ಗಡಿಯಲ್ಲಿ ಪಾಕ್ ಪುಂಡಾಟ, 1000ಕ್ಕೂ ಹೆಚ್ಚು ಜನರ ಸ್ಥಳಾಂತರ

Posted By:
Subscribe to Oneindia Kannada

ಶ್ರೀನಗರ, ಮೇ 14 : ಜಮ್ಮು ಮತ್ತು ಕಾಶ್ಮೀರದ ಗಡಿಗಳಲ್ಲಿ ಪಾಕಿಸ್ತಾನ ಪುಂಡಾಟ ಮುಂದುವರೆಸಿದ ಹಿನ್ನಲೆಯಲ್ಲಿ ಸುಮಾರು 1000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ರಜೌರಿಯ ನೌಶೆರಾ, ಮಜಕೋಟೆ, ಪುಲ್ವಾಮ ಸೇರಿದಂತೆ ಹಲವು ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡು ಹಾಗೂ ಶೆಲ್ ಗಳ ದಾಳಿ ನಡೆಸುತ್ತಿರುವ ಹಿನ್ನಲೆಯಲ್ಲಿಮುಂಜಾಗೃತ ಕ್ರಮವಾಗಿ ಗಡಿಯಲ್ಲಿರುವ ಜನರನ್ನು ನಿರಾಶ್ರಿತ ಕೇಂದ್ರಗಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.[ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ, ಇಬ್ಬರು ಬಲಿ]

Around 1,000 Evacuated After Heavy Pak Shelling In Jammu And Kashmir's Rajouri

ಗಡಿಯಲ್ಲಿ ಕಳೆದ ನಾಲ್ಕು ದಿನಗಳಿಂದಲೂ ಪಾಕಿಸ್ತಾನ ಸೇನೆ ನಿರಂತರವಾಗಿ ಕದನ ವಿರಾಮವನ್ನು ಉಲ್ಲಂಘನೆ ಮಾಡುತ್ತಲೇ ಇದ್ದು, ನಾಗರಿಕ ಪ್ರದೇಶ ಹಾಗೂ ಭಾರತೀಯ ಸೇನಾಪಡೆಗಳನ್ನು ಗುರಿಯಾಗಿರಿಸಿಕೊಂಡು ಗುಂಡಿನ ದಾಳಿ ನಡೆಸುತ್ತಿದೆ.

ಪಾಕ್ ದಾಳಿಗೆ ಈಗಾಗಲೇ ಇಬ್ಬರು ನಾಗರೀಕರು ಸಾವನ್ನಿಪ್ಪಿದ್ದಾರೆ. ಅಪ್ರಚೋದಿತ ಗುಂಡು ಹಾಗೂ ಶೆಲ್ ಗಳ ದಾಳಿ ಪರಿಣಾಮ ಗಡಿಯಲ್ಲಿನ ಆಸ್ತಿಪಾಸ್ತಿಗಳಿಗೆ ಅಪಾರ ಪ್ರಮಾಣ ಹಾನಿಯುಂಟಾಗಿದೆ. ಇದರಿಂದ ಮುಂಜಾಗೃತ ಕ್ರಮವಾಗಿ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Pakistan resorted to heavy firing and mortar shelling in Chiti Bakri in Chingus area of Jammu and Kashmir's Rajouri sector.The heavy shelling caused massive damage to buildings forcing evacuation of over 1,000 residents living close to the border.
Please Wait while comments are loading...