ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fake:ಕೊವಿಡ್19 ರೋಗಿಗಳ ನಿಗಾ ಇಡಲು ಆರೋಗ್ಯ ಸೇತು Wristband?

|
Google Oneindia Kannada News

ನವದೆಹಲಿ, ಏಪ್ರಿಲ್ 23: ಕೊರೊನಾವೈರಸ್ ಸೋಂಕು ಹರಡದಂತೆ ಎಚ್ಚರಿಕೆ ವಹಿಸಿರುವ ಕೇಂದ್ರ ಆರೋಗ್ಯ ಇಲಾಖೆಯು, ರೋಗಿಗಳ ಮೇಲೆ ನಿಗಾ ಇಡಲು ಆರೋಗ್ಯ ಸೇತು ಆಪ್ ಹೊರತಂದಿದೆ. ಆದರೆ ಇದೇ ಆಪ್ ರೂಪಾಂತರ ಹೊಂದಿ ಮಣಿಕಟ್ಟಿನ ಕಡಗ(wristband)ದಂತೆ ಬಳಸಬಹುದು ಎಂದು ಪ್ರಮುಖ ದೈನಿಕವೊಂದು ಸುದ್ದಿ ಪ್ರಕಟಿಸಿತ್ತು. ಆದರೆ, ಈ ರೀತಿ ಯಾವುದೇ ಬದಲಾವಣೆ, ಸೌಲಭ್ಯ ಬಂದಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಕೇಂದ್ರ ಸರ್ಕಾರವು ಸಾವಿರಾರು ಸಂಖ್ಯೆಯಲ್ಲಿ ಬ್ಯಾಂಡ್ ಗಳನ್ನು ತಯಾರಿಸುತ್ತಿದ್ದು, ಇದನ್ನು ಆರೋಗ್ಯ ಸೇತು ಆಪ್ ಜೊತೆಗೆ ಹೊಂದಿಸಲಾಗುವುದು(ಉದಾಹರಣೆಗೆ Mi ಬ್ಯಾಂಡ್,ಲೆನೆವೋ ಬ್ಯಾಂಡ್ ಥರಾ) ಎಂಬ ಸುದ್ದಿ ಹಬ್ಬಿತ್ತು. ಈ ಮೂಲಕ ಕೋವಿಡ್ 19 ರೋಗಿಗಳ ಮೇಲೆ, ಹೋಂ ಕ್ವಾರಂಟೈನ್ ಸಂಪೂರ್ಣ ನಿಗಾವಹಿಸಲು ಸಾಧ್ಯ ಹಾಗೂ ಸೋಂಕು ಇರದವರಿಗೆ ಅಲರ್ಟ್ ಕಳಿಸಲು ಅನುಕೂಲ ಎಂಬ ಸುದ್ದಿಯನ್ನು ಉಲ್ಲೇಖಿಸಿ ಪಿಐಬಿ ಸ್ಪಷ್ಟನೆ ನೀಡಿದೆ.

Arogya Setu wristbands to monitor COVID-19 patients? Govt says its fake

ಕೊರೊನಾವೈರಸ್ ಸೋಂಕು ಟ್ರ್ಯಾಕ್: ಆರೋಗ್ಯ App ಬಳಕೆ ಹೇಗೆ? ಕೊರೊನಾವೈರಸ್ ಸೋಂಕು ಟ್ರ್ಯಾಕ್: ಆರೋಗ್ಯ App ಬಳಕೆ ಹೇಗೆ?

ಸದ್ಯಕ್ಕೆ ಈ ರೀತಿ ಯಾವುದೇ ಸೌಲಭ್ಯವನ್ನು ಆರೋಗ್ಯ ಇಲಾಖೆ ಅಥವಾ ಕೇಂದ್ರ ಸರ್ಕಾರ ಹೊರ ತಂದಿಲ್ಲ. ಈ ರೀತಿ ಯಾರಾದರೂ ಬ್ಯಾಂಡ್ ಮಾರಾಟ ಮಾಡುತ್ತಿದ್ದರೆ ಖರೀದಿಸಬೇಡಿ ಹಾಗೂ ಸಂಬಂಧಪಟ್ಟ ಇಲಾಖೆ, ಪೊಲೀಸರಿಗೆ ದೂರು ನೀಡಿ. ಆರೋಗ್ಯ ಸೇತು ಆಪ್ ಮೂಲಕ ಆರೋಗ್ಯವಂತರ ಬಳಿ ಕೊರೊನಾ ಪಾಸಿಟಿವ್ ಇರುವವರು ಸುಳಿದರೆ ಅಲರ್ಟ್ ಸಿಗಲಿದೆ. ಮಿಕ್ಕಂತೆ ಸಹಾಯವಾಣಿ, ಕೊವಿಡ್ ಚಿಕಿತ್ಸಾಕೇಂದ್ರಗಳ ಮಾಹಿತಿ ಸಿಗಲಿದೆ ಎಂದು ಹೇಳಿದೆ.

English summary
A prominent newspaper has claimed that the government is procuring wrist bands to monitor the movement of COVID-19 patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X