ಭಾರತೀಯ ಸೇನೆಯಿಂದ ಉಗ್ರರ ಹೊಸ ಹಿಟ್ ಲಿಸ್ಟ್‌ ಪ್ರಕಟ

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಶ್ರೀನಗರ, ಏಪ್ರಿಲ್ 04: ಕಾಶ್ಮೀರ ಕಣಿವೆಯಲ್ಲಿ ಉಗ್ರರ ಪ್ರತಿದಾಳಿಯನ್ನು ಮಟ್ಟಹಾಕಲು ಭಾರತೀಯ ಸೇನೆ ಹೊಸ ಹಿಟ್‌ ಲಿಸ್ಟ್‌ ಸಿದ್ಧಪಡಿಸಿದೆ. ಅತಿ ಅಪಾಯಕಾರಿ ಎಂದು ಗುರುತಿಸಿರುವ (ಎ++ ಕೆಟಗರಿ) 9 ಹೆಸರುಗಳು ಈ ಪಟ್ಟಿಯಲ್ಲಿವೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದೀನ್ ನೇಮಕಾತಿ ಪ್ರಕ್ರಿಯೆಯನ್ನು ಹೆಚ್ಚಳಗೊಳಿಸಿದ ಬೆನ್ನಲ್ಲೇ ಕಳೆದ ಎರಡು ತಿಂಗಳಿನಿಂದ ಕಾಶ್ಮೀರದಲ್ಲಿ ಹಲವು ಎನ್‌ಕೌಂಟರ್‌ಗಳು ನಡೆದಿವೆ. ಬಾರಾಮುಲ್ಲಾ ಜಿಲ್ಲೆಯಲ್ಲಿ ಅತ್ಯಧಿಕ ನೇಮಕಾತಿ ನಡೆದಿವೆ ಎಂದು ಬೇಹುಗಾರಿಕಾ ದಳದ ವರದಿ ತಿಳಿಸಿದೆ.

ಕಾಶ್ಮೀರ: ಭಾರತೀಯ ಸೇನೆಯಿಂದ 3 ಭಯೋತ್ಪಾದಕರ ಹತ್ಯೆ

ಕಾಶ್ಮೀರ ಕಣಿವೆಯ ಜಿಲ್ಲೆಗಳಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ಉಪಟಳ ಹೆಚ್ಚಳವಾಗುತ್ತಿವೆ. ಅವರನ್ನು ಹತ್ತಿಕ್ಕಲು ಸೇನಾ ಪಡೆ ತೀವ್ರ ಕಾರ್ಯಾಚರಣೆ ನಡೆಸಿದ್ದು, ಸೋಮವಾರ ನಡೆಸಿದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 12 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು,. ಇದರಲ್ಲಿ ಒಬ್ಬಾತ ಲಷ್ಕರ್ ಎ ತೋಯ್ಬಾ ಸಂಘಟನೆಗೆ ಸೇರಿದವನಾಗಿದ್ದರೆ, ಉಳಿದವರು ಸ್ಥಳೀಯರಾಗಿದ್ದು, ಹಿಜ್ಬುಲ್ ಮುಜಾಹಿದೀನ್ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು.

Army prepares new hit-list: Here are the 9 Category A++ terrorists from Kashmir

ಹೊಸ ಹಿಟ್‌ ಲಿಸ್ಟ್‌(ಎ + +)ನಲ್ಲಿರುವ ಉಗ್ರರು:
1. ಕಾಶ್ಮೀರ ಕಣಿವೆಯ ಹಿಜ್ಬುಲ್ ಮುಖ್ಯಸ್ಥನಾಗಿರುವ ಬೈಪುರ ಪುಲ್ವಾಮಾದ ರಿಯಾಜ್ ನೈಕೂ ಅಲಿಯಾಸ್‌ ಜುಬೈರ್ ಉಲ್ ಇಸ್ಲಾಂ,

2. ಪುಲ್ವಾಮಾದ ಲಷ್ಕರ್ ಕಮಾಂಡರ್ ಆಗಿರುವ ಪಂಜ್ಗಾಮ್ ಪುಲ್ವಾಮಾದ ಶೌಕತ್ ತಕ್ ಅಲಿಯಾಸ್ ಅಬು ಹುಜೈಫಾ,
3. ನೂರ್‌ಪುರ ಆವಂತಿಪುರದ ಅನ್ಸಾರ್ ಮುಖ್ಯಸ್ಥ ಝಕೀರ್ ರಶೀದ್ ಬಟ್ ಅಲಿಯಾಸ್ ಮೂಸಾ
4. ಶೋಪಿಯಾನಿನ ಏರಿಯಾ ಕಮಾಂಡರ್ ಜೀನತ್ ಉಲ್ ಇಸ್ಲಾಂ, 5. ಶ್ರೀನಗರ ಏರಿಯಾ ಹಿಜ್ಬುಲ್ ಕಮಾಂಡರ್ ಆಗಿರುವ ಮಲಾಂಗ್ ಪುರದ ಡಾ. ಸೈಫುಲ್ಲಾ ಅಲಿಯಾಸ್ ಅಬು ಮುಸೈಬ್
6. ಶೋಫಿಯಾನ್ ಹಿಜ್ಬುಲ್ ಕಮಾಂಡರ್, ಹೆಫ್ ಶೋಪಿಯಾನಿನ ಸದ್ದಾಂ ಪಡ್ಡರ್ ಅಲಿಯಾಸ್ ಜೈದ್
7. ಕುಲ್ಗಾಂನ ಹಿಜ್ಬುಲ್ ಕಮಾಂಡರ್, ರೆದ್ವಾನಿ ಕುಲ್ಗಾಂನ ಅಲ್ತಾಫ್ ಕಚ್ರೂ ಅಲಿಯಾಸ್ ಮೋಯಿನ್ ಉಲ್ ಇಸ್ಲಾಂ
8. ರಾಜಪುರದಿಂದ ನೇವಾವರೆಗಿನ ಪ್ರದೇಶದಲ್ಲಿ ಚಟುವಟಿಕೆ ನಡೆಸುತ್ತಿರುವ ಪಾಕಿಸ್ತಾನದ ಹಿಜ್ಬುಲ್ ಕಮಾಂಡರ್ ನವೀದ್ ಜಟ್ ಅಲಿಯಾಸ್ ಅಬು ಹನ್ಸಲ್ಲಾ
9. ದ್ರಬ್ಗಾಮ್ ಪುಲ್ವಾಮಾದ ನಿವಾಸಿ ಸಮೀರ್ ಅಹ್ಮದ್‌ ಅಲಿಯಾಸ್ ಸಮೀರ್ ಟೈಗರ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: Army prepares new hit-list
English summary
Amidst the new counter-offensive in the Valley, the Indian Army has prepared a new hit-list. There are nine names part of this list. Kashmir has witnessed several encounters in the past two months owing to increased recruitment into the Hizbul Mujahideen. Recruitment have been the highest in Baramulla, an Intelligence Bureau report says.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ