• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿರುತೆರೆಯ ಜನಪ್ರಿಯ ನಿರ್ಮಾಪಕಿ ವಿರುದ್ಧ ಬಂಧನ ವಾರೆಂಟ್

|
Google Oneindia Kannada News

ಪಾಟ್ನಾ, ಸೆ. 29: ಭಾರತದ ಕಿರುತೆರೆ, ಮೆಗಾ ಸೀರಿಯಲ್ ಲೋಕದ ಅತ್ಯಂತ ಯಶಸ್ವಿ, ಜನಪ್ರಿಯ ನಿರ್ಮಾಪಕಿ ಏಕ್ತಾ ಕಪೂರ್ ವಿರುದ್ಧ ಬಂಧನ ವಾರೆಂಟ್ ಹೊರಡಿಸಲಾಗಿದೆ ಬಿಹಾರದ ನ್ಯಾಯಾಲಯವೊಂದರಿಂದ ಏಕ್ತಾ ಕಪೂರ್ ಹಾಗೂ ಅವರ ತಾಯಿ ಶೋಭಾ ಕಪೂರ್ ವಿರುದ್ಧ ಬಂಧನ ವಾರೆಂಟ್ ನೀಡಲಾಗಿದೆ.

ಏಕ್ತಾಕಪೂರ್ ಅವರು ತಮ್ಮ ವೆಬ್ ಸರಣಿಯೊಂದರಲ್ಲಿ ಭಾರತದ ಸೈನಿಕರು ಹಾಗೂ ಅವರ ಕುಟುಂಬದವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಸೈನಿಕರನ್ನು ಅವಮಾನಿಸಿದ ಮತ್ತು ಅವರ ಕುಟುಂಬ ಸದಸ್ಯರ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ನಿರ್ಮಾಪಕ ಏಕ್ತಾ ಕಪೂರ್ ಮತ್ತು ಆಕೆಯ ತಾಯಿ ಶೋಭಾ ಕಪೂರ್ ವಿರುದ್ಧ ಬಿಹಾರದ ಬೇಗುಸರಾಯ್ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ.

ಏಕ್ತಾ ನಿರ್ಮಾಣದ ವೆಬ್ ಸರಣಿ 'XXX' ಸೀಸನ್ 2 ಈಗ ವಿವಾದ ಕೇಂದ್ರ ಬಿಂದು ಎನಿಸಿಕೊಂಡಿದೆ. ಏಕ್ತಾ ಮತ್ತು ಶೋಭಾ ಕಪೂರ್ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಹಲವು ಬಾರಿ ಸಮನ್ಸ್ ಜಾರಿ ಮಾಡಿತ್ತು. ನ್ಯಾಯಾಲಯದ ಸಮನ್ಸ್ ಅನ್ನು ತಪ್ಪಿಸಿಕೊಂಡಿದ್ದರಿಂದ ವಾರೆಂಟ್ ಹೊರಡಿಸಲಾಗಿದೆ. ಬೇಗುಸರಾಯಿ ನಿವಾಸಿ ಶಂಭು ಕುಮಾರ್ ಎಂಬ ಮಾಜಿ ಸೈನಿಕರೊಬ್ಬರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ಏಕ್ತಾ ಮತ್ತು ಶೋಭಾ ಕಪೂರ್ ಅವರು ನ್ಯಾಯಾಲಯದ ಸಮನ್ಸ್ ಅನ್ನು ತಪ್ಪಿಸಿದ ನಂತರ ನ್ಯಾಯಾಲಯವು ವಾರಂಟ್ ಹೊರಡಿಸಿತು. ಬೇಗುಸರೈ ನಿವಾಸಿ ಶಂಭು ಕುಮಾರ್ ಎಂಬ ಮಾಜಿ ಸೈನಿಕ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಏಕ್ತಾ ಕಪೂರ್ ಪರ ವಕೀಲ ಹೃಷಿಕೇಶ್ ಪಾಠಕ್, ಏಕ್ತಾ ಕಪೂರ್ ಅವರ ಬಾಲಾಜಿ ಟೆಲಿ ಫಿಲ್ಮಸ್ ಸಂಸ್ಥೆ ಮಾಲೀಕತ್ವದ ಒಟಿಟಿ ವೇದಿಕೆ ಎಎಲ್ ಟಿ ಬಾಲಾಜಿಯಲ್ಲಿ ಪ್ರಸಾರವಾಗಿರುವ XXX ಸೀಸನ್ 2 ವೆಬ್ ಸರಣಿಯಲ್ಲಿ ಆಕ್ಷೇಪಾರ್ಹ ದೃಶ್ಯಗಳಿರುವ ಬಗ್ಗೆ ಈ ಹಿಂದೆ ದೂರು ಸಲ್ಲಿಸಲಾಗಿತ್ತು. 2022ರಲ್ಲಿ ಶಂಭು ಕುಮಾರ್ ಎಂಬುವರು ನೀಡಿದ ದೂರಿನ ಅನ್ವಯ ಸೈನಿಕನ ಹೆಂಡತಿಯ ಕುರಿತಂತೆ ಆಕ್ಷೇಪಾರ್ಹ ದೃಶ್ಯಗಳನ್ನು ವೆಬ್ ಸರಣಿ ಹೊಂದಿತ್ತು. ಆದರೆ, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ, ಕೋರ್ಟ್ ನಿರ್ದೇಶನದಂತೆ ಸದರಿ ದೃಶ್ಯಗಳನ್ನು ತೆಗೆದು ಹಾಕಲಾಗಿದೆ'' ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್‌ಗೆ ಉತ್ತರಿಸಲು ವಿಳಂಬವಾಗಿದ್ದು, ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಸೂಚಿ

English summary
A court in Bihar's Begusarai issued arrest warrants against producer Ekta Kapoor and her mother Shobha Kapoor on charges of allegedly insulting soldiers and hurting the sentiments of their family members in her web series
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X