ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈನಿಕರು ಸಾಯದಿರೋ ದೇಶ ಇದ್ಯಾ?: ಬಿಜೆಪಿ ಸಂಸದನ ಅಸಂಬದ್ಧ ಹೇಳಿಕೆ

|
Google Oneindia Kannada News

ಲಕ್ನೋ, ಜನವರಿ 02 : ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ನಮ್ಮನ್ನು ಕಾಯು ಯೋಧರನ್ನು ಹಾಡಿ ಹೊಗಳಿದರೆ, ಮತ್ತೊಂದೆಡೆ ಬಿಜೆಪಿ ಸಂಸದ ಸೈನಿಕರ ವಿರುದ್ಧ ಬಿಜೆಪಿ ಸಂಸದ ಇಲ್ಲ-ಸಲ್ಲದ ಹೇಳಿಕೆಯೊಂದನ್ನು ನೀಡಿ ಹಲವರ ಕಣ್ಣನ್ನು ಕೆಂಪಾಗಿಸುವಂತೆ ಮಾಡಿದ್ದಾರೆ.

ಮಳೆ, ಚಳಿ, ಬಿಸಿಲು ಎನ್ನದೇ ತಮ್ಮ ಜೀವದ ಹಂಗನ್ನು ಬಿಟ್ಟು ನಮ್ಮ ದೇಶದ ಗಡಿ ಕಾಯುವ ಸೈನಿಕರ ಬಗ್ಗೆ ರಾಮ್‍ಪುರ ಕ್ಷೇತ್ರದ ಬಿಜೆಪಿ ಸಂಸದ ನೇಪಾಲ ಸಿಂಗ್ ಅವಮಾನಿಸುವಂತಹ ಹೇಳಿಕೆಯನ್ನು ನೀಡಿದ್ದಾರೆ.

Army men die everyday, says BJP MP Nepal Singh; later issues apology

"ಸೈನಿಕರು ಪ್ರತಿದಿನ ಸಾಯ್ತಾರೆ. ಯುದ್ಧದಲ್ಲಿ ಸೈನಿಕರು ಸಾಯದೇ ಇರುವ ದೇಶವಿದ್ಯಾ? ಗ್ರಾಮಗಳಲ್ಲಿ ಗಲಾಟೆ ಆದಾಗ ಯಾರಿಗಾದ್ರೂ ಗಾಯ ಆಗೇ ಆಗುತ್ತದೆ. ಜೀವವನ್ನು ಉಳಿಸಬಲ್ಲ ಸಾಧನ ಏನಾದ್ರೂ ಇದ್ರೆ ಹೇಳಿ. ಬುಲೆಟ್ ವಿಫಲಗೊಳಿಸುವ ಯಾವುದಾದ್ರೂ ಸಾಧನ ಇದ್ರೆ ಹೇಳಿ. ಅದನ್ನ ಜಾರಿಗೆ ತರೋಣ" ಎಂದು ನಾಲಿಗೆ ಹರಿಬಿಟ್ಟಿದ್ದಾರೆ.

ಈ ಅಸಂಬದ್ಧ ಹೇಳಿಕೆಗೆ ಟೀಕೆಗಳು ವ್ಯಕ್ತವಾಗಿದ್ದು, ನೇಪಾಲ ಸಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್ಲರು ಛೀ ಥೂ ಅಂತ ಉಗಿದ ಬಳಿಕ ಎಚ್ಚೆತ್ತ ನೇಪಾಲ ಸಿಂಗ್, "ಜವಾನರನ್ನು ನಿಂದಿಸುವ ಉದ್ದೇಶವಿಲ್ಲ. ಒಂದು ವೇಳೆ ನನ್ನ ಮಾತುಗಳಿಂದ ಯಾರಿಗಾದರು ದುಃಖವಾದ್ರೆ ನಾನು ಎಲ್ಲರಲ್ಲಿಯೂ ಕ್ಷಮೆ ಕೇಳುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

English summary
A day after the Pulwama encounter ended in which five CRPF personnel were killed and three injured, BJP MP Nepal Singh sparked controversy after he said that there is no country where armed personnel don’t get killed in a fight and that this is a daily affair.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X