ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಜ್ರಿಯಿಂದ 1ಕೋಟಿ ಪರಿಹಾರ: ಎಷ್ಟು ಸಮಂಜಸ?

By Srinath
|
Google Oneindia Kannada News

ನವದೆಹಲಿ, ಡಿ. 31: ಆಮ್‌ ಆದ್ಮಿ ಪಕ್ಷ ಅರವಿಂದ ಕೇಜ್ರಿವಾಲಾರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತತ್ ಕ್ಷಂಣದಿಂದಲೇ ಅಭೂತಪೂರ್ವವವಾಗಿ ನಾಡಿನ ಜನರ ಕಷ್ಟ ಸುಖಕ್ಕೆ ಜತೆಯಾಗಿದ್ದಾರೆ. ತಾವು ಅಧಿಕಾರ ಸ್ವೀಕರಿಸಿದ ದಿನದಂದೇ ಮದ್ಯ ಮಾಫಿಯಾ ಕಪಿಮುಷ್ಟಿಗೆ ಸಿಕ್ಕಿ ಅನ್ಯಾಯವಾಗಿ ಸತ್ತುಹೋದ ದಿಲ್ಲಿ ಪೊಲೀಸ್ ಪೇದೆಯ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಹೌದು ಬರೋಬ್ಬರಿ 1 ಕೋಟಿ ರೂ ಪರಿಹಾರ ನೀಡಲಾಗಿದೆ. ಇದು ನಿಜಕ್ಕೂ ಅತ್ಯಂತ ಸೂಕ್ಷ್ಮ ವಿಚಾರ. ಒಂದು ಕಡೆ ಬೆಲೆ ಕಟ್ಟಲಾಗದ ಜೀವ. ಮತ್ತೊಂದು ಕಡೆ ಭಾರಿ ಮೊತ್ತದ ಪರಿಹಾರ ನೀಡಿರುವುದು ಎಷ್ಟು ಸಮಂಜಸ, ಅದು ಉಚಿತವೇ ಎಂಬುದಕ್ಕಿಂತ ಹೆಚ್ಚಾಗಿ ಅದರ ಅಗತ್ಯವಿತ್ತಾ? ಎಂಬ ಪ್ರಶ್ನೆಗಳು ಕಾಡಲಾರಂಭಿಸಿವೆ.

ಹೀಗೆ ಸಾವಿನ ಮನೆಯಲ್ಲಿ ಪ್ರಶ್ನೆಗಳನ್ನು ಎತ್ತಿರುವುದು ಅನುಚಿತವಾ? ಎಂಬ ಧರ್ಮ ಸೂಕ್ಷ್ಮವೂ ಇಲ್ಲಿದೆ. ಆದರೆ ಇದಕ್ಕೆ ಆಮ್ ಮತದಾರನೇ ಸಕಾಲದಲ್ಲಿ ಉತ್ತರಿಸಬೇಕು! ಸದ್ಯಕ್ಕೆ ನಮ್ಮ ಓದುಗರೂ ತಮ್ಮ ಅಮೂಲ್ಯ ಅನಿಸಿಕೆಯನ್ನು ಹಂಚಿಕೊಳ್ಳಬಹುದು.

Arvind Kejriwal announces 1 cr compensation Delhi police constable murder
Ofcourse, ಪೇದೆಯ ಕುಟುಂಬಕ್ಕೆ ಅದು ತುಂಬಲಾರದ ನಷ್ಟ , ಕೋಟಿ ಅಲ್ಲ. 2 ಕೋಟಿ ಕೊಟ್ಟರೂ ಅದೂ ಸಾಲದು. ಆದರೆ ಹೀಗೆ ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂಬಂತೆ ಡಿ.ವಿ.ಎಸ್. ಕರ್ಣನಂತೆ ಮುಖ್ಯಮಂತ್ರಿ ಕೇಜ್ರಿವಾಲಾರು ಪರಿಹಾರ ಘೋಷಿಸಿರುವುದ ಎಷ್ಟರಮಟ್ಟಿಗೆ ಸರಿ ಎಂಬುದು ತೀವ್ರ ಚರ್ಚೆ ಮತ್ತು ವಿವಾದಕ್ಕೆ ಗ್ರಾಸವನ್ನೊದಗಿಸಿದೆ.

ಹೊಸದರಲ್ಲಿ ಅಗಸ ಎತ್ತೆತ್ತಿ ಒಗೆದಂತೆ :
ಮುಖ್ಯಮಂತ್ರಿ ಕೇಜ್ರಿವಾಲಾರ ಈ ಪಾಟಿ ಭಾರಿ ಮೊತ್ತದ ಪರಿಹಾರ ಘೋಷಣೆ ನ ಭೂತೋ ನ ಭವಿಷ್ಯತ್ ಎಂಬಂತಿದೆ. ನೆನಪಿನಾಳಕ್ಕೆ ಇಳಿದರೆ ಯಾವೊಬ್ಬ ಜನಪ್ರತಿನಿಧಿಯೂ ಈ ಪಾಟಿ ಪರಿಹಾರ ನೀಡಿದ್ದು ಸ್ಮರಣೆಗೆ ಬರುತ್ತಿಲ್ಲ. ಗಮನಿಸಿ, ಹುತಾತ್ಮ ಪೇದೆ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಿರುವುದು ಮುಂಬೈ ದಾಳಿಯಲ್ಲಿ ಹುತಾತ್ಮರಾದವರ ಕುಟಂಬ ವರ್ಗಕ್ಕೆ ನೀಡಿದ ಪರಿಹಾರ ಮೊತ್ತಕ್ಕಿಂತಲೂ ಹೆಚ್ಚು!

ಅಷ್ಟಕ್ಕೂ ಕಾನ್ಸಟೇಬಲ್ ಗೆ ಒಂದು ಕೋಟಿ ನೀಡಿದ ಮುಖ್ಯಮಂತ್ರಿ ಕೇಜ್ರಿವಾಲಾರು ನಾಳೆ ಇನ್ನೂ ದೊಡ್ಡ ಮಟ್ಟದ ಅನಾಹುತವಾದರೆ ಅದನ್ನು ಹೇಗೆ ಕಾಂಪೆನ್ಸೇಟ್ ಮಾಡಬಲ್ಲರು? ಮುಖ್ಯಮಂತ್ರಿಯಾದವರಿಗೆ ಅಷ್ಟು ಮಾತ್ರ ವಿವೇಚನೆ ಬೇಡವೇ? ಅಷ್ಟಕ್ಕೂ 1 ಕೋಟಿ ರೂಗಳನ್ನು ಅವರು ತಮ್ಮ ಜೇಬಿಂದ ಎತ್ತಿಕೊಟ್ಟಿದ್ದಲ್ಲ. ಪೇದೆಗಿಂತಲೂ ಕೆಳಮಟ್ಟದ ಜೀವನ ನಡೆಸುತ್ತಾ, ಕಾಲಕಾಲಕ್ಕೆ ಪೈಸಾಪೈಸಾ ತೆರಿಗೆ ತುಂಬುತ್ತಿರುವ ಜನಸಾಮಾನ್ಯನ ಹಣ ಅದು.

ಕೇಜ್ರಿವಾಲಾ ಹಾಕಿಕೊಟ್ಟಿರುವ ಈ ಮೇಲ್ಪಂಕ್ತಿಯು ಒಂದು ಕುಟುಂಬಕ್ಕೆ ನಿಜಕ್ಕೂ ಆಸರೆಯಾಗಬಲ್ಲದು. ಅದರಲ್ಲಿ ಎರಡು ಮಾತಿಲ್ಲ. ಆದರೆ ಸೂಕ್ಷ್ಮವಾಗಿ ಹೇಳಬೇಕೆಂದರೆ ಇದು ಮುಂದಿನ ದಿನಗಳಲ್ಲಿ ಹಲವಾರು ಸಮಸ್ಯೆಗಳನ್ನು ಸೃಷ್ಟಿಸುವುದರಲ್ಲಿಯೂ ಎರಡು ಮಾತಿಲ್ಲ. ಆಮ್‌ ಆದ್ಮಿ ಕೇಜ್ರಿವಾಲಾ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ದಿನ

ಹಾಕಿ ಸ್ಟಿಕ್‌ ಚಾಕು ಬಾಕುಗಳಿಂದ ಬಡಿದು ಕೊಂದರು :
48 ವರ್ಷದ ವಿನೋದ್‌ ಕುಮಾರ್‌ ಎಂಬ ದೆಹಲಿಯ ಪೊಲೀಸ್ ಪೇದೆಯನ್ನು ನಿಯೋಜನೆ ಮೇರೆಗೆ ಅಬಕಾರಿ ಇಲಾಖೆಗೆ ಕಳಿಸಿಕೊಡಲಾಗಿತ್ತು. ಡಿಸೆಂಬರ್ 27ರ ರಾತ್ರಿ ವಿನೋದ್‌ ಜತೆಗೆ ಅಬಕಾರಿ ಇಲಾಖೆಯ ತಂಡ ಮದ್ಯ ಮಾಫಿಯಾ ಆರೋಪಿಗಳನ್ನು ಬಂಧಿಸಲು ತೆರಳಿತ್ತು. ಆ ವೇಳೆ ಅಬಕಾರಿ ಇಲಾಖೆಯ ತಂಡ ಮೇಲೆ ಮಾರಣಾಂತಿಕ ದಾಳಿ ನಡೆದಿತ್ತು. ತಂಡದಲ್ಲಿದ್ದ ಇತರರು ಸ್ಥಳದಿಂದ ಕಾಲ್ಕಿತ್ತರಾದರೂ ದುರ್ವಿಧಿ ವಿನೋದರನ್ನು ಕಸಿದುಕೊಂಡಿತ್ತು. ದಾಳಿಗೆ ಸಿಕ್ಕಿ ನಲುಗಿದ ವಿನೋದ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. RIP.

English summary
Arvind Kejriwal announces 1 cr compensation Delhi police constable murder. Delhi CM Kejriwal has announced a one-crore compensation for the wife of a Delhi Police constable killed last week while on duty. The 48-year-old Constable Vinod Kumar was beaten to death on Saturday, allegedly by bootleggers in Ghitorni village of south Delhi during a raid. He was on deputation with the Excise Department of the Delhi government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X