ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕು ಪತ್ತೆ ಹಚ್ಚಲು ಭಾರತೀಯ ಸೇನೆಯಿಂದ ಶ್ವಾನಗಳಿಗೆ ತರಬೇತಿ:ಹೇಗೆ ಕಂಡುಹಿಡಿಯುತ್ತೆ ಗೊತ್ತಾ?

|
Google Oneindia Kannada News

ನವದೆಹಲಿ,ಫೆಬ್ರವರಿ 10: ಕೊರೊನಾ ಸೋಂಕು ಪತ್ತೆ ಹಚ್ಚಲು ಭಾರತೀಯ ಸೇನೆಯು ಶ್ವಾನಗಳಿಗೆ ತರಬೇತಿ ನೀಡುತ್ತಿದೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಕೊರೊನಾ ಸೋಂಕು ತಗುಲಿದಿಯಾ ಎಂಬುದನ್ನು ತಿಳಿಯಬೇಕಾದರೆ ಒಂದೆರೆಡು ದಿನ ಕಾಯಬೇಕಾಗುತ್ತದೆ. ಆದರೆ ನಮ್ಮ ಭಾರತೀಯ ಸೇನೆ ಶ್ವಾನಗಳಿಗೆ ನೀಡಿದ ತರಬೇತಿಯಲ್ಲಿ ಕೆಲ ನಿಮಿಷಗಳಲ್ಲೇ ನಿಖರ ವರದಿ ತಿಳಿಯುವ ಸಾಧ್ಯತೆಗಳು ಹೆಚ್ಚಿದೆ.

ಅಪರಾಧ ಪತ್ತೆಗೆ ಬಾಗಲಕೋಟೆ ಪೊಲೀಸರ ಜೊತೆ ಸೇರಿದ 'ಕ್ರಿಶ್'ಅಪರಾಧ ಪತ್ತೆಗೆ ಬಾಗಲಕೋಟೆ ಪೊಲೀಸರ ಜೊತೆ ಸೇರಿದ 'ಕ್ರಿಶ್'

ಇದಕ್ಕಾಗಿ ಮೂರು ಶ್ವಾನಗಳನ್ನು ಭಾರತೀಯ ಸೇನೆ ಆಯ್ಕೆ ಮಾಡಿಕೊಂಡಿದೆ. ಒಂದು ಶ್ವಾನ ವಿದೇಶಿಯದ್ದಾದರೆ, ಇನ್ನೆರೆಡು ಶ್ವಾನಗಳು ದೇಶೀಯವಾಗಿವೆ. ಎರಡು ವರ್ಷದ ಕಾಸ್ಪರ್, ಒಂದು ವರ್ಷದ ಜಯಾ, ಮಣಿ ಎಂಬ ನಾಯಿಗಳಿಗೆ ತರಬೇತಿ ನೀಡಲಾಗುತ್ತಿದೆ. ಇವುಗಳ ಪೈಕಿ ಜಯಾ ಮತ್ತು ಕಾಸ್ಪರ್ ಶ್ವಾನಗಳಿಗೆ ತರಬೇತಿ ಪೂರ್ಣಗೊಂಡಿದ್ದು ಮಣಿಗೆ ಇನ್ನು ತರಬೇತಿ ನಡೆಯುತ್ತಿದೆ.

ಲಡಾಖ್ ಮತ್ತು ಕಾಶ್ಮೀರದ ಗಡಿ ಪ್ರದೇಶಗಳಲ್ಲಿ ನಿಯೋಜಿತರಾಗಿರುವ ಸೈನಿಕರು ಚಂಡೀಗಢದಲ್ಲಿರುವ ಟ್ರಾನ್ಸಿಟ್ ಕ್ಯಾಂಪ್ ಮೂಲಕ ತೆರಳುತ್ತಾರೆ. ಹಾಗಾಗಿ ಈ ಕ್ಯಾಂಪ್ ನಲ್ಲಿ ಶ್ವಾನಗಳನ್ನು ಬಳಸಿ ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚಲಾಗುತ್ತಿದೆ. ಈ ಮೂಲಕ RT-PCTR ವರದಿ ಬರುವ ಮೊದಲೇ ಸೋಂಕಿತರನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಈಗ ಎರಡು ಶ್ವಾನಗಳಿಗೆ ತರಬೇತಿ ನೀಡಲಾಗಿದೆ.

ಇನ್ನೂ 8 ಶ್ವಾನಗಳಿಗೆ ತರಬೇತಿ ನೀಡಲಾಗುತ್ತಿದೆ. ಸಾಮಾನ್ಯವಾಗಿ ಪ್ರತಿಯೊಂದು ಶ್ವಾನಕ್ಕೆ 36 ವಾರ ತರಬೇತಿ ನೀಡಲಾಗುತ್ತದೆ. ಆದರೆ ಸಮಯ ಕಡಿಮೆ ಇರುವುದರಿಂದ ಕೇವಲ 16 ವಾರಗಳಲ್ಲಿ ಶ್ವಾನಗಳಿಗೆ ತರಬೇತಿ ನೀಡುತ್ತಿದ್ದೇವೆ.

ಶ್ವಾನಗಳೂ ತ್ವರಿತವಾಗಿ ಕಲಿಯುತ್ತಿದ್ದು, ಅವುಗಳ ಕಾರ್ಯಕ್ಷಮತೆಯನ್ನು ನೋಡಿ ನಮ್ಮ ಆತ್ಮವಿಶ್ವಾಸ ಹೆಚ್ಚುತ್ತಿದೆ ಎಂದು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿರುವ ವೆಟರ್ನರಿ ಆಫೀಸರ್ ಸುರಿಂದರ್ ಸೈನಿ ತಿಳಿಸಿದ್ದಾರೆ.

ವೈರಸ್ ನಮ್ಮ ದೇಹಕ್ಕೆ ಪ್ರವೇಶಿಸಿದರೆ ಅದು ನಮ್ಮ ದೇಹದ ಸ್ನಾಯುಗಳಿಗೆ ಹಾನಿಯುಂಟುಮಾಡುತ್ತದೆ. ಈ ಪ್ರಕ್ರಿಯೆಯಿಂದ ವಿಶಿಷ್ಟವಾದ ರಾಸಾಯನಿಕ ಉತ್ಪತ್ತಿಯಾಗುತ್ತದೆ. ಈ ರಾಸಾಯನಿಕ ಮೂತ್ರ ಮತ್ತು ಬೆವರಿನ ಮೂಲಕ ಹೊರಬರುತ್ತದೆ.

ಹಾಗಾಗಿ ಮೂತ್ರ ಮತ್ತು ಬೆವರನ್ನು ಶ್ವಾನಗಳು ಮೂಸಿನೋಡಿ ಆ ವ್ಯಕ್ತಿಯ ದೇಹದಲ್ಲಿ ವೈರಸ್ ಇದೆಯೇ ಇಲ್ಲವೇ ಎಂಬುದನ್ನು ಪತ್ತೆಹಚ್ಚುತ್ತವೆ. ಈ ಹಿಂದೆ ಸಹ ಕ್ಯಾನ್ಸರ್, ಮಲೇರಿಯಾ, ಡಯಾಬಿಟಿಸ್, ಪಾರ್ಕಿನ್ ಸನ್ ಸೇರಿದಂತೆ ಹಲವು ಕಾಯಿಲೆಗಳನ್ನು ಪತ್ತೆ ಹಚ್ಚಲು ಶ್ವಾನಗಳನ್ನು ಬಳಸಲಾಗಿದೆ ಎಂದು ತಿಳಿಸಿದ್ದಾರೆ.

ಮನುಷ್ಯನ ಮೂತ್ರ,ಬೆವರಿನ ಮೂಲಕವೇ ಸೋಂಕು ಪತ್ತೆ

ಮನುಷ್ಯನ ಮೂತ್ರ,ಬೆವರಿನ ಮೂಲಕವೇ ಸೋಂಕು ಪತ್ತೆ

ಮನುಷ್ಯನ ಮೂತ್ರ ಮತ್ತು ಬೆವರಿನ ಮಾದರಿ ವಾಸನೆಯ ಮೂಲಕವೇ ಸೋಂಕನ್ನು ಪತ್ತೆ ಹಚ್ಚುವ ತರಬೇತಿಯನ್ನು ಶ್ವಾನಗಳಿಗೆ ನೀಡುತ್ತಿರುವುದಾಗಿ ಹಿರಿಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೊರೊನಾ ಪೀಡಿತ ರೋಗಿಗಳ ಬೆವರು ಮತ್ತು ಮೂತ್ರದಿಂದ ಹೊಮ್ಮುವ ನಿರ್ದಿಷ್ಟ ಬಯೋಮಾರ್ಕರ್ ಪರಿಗಣಿಸಿ ತರಬೇತಿ ನೀಡಲಾಗುತ್ತಿದೆ. ತರಬೇತಿ ವೇಳೆ ಶ್ವಾನಗಳಿಂದ 95ರಷ್ಟು ನಿಖರವಾಗಿ ಫಲಿತಾಂಶ ನೀಡಿವೆ ಎಂಬುದನ್ನು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ರೂಪ ಬದಲಿಸಿಕೊಂಡು ವ್ಯಾಪಿಸುತ್ತಿದೆ

ಹೊಸ ರೂಪ ಬದಲಿಸಿಕೊಂಡು ವ್ಯಾಪಿಸುತ್ತಿದೆ

ಕೊರೊನಾ ಸೋಂಕು ಮೊದಲಿಗೆ ಕಂಡು ಬಂದು ಒಂದು ವರ್ಷವಾದರೂ ಸಹ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಸೋಂಕು ತೀವ್ರಗತಿಯಲ್ಲಿ ವ್ಯಾಪಿಸುತ್ತಲೇ ಇದೆ. ಈ ವೈರಸ್ ದಿನೇ ದಿನೇ ರೂಪ ಬದಲಿಸಿಕೊಂಡು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತಲೇ ಇದೆ. ಹಾಗಾಗಿ ಕೊರೊನಾ ಸೋಂಕಿತರನ್ನು ಪತ್ತೆಹಚ್ಚಲು ಹೊಸ ಹೊಸ ಪರೀಕ್ಷಾ ವಿಧಾನಗಳು ಬಳಕೆಗೆ ಬರುತ್ತಿವೆ. ಇದರ ನಡುವೆಯೇ ಭಾರತೀಯ ಸೇನೆಯು ದೇಸೀ ತಳಿಯ ಶ್ವಾನವನ್ನು ಬಳಸಿ ಕೊರೊನಾ ಪರೀಕ್ಷೆ ನಡೆಸುತ್ತಿದೆ.

ಬೇರೆ ದೇಶಗಳಲ್ಲಿಯೂ ಶ್ವಾನಗಳ ಬಳಕೆ

ಬೇರೆ ದೇಶಗಳಲ್ಲಿಯೂ ಶ್ವಾನಗಳ ಬಳಕೆ

ಕೊರೊನಾ ಸೋಂಕಿತರನ್ನು ಪತ್ತೆಹಚ್ಚಲು ಶ್ವಾನಗಳನ್ನು ಬಳಕೆ ಮಾಡುವ ಪದ್ಧತಿ ಬ್ರಿಟನ್, ಫಿನ್ಲೆಂಡ್, ರಷ್ಯಾ, ಫ್ರಾನ್ಸ್, ಯುಎಇ, ಜರ್ಮನಿ, ಲೆಬೆನಾನ್ ನಂತಹ ರಾಷ್ಟ್ರಗಳಲ್ಲಿ ಜಾರಿಯಲ್ಲಿದೆ. ಜೊತೆಗೆ ಈ ದೇಶಗಳಲ್ಲಿ ಇನ್ನಷ್ಟು ಹೆಚ್ಚಿನ ಶ್ವಾನಗಳಿಗೆ ಕೊರೊನಾ ಸೋಂಕು ಪತ್ತೆ ಹಚ್ಚಲು ತರಬೇತಿ ನೀಡಲಾಗುತ್ತಿದೆ. ಇದರ ಬೆನ್ನಲ್ಲೇ ದೇಶದಲ್ಲೇ ಮೊದಲ ಬಾರಿಗೆ ಭಾರತೀಯ ಸೇನೆ ಕೊರೊನಾ ಸೋಂಕಿನ ಪರೀಕ್ಷೆಗಾಗಿ ಶ್ವಾನವನ್ನು ಬಳಕೆ ಮಾಡಿ ಯಶ ಕಂಡಿದೆ.

ಯಾವ ತಳಿಯ ಶ್ವಾನಗಳು

ಯಾವ ತಳಿಯ ಶ್ವಾನಗಳು

ಭಾರತೀಯ ಸೇನೆ ಕ್ಯಾಸ್ಪರ್ ಮತ್ತು ಚಿಪ್ಪಿಪಾರೈ ತಳಿಯ ಎರಡು ಶ್ವಾನಗಳಿಗೆ ಕೊರೊನಾ ಸೋಂಕಿತರಿಂದ ಪಡೆದ ಮೂತ್ರದ ಸ್ಯಾಂಪಲ್ ಅನ್ನು ಪರೀಕ್ಷಿಸುತ್ತಿವೆ. ಈ ಎರಡು ಶ್ವಾನಗಳು ಇದುವರೆಗೆ 3800 ಸ್ಯಾಂಪಲ್ ಗಳನ್ನು ಪರೀಕ್ಷಿಸಿದ್ದು, ಅವುಗಳ ಪೈಕಿ 22 ಸ್ಯಾಂಪಲ್ ಗಳು ಕೊರೊನಾ ಪಾಸಿಟಿವ್ ಬಂದಿದೆ. ಕೆಲವೇ ಕ್ಷಣಗಳಲ್ಲಿ ಈ ಶ್ವಾನಗಳು ಸೋಂಕನ್ನು ಪತ್ತೆಹಚ್ಚುತ್ತಿವೆ. ಸೇನೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸೋಂಕಿತರನ್ನು ತ್ವರಿತವಾಗಿ ಪತ್ತೆ ಹಚ್ಚಲು ಈ ಶ್ವಾನಗಳಿಗೆ ತರಬೇತಿ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
The army is training dogs to find COVID-19 in its ranks by sniffing human sweat and urine, a senior officer said on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X