ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟಾಚಾರ: ಸೇನಾಧಿಕಾರಿಗಳು ಸೇರಿ 23 ಮಂದಿ ವಿರುದ್ಧ ಸಿಬಿಐ ತನಿಖೆ

|
Google Oneindia Kannada News

ನವದೆಹಲಿ, ಮಾರ್ಚ್ 15: ಸೇನಾ ಅಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಸೇನಾಧಿಕಾರಿಗಳು ಸೇರಿ 23 ಮಂದಿ ಸಿಬಿಐ ತನಿಖೆ ಎದುರಿಸಲಿದ್ದಾರೆ ಎನ್ನುವ ಕುರಿತು ಮಾಹಿತಿ ಲಭ್ಯವಾಗಿದೆ.

ಪಂಜಾಬ್‌ನ ಕಪುರ್ತಲ ಜಿಲ್ಲೆಯ ಸೇವಾ ಆಯ್ಕೆ ಕೇಂದ್ರವೊಂದರಲ್ಲಿ ನಡೆಯುತ್ತಿರುವ ಸೇನಾ ಅಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆರೋಪ ಕೇಳಿಬಂದಿತ್ತು.

ತನ್ನ ಮಾಜಿ ಮುಖ್ಯಸ್ಥ ರಾಕೇಶ್ ಆಸ್ತಾನಾಗೆ ಎಲ್ಲ ಆರೋಪಗಳಿಂದಲೂ ಕ್ಲೀನ್ ಚಿಟ್ ನೀಡಿದ ಸಿಬಿಐತನ್ನ ಮಾಜಿ ಮುಖ್ಯಸ್ಥ ರಾಕೇಶ್ ಆಸ್ತಾನಾಗೆ ಎಲ್ಲ ಆರೋಪಗಳಿಂದಲೂ ಕ್ಲೀನ್ ಚಿಟ್ ನೀಡಿದ ಸಿಬಿಐ

ಕಿರಿಯ ಅಧಿಕಾರಿಯೊಬ್ಬರ ಆಯ್ಕೆ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಇಂಡಿಯನ್ ಆರ್ಮಿ ಹೆಡ್‌ಕ್ವಾಟರ್ಸ್‌ಗೆ ಬಂದ ದೂರಿನ ಮೇರೆಗೆ ತನಿಖೆ ನಡೆಸಲಾಗಿತ್ತು. ಸೇನೆಯ ಅಧಿಕಾರಿಗಳೊಂದಿಗೆ ಹಲವು ನಾಗರಿಕರು ಕೂಡ ಇದರಲ್ಲಿ ಶಾಮೀಲಾಗಿದ್ದಾರೆ ಎನ್ನುವ ಅನುಮಾನ ಬಂದಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸಿಕೊಡಲಾಗಿದೆ.

 Army Officers Among 23 Who Face CBI Case For Alleged Corruption

ಇದೀಗ ಸೇನೆಯ 23 ಅಧಿಕಾರಿಗಳು ಸಿಬಿಐ ತನಿಖೆ ಎದುರಿಸಲಿದ್ದಾರೆ, ಸೇನಾ ಗುಪ್ತಚರ ಸಂಸ್ಥೆಯ ಪೂರ್ವಾಭಾವಿ ಕಾರ್ಯಾಚರಣೆಯ ಆಧಾರದ ಮೇಲೆ, ಆರ್ಮಿ ಸರ್ವೀಸಸ್ ಸೆಲೆಕ್ಷನ್ ಸೆಂಟರ್ ಒಂದರಲ್ಲಿ ಆಯ್ಕೆಯ ಕಾರ್ಯವಿಧಾನಗಳಲ್ಲಿ ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ದೆಹಲಿ, ಲಕ್ನೋ, ಜೈಪುರ, ಗುವಾಹಟಿ, ಕಪುರ್ತಲಾ, ಭತಿಂಡಾ, ಕೈಥಾಲ್, ಪಲ್ವಾಲ್, ಬರೇಲಿ, ಗೋರಖ್‌ಪುರ, ವಿಶಾಖಪಟ್ಟಣಂ ಸೇರಿದಂತೆ ಹಲವೆಡೆ ತನಿಖೆ ನಡೆಸಲಾಗುತ್ತಿದೆ.

English summary
Seven officers of the Indian Army are among 23 people named by the CBI in an investigation into corruption involving recruitment to the force.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X