ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಶಸ್ತಿ ವಾಪಸ್ ಕೊಟ್ಟ ಅರುಂಧತಿಗೆ ಟ್ವಿಟ್ಟರ್‌ನಲ್ಲಿ ಮಂಗಳಾರತಿ

|
Google Oneindia Kannada News

ನವದೆಹಲಿ, ನವೆಂಬರ್. 05: ಉತ್ತಮ ಚಿತ್ರಕತೆಗೆ ವಿಭಾಗಕ್ಕೆ ಕೇಂದ್ರ ಸರ್ಕಾರ ನೀಡಿದ್ದ ಪ್ರಶಸ್ತಿ ಹಿಂದಿರುಗಿಸಿದ ಲೇಖಕಿ ಅರುಂಧತಿ ರಾಯ್ ನಡೆ ಮತ್ತು ಅವರು ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಬರೆದುಕೊಂಡ ಲೇಖನಕ್ಕೆ ಸಾಮಾಜಿಕ ತಾಣಗಳಲ್ಲಿ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಪ್ರಶಸ್ತಿ ಹಿಂದಕ್ಕೆ ನೀಡಿದ ಸಾಹಿತಿಗಳು, ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ, ಬಾಲಿವುಡ್ ನಟ ಶಾರುಖ್ ಖಾನ್ ಸೇರಿದಂತೆ ಅಸಹಿಷ್ಣುತೆ ಬಗ್ಗೆ ಹೇಳಿಕೆ ನೀಡಿದ ಅನೇಕರನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ. ಅಲ್ಲದೇ ಕೆಲ ಪ್ರಶ್ನೆಗಳನ್ನು ಅವರ ಮುಂದಿಡಲಾಗಿದೆ.[ಪ್ರಶಸ್ತಿ ಹಿಂದಿರುಗಿಸಿದವರ ಪಟ್ಟಿ ಸೇರಿದ ಅರುಂಧತಿ ರಾಯ್]

ಸಾಹಿತಿಗಳ ಮೇಲಿನ ಹಲ್ಲೆ, ದಾದ್ರಿ ಘಟನೆ, ಗೋಮಾಂಸ ವಿವಾದ, ದಲಿತ ಮಕ್ಕಳ ಸಜೀವ ದಹನದಂತ ವಿಚಾರಗಳನ್ನು ಇಟ್ಟುಕೊಂಡು ಸಾಹಿತಿಗಳು, ಚಿಂತಕರು ಪ್ರಶಸ್ತಿ ಹಿಂದಕ್ಕನೀಡುತ್ತಿದ್ದಾರೆ. ಸಾಹಿತಿಗಳ ಈ ಕ್ರಮವನ್ನು ನಾಗರಿಕರು ತಮ್ಮದೇ ಆದ ದೃಷ್ಟಿಕೋನದಲ್ಲಿ ವಿಶ್ಲೇಷಿಸಿ, ಪ್ರಶ್ನೆ ಮಾಡುತ್ತಿದ್ದಾರೆ.

ಅಸಹಿಷ್ಣುತೆ ಪದಕ್ಕೆ ಬೇರೆ ಅರ್ಥವಿದೆ

ಅಸಹಿಷ್ಣುತೆ ಪದಕ್ಕೆ ಬೇರೆ ಅರ್ಥವಿದೆ

ಅಸಹಿಷ್ಣುತೆ ಎಂಬ ಪದಕ್ಕೂ ನಡೆಯುತ್ತಿರುವ ದೌರ್ಜನ್ಯಕ್ಕೂ ಬಹಳ ವ್ಯತ್ಯಾಸವಿದೆ. ಈ ಬಗೆಯ ಹಿಂಸೆಯ ವಿರುದ್ಧ ಸಾಹಿತಿಗಳು, ಚಿಂತಕರು ಒಟ್ಟಾಗಿ ಹೋರಾಡಬೇಕು ಎಂದು ರಾಯ್ ಹೇಳಿದ್ದರು.

ಯಾಕೆ ಪ್ರಶಸ್ತಿ ಹಿಂದೆ ಕೊಡುತ್ತಿದ್ದಾರೆ?

ಯಾಕೆ ಪ್ರಶಸ್ತಿ ಹಿಂದೆ ಕೊಡುತ್ತಿದ್ದಾರೆ?

ಯಾಕೆ ಸಾಹಿತಿಗಳೆಲ್ಲ ಪ್ರಶಸ್ತಿ ಹಿಂದಕ್ಕೆ ನೀಡುತ್ತಿದ್ದಾರೆ? ಇವರೇನು ಉಗ್ರಗಾಮಿಗಳ ಅಥವಾ ದೇಶದ ವೈರಿಗಳ ಜತೆ ಕೈ ಜೋಡಿಸಿದ್ದಾರೆಯೇ? ಎಂದು ಟ್ವಿಟರ್ ನಲ್ಲಿ ಪ್ರಶ್ನೆ ಮಾಡಲಾಗಿದೆ.

ಒಳ್ಳೆಯ ಬರಹಗಾರ್ತಿ, ಆದರೆ ಭಾರತ ವಿರೋಧಿ

ಅರುಂಧತಿ ರಾಯ್ ಉತ್ತಮ ಬರಹಗಾರ್ತಿ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಅವರಿಗೆ ನಿಕ್ಕೂ ಭಾರತದ ಬಗ್ಗೆ ಗೌರವಿದೆಯೇ? ಇಲ್ಲಿವರೆಗೆ ಭಾರತದ ಬಗ್ಗೆ ಸಕಾರಾತ್ಮಕವಾಗಿ ಬರೆದಿದ್ದನ್ನು ನಾನು ಕಂಡಿಲ್ಲ ಎಂದು ಅಭಿಪ್ರಾಯ ವ್ಯಕ್ಯವಾಗಿದೆ.

ಶಾರುಖ್ ಗೆ ಪಾಕಿಸ್ತಾನವಿದೆ

ಶಾರುಖ್ ಗೆ ಪಾಕಿಸ್ತಾನವಿದೆ

ಶಾರುಖ್ ಖಾನ್ ಗೆ ಪಾಕಿಸ್ತಾನವಿದೆ, ಅರುಂಧತಿ ರಾಯ್ ಮತ್ತು ದಿಪ್ನಾಕರ್ ಬ್ಯಾನರ್ಜಿ ಗೆ ಬಾಂಗ್ಲಾದೇಶವಿದೆ. ಆದರೆ ನಾರಾಯಣ ಮೂರ್ತಿ ಅವರಿಗೆ ಯಾವುದೇ ಆಯ್ಕೆ ಇಲ್ಲ ಎಂಬ ಕಟು ಅಭಿಪ್ರಾಯ ಮಂಡಿಸಲಾಗಿದೆ.

ಬರ್ಖಾ ದತ್ ಗೆ ಜತೆಗಾರ್ತಿ

ಬರ್ಖಾ ದತ್ ಗೆ ಜತೆಗಾರ್ತಿ

ರಾಯ್ ಪ್ರಶಸ್ತಿ ಹಿಂದಕ್ಕೆ ನೀಡಿದ ನಂತರ ಬರ್ಖಾ ದತ್ ಅವರಿಗೆ ಅಂತಿಮವಾಗಿ ಜತೆಗಾರರೊಬ್ಬರು ಸಿಕ್ಕಂತಾಯಿತು ಎಂದೊಬ್ಬರು ಹೇಳಿದ್ದಾರೆ.

ಇದೀಗ ಹೋರಾಟ ಆರಂಭ

ರಾಯ್ ಪ್ರಶಸ್ತಿ ವಾಪಸ್ ನೀಡಿದ ನಂತರ ಇದೀಗ ಬೌದ್ಧಿಕ ಹೋರಾಟಕ್ಕೆ ನಿಜ ಆರಂಭ ಶುರುವಾಗಿದೆ. ಇದು ಯಾರ ಯಾರ ಮಧ್ಯೆ ಎಂಬುದನ್ನು ನೀವೇ ನೋಡಿಕೊಳ್ಳಿ

ಆಕ್ರೋಶದ ಟ್ವೀಟ್

ಪ್ರಶಸ್ತಿ ವಾಪಸ್ ಕೊಡುತ್ತಿರುವವರ ಮತ್ತು ಹೇಳಿಕೆ ನೀಡುತ್ತಿರುವವರನ್ನು ಉದ್ದೇಶಿಸಿ ಮಾಡಿದ ಆಕ್ರೋಶದ ಟ್ವೀಟ್.

Array

ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವೇ?

ಕಳೆದ 20 ವರ್ಷಗಳಲ್ಲಿ ಅರುಂಧತಿ ರಾಯ್ 45000 ಅಂಕಣಗಳನ್ನು ಬರೆದಿದ್ದಾರೆ. 23000 ಕಡೆ ಭಾಷಣ ಮಾಡಿದ್ದಾರೆ. ಹಾಗಾದರೆ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲವೆ?

English summary
Booker Prize winner Arundhati Roy Returned her National Award. And She said that she was "so proud" to join the writers, filmmakers and academics, who have returned their awards to protest against attacks on minorities, murder of rationalists, threats to free speech, enforcement of beef bans. But the citizens of India questioned in Social Media Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X