ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಚ್ಛೇದ 370 ಕುರಿತು ಬಿಜೆಪಿಯಿಂದ ರಾಷ್ಟ್ರಾದ್ಯಂತ ಜಾಗೃತಿ ಅಭಿಯಾನ

|
Google Oneindia Kannada News

ನವದೆಹಲಿ, ಆಗಸ್ಟ್ 22: ಪರಿಚ್ಛೇದ 370 ಕುರಿತು ಬಿಜೆಪಿಯು ಸೆಪ್ಟೆಂಬರ್‌ನಿಂದ ರಾಷ್ಟ್ರಾದ್ಯಂತ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲು ಚಿಂತನೆ ನಡೆಸಿದೆ.

ಸೆಪ್ಟೆಂಬರ್ 1ರಿಂದ ಅಭಿಯಾನವು ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಜೆಪಿ ನಡ್ಡ, ಹಿರಿಯ ಸಚಿವರ ನೇತೃತ್ವದಲ್ಲಿ ಸೆಪ್ಟೆಂಬರ್ 1-30ರವರೆಗೆ ಅಭಿಯಾನ ನಡೆಯಲಿದೆ.

ಪರಿಚ್ಛೇದ 370 ರದ್ದತಿ ವಿವಾದದ ಬಳಿಕ ಕಾಶ್ಮೀರದಲ್ಲಿ ಎರಡು ಹತ್ಯೆ ಪರಿಚ್ಛೇದ 370 ರದ್ದತಿ ವಿವಾದದ ಬಳಿಕ ಕಾಶ್ಮೀರದಲ್ಲಿ ಎರಡು ಹತ್ಯೆ

ಅಭಿಯಾನವು ಒಟ್ಟು 370 ಕಡೆಗಳಲ್ಲಿ ನಡೆಯಲಿದ್ದು, ಅದರಲ್ಲಿ 35 ನಗರಗಳಲ್ಲಿ ಸಭೆ ನಡೆಯಲಿದೆ. ಈ ಅಭಿಯಾನ ಕುರಿತು ಚರ್ಚಿಸಲು ಎರಡು ಸಮಿತಿಯನ್ನು ರಚಿಸಲಾಗಿದೆ. ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಗಜೇಂದ್ರ ಸಿಂಗ್ ಶೇಖಾವತ್ ಅವರ ಮೇಲ್ವಿಚಾರಣೆಯಲ್ಲಿ ಸಮಿತಿ ಇರಲಿದೆ.

Article 370 Public Awareness Campaign From BJP

ಕೇಂದ್ರ ಸರ್ಕಾರವು ಪರಿಚ್ಛೇದ 370 ರದ್ದುಗೊಳಿಸಿದ ಕಾರಣ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಕೂಡ ರದ್ದಾಗಿದೆ. ಈ ಕುರಿತು ಪಾಕಿಸ್ತಾನ ಭಾರತದ ಮೇಲೆ ಕಿಡಿ ಕಾರುತ್ತಿದೆ.

ಜಮ್ಮು ಮತ್ತು ಕಾಶ್ಮೀರ ಇದೀಗ ಕೇಂದ್ರಾಡಳಿತ ಪ್ರದೇಶವಾಗಿದ್ದು, ವಿಧಾನಸಭೆಯೂ ಇದೆ. ಭಾರತಕ್ಕೆ ಅನ್ವಯವಾಗುವ ಎಲ್ಲಾ ಕಾನೂನು ಜಮ್ಮು ಕಾಶ್ಮೀರಕ್ಕೂ ಅನ್ವಯಿಸಲಿದೆ.

ಜಮ್ಮು ಕಾಶ್ಮೀರದಲ್ಲಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರಿಗೆ ಮೀಸಲಾತಿ ದೊರೆಯಲಿದೆ. ವಿಧಿ 370 ರದ್ದು ಮಾಡಲು ಹಿಂದಿದ್ದ ಕಾರಣ, ರದ್ದು ಮಾಡಿರುವುದರಿಂದ ಜಮ್ಮು ಕಾಶ್ಮೀರದ ಜನರಿಗಾಗುವ ಉಪಯೋಗಗಳು ಏನೇನು ಎನ್ನುವುದರ ಕುರಿತು ಅಭಿಯಾನದಲ್ಲಿ ಮನವರಿಕೆ ಮಾಡಿಕೊಡಲಾಗುತ್ತದೆ.

English summary
BJP will organising Article 370 Awareness campaign from September 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X