ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇನಾ ಹೆಲಿಕಾಪ್ಟರ್ ಪತನಕ್ಕೂ ಮುನ್ನ ಪತ್ನಿಯೊಂದಿಗೆ ಮಾತನಾಡಿದ್ದ ಲ್ಯಾನ್ಸ್ ನಾಯ್ಕ್ ಸಾಯಿತೇಜ

|
Google Oneindia Kannada News

ತಿರುಪತಿ, ಡಿಸೆಂಬರ್ 9: ರಕ್ಷಣಾ ಪಡೆಗಳ ಮುಖ್ಯಸ್ಥ(ಸಿಡಿಎಸ್) ಜನರಲ್ ಬಿಪಿನ್ ರಾವತ್ ಹಾಗೂ ಹಿರಿಯ ರಕ್ಷಣಾ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಬುಧವಾರ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಬಳಿ ಪತನಗೊಂಡಿದ್ದು, ಘಟನೆಯಲ್ಲಿ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ರಾವತ್ ಅವರು ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ. ಸಾವನ್ನಪ್ಪಿದ 13 ಜನರಲ್ಲಿ ಒಬ್ಬರಾದ ಲ್ಯಾನ್ಸ್ ನಾಯಕ್ ಸಾಯಿ ತೇಜ ಅವರು ಅಪಘಾತಕ್ಕೆ ನಾಲ್ಕು ಗಂಟೆಗಳ ಮೊದಲು ತಮ್ಮ ಪತ್ನಿಯೊಂದಿಗೆ ಮಾತನಾಡಿದ್ದಾರೆ ಎಂದು ವರದಿಯಾಗಿದೆ.

ಭಾರತದ ಮೊದಲ ಸಿಡಿಎಸ್, 63 ವರ್ಷದ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ಹಾಗೂ ಇತರ 11 ಸಶಸ್ತ್ರ ಪಡೆ ಅಧಿಕಾರಿಗಳು ಬುಧವಾರ ತಮಿಳುನಾಡಿನ ಕೂನೂರು ಬಳಿ ಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಹೆಲಿಕಾಪ್ಟರ್ ದುರಂತದಲ್ಲಿ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಹಾಗೂ ಇತರ 11 ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಭಾರತೀಯ ವಾಯುಪಡೆ ಟ್ವೀಟ್ ಮಾಡಿದೆ.

ಮಾರಣಾಂತಿಕ ದುರ್ಘಟನೆಗೆ ನಾಲ್ಕು ಗಂಟೆಗಳ ಮೊದಲು, 2011 ರಲ್ಲಿ ಸೈನ್ಯಕ್ಕೆ ಸೇರಿದ ಸಾಯಿತೇಜ ಅವರು ತಮ್ಮ ಪತ್ನಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂದು ಮೃತ ಯೋಧನ ಸಂಬಂಧಿಯೊಬ್ಬರು ಹೇಳಿದರು. ಅವರ ಅಕಾಲಿಕ ಅಂತ್ಯದಿಂದ ಕುಟುಂಬ ಅಘಾತಕ್ಕೊಳಗಾಗಿದೆ. ಲ್ಯಾನ್ಸ್ ನಾಯಕ್ ಸಾಯಿತೇಜ ಆಂಧ್ರದ ಮದನಪಲ್ಲಿಯಿಂದ ಬಂದವರು. ಸಾಯಿ ತೇಜಾ ಅವರು 5 ವರ್ಷದ ಮಗ ಮತ್ತು 3 ವರ್ಷದ ಮಗಳನ್ನು ಸಹ ಅಗಲಿದ್ದಾರೆ. ಅವರ ಅಕಾಲಿಕ ಅಗಲಿಕೆಯಿಂದಾಗಿ ಅವರ ಕುಟುಂಬ ವಾಸವಾಗಿರುವ ಮದನಪಲ್ಲಿಯ ಎಸ್‌ಬಿಐ ಕಾಲೋನಿಯಲ್ಲಿ ದು:ಖದ ಮಡುವಿನಲ್ಲಿ ಮುಳುಗಿದೆ.

Army helicopter fall: Lance Naik talking to his wife before the accident

ಅವರ ನಿವಾಸಕ್ಕೆ ತೆರಳಿದ ಸ್ಥಳೀಯ ಪೊಲೀಸರು ಹಾಗೂ ಇತರೆ ಅಧಿಕಾರಿಗಳು ಕಂಗಾಲಾದ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ತಿರುಪತಿ ಲೋಕಸಭಾ ಸಂಸದ ಎಂ ಗುರುಮೂರ್ತಿ ಮತ್ತು ತೆಲುಗು ದೇಶಂ ಪಕ್ಷದ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಸಾಯಿ ತೇಜ ಅವರ ದುರಂತ ಅಂತ್ಯಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ Mi-17V-5 ಹೆಲಿಕಾಪ್ಟರ್ ಜಗತ್ತಿನಲ್ಲೇ ಸುರಕ್ಷಿತ ಹೆಲಿಕಾಪ್ಟರ್ ಎನ್ನುವ ಹೆಸರಿಗೆ ಪಾತ್ರವಾದುದು. ಪ್ರಧಾನಿ, ಅಧ್ಯಕ್ಷರು ಸೇರಿದಂತೆ ವಿವಿಐಪಿಗಳು ಈ ಹೆಲಿಕಾಪ್ಟರನ್ನು ಬಳಸುತ್ತಾರೆ. Mi-17V-5 ಹೆಲಿಕಾಪ್ಟರ್ ಅನ್ನು ರಷ್ಯಾದ ಕಜನ್ ಸಂಸ್ಥೆಯ ಅಂಗಸಂಸ್ಥೆ ನಿರ್ಮಾಣ ಮಾಡಿದೆ. ತುರ್ತು ಭೂಸ್ಪರ್ಶ ಮಾಡಬೇಕಾದ ಸನ್ನಿವೇಶಗಳು ಈ ಹೆಲಿಕಾಪ್ಟರಿನಲ್ಲಿ ಬರುವುದು ತುಂಬಾ ಅಪರೂಪ ಎನ್ನುವುದು ಚೆನ್ನೈ ಮೂಲದ ಮಾಜಿ ವಾಯುಪಡೆ ಪೈಲಟ್ ಅಭಿಪ್ರಾಯ. ಕಳೆದ 30- 40 ವರ್ಷಗಳಲ್ಲಿ Mi-17V-5 ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಬೇಕಾದ ಎಮರ್ಜೆನ್ಸಿ ಸನ್ನಿವೇಶಗಳು ಒಂದೆರಡು ಬಾರಿ ಬಂದಿರಬಹುದು ಅಷ್ಟೇ ಎನ್ನುತ್ತಾರೆ ಮಾಜಿ ಪೈಲಟ್. ಹೀಗಾಗಿ ಸಹಜವಾಗಿ ಅವರೂ ಪ್ರತಿಕೂಲ ಹವಾಮಾನವೇ ಅಪಘಾತಕ್ಕೆ ಕಾರಣ ಎಂದು ಬಲವಾಗಿ ಪ್ರತಿಪಾದಿಸುತ್ತಾರೆ. ಊಟಿ ಬಳಿಯ ಕೂನೂರಿನಲ್ಲಿ ಮಂಜು ಮುಸುಕಿದ ವಾತಾವರಣವಿದೆ. ದಟ್ಟವಾದ ಮಂಜಿನ ಕಾರಣದಿಂದ ಹೆಲಿಕಾಪ್ಟರ್ ಪೈಲಟ್‌ಗೆ ತಾನು ಪರ್ವತದತ್ತ ಧಾವಿಸುತ್ತಿರುವುದು ಗೊತ್ತಾಗಿಲ್ಲ ಎಂದು ಅವರು ಊಹಿಸಿದ್ದಾರೆ.

ತಮಿಳುನಾಡಿನ ಕೂನೂರು ಬಳಿ ಎಂಐ-17ವಿ5 ಹೆಲಿಕಾಪ್ಟರ್ ( Mi-17V5 helicopter) ಪತನಕ್ಕೀಡಾಗಿರುವ ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಭಾರತೀಯ ವಾಯುಪಡೆ ರಕ್ಷಣಾ ಪಡೆ ಮುಖ್ಯಸ್ಥರು, ಬಿಪಿನ ರಾವತ್ ಕುಟುಂಬ ಮತ್ತು ಇತರ ಉನ್ನತ ಮಟ್ಟದ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ದುರಂತಕ್ಕೀಡಾಗಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದೆ.

Recommended Video

2015 ರ ಏರ್ ಕ್ರ್ಯಾಶ್‌ನಲ್ಲಿ ಪವಾಡದಂತೆ ಪಾರಾಗಿದ್ರು ಬಿಪಿನ್ ರಾವತ್ | Oneindia Kannada

English summary
Lance Naik Sai Teja, one of the 13 persons dead in the IAF helicopter crash in Tamil Nadu that killed Chief of Defence Staff, General Bipin Rawat and hailing from Andhra Pradesh, spoke to his wife four hours before the mishap.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X