ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಮ್ಸ್ ನೌನಲ್ಲಿ ಅರ್ನಬ್ ಗೋಸ್ವಾಮಿಗೆ ಮಾನಸಿಕ ಕಿರುಕುಳ ಇತ್ತಾ?

ಟೈಮ್ಸ್ ನೌ ಬಿಡಲು ಇನ್ನು ಕೆಲವೇ ದಿನಗಳು ಬಾಕಿಯಿರುವಾಗ ನನ್ನನ್ನು ಸ್ಟುಡಿಯೋ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿತ್ತು ಎಂದು ಅರ್ನಬ್ ಗೋಸ್ವಾಮಿ ಹೇಳಿಕೊಂಡಿದ್ದಾರೆ.

|
Google Oneindia Kannada News

ಮುಂಬೈ, ಮಾರ್ಚ್ 27: ಟೈಮ್ಸ್ ನೌ ವಾಹಿನಿಯಿಂದ ಹೊರಬರಲು ಇನ್ನೆರಡು ದಿನ ಬಾಕಿಯಿದ್ದಾಗ ತಮ್ಮನ್ನು ಆ ಸಂಸ್ಥೆಯ ಸ್ಟುಡಿಯೋಕ್ಕೆ ಕಾಲಿಡಲು ಅನುಮತಿ ನಿರಾಕರಿಸಲಾಗಿತ್ತು ಎಂದು ಹೆಸರಾಂತ ಪತ್ರಕರ್ತ ಹಾಗೂ 'ಟೈಮ್ಸ್ ನೌ' ವಾಹಿನಿಯ ಮಾಜಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ತಿಳಿಸಿದ್ದಾರೆ.

ನ್ಯೂಸ್ 24 ವಾಹಿನಿ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅರ್ನಾಬ್, ''ಟೈಮ್ಸ್ ನೌ ಬಿಡಲು ಇನ್ನು ಕೆಲವೇ ದಿನಗಳು ಬಾಕಿಯಿರುವಾಗ ನನ್ನನ್ನು ಸ್ಟುಡಿಯೋ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿತ್ತು. ನಿಮಗೆ ಗೊತ್ತಿರಬಹುದು, ನವೆಂಬರ್ 18ನೇ
ದಿನಾಂಕದಂದು ನಾನು ನಡೆಸಿಕೊಟ್ಟ 'ನ್ಯೂಸ್ ಹವರ್' ನ ಕಂತು ನನ್ನ ಆ ಜನಪ್ರಿಯ ಕಾರ್ಯಕ್ರಮದ ಕೊನೆಯ ಕಂತು ಆಗಿತ್ತು'' ಎಂದು ಅವರು ತಿಳಿಸಿದರು.[ಗರಿಗೆದರಿದ ರಿಪಬ್ಲಿಕ್ ನ್ಯೂಸ್: ಕಾಂಗ್ರೆಸ್ ವಿರುದ್ದ ಅರ್ನಬ್ ಟ್ವೀಟ್ ಪ್ರವಾಹ]

Arnab Goswami says he was barred from studio on his last days in Times Group

ಅರ್ನಬ್ ಗೋಸ್ವಾಮಿಯವರು ಟೈಮ್ಸ್ ನೌನಲ್ಲಿ ಅತಿ ಜನಪ್ರಿಯ ಟಾಕ್ ಷೋ ಆದ 'ನ್ಯೂಸ್ ಹವರ್' ನಡೆಸಿಕೊಡುತ್ತಿದ್ದರು. ಆದರೆ, ಕಳೆದ ನಾಲ್ಕು ತಿಂಗಳ ಹಿಂದೆ ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಹೊರಬಂದಿದ್ದರು. ಇದೀಗ, 'ರಿಪಬ್ಲಿಕ್ ನ್ಯೂಸ್' ಎಂಬ ಹೊಸತೊಂದು ವಾಹಿನಿಯನ್ನು ಕಟ್ಟುವತ್ತ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

English summary
More than four months after he stepped down as Times Now Editor-in-Chief, Arnab Goswami has now revealed that he was stopped from entering his studio at the channel just days before he left the organisation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X