ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ನಬ್ ವಿಡಿಯೋ ಮಾಡಿದ ಕುನಾಲ್‌ಗೆ ಇದೆಂಥ ಶಿಕ್ಷೆ!

|
Google Oneindia Kannada News

ನವದೆಹಲಿ, ಜನವರಿ 28 : ವಿಮಾನ ಪ್ರಯಾಣದ ವೇಳೆ ಕಾಮಿಡಿಯನ್ ಕುನಾಲ್ ಕಾಮ್ರಾ ಪತ್ರಕರ್ತ ಅರ್ನಬ್ ಗೋಸ್ವಾಮಿಗೆ ಪ್ರಶ್ನೆ ಕೇಳಿದ ವಿಡಿಯೋ ವೈರಲ್ ಆಗಿದೆ. ಇದಕ್ಕಾಗಿ ಕುನಾಲ್‌ಗೆ ಇಂಡಿಗೋ ಸಂಸ್ಥೆ ಶಿಕ್ಷೆಯನ್ನು ನೀಡಿದೆ.

Recommended Video

ಅರ್ನಬ್ ವಿಡಿಯೋ ಮಾಡಿದ ಕುನಾಲ್‌ಗೆ ಇದೆಂಥ ಶಿಕ್ಷೆ ! | ARNAB GOSWAMI | KUNAL | ONEINDIA KANNADA |

ಇಂಡಿಗೋ 6ಇ 5317 ಮುಂಬೈ-ಲಕ್ನೋ ನಡುವಿನ ವಿಮಾನದಲ್ಲಿ ಕುನಾಲ್ ಕಾಮ್ರಾ ವಿಡಿಯೋವೊಂದನ್ನು ಮಾಡಿದ್ದಾರೆ. ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ್ದಾರೆ. ಈ ವಿಡಿಯೋವನ್ನು ಟ್ವೀಟರ್‌ನಲ್ಲಿ ಹಾಕಿದ್ದಾರೆ.

ಮ್ಯಾಗ್ಸೆಸೆ ಪ್ರಶಸ್ತಿ: ಅರ್ನಬ್ V/S ರವೀಶ್ ಕುಮಾರ್ ಟ್ವಿಟರ್ ಟ್ರಾಲ್! ಮ್ಯಾಗ್ಸೆಸೆ ಪ್ರಶಸ್ತಿ: ಅರ್ನಬ್ V/S ರವೀಶ್ ಕುಮಾರ್ ಟ್ವಿಟರ್ ಟ್ರಾಲ್!

ಕುನಾಲ್ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮಂಗಳವಾರ ವೈರಲ್ ಆಗಿದೆ. ಈ ವಿಡಿಯೋವನ್ನು ವಿಮಾನದಲ್ಲಿ ಚಿತ್ರೀಕರಿಸಿದ್ದಕ್ಕೆ ಇಂಡಿಗೋ ಆಕ್ಷೇಪ ವ್ಯಕ್ತಪಡಿಸಿದೆ. 6 ತಿಂಗಳು ಕುನಾಲ್ ಕಾಮ್ರಾ ಇಂಡಿಗೋ ವಿಮಾನದಲ್ಲಿ ಹಾರಾಟ ನಡೆಸದಂತೆ ನಿರ್ಬಂಧ ಹೇರಿದೆ.

ಶ್ರೀನಗರ: 'ರಿಪಬ್ಲಿಕ್ ಟಿವಿ' ಅರ್ನಬ್ ಗೋಸ್ವಾಮಿಗೆ ಜಾಮೀನು ರಹಿತ ವಾರೆಂಟ್ಶ್ರೀನಗರ: 'ರಿಪಬ್ಲಿಕ್ ಟಿವಿ' ಅರ್ನಬ್ ಗೋಸ್ವಾಮಿಗೆ ಜಾಮೀನು ರಹಿತ ವಾರೆಂಟ್

ಕುನಾಲ್ ಟ್ವಿಟರ್‌ನಲ್ಲಿ 5 ಗಂಟೆ ಹಿಂದೆ ಹಾಕಿರುವ 1.51 ನಿಮಿಷದ ವಿಡಿಯೋವನ್ನು 1.1 ಮಿಲಿಯನ್ ಜನರು ವೀಕ್ಷಣೆ ಮಾಡಿದ್ದಾರೆ. 19.1ಕೆ ರಿಟ್ವೀಟ್ ಆಗಿದೆ. 52.8ಕೆ ಜನರು ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. 10.6ಕೆ ಕಮೆಂಟ್‌ಗಳು ಬಂದಿವೆ.

ಅರ್ನಬ್ ಗೋಸ್ವಾಮಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ ಸಚಿವ ಜಾರ್ಜ್‌ಅರ್ನಬ್ ಗೋಸ್ವಾಮಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ ಸಚಿವ ಜಾರ್ಜ್‌

ಕುನಾಲ್ ಕಾಮ್ರಾ ಹಾಕಿರುವ ವಿಡಿಯೋ

ಕುನಾಲ್ ಕಾಮ್ರಾ ಟ್ವೀಟರ್‌ನಲ್ಲಿ ಹಾಕಿರುವ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿಯ ವಿಡಿಯೋ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅರ್ನಬ್ ಗೋಸ್ವಾಮಿ ಮೌನ

ಅರ್ನಬ್ ಗೋಸ್ವಾಮಿ ಮೌನ

ಕುನಾಲ್ ಕಾಮ್ರಾ ಅರ್ನಬ್ ಗೋಸ್ವಾಮಿಯನ್ನು ಎಷ್ಟು ಪ್ರಶ್ನೆ ಕೇಳಿದರೂ ಅವರು ಉತ್ತರ ನೀಡಿಲ್ಲ. ಲ್ಯಾಪ್ ಟಾಪ್ ನೋಡುತ್ತಾ ಕುಳಿತಿದ್ದರು. ಇದಕ್ಕೆ ಟ್ವಿಟರ್‌ನಲ್ಲಿ ಹಲವಾರು ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಏಕೆ ಉತ್ತರ ಕೊಟ್ಟಿಲ್ಲ ಎಂದು ಅರ್ನಬ್ ಪ್ರಶ್ನಿಸಿದ್ದಾರೆ.

ವಿಮಾನ ಹತ್ತದಂತೆ ನಿರ್ಬಂಧ

ವಿಮಾನ ಹತ್ತದಂತೆ ನಿರ್ಬಂಧ

ಇಂಡಿಗೋ ವಿಮಾನದಲ್ಲಿ ವಿಡಿಯೋ ಚಿತ್ರೀಕರಿಸಿದ ಕುನಾಲ್ ಕಾಮ್ರಾ ಕ್ರಮಕ್ಕೆ ಇಂಡಿಗೋ ಆಕ್ಷೇಪ ವ್ಯಕ್ತಪಡಿಸಿದೆ. ಕುನಾಲ್ ವರ್ತನೆಯನ್ನು ಖಂಡಿಸಿದ್ದು, 6 ತಿಂಗಳು ವಿಮಾನ ಹತ್ತದಂತೆ ನಿರ್ಬಂಧಿಸಿದೆ.

ಕುನಾಲ್ ಕಾಮ್ರಾ ಪ್ರತಿಕ್ರಿಯೆ

ಕುನಾಲ್ ಕಾಮ್ರಾ ಪ್ರತಿಕ್ರಿಯೆ

ಇಂಡಿಗೋ ವಿಮಾನದಲ್ಲಿ ಹಾರಾಟ ನಡೆಸದಂತೆ ನಿರ್ಬಂಧ ವಿಧಿಸಿರುವುದಕ್ಕೆ ಕುನಾಲ್ ಕಾಮ್ರಾ ಟ್ವೀಟರ್‌ನಲ್ಲಿಯೇ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

English summary
IndiGo suspended Kunal Kamra from flying with IndiGo for 6 months as his conduct on board was unacceptable behavior. Kunal Kamra video with journalist Arnab Goswami viral in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X