ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

just in: 10 ಮಿಲಿಯನ್ ನಕಲಿ ಹೆಸರುಗಳನ್ನು ತೆಗೆದ ಚುನಾವಣಾ ಆಯೋಗ!

|
Google Oneindia Kannada News

ನವದೆಹಲಿ, ಆಗಸ್ಟ್ 08: ಭಾರತೀಯ ಚುನಾವಣಾ ಆಯೋಗವು (ಇಸಿಐ) ಮತದಾರರ ಪಟ್ಟಿಯಲ್ಲಿನ ನಕಲಿ ಹೆಸರುಗಳನ್ನು ತೆಗೆದು ಹಾಕುವುದಕ್ಕೆ ಪ್ರಾಮುಖ್ಯತೆ ನೀಡಿದ್ದು ಕಳೆದ ಏಳು ತಿಂಗಳುಗಳಲ್ಲಿ ಸುಮಾರು 10 ಮಿಲಿಯನ್ ನಕಲಿ ಹೆಸರುಗಳನ್ನು ಅನ್ನು ತೆಗೆದುಹಾಕಲಾಗಿದೆ ಅಥವಾ ಸರಿಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನಸಂಖ್ಯೆಗನುಗುಣವಾಗಿ ಮತ್ತು ಛಾಯಾಚಿತ್ರಗಳ ಆಧಾರದಲ್ಲಿ ಈ ರೀತಿ ಕಂಡು ಬಂದ ನಕಲಿ ಹೆಸರುಗಳನ್ನು ತೆಗೆದು ಹಾಕಿ ಮತದಾರರ ಗುರುತಿನ ಚೀಟಿಗಳನ್ನು ಸರಿಪಡಿಸಲಾಗಿದೆ. ಮತದಾರರ ಸಮಗ್ರ ಡಿಜಿಟಲ್ ಬೇಸ್ ಮಾಡುವ ಪ್ರಯತ್ನದಲ್ಲಿರುವ ಚುನಾವಣಾ ಆಯೋಗ ನಕಲಿ ಪಟ್ಟಿಯನ್ನು ತೆಗೆದುಹಾಕುವುದರತ್ತ ಪ್ರಮುಖ ಗಮನ ಹರಿಸಿದೆ.

ಆಧಾರ್ ಕಾರ್ಡ್ ಜೊತೆ ವೋಟರ್ ಐಡಿ ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ವಿಧಾನಆಧಾರ್ ಕಾರ್ಡ್ ಜೊತೆ ವೋಟರ್ ಐಡಿ ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

ಈ ಪ್ರಕ್ರಿಯೆಯನ್ನು ಸುಲಭಗೊಳಿಸಲು ಆಗಸ್ಟ್ 1 ರಿಂದ ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಅನ್ನು ಸ್ವಯಂಪ್ರೇರಿತವಾಗಿ ಲಿಂಕ್ ಮಾಡಲು ಚುನಾವಣಾ ಆಯೋಗ ಅನುಮತಿ ನೀಡಿದೆ. ಇದಕ್ಕೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.

Around 10 million duplicate entries in electoral roll removed

"1,191,191 ಜನಸಂಖ್ಯಾಶಾಸ್ತ್ರೀಯವಾಗಿ ಒಂದೇ ರೀತಿಯ ಹೆಸರುಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ 9,27,853 ಅನ್ನು ತೆಗೆದುಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಕಲಿ ಹೆಸರುಗಳನ್ನು ಪತ್ತೆ ಮಾಡುವುದನ್ನು ಆಯಾ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳು ನಡೆಸುತ್ತಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇವುಗಳ ಕುರಿತು ಬೂತ್ ಮಟ್ಟದಲ್ಲಿ ಪರಿಶೀಲನೆ ನಡೆಸಲಾಗುವುದು. ಚುನಾವಣಾ ಆಯೋಗ ಸ್ವಯಂ ಪ್ರೇರಿತವಾಗಿ ಯಾವುದೇ ಹೆಸರುಗಳನ್ನು ಅಳಿಸುವುದಿಲ್ಲ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

Around 10 million duplicate entries in electoral roll removed

ಆಯೋಗವು ಇದೇ ರೀತಿಯ 3,18,89,422 ಛಾಯಾಚಿತ್ರದ ನಕಲಿ ಹೆಸರುಗಳನ್ನು ಗುರುತಿಸಿದೆ. ಅದರಲ್ಲಿ 98,00,412 ಅನ್ನು ಅಳಿಸಿದೆ. ಪ್ರಸ್ತುತ ದೇಶದಲ್ಲಿ ಸುಮಾರು 940 ಮಿಲಿಯನ್ ಮತದಾರರು ನೋಂದಣಿಯಾಗಿದ್ದಾರೆ.

ಸ್ವಯಂಪ್ರೇರಿತವಾಗಿ ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡುವುದರಿಂದ ಮತದಾರರ ಪಟ್ಟಿಯಲ್ಲಿನ ತಿದ್ದುಪಡಿಗಳು ಬೇಗನೇ ನಡೆಯುತ್ತವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಹೆಚ್ಚುವರಿಯಾಗಿರುವ ಮತ್ತು ನಕಲಿಯಾಗಿರುವ ವೋಟರ್ ಐಡಿಗಳನ್ನು ಗುರುತಿಸಿ ನಿವಾರಿಸುವ ಉದ್ದೇಶದಿಂದ ಆಧಾರ್ ಜೊತೆ ಅದನ್ನು ಜೋಡಿಸಲಾಗುತ್ತಿದೆ. ಮಹಾರಾಷ್ಟ್ರ ಮತ್ತು ತ್ರಿಪುರಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಅಭಿಯಾನ ಆರಂಭವಾಗಿದೆ.

Recommended Video

ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಎಷ್ಟು ತರಥಮ್ಯ ನಡಿಯತ್ತೆ ಗೊತ್ತಾ!! | OneIndia Kannada

English summary
Election Commission of India deleting duplicate entries and removed or corrected nearly 10 million of them over the last seven months. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X