಿಕೆಗಳನ್ನು ನಡೆಸುವುದು ಮಿಷನರಿಗಳ ಗುರಿ. ಈಗ ಕೇರಳ ಮತ್ತು ಕೊಡಗು ಈ ಸಮಸ್ಯೆಯ ಇತ್ತೀಚಿನ ಬಲಿಪಶುಗಳಾಗುತ್ತಿವೆ ಎನ್ನುತ್ತವೆ ಸುದ್ದಿಸಂಸ್ಥೆ ಮೂಲಗಳು.

ಮೊಘಲ್ ಚಕ್ರವರ್ತಿಗಳ ಮೇಲೆ ಮತ್ತೆ ಯೋಗಿ ಆದಿತ್ಯನಾಥ್ ವಾಗ್ದಾಳಿಮೊಘಲ್ ಚಕ್ರವರ್ತಿಗಳ ಮೇಲೆ ಮತ್ತೆ ಯೋಗಿ ಆದಿತ್ಯನಾಥ್ ವಾಗ್ದಾಳಿ

ದಕ್ಷಿಣ ಭಾರತದ ರಾಜ್ಯಗಳಾದ ಕೇರಳ, ತಮಿಳುನಾಡು ಮತ್ತು ತೆಲಂಗಾಣಗಳಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಚಟುವಟಿಕೆ ಅತ್ಯಧಿಕ ಪ್ರಮಾಣದಲ್ಲಿದೆ ಎಂದು ಅಂಕಿ ಅಂಶಗಳು ದೃಢಪಡಿಸುತ್ತವೆ. ಪೂರ್ವದ ರಾಜ್ಯಗಳಲ್ಲಿ ಇದು ಇನ್ನಷ್ಟು ಮಿತಿ ಮೀರಿದೆ.

ಭಾರತದಲ್ಲಿ ಧರ್ಮ ಪರಿವರ್ತನೆ

ಭಾರತದಲ್ಲಿ ಧರ್ಮ ಪರಿವರ್ತನೆ

ವರ್ಷಗಳು ಕಳೆದಂತೆ ಈ ಮಿಷಿನರಿಗಳು ಹೆಚ್ಚು ಕಾರ್ಯೋನ್ಮುಖವಾಗಿವೆ. ಸಮಾಜದ ಕೇಂದ್ರಭಾಗಕ್ಕೆ ನುಗ್ಗಲು ಪ್ರಯತ್ನಿಸುತ್ತಿರುವ ಅವರು ವಂಚನೆಗೆ ಒಳಗಾಗುವಂತಹ ಜನರ ಮೇಲೆ ಬಲವಂತವಾಗಿ ಕ್ರೈಸ್ತ ಧರ್ಮವನ್ನು ಹೇರುತ್ತಿದ್ದಾರೆ ಎನ್ನುತ್ತವೆ ಮೂಲಗಳು.

ಉದಾಹರಣೆಗೆ, ಬೈಬಲ್ ಅನ್ನು ಭಾರತದ ಪ್ರತಿ ಸ್ಥಳೀಯ ಭಾಷೆಗೂ ಭಾಷಾಂತರಿಸಿ ಅದನ್ನು ಹಂಚಲಾಗುತ್ತಿದೆ.

ಇತ್ತೀಚೆಗೆ ಕೊಡವ ಭಾಷೆಯಲ್ಲಿ ಬೈಬಲ್‌ನ ಚಿತ್ರಗಳು ಹರಿದಾಡುತ್ತಿರುವುದು ಪತ್ತೆಯಾಗಿತ್ತು. ಕೊಡಗು ಪ್ರವಾಹ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದಾಗ ಸಾವಿರಾರು ಜನರು ವಂಚನೆಗೆ ಒಳಗಾಗುತ್ತಿದ್ದರು.

ಇದೇ ಪರಿಸ್ಥಿತಿ ಪ್ರವಾಹದಿಂದ ತತ್ತರಿಸಿದ ಕೇರಳದಲ್ಲಿಯೂ ಇದೆ. ಸುನಾಮಿ ನಂತರ ಜನರು ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿಯೂ ಮತಾಂತರ ನಡೆದ ಪ್ರಕರಣಗಳು ವರದಿಯಾಗಿದ್ದವು.

ಕ್ಷೋಭೆ ಮೂಡಿಸುವ ಗುರಿ

ಕ್ಷೋಭೆ ಮೂಡಿಸುವ ಗುರಿ

ರಾಜ್ಯದಲ್ಲಿನ ಮಿಷನರಿ ಚಟುವಟಿಕೆಗಳ ಬಗ್ಗೆ ವರದಿ ನೀಡುವಂತೆ ಮಧ್ಯಪ್ರದೇಶ ಸರ್ಕಾರ ಕೇಳಿದೆ. ಏಳು ಸದಸ್ಯರ ಸಮಿತಿಯು 77 ಕೇಂದ್ರಗಳ 700 ಗ್ರಾಮಗಳಿಗೆ ತೆರಳಿ 1 ಸಾವಿರಕ್ಕೂ ಅಧಿಕ ಮಂದಿಯ ಮಾತುಗಳನ್ನು ಆಲಿಸಿದೆ.

ಕ್ರೈಸ್ತ ಧರ್ಮವನ್ನು ವಿಸ್ತರಿಸುವ ಸಮಾನ ಜಾಗತಿಕ ನೀತಿಯ ಭಾಗವಾಗಿ, ಆಧ್ಯಾತ್ಮಿಕ ಮಾರ್ಗದಲ್ಲಿ ಅಲ್ಲದೆ ಪಾಶ್ಚಿಮಾತ್ಯ ಪ್ರಾಬಲ್ಯವನ್ನು ಮರುಸ್ಥಾಪಿಸಲು ಭಾರತದಲ್ಲಿ ಧರ್ಮ ಪರಿವರ್ತನೆಯ ಚಟುವಟಿಕೆಗಳು ನಡೆಯುತ್ತಿವೆ.

ಕ್ರೈಸ್ತ ಧರ್ಮೇತರ ಸಮಾಜಗಳಲ್ಲಿನ ಸಮಗ್ರತೆಯಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡುವುದು ಇದರ ಉದ್ದೇಶ. ಇದಕ್ಕಾಗಿ ಲೆಕ್ಕವಿಲ್ಲದಷ್ಟು ವಿದೇಶಿ ಹಣ ಭಾರತಕ್ಕೆ ಹರಿದುಬರುತ್ತಿದೆ. ಈ ಹಣವನ್ನು ಬಳಸಿಕೊಂಡು ವಿವಿಧ ಸಂಸ್ಥೆಗಳು ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿಯನ್ನು ಮತಾಂತರಗೊಳಿಸುವಲ್ಲಿ ಯಶಸ್ವಿಯಾಗಿವೆ. ಈ ಚಟುವಟಿಕೆಗಳು ದೇಶದ ಭದ್ರತೆಗೂ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.

ಧರ್ಮದ ಮುಖವಾಡದಲ್ಲಿ ವ್ಯವಹಾರ ಮಾಡೋರಿಗೆ ಸರಕಾರದ ಕಡಿವಾಣ ಬೇಡವೆ?ಧರ್ಮದ ಮುಖವಾಡದಲ್ಲಿ ವ್ಯವಹಾರ ಮಾಡೋರಿಗೆ ಸರಕಾರದ ಕಡಿವಾಣ ಬೇಡವೆ?

ವಿಭಿನ್ನ ತಂತ್ರಗಳು

ವಿಭಿನ್ನ ತಂತ್ರಗಳು

ಮತಾಂತರವನ್ನು ಹೇರಲು ಮಿಷನರಿಗಳು ವಿಭಿನ್ನ ತಂತ್ರಗಳನ್ನು ಅನುಸರಿಸುತ್ತಿವೆ. ನೈಸರ್ಗಿಕ ವಿಕೋಪಗಳು ಸಂಭವಿಸಿದ ಸ್ಥಳಗಳಿಗೆ ತಕ್ಷಣವೇ ತಲುಪುತ್ತಾರೆ ಮತ್ತು ಅಲ್ಲಿನ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುತ್ತಾರೆ. ಸಂಕಷ್ಟಕ್ಕೆ ಒಳಗಾದ ಜನರಿಗೆ ನೆರವಾಗುವ ನೆಪದಲ್ಲಿ ದೊಡ್ಡ ಪ್ರಮಾಣದ ಹಣ ಹರಿದುಬರುತ್ತದೆ. ಅದು ಧಾರ್ಮಿಕ ಕಾರ್ಯದ ಉದ್ದೇಶಕ್ಕೆ ಬಳಕೆಯಾಗುತ್ತದೆ.

ಕೊಡಗಿನಲ್ಲಿ ಈ ಹಿಂದೆಯೂ ಮತಾಂತರದ ಇಂತಹ ಪ್ರಯತ್ನಗಳು ನಡೆದಿದ್ದವು. ಆದರೆ, ಜಿಲ್ಲೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಅವಘಡ ಸಂಭವಿಸಿರುವುದು ಇದೇ ಮೊದಲು. ಅದರರ್ಥ ಜನರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದೆ.

ಹಿಂದೆಯೂ ನಡೆದಿದ್ದವು

ಹಿಂದೆಯೂ ನಡೆದಿದ್ದವು

ಕೆಲವು ವರ್ಷಗಳ ಹಿಂದೆ ಜಿಲ್ಲೆಯಲ್ಲಿ 'ಕೂರ್ಗಿ ಕ್ರಿಶ್ಚಿಯನ್ ಫೆಲೋಷಿಪ್' ಎಂಬ ಚಟುವಟಿಕೆಯೊಂದು ಕಾಣಿಸಿಕೊಂಡಿತ್ತು. ಮಾಧ್ಯಮಗಳಲ್ಲಿ ಹೆಚ್ಚಾಗಿ ವರದಿಯಾಗುತ್ತಿದ್ದಂತೆಯೇ ಆ ಅಂಗಡಿಯನ್ನು ಮುಚ್ಚಲಾಯಿತು.

2010ರಲ್ಲಿ ಪೊನ್ನಂಪೇಟೆಯಲ್ಲಿ ಮತಾಂತರದ ಚಟುವಟಿಕೆ ಪತ್ತೆಯಾಗಿತ್ತು. ಕಾಲೋನಿಯೊಂದರಲ್ಲಿ 13 ಮಂದಿ ಮುಗ್ಧ ಆದಿವಾಸಿಗಳನ್ನು ಮತಾಂತರವಾಗುವಂತೆ ಒತ್ತಾಯಿಸುತ್ತಿದ್ದರು. ನಗದು ಹಣ ಮತ್ತು ಉಡುಗೊರೆಗಳ ಆಮಿಷವೊಡ್ಡುತ್ತಿದ್ದರು. ಅವರಿಗೆ ಹುಣಸೂರು, ಹಾಸನ ಮತ್ತು ಇತರೆ ಭಾಗಗಳಿಂದ ಜನರು ನೆರವು ನೀಡುತ್ತಿದ್ದರು.

ಕೊಡಗು ಮತ್ತು ಕೇರಳಗಳಲ್ಲಿನ ತಂತ್ರವೂ ಇದೇ ಸ್ವರೂಪದ್ದು. ಕೇರಳದಲ್ಲಿ ಇಂತಹ ಘಟನೆಗಳು ಸಾಕಷ್ಟು ವರದಿಯಾಗಿದ್ದವು. ಆದರಿಲ್ಲಿ ಪ್ರವಾಹ ಸಂತ್ರಸ್ತರು ಸುಲಭವಾಗಿ ಸಿಗುತ್ತಿದ್ದಾರೆ.

ಮತಾಂತರಕ್ಕಾಗಿ ಕ್ರಿಶ್ಚಿಯನ್ ಸಂಘಟನೆಗಳಿಂದ ಎನ್ ಜಿಒಗಳಿಗೆ 17 ಸಾವಿರ ಕೋಟಿಮತಾಂತರಕ್ಕಾಗಿ ಕ್ರಿಶ್ಚಿಯನ್ ಸಂಘಟನೆಗಳಿಂದ ಎನ್ ಜಿಒಗಳಿಗೆ 17 ಸಾವಿರ ಕೋಟಿ

ಜನರ ಮನವೊಲಿಕೆ

ಜನರ ಮನವೊಲಿಕೆ

ಚಾಂಡ್ವಾಕ್ ಚೌಕ್ ಪ್ರಕರಣದಲ್ಲಿ, ಜೌನ್ಪುರ, ವಾರಣಾಸಿ, ಅಜಮ್‌ಗಡ ಮತ್ತು ಘಾಜಿಪುರ ಜಿಲ್ಲೆಗಳಲ್ಲಿ ಕೆಲವು ವರ್ಷಗಳಿಂದ ಜನರನ್ನು ಬಾಲ್ದೆಹ್ ಗ್ರಾಮದಲ್ಲಿರುವ ಚರ್ಚ್‌ಗೆ ಬಂದು ಅಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಮನವೊಲಿಸಲಾಗುತ್ತಿದೆ ಎಂದು ವಕೀಲ ಬ್ರಿಜೇಶ್ ಸಿಂಗ್ ದೂರಿನಲ್ಲಿ ತಿಳಿಸಿದ್ದಾರೆ.

ಕ್ರೈಸ್ತ ಧರ್ಮದೆಡೆಗೆ ಸೆಳೆಯಲು ಮತಾಂತರಿಗಳು ಹಿಂದುತ್ವದ ಬಗ್ಗೆ ವಿವಿಧ ಸುಳ್ಳು ಮಾಹಿತಿಗಳನ್ನು ಹರಡುತ್ತಿದ್ದಾರೆ.

ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಮಾಡಲು ಜನರನ್ನು ಪ್ರಭಾವಿಸುವ ಸಲುವಾಗಿ ನಿಷೇಧಿತ ಔಷಧಗಳನ್ನು ಹಂಚುತ್ತಿದ್ದಾರೆ.

ಹಿಂದುತ್ವದ ಬಗ್ಗೆ ಅಪಪ್ರಚಾರ

ಹಿಂದುತ್ವದ ಬಗ್ಗೆ ಅಪಪ್ರಚಾರ

ಅಲ್ಪಸಂಖ್ಯಾತ ಧರ್ಮದ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಏಳು ಸದಸ್ಯರ ಸಮಿತಿ ವರದಿ ನೀಡಿದೆ. ಭಾರತದಲ್ಲಿನ ಮಿಷನರಿ ಸಂಘಟನೆಗಳಲ್ಲಿ ಅಮೆರಿಕದ ಸಿಬ್ಬಂದಿಯ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿದೆ.

ಪತ್ರಿಕೆ, ರೇಡಿಯೋ ಮತ್ತು ಟೆಲಿವಿಷನ್‌ಗಳಿಂದ ಸಾಮೂಹಿಕ ಮತಾಂತರಕ್ಕೆ ಮುಕ್ತವಾಗಿರುವ ದೇಶಗಳಲ್ಲಿ ಅಂತಾರಾಷ್ಟ್ರೀಯ ಮಿಷನರಿ ಕೌನ್ಸಿಲ್‌ಗಳ ಉದ್ದೇಶಪೂರ್ವಕ ನೀತಿಯ ಫಲವಾಗಿ ಈ ಹೆಚ್ಚಳ ಉಂಟಾಗಿದೆ.

ಧರ್ಮ, ಜಾತಿ, ಸಮುದಾಯ, ಭಾಷೆ, ಜನಾಂಗಗಳಲ್ಲಿನ ಲೋಪದ ಎಳೆಗಳನ್ನು ಹುಡುಕಿ ಅದನ್ನು ತಮ್ಮ ಉದ್ದೇಶಕ್ಕೆ ಬಳಸಿಕೊಳ್ಳುವುದು ಮಿಷನರಿಗಳ ಗುರಿಯಾಗಿದೆ. ಈ ಲೋಪದೋಷಗಳನ್ನು ಹುಡುಕುವ ಮತಾಂತರ ಕಾರ್ಖಾನೆಗಳನ್ನು ರಚಿಸಲಾಗಿದೆ. ಇವು ಮತಾಂತರವಾಗದ ಪ್ರಬಲ ಸಮುದಾಯಗಳ ನಡುವೆ ದ್ವೇಷ ಮತ್ತು ವಿಭಜನೆ ಮೂಡಿಸುವುದು ಅವುಗಳ ಗುರಿ.

ಈಶಾನ್ಯ ರಾಜ್ಯಗಳಲ್ಲಿ ಕ್ರಿಯಾಶೀಲ

ಈಶಾನ್ಯ ರಾಜ್ಯಗಳಲ್ಲಿ ಕ್ರಿಯಾಶೀಲ

ಶಸ್ತ್ರಾಸ್ತ್ರ ಹೋರಾಟಗಳು ತೀವ್ರವಾಗಿರುವ ಈಶಾನ್ಯ ರಾಜ್ಯಗಳಲ್ಲಿ ಈ ಪ್ರಯತ್ನಗಳು ಹೆಚ್ಚು ಫಲಪ್ರದವಾಗಿವೆ. ಈ ಸಮಸ್ಯೆ ಎಷ್ಟು ಆಳವಾಗಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳುವುದಕ್ಕೇ ಭಾರತ ಸರ್ಕಾರಕ್ಕೆ ಸಾಕಷ್ಟು ಸಮಯ ಬೇಕಾಗಿದೆ. ಏಕೆಂದರೆ, ಈ ಹೋರಾಟ, ಸಂಘರ್ಷಗಳು ರಾಜಕೀಯ ಅಥವಾ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಎಂದೇ ಮೇಲ್ನೋಟಕ್ಕೆ ಕಂಡುಬರುತ್ತವೆ. ಆದರೆ, ಅದರಾಚೆಗೆ ಬೃಹತ್ ಸಂಚು ಇರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ.

ಸಂಘರ್ಷಗಳು ಅಥವಾ ಹೋರಾಟಗಳನ್ನು ನಡೆಸುವುದು ಮಾತ್ರವಲ್ಲ, ಇಂತಹ ವಿವಿಧ ಸನ್ನಿವೇಶಗಳನ್ನು ಬಳಸಿಕೊಂಡು ಮತಾಂತರ ಕಾರ್ಖಾನೆಗಳು ತಮ್ಮ ಗುರಿ ಈಡೇರಿಸಲು 24*7 ಕ್ರಿಯಾಶೀಲವಾಗುತ್ತಿವೆ. ಕ್ರೈಸ್ತ ಧರ್ಮವು ಅತ್ಯಂತ ಪ್ರಭಾವಶಾಲಿ ಧರ್ಮ ಎಂಬ ಭಾವನೆಯನ್ನು ಅನೇಕ ಹಿಂದೂಗಳ ಮನಸ್ಸಿನಲ್ಲಿ ಮೂಡಿಸಿ ಅವರನ್ನು ಮತಾಂತರಿಸಲಾಗಿದೆ. ಹಿಂದುತ್ವ ಕೆಟ್ಟದ್ದು ಎಂದು ನಂಬಿಸುವ ವ್ಯವಸ್ಥಿತ ಪಿತೂರಿಯೂ ಎಗ್ಗಿಲ್ಲದೆ ನಡೆಯುತ್ತಿದೆ.

English summary
In a major operation, the Chandwak police in Uttar Pradesh filed cases against 271 persons on charges of promoting conversion to Christianity. The charge was that they were spreading misinformation about Hinduism and luring people into their fold.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X