ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಡಿಶಾ, ಆಂಧ್ರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆ

|
Google Oneindia Kannada News

ನವದೆಹಲಿ ಮೇ 11: ಅಸಾನಿ ಚಂಡಮಾರುತವು ದುರ್ಬಲಗೊಂಡಿದ್ದು, ಒಡಿಶಾ, ಆಂಧ್ರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಅನೇಕ ಭಾಗಗಳಲ್ಲಿ ತೀವ್ರ ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಗುರುವಾರ ಬೆಳಗ್ಗಿನಿಂದ ವಾತಾವರಣದಲ್ಲಿ ತೀವ್ರ ಬದಲಾವಣೆಯಾಗಲ್ಲಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಇಲಾಖೆ ತಿಳಿಸಿದೆ.

"ಚಂಡಮಾರತವು ಮುಂದಿನ ಕೆಲವು ಗಂಟೆಗಳ ಕಾಲ ಉತ್ತರಾಭಿಮುಖವಾಗಿ ಚಲಿಸುತ್ತದೆ ಮತ್ತು ಬುಧವಾರ ಮಧ್ಯಾಹ್ನದಿಂದ ಸಂಜೆವರೆಗೆ ನರಸಾಪುರ, ಯಾನಂ, ಕಾಕಿನಾಡ, ತುನಿ ಮತ್ತು ವಿಶಾಖಪಟ್ಟಣ ಕರಾವಳಿಯಲ್ಲಿ ಉತ್ತರ-ಈಶಾನ್ಯಕ್ಕೆ ನಿಧಾನವಾಗಿ ಮರುಕಳಿಸುವ ಸಾಧ್ಯತೆಯಿದೆ. ಜತೆಗೆ ರಾತ್ರಿಯ ಹೊತ್ತಿಗೆ ಉತ್ತರ ಆಂಧ್ರ ಪ್ರದೇಶದ ಕರಾವಳಿಯಿಂದ ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿಗೆ ಚಲಿಸುವ ಸಾಧ್ಯತೆಯಿದೆ,'' ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 ಅಸಾನಿ ದುರ್ಬಲ: ಬೆಂಗಳೂರಿನಲ್ಲಿ ಇನ್ನೂ 5 ದಿನ ಮಳೆ ಸಾಧ್ಯತೆ ಅಸಾನಿ ದುರ್ಬಲ: ಬೆಂಗಳೂರಿನಲ್ಲಿ ಇನ್ನೂ 5 ದಿನ ಮಳೆ ಸಾಧ್ಯತೆ

ಈ ಹಿನ್ನೆಯಲ್ಲಿ ಆಂಧ್ರ ಪ್ರದೇಶ ಸರಕಾರವು ಕರಾವಳಿ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಿದೆ. ಇನ್ನೊಂದೆಡೆ ಒಡಿಶಾ ಸರಕಾರ ಕೂಡ ಮಲ್ಕಾನ್‌ಗಿರಿ, ಕೊರಾಪುಟ್‌, ಗಂಜಾಂ ಮತ್ತು ಗಜಪತಿ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಿದೆ.

"ನರಸಾಪುರ, ಯಾನಂ, ಕಾಕಿನಾಡ, ತುನಿ ಮತ್ತು ವಿಶಾಖಪಟ್ಟಣ ಕರಾವಳಿ ತೀರದಲ್ಲಿ ಅಸಾನಿ ಚಂಡಮಾರುತ ಚಲಿಸುತ್ತಿದ್ದು, ಬುಧವಾರ ರಾತ್ರಿ ವೇಳೆಗೆ ದುರ್ಬಲವಾಗಲಿದೆ. ಗುರುವಾರ ಬೆಳಗಿನ ವೇಳೆಗೆ ವಾಯುಭಾರ ಕುಸಿತವಾಗುವ ಸಾಧ್ಯತೆ ಇದೆ,'' ಎಂದು ವಿಶಾಖಪಟ್ಟಣದ ಚಂಡಮಾರುತ ಎಚ್ಚರಿಕಾ ಕೇಂದ್ರ(ಸಿಡ್ಬ್ಲೂಸಿ) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

As Cyclone Asani weakens, Odisha, Andhra, West Bengal brace for heavy rains

"ಆಂಧ್ರ ಪ್ರದೇಶದ ಕೃಷ್ಣಾ, ಪೂರ್ವ ಗೋದಾವರಿ, ಯಾನಂ, ಪಶ್ಚಿಮ ಗೋದಾವರಿ ಮತ್ತು ವಿಶಾಖಪಟ್ಟಣ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಗುಂಟೂರು, ಶ್ರೀಕಾಕುಳಂ, ವಿಜಯನಗರ ಮತ್ತು ಪ್ರಕಾಶಂ ಜಿಲ್ಲೆಗಳ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 24 ಗಂಟೆಗಳಲ್ಲಿ ನೆಲ್ಲೂರು ಮತ್ತು ಕಡಪ ಜಿಲ್ಲೆಗಳ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ,'' ಎಂದು ಸಿಡ್ಬ್ಯೂಸಿ ಎಚ್ಚರಿಕೆ ನೀಡಿದೆ.

As Cyclone Asani weakens, Odisha, Andhra, West Bengal brace for heavy rains

Recommended Video

Kuldeepಗಳ ಮುಖಾಮುಖಿಯಲ್ಲಿ ಗೆದ್ದವರು ಯಾರು | Oneindia Kannada

ಅಸಾನಿ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್‌)ಯ 50 ತಂಡಗಳನ್ನು ನಿಯೋಜಿಸಿದೆ. ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರ ಪ್ರದೇಶದಲ್ಲಿ ಈಗಾಗಲೇ 22 ಎನ್‌ಡಿಆರ್‌ಎಫ್‌ ತಂಡಗಳನ್ನು ನಿಯೋಜಿಸಿದ್ದು, ಉಳಿದ 28 ತಂಡಗಳನ್ನುಆಯಾ ರಾಜ್ಯಗಳಲ್ಲಿ ಸಿದ್ಧತೆಯ ಸ್ಥಿತಿಯಲ್ಲಿ ಇರುವಂತೆ ತಿಳಿಸಲಾಗಿದೆ ಎಂದು ಎನ್‌ಡಿಆರ್‌ಎಫ್‌ ವಕ್ತಾರರು ಮಾಹಿತಿ ನೀಡಿದ್ದಾರೆ.
"ಗುರುವಾರ ಬೆಳಗಿನ ಜಾವದವರೆಗೆ ಪಶ್ಚಿಮ ಬಂಗಾಳದ ಪುರ್ಬಾ, ಪಶ್ವಿಮ ಮೆದಿನಿಪುರ್, ಉತ್ತರ ಮತ್ತು ದಕ್ಷಿಣ 24 ಪರಗಣಗಳು ಹಾಗೂ ನಾಡಿಯಾ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ,'' ಎಂದು ಪಶ್ಚಿಮ ಬಂಗಾಳದ ಹವಾಮಾನ ಇಲಾಖೆ ತಿಳಿಸಿದೆ.

English summary
As Cyclone Asani weakens, several parts of Odisha, Andhra Pradesh, West Bengal brace for heavy rains
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X