ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಲ್ವಾನ್ ಘರ್ಷಣೆ ನಂತರ ಗಡಿಭಾಗದಲ್ಲಿ 3 ಸೇನೆಯಿಂದ ಅಲರ್ಟ್

|
Google Oneindia Kannada News

ನವದೆಹಲಿ, ಜೂನ್ 18: ಲಡಾಕ್ ಪೂರ್ವ ಭಾಗದ ಗಾಲ್ವಾಗ್ ಕಣಿವೆಯಲ್ಲಿ ಭಾರತ ಹಾಗೂ ಚೀನಾದ ಸೈನಿಕರ ನಡುವೆ ನಡೆದ ಸಂಘರ್ಷದಲ್ಲಿ ಸಾವು ನೋವು ಸಂಭವಿಸಿದ ಬಳಿಕ ಭಾರತದ ಮೂರು ಸೇನೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಗಡಿಭಾಗದ ಬೇಸ್ ಕ್ಯಾಂಪ್ ಗಳಲ್ಲಿ ಅಲರ್ಟ್ ಸೂಚನೆ ನೀಡಲಾಗಿದೆ.

Recommended Video

Maharashtra govt inks MoUs worth Rs 5,000 cr with three Chinese firms | Oneindia Kannada

ಪ್ರಮುಖವಾಗಿ ಭಾರತ ಹಾಗೂ ಚೀನಾ ನಡುವಿನ 3,500 ಕಿ. ಮೀ ಗಡಿ ಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಸೇನಾ ವಕ್ತಾರರು ಹೇಳಿದ್ದಾರೆ. ಭಾರತೀಯ ಸೇನೆ, ವಾಯುಸೇನೆ ತುಕಡಿಗಳನ್ನು ಗಡಿ ಭಾಗದಲ್ಲಿ ಹೆಚ್ಚಿಸಲಾಗಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.

ಗಾಲ್ವಾನ್ ಕಣಿವೆ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದು, ಚೀನಾದ 35ಕ್ಕೂ ಅಧಿಕ ಸೈನಿಕರು ಮೃತಪಟ್ಟಿರುವ ವರದಿಗಳು ಬಂದಿವೆ.

Army, Navy And Air Force Put On High Alert After Galwan Valley Clash With China

ರಕ್ಷಣಾ ಸಚಿವ ರಾಜನಾಥ್ ಸಿಂಗ್, ಚೀಫ್ ಆಫ್ ಡಿಫೆನ್ಸ್ ಸಾಫ್ಟ್ ಜನರಲ್ ಬಿಪಿನ್ ರಾವತ್ ಮತ್ತು ಮೂರು ಸೇನೆಯ ಮುಖ್ಯಸ್ಥರ ನಡುವೆ ನಡೆದ ಉನ್ನತಮಟ್ಟದ ಮಾತುಕತೆ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.

ಅರುಣಾಚಲ ಪ್ರದೇಶ, ಉತ್ತರಾಖಂಡ್, ಹಿಮಾಚಲ ಪ್ರದೇಶ ಹಾಗೂ ಲಡಾಕ್ ಪ್ರದೇಶ, ಗಡಿ ನಿಯಂತ್ರಣ ರೇಖೆ(LAC) ಪ್ರದೇಶದಲ್ಲಿ ಹೆಚ್ಚಿನ ತುಕಡಿಯನ್ನು ನಿಯೋಜಿಸಲು ಸೂಚಿಸಲಾಗಿದೆ.

ಇದರ ಜೊತೆಗೆ ಹಿಂದೂ ಮಹಾಸಾಗರದಲ್ಲಿ ಕರಾವಳಿ ಗಸ್ತು ಪಡೆ, ಭಾರತೀಯ ನೌಕಾಪಡೆ ತನ್ನ ಪಡೆಯನ್ನು ಹೆಚ್ಚಿಸಿದೆ ಎಂಬ ಸುದ್ದಿ ಸಿಕ್ಕಿದೆ.

English summary
Front-line bases of the Indian army and the air force along the nearly 3,500 km de-facto border with China were Wednesday put on high alert in view of the worst border clash between Indian and Chinese troops in Galwan Valley.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X